Car Loan: ಲೋನ್ ಮಾಡಿ ಕಾರ್ ಕೊಳ್ಳೋ ಪ್ಲಾನ್ ಇದ್ಯಾ? ಹಾಗಿದ್ರೆ ಈ ವಿಚಾರಗಳನ್ನು ತಪ್ಪದೇ ತಿಳಿದುಕೊಳ್ಳಿ

All details on Car Loan: ವಾಹನದ ಸಾಲ ತೆಗೆದುಕೊಳ್ಳೋಕೆ ಏನು ಮಾಡಬೇಕು.. ಉತ್ತಮ ಬ್ಯಾಂಕ್‌ ಯಾವುದು, ಕಡಿಮೆ ಬಡ್ಡಿ ಯಾವ ಬ್ಯಾಂಕ್‌ನಲ್ಲಿರುತ್ತೆ. ಯಾವ ಬ್ಯಾಂಕ್‌ನಲ್ಲಿ ಹೆಚ್ಚು ಪ್ರತ್ಯೇಕ ಶುಲ್ಕ ನೀಡಬೇಕು, ಹೆಚ್ಚು ಹಾಗೂ ಅನಗತ್ಯ ದಾಖಲೆಗಳನ್ನು ನೀಡಬೇಕು ಎಂಬ ಗೊಂದಲವೂ ಅನೇಕರಲ್ಲಿರುತ್ತೆ. ಈ ಲೇಖನ ಓದಿದರೆ ನಿಮ್ಮ ಎಲ್ಲಾ ಗೊಂದಲ ಬಗೆಹರಿಯಬಹುದು ನೋಡಿ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    Buy a Car: ಕಳೆದ ಕೆಲ ದಿನಗಳಿಂದ ಸಾಲು ಸಾಲು ಹಬ್ಬಗಳು (Festivals) ಬರುತ್ತಿದೆ. ದಸರಾ ಮುಗಿದ ಕೆಲ ದಿನಗಳಲ್ಲೇ ದೀಪಾವಳಿಯ ಸಂಭ್ರಮ. ದೀಪಗಳ ಹಬ್ಬ ಇನ್ನೂ ಮುಂದುವರಿದಂತೆ ಹಲವು ದಿನಗಳಿಂದ ಹಬ್ಬಕ್ಕೆ ಆಫರ್‌, ಉಡುಗೊರೆ, ಬಂಪರ್‌ ಕೊಡುಗೆ, ಬಹುಮಾನಗಳು ಸಹ ಮುಂದುವರಿದಿದೆ. ಅದೇ ರೀತಿ, ಹಬ್ಬಗಳ ಟೈಮಲ್ಲಿ ಆಫರ್‌ ಹೆಚ್ಚಿರೋ ಸಮಯದಲ್ಲಿ ಹಲವರು ವಸ್ತುಗಳನ್ನು ತೆಗೆದುಕೊಳ್ಳುತ್ತಾರೆ. ನೀವೂ ಸಹ ವಾಹನ, ಅದರಲ್ಲೂ ಕಾರು (Car Purchase) ತೆಗೆದುಕೊಳ್ಳೋ  ಆಲೋಚನೆ ಇದ್ಯಾ..? ಇನ್ನು, ಕಾರು ತೆಗೆದುಕೊಳ್ಳೋದು ಅಂದ್ರೆ ಸಾಮಾನ್ಯವಾಗಿ ಬಹುತೇಕರು ಬ್ಯಾಂಕ್‌ಗಳಲ್ಲಿ ಹಾಗೂ ಫೈನಾನ್ಸ್‌ ಸಂಸ್ಥೆಗಳಲ್ಲಿ ಸಾಲ (Bank Finance) ಮಾಡುತ್ತಾರೆ. ಯಾಕೆಂದರೆ ಒಂದೇ ಸಲ ಲಕ್ಷಾಂತರ ರೂ, ಹಣ ಕೊಡಬೇಕು ಅಂದ್ರೆ ಕಷ್ಟ ಆಗುತ್ತಲ್ವಾ..? 

    ಇನ್ನು, ಕಾರು ಲೋನ್‌ ತೆಗೆದುಕೊಳ್ಳೋ ವಿಚಾರಕ್ಕೆ ಬರೋಣ. ವಾಹನದ ಸಾಲ ತೆಗೆದುಕೊಳ್ಳೋಕೆ ಏನು ಮಾಡಬೇಕು.. ಉತ್ತಮ ಬ್ಯಾಂಕ್‌ ಯಾವುದು, ಕಡಿಮೆ ಬಡ್ಡಿ ಯಾವ ಬ್ಯಾಂಕ್‌ನಲ್ಲಿರುತ್ತೆ. ಯಾವ ಬ್ಯಾಂಕ್‌ನಲ್ಲಿ ಹೆಚ್ಚು ಪ್ರತ್ಯೇಕ ಶುಲ್ಕ ನೀಡಬೇಕು, ಹೆಚ್ಚು ಹಾಗೂ ಅನಗತ್ಯ ದಾಖಲೆಗಳನ್ನು ನೀಡಬೇಕು ಎಂಬ ಗೊಂದಲವೂ ಅನೇಕರಲ್ಲಿರುತ್ತೆ. ಈ ಲೇಖನ ಓದಿದರೆ ನಿಮ್ಮ ಗೊಂದಲ ಬಗೆಹರಿಯಬಹುದು ನೋಡಿ.

    ಯಾಕೆಂದರೆ, ಶೇ. 7ರಷ್ಟು ಕಡಿಮೆ ಬಡ್ಡಿ ದರದಲ್ಲಿ ಮತ್ತು 8 ವರ್ಷಗಳವರೆಗಿನ ಮರುಪಾವತಿ ಅವಧಿ, ಕಡಿಮೆ ಪ್ರೊಸೆಸಿಂಗ್ ಶುಲ್ಕ, ಹೀಗೆ ನಿಮ್ಮ ಅಗತ್ಯಗಳ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ. ಈ ಮೂಲಕ ನೀವು ಸೂಕ್ತವಾದ ಕಾರು ಲೋನನ್ನು ಆಯ್ಕೆ ಮಾಡಬಹುದು. ಅಲ್ಲದೆ, ಕಾರಿನ ಆನ್-ರೋಡ್ ಬೆಲೆಯ 90% - 100%ವರೆಗೆ ನೀವು ಸಾಲ ತೆಗೆದುಕೊಳ್ಳಬಹುದು.

    2021ರಲ್ಲಿ ಭಾರತದಲ್ಲಿನ ಅತ್ಯುತ್ತಮ ಕಾರ್ ಲೋನ್ ಬಡ್ಡಿ ದರಗಳನ್ನು ಈ ಕೆಳಗೆ ಹೋಲಿಕೆ ಮಾಡಲಾಗಿದೆ

    ಬ್ಯಾಂಕ್‌ ಆಫ್‌ ಬರೋಡಾ ಕಾರ್ ಲೋನ್‌

    ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಕಾರು ಲೋನ್‌ಗೆ  ಶೇ. 7.00ರಿಂದಲೇ ಬಡ್ಡಿ ದರಗಳು ಆರಂಭವಾಗುತ್ತವೆ. ಇನ್ನು, 1,500 ರೂ. ಜೊತೆಗೆ ಜಿಎಸ್‌ಟಿಯನ್ನು ಸಂಸ್ಕರಣಾ ಶುಲ್ಕವಾಗಿ ನೀಡಲಾಗುತ್ತದೆ.

    ಕೆನರಾ ಬ್ಯಾಂಕ್ ಕಾರ್ ಲೋನ್

    ಕೆನರಾ ಬ್ಯಾಂಕ್‌ನಲ್ಲಿ ಕಾರ್ ಲೋನಿಗೆ ಬಡ್ಡಿ ದರ ಶೇ. 7.30 ರಿಂದ ಆರಂಭವಾಗುತ್ತದೆ. ಇನ್ನು, ಸಂಸ್ಕರಣಾ ಶುಲ್ಕ ಎಷ್ಟು ಅಂತೀರಾ..? ನಿಮ್ಮ ಸಾಲದ ಮೊತ್ತದ 0.25%. ಹಾಗೂ ಕನಿಷ್ಠ 1,000 ರೂ. ಮತ್ತು ಗರಿಷ್ಠ 5,000 ರೂ. ಗೆ ಒಳಪಟ್ಟಿರುತ್ತದೆ.

    ಆ್ಯಕ್ಸಿಸ್‌ ಬ್ಯಾಂಕ್‌ ಕಾರ್‌ ಲೋನ್‌

    ನೀವು ಆ್ಯಕ್ಸಿಸ್‌ ಬ್ಯಾಂಕ್‌ನಲ್ಲಿ ಕಾರಿಗೆ ಸಾಲ ತೆಗೆದುಕೊಳ್ಳಬೇಕು ಅಂದರೆ. ಅಲ್ಲಿ ಬಡ್ಡಿ ದರ 7.45% p.a. ನಿಂದ ಆರಂಭವಾಗುತ್ತದೆ. ಇನ್ನು, ಕನಿಷ್ಠ 3,500 ರೂ. ದಿಂದ ಗರಿಷ್ಠ.7,000 ರೂ. ಪ್ರೊಸೆಸ್ಸಿಂಗ್ ಶುಲ್ಕ ನೀಡಬೇಕಾಗಿದೆ.

    ಫೆಡರಲ್ ಬ್ಯಾಂಕ್ ಕಾರ್ ಲೋನ್

    ನೀವು ಈ ಬ್ಯಾಂಕಿನಲ್ಲಿ ವಾಹನ ಸಾಳ ತೆಗೆದುಕೊಳ್ಳೋ ಆಲೋಚನೆಯಲ್ಲಿದ್ರೆ, ಇದಕ್ಕೆ ಶೇ. 8.50ರಷ್ಟು ಬಡ್ಡಿ ದರ ನೀಡಬೇಕು. ಹಾಗೂ, ಪ್ರೊಸೆಸ್ಸಿಂಗ್ ಶುಲ್ಕಕ್ಕಾಗಿ ಬ್ಯಾಂಕನ್ನು ಸಂಪರ್ಕಿಸಿ.

    SBI ಕಾರ್‌ ಲೋನ್‌ 

    ದೇಶದ ಅತಿದೊಡ್ಡ ಸಾಲದಾತ ಬ್ಯಾಂಕ್‌ಗಳಲ್ಲೊಂದಾದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಕಾರಿಗೆ ಸಾಲ ತೆಗೆದುಕೊಳ್ಳುವ ಆಲೋಚನೆಯಲ್ಲಿದ್ದರೆ, ಈ ಬ್ಯಾಂಕಿನಲ್ಲಿ ಬಡ್ಡಿ ದರ  7.20% p.a. ನಿಂದ ಆರಂಭವಾಗುತ್ತದೆ. ಮತ್ತು ಇಲ್ಲಿ ಸದ್ಯ ನಿಮ್ಮ ಕಾರಿಗೆ ಸಾಲ ತೆಗೆದುಕೊಳ್ಳಲು ಯಾವುದೇ ಪ್ರೊಸೆಸಿಂಗ್ ಶುಲ್ಕವಿಲ್ಲ. ಜನವರಿ 31, 2022ರವರೆಗೆ ಈ ಆಫರ್‌ ಅಸ್ತಿತ್ವದಲ್ಲಿರುತ್ತದೆ.

    ICICI ಬ್ಯಾಂಕ್ ಕಾರ್ ಲೋನ್ 

    ICICI ಬ್ಯಾಂಕ್‌ನಲ್ಲಿ ನೀವು ಹೊಸ ಕಾರು ಕೊಳ್ಳಲು ಸಾಲ ತೆಗೆದುಕೊಳ್ಳಬೇಕಿದ್ದರೆ ಅಲ್ಲಿ ಬಡ್ಡಿ ದರ 7.90% p.a. ನಿಂದ ಆರಂಭವಾಗುತ್ತದೆ. ಇನ್ನು, ಈ ಬ್ಯಾಂಕಿನಲ್ಲಿ ಪ್ರೊಸೆಸಿಂಗ್ ಶುಲ್ಕಗಳು ಸಾಲದ ಮೊತ್ತದ 0.5% ಆಗಿದೆ.

    ಕಾರು ಸಾಲದ ವಿವರಗಳು

    ಬಡ್ಡಿ ದರ - 7.00 % ನಿಂದ ಆರಂಭ

    ಸಂಸ್ಕರಣಾ ಶುಲ್ಕಗಳು ಬ್ಯಾಂಕ್ ಅನ್ನು ಅವಲಂಬಿಸಿರುತ್ತದೆ

    ಸಾಲದ ಅವಧಿ 1 ವರ್ಷದಿಂದ 8 ವರ್ಷಗಳು

    ಪೂರ್ವ-ಮುಚ್ಚುವಿಕೆಯ ಶುಲ್ಕಗಳು ಬ್ಯಾಂಕ್‌ನೊಂದಿಗೆ ಬದಲಾಗುತ್ತವೆ

    ಖಾತರಿದಾರರ ಅವಶ್ಯಕತೆಯು ಬ್ಯಾಂಕ್‌ನೊಂದಿಗೆ ಬದಲಾಗುತ್ತದೆ

    ಬಡ್ಡಿ ದರಗಳು ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಭಿನ್ನವಾಗಿರುತ್ತವೆ.ಈ ಹಿನ್ನೆಲೆ ನೀವು ಕಾರು ಸಾಲಕ್ಕಾಗಿ ಅರ್ಜಿ ಸಲ್ಲಿಸಲು ಸಾಲವನ್ನು ಆಯ್ಕೆಮಾಡುವ ಮೊದಲು ಬಡ್ಡಿದರಗಳನ್ನು ಹೋಲಿಸುವುದು ನಿರ್ಣಾಯಕವಾಗಿದೆ.

    2021ರಲ್ಲಿ ನೀವು ಆಯ್ಕೆಮಾಡಬಹುದಾದ ಕೆಲವು ಅತ್ಯುತ್ತಮ ಕಾರು ಲೋನ್ ಉತ್ಪನ್ನಗಳು ಇಲ್ಲಿವೆ:

    HDFC ಬ್ಯಾಂಕ್ - ನೀವು ಲಕ್ಷುರಿ ಕಾರುಗಳನ್ನು ಕೊಳ್ಳಬೇಕಿದ್ದರೆ ಈ ಬ್ಯಾಂಕಿನಲ್ಲಿ ಸಾಳ ತೆಗೆದುಕೊಳ್ಳಬಹುದು. ಈ ಬ್ಯಾಂಕಿನ ಪರಿಣಾಮಕಾರಿ ಬಡ್ಡಿ ದರ 7.95% ಆಗಿದೆ. ಕಂತುಗಳನ್ನು ಕಟ್ಟಲು ಸಾಲದ ಅವಧಿಯು 84 ತಿಂಗಳವರೆಗೆ ಇರುತ್ತದೆ. ಗರಿಷ್ಠ ಸಾಲದ ಮೊತ್ತ 3 ಕೋಟಿ ರೂ. ವರೆಗೆ ನೀಡಲಾಗುತ್ತದೆ. ಆಯ್ದ ಕಾರಿನ ಮಾಡೆಲ್‌ಗಳಿಗೆ ಆನ್-ರೋಡ್ ಬೆಲೆಯ 100% ಫೈನಾನ್ಸ್‌ ನೀಡಲಾಗುತ್ತದೆ.

    ICICI ಬ್ಯಾಂಕ್‌  - ಇಲ್ಲಿ 7.90%ರಿಂದ ಪರಿಣಾಮಕಾರಿ ಬಡ್ಡಿ ದರ ಪ್ರಾರಂಭವಾಗಲಿದೆ.  84 ತಿಂಗಳವರೆಗೆ ಸಾಲದ ಆಯ್ಕೆ ಮಾಡಬಹುದು. ಇಲ್ಲಿ ಶೇ. 100ರಷ್ಟು ಫೈನಾನ್ಸ್‌ ನೀಡಲಾಗುತ್ತದೆ. ಆದರೂ, ಪಡೆಯಬಹುದಾದ ಸಾಲದ ಮೊತ್ತವು ಕಾರಿನ ಮಾಡೆಲ್‌, ವೆಚ್ಚ,  ಗ್ರಾಹಕರ ಪ್ರೊಫೈಲ್ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ.ಪೂರ್ವ-ಅರ್ಹತೆ ಮತ್ತು ಪೂರ್ವ-ಅನುಮೋದಿತ ಗ್ರಾಹಕರು ಕೊಡುಗೆಯನ್ನು ಪಡೆಯಬಹುದು.

    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

    ಯಾವುದೇ ಆದಾಯದ ಪುರಾವೆಗಳಿಲ್ಲದ ವೃತ್ತಿಪರರು ಮತ್ತು ಕೃಷಿಕರು ಸಹ ಇಲ್ಲಿ ಸುಲಭವಾಗಿ ಕಾರು ಲೋನ್‌ ಪಡೆಯಬಹುದು.  ಇದರ ಪರಿಣಾಮಕಾರಿ ಬಡ್ಡಿ ದರವು 7.20% ರಿಂದ ಆರಂಭವಾಗಲಿದೆ. ಸಾಲದ ಆಯ್ಕೆ 84 ತಿಂಗಳವರೆಗೆ ಇರುತ್ತದೆ. ಹಾಗೂ, ಆನ್-ರೋಡ್ ಬೆಲೆಯ 90% ವರೆಗೆ ಹಣಕಾಸು ಒದಗಿಸಬಹುದು.

    ಆ್ಯಕ್ಸಿಸ್‌ ಬ್ಯಾಂಕ್‌ - ನಿಮ್ಮ ಬಳಿ ಹಣವಿದೆ. ಆದರೆ ಸ್ವಲ್ಪ ಮಾತ್ರ ಸಾಲ ಬೇಕಾಗಿದೆ ಎಂದರೆ ನೀವು ಈ ಬ್ಯಾಂಕಿನಲ್ಲಿ ನಿಮ್ಮ ಕಾರು ಲೋನ್‌ ಪಡೆಯಬಹುದು. ಇಲ್ಲಿನ ಪರಿಣಾಮಕಾರಿ ಬಡ್ಡಿ ದರವು 7.45% ರಿಂದ ಪ್ರಾರಂಭವಾಗುತ್ತದೆ. ಇಲ್ಲಿ 96 ತಿಂಗಳವರೆಗೆ  ಸಾಲದ ಆಯ್ಕೆ ಮಾಡಬಹುದು. ಆನ್-ರೋಡ್ ಬೆಲೆಯ 100% ವರೆಗೆ ಸಾಲ ಪಡೆಯಬಹುದು.  ನೀವು 1 ಲಕ್ಷ ರೂ. ಸಾಲವನ್ನು ಸಹ ಇಲ್ಲಿ ಪಡೆಯಬಹುದು. 

    ಫೆಡರಲ್ ಬ್ಯಾಂಕ್ - ಉಚಿತ ವೈಯಕ್ತಿಕ ಅಪಘಾತ ವಿಮೆಯ ಕೊಡುಗೆ ಅಗತ್ಯವಿದ್ದರೆ ನೀವು ಈ ಬ್ಯಾಂಕಿನಲ್ಲಿ ಸಾಲ ಪಡೆಯಬಹುದು. ಪರಿಣಾಮಕಾರಿ ಬಡ್ಡಿದರಗಳು 8.50% ರಿಂದ ಪ್ರಾರಂಭವಾಗುತ್ತವೆ. ಸಾಲದ ಅವಧಿಯು 84 ತಿಂಗಳವರೆಗೆ ಇರುತ್ತದೆ. ಹಾಗೂ ಯಾವುದೇ ಆದಾಯ ದಾಖಲೆಗಳನ್ನು ಒದಗಿಸಬೇಕಾಗಿಲ್ಲ. ಎಕ್ಸ್ ಶೋರೂಂ ಬೆಲೆಯ 100% ವರೆಗೆ ಸಾಲ ಪಡೆಯಬಹುದು.

    ಕೆನರಾ ಬ್ಯಾಂಕ್ - ಇಲ್ಲಿ ನೀವು ಹಳೆಯ ಕಾರುಗಳಿಗೆ ಹಾಗೂ ಹೊಸ ಕಾರುಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು. ಇಲ್ಲಿನ ಪರಿಣಾಮಕಾರಿ ಬಡ್ಡಿ ದರವು 7.30% ರಿಂದ ಪ್ರಾರಂಭವಾಗುತ್ತದೆ. ಅಲ್ಲದೆ, 84 ತಿಂಗಳವರೆಗೆ ಸಾಲದ ಅವಧಿಯ ಆಯ್ಕೆ ಮಾಡಬಹುದು. ಆನ್-ರೋಡ್ ಬೆಲೆಯ 90% ವರೆಗೆ ಸಾಲ ಒದಗಿಸಬಹುದು. ಇನ್ನು, ಮಹಿಳೆಯರಿಗೆ ಕಡಿಮೆ ಬಡ್ಡಿದರಗಳಲ್ಲಿ ಸಾಲ ಒದಗಿಸಲಾಗುತ್ತದೆ. 
    Published by:Soumya KN
    First published: