Pickle Business: ಗೃಹಿಣಿಯರೇ, ಇರೋ ಸ್ವಲ್ಪ ಹಣದಲ್ಲೇ ಉಪ್ಪಿನಕಾಯಿ ವ್ಯಾಪಾರ ಮಾಡಿ, ಗಂಡನಿಗಿಂತ ನೀವೇ ಜಾಸ್ತಿ ದುಡಿಯಬಹುದು! ಐಡಿಯಾ ಇಲ್ಲಿದೆ...

ಭಾರತದ ಹೆಚ್ಚಿನ ಗೃಹಿಣಿಯರು ಗುಪ್ತ ಸಾಮರ್ಥ್ಯ ಹೊಂದಿದ್ದಾರೆ, ಅದನ್ನು ಹೊರ ತರುವ ಅಗತ್ಯವಿದೆ ಅಷ್ಟೆ. ಅದನ್ನು ಸಣ್ಣ ಪ್ರಮಾಣದ ಉದ್ಯಮ ಯೋಜನೆಗಳ ಮೂಲಕ, ವ್ಯಾಪಾರದ ಅವಕಾಶವನ್ನಾಗಿ ಬದಲಾಯಿಸಿಕೊಳ್ಳಬೇಕು.

ಮಾವಿನಕಾಯಿ ಉಪ್ಪಿನಕಾಯಿ

ಮಾವಿನಕಾಯಿ ಉಪ್ಪಿನಕಾಯಿ

  • Share this:
ನೀವು ಕಡಿಮೆ ಬಂಡವಾಳ(Less Investment) ಹೂಡಿ, ಮನೆಯಿಂದಲೇ ಉದ್ಯಮ ಆರಂಭಿಸಬೇಕು ಎಂದ್ದಿದ್ದರೆ, ಮಾವಿನಕಾಯಿ ಉಪ್ಪಿನಕಾಯಿ(Mango Pickle) ತಯಾರಿಸುವ ಉದ್ಯಮ ಆರಂಭಿಸಬಹುದು. ಅತ್ಯಂತ ಕಡಿಮೆ ಹಣದಲ್ಲಿ ಆರಂಭಿಸಬಹುದಾದ ಅತ್ಯುತ್ತಮ ಉದ್ಯಮವಿದು. ಭಾರತ(India)ದಲ್ಲಿ ಹೆಚ್ಚಿನವರ ಮನೆಯಲ್ಲಿ ಉಪ್ಪಿನಕಾಯಿ(Pickle) ಇಲ್ಲದೆ ಊಟ ಅಪೂರ್ಣ ಎನಿಸುತ್ತದೆ. ಮದುವೆ, ಪಾರ್ಟಿಗಳು, ಕುಟುಂಬ ಸಮಾರಂಭಗಳು ಮತ್ತಿತರ ಭೋಜನ ಕೂಟಗಳಲ್ಲಿ ಉಪ್ಪಿನಕಾಯಿಗೆ ಸ್ಥಾನ ಇದ್ದೇ ಇರುತ್ತದೆ. ಭಾರತದ ಪ್ರತಿಯೊಂದು ಹಳ್ಳಿ, ಪಟ್ಟಣ ಮತ್ತು ದೊಡ್ಡ ದೊಡ್ಡ ನಗರಗಳಲ್ಲೂ ಉಪ್ಪಿನಕಾಯಿಯ ಬಳಕೆ ಇದೆ. ಹಾಗಾಗಿ ಉಪ್ಪಿನಕಾಯಿ ಉದ್ಯಮ ನಮ್ಮ ದೇಶದಲ್ಲಿ ಅತ್ಯಂತ ಲಾಭದಾಯಕ ಉದ್ಯಮ ಎಂದೆನಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಅದರಲ್ಲೂ ಮುಖ್ಯವಾಗಿ , ಮಹಿಳಾ ಉದ್ಯಮಿಗಳು , ಹೆಚ್ಚಿನ ಬಂಡವಾಳ ಇಲ್ಲದೆಯೇ ಮನೆಯಿಂದಲೇ ಆರಂಭಿಸಬಹುದಾದ ಲಾಭದಾಯಕ ಉದ್ಯಮವಿದು.

ಉಪ್ಪಿನಕಾಯಿ ಉದ್ಯಮ ಆರಂಭಿಸಲು ಉಪಯೋಗ ಆಗುವಂತಹ ಕೆಲವು ಮಾಹಿತಿಗಳು ಇಲ್ಲಿವೆ..

ಮಾರುಕಟ್ಟೆ ಸಾಮರ್ಥ್ಯ

ಪ್ರತೀ ವರ್ಷ , ಸರಾಸರಿ ಭಾರತೀಯ ಕುಟುಂಬವು ಸುಮಾರು 2 ರಿಂದ 3 ಕಿಲೋಗ್ರಾಂನಷ್ಟು ಉಪ್ಪಿನಕಾಯಿ ಸೇವಿಸುತ್ತಾರೆ. ನಮ್ಮ ದೇಶದ ಪ್ರತಿಯೊಂದು ಕುಟುಂಬದಲ್ಲೂ ಇದನ್ನು ಕಾಣಬಹುದು. ಜನರು ಮನೆಯ ರುಚಿ ನೀಡುವಂತಹ , ರೆಡಿಮೇಡ್ ಉಪ್ಪಿನಕಾಯಿಗಳನ್ನು ಖರೀದಿಸಲು ಬಯಸುತ್ತಾರೆ. ಈಗ ಮಧ್ಯಮ, ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗದ ಜನರು ರೆಡಿಮೇಡ್ ಉಪ್ಪಿನಕಾಯಿಗಳನ್ನು ಖರೀಸುತ್ತಿದ್ದಾರೆ. ಹಾಗಾಗಿ ಈ ಉತ್ಪನ್ನದ ಮಾರುಕಟ್ಟೆ ಸಮರ್ಥವಾಗಿದೆ. ನಿಮ್ಮ ಉತ್ಪನ್ನದ ಗುಣಮಟ್ಟ, ರುಚಿ ಮತ್ತು ಸೇವೆ ಉತ್ತಮವಾಗಿದ್ದಷ್ಟು, ಹೆಚ್ಚಿನ ಬೆಳವಣಿಗೆ ನಿರೀಕ್ಷಿಸಬಹುದು.

ಮನೆಯಿಂದಲೇ ಉಪ್ಪಿನಕಾಯಿ ಉದ್ಯಮ ಆರಂಭಿಸುವುದು ಹೇಗೆ?

ನೀವು ಶ್ರೀಮಂತರಾಗಿರಿ ಅಥವಾ ಬಡವರಾಗಿರಿ, ಉಪ್ಪಿನಕಾಯಿಯ ಬೇಡಿಕೆ ಎಲ್ಲಾ ಮನೆಗಳಲ್ಲಿ ಇದ್ದೇ ಇರುತ್ತದೆ. ನಷ್ಟದ ಸಾಧ್ಯತೆ ಅತ್ಯಂತ ಕಡಿಮೆ ಇರುವುದೇ ಉಪ್ಪಿನ ಕಾಯಿ ಉದ್ಯಮದ ಅತ್ಯುತ್ತಮ ಅಂಶ. ಉಪ್ಪಿನಕಾಯಿಗಳ ಬೇಡಿಕೆ ಮನೆಗಳಲ್ಲಿ ಮಾತ್ರವಲ್ಲ, ರೆಸ್ಟೊರೆಂಟ್, ಹೊಟೇಲ್, ಕ್ಯಾಂಟೀನ್ ಮತ್ತು ಫುಡ್ ಸ್ಟಾಲ್‍ಗಳಲ್ಲೂ ಇದೆ.

ಇದನ್ನೂ ಓದಿ:ದೇಶೀಯ ಜವಳಿಗೆ ಸಮಕಾಲೀನ ಫ್ಯಾಷನ್ ಸ್ಪರ್ಶ ನೀಡಲು ಕೈ ಜೋಡಿಸಿದ RRVL, ರಿತು ಕುಮಾರ್

ಯಾರು ಆರಂಭಿಸಬಹುದು..?

ಆಹಾರ ತಯಾರಿಸಲು ತಿಳಿದಿರುವ ಯಾರೇ ಆದರೂ, ಮುಖ್ಯವಾಗಿ ಮಹಿಳೆಯರು ಈ ಉದ್ಯಮ ಆರಂಭಿಸಬಹುದು. ಆರ್ಥಿಕ ಸ್ವಾತಂತ್ರ್ಯ ಬಯಸುವ ಗೃಹಿಣಿಯರಿಗೆ , ಇದು ಅತ್ಯಂತ ಕಡಿಮೆ ಹೂಡಿಕೆಯ ಲಾಭದಾಯಕ ಉದ್ಯಮ.

ಉಪ್ಪಿನಕಾಯಿ ಉದ್ಯಮಕ್ಕೆ ಪರವಾನಗಿ

ಉಪ್ಪಿನಕಾಯಿ ಉತ್ಪಾದಿಸಲು, ಉದ್ಯಮ ನೋಂದಾವಣಿ, ಅಗತ್ಯ ಪರವಾನಗಿ ಬೇಕಿದೆ. ನೋಂದಾವಣಿ ಮತ್ತು ಪರವಾನಗಿ ಇಲ್ಲದೆ ಉದ್ಯಮ ಆರಂಭಿಸುವುದು ಸಾಧ್ಯವಿಲ್ಲ.

ಉಪ್ಪಿನಕಾಯಿ ಉದ್ಯಮಕ್ಕೆ ಆಹಾರಕ್ಕೆ ಸಂಬಂಧಿಸಿರುವುದರಿಂದ , ಆಹಾರ ಭದ್ರತಾ ಇಲಾಖೆಯಿಂದ ಪರವಾನಗಿ ಪಡೆಯಲೇಬೇಕಿದೆ. ನಿಮ್ಮ ಉತ್ಪನ್ನದ ಪರೀಕ್ಷೆಯ ನಂತರ, FSSAI ಪರವಾನಗಿ ನೀಡುತ್ತದೆ. ಈ ಪರವಾನಗಿ ಪ್ರಕ್ರಿಯೆ ಮುಗಿಯಲು 1 - 2 ತಿಂಗಳು ಬೇಕಾಗುತ್ತದೆ. ನೀವು ಆನ್‍ಲೈನ್‍ನಿಂದಲೂ ಪರವಾನಗಿ ಪಡೆಯಬಹುದು, ಅದಕ್ಕೆ 10-15 ದಿನಗಳ ಕಾಲಾವಕಾಶ ಬೇಕಾಗುತ್ತದೆ. ಅದರ ಜೊತೆ, ನಾವು ಉದ್ಯಮ ಆರಂಭಿಸಲು MSME ಇಂಡಸ್ಟ್ರಿ ಅಡಿಯಲ್ಲಿ ಅದನ್ನು ನೋಂದಾಯಿಸಿಕೊಳ್ಳಬೇಕಾಗುತ್ತದೆ.

ನಿಮ್ಮ ಉಪ್ಪಿನಕಾಯಿಯನ್ನು ಎಲ್ಲಿ ಮಾರಬಹುದು?

ಉಪ್ಪಿನಕಾಯಿ ಮಾರಲು, ಮೊದಲು ಅದರ ಪ್ರಚಾರ ಮಾಡಬೇಕು. ನಿಮ್ಮ ಉಪ್ಪಿನಕಾಯಿಯ ಸ್ಯಾಂಪಲ್‍ಗಳನ್ನು ನಿಮ್ಮ ಸಮೀಪದ ಮಾರುಕಟ್ಟೆಗೆ ಕಳುಹಿಸಿ. ನಿಮ್ಮ ಉಪ್ಪಿನಕಾಯಿಯನ್ನು ಇಷ್ಟಪಡುವವರು ಖಂಡಿತಾ ಖರೀದಿಸಲು ಬರುತ್ತಾರೆ. ಅದರ ಜೊತೆಗೆ ನೀವು, ದಿನಸಿ ಅಂಗಡಿ, ಹೊಟೇಲ್, ಕಾಲೇಜ್ ಕ್ಯಾಂಟೀನ್, ರೆಸ್ಟೊರೆಂಟ್ ಮುಂತಾದ ಕಡೆಯೂ ಉಪ್ಪಿನಕಾಯಿಗಳನ್ನು ಮಾರಬಹುದು.

ಪ್ರಧಾನಮಂತ್ರಿ ಮುದ್ರಾ ಸಾಲ

ನೀವು ಆರಂಭದಲ್ಲಿ ಮನೆಯಲ್ಲಿಯೇ ಉದ್ಯಮ ಆರಂಭಿಸಬಹುದು. ಅದು ಬೆಳೆದ ನಂತರ, ಬಂದ ಲಾಭವನ್ನು ಉಪ್ಪಿನಕಾಯಿ ಉದ್ಯಮವನ್ನು ಇನ್ನಷ್ಟು ಸುಗಮಗೊಳಿಸಲು ಸಹಾಯ ಮಾಡುವ, ಅಗತ್ಯ ಯಂತ್ರೋಪಕರಣ ಖರೀದಿಸಲು, ಜಾಗವನ್ನು ಬಾಡಿಗೆಗೆ ಪಡೆಯಲು ಅಥವಾ ಖರೀದಿ ಮಾಡಲು, ಕಾರ್ಮಿಕರನ್ನು ನೇಮಿಸಿಕೊಳ್ಳಲು ಹೂಡಿಕೆ ಮಾಡಬಹುದು. ನೀವು ಈ ಉದ್ಯಮಕ್ಕಾಗಿ ಮುದ್ರಾ ಸಾಲ ಪಡೆಯಬಹುದು. ಪ್ರಧಾನ ಮಂತ್ರಿ ಮುದ್ರಾ ಸಾಲದಲ್ಲಿ, ವಿಭಿನ್ನ ಅಗತ್ಯಗಳಿಗೆ ತಕ್ಕಂತೆ ವಿಭಿನ್ನ ರೀತಿಯ ಸಾಲಗಳು ಲಭ್ಯ ಇವೆ.

ಇದನ್ನೂ ಓದಿ:Small Business: ಹಿಟ್ಟಿನ ಗಿರಣಿ/ ಫ್ಲೋರ್​ಮಿಲ್ ಬ್ಯುಸಿನೆಸ್ ಆರಂಭಿಸಿ, ಸಿಕ್ಕಾಪಟ್ಟೆ ಲಾಭ ಪಡೆಯಿರಿ

ಮುದ್ರಾ ಸಾಲ, ಶಿಶು ಸಾಲದ ಅಡಿಯಲ್ಲಿ ಸುಮಾರು 50 ಸಾವಿರದವರೆಗೆ, ಕಿಶೋರ್ ಸಾಲದ ಅಡಿಯಲ್ಲಿ 50 ಸಾವಿರದಿಂದ 5 ಲಕ್ಷದವರೆಗೆ, ತರುಣ್ ಸಾಲದಲ್ಲಿ 5 ಲಕ್ಷದಿಂದ 10 ಲಕ್ಷದವರೆಗೆ ಸಾಲ ಪಡೆಯಬಹುದು. ನಿಮ್ಮ ಉದ್ಯಮ ಯೋಜನೆಗೆ ಅನುಗುಣವಾಗಿ ಸಾಲ ಪಡೆಯಬಹುದು. ಕಡಿಮೆ ಹಣದೊಂದಿಗೆ ಉದ್ದಿಮೆ ಆರಂಭಿಸಬೇಕು ಎಂದಿದ್ದರೆ ಶಿಶು ಸಾಲ ಉತ್ತಮ.

ಈ ಉದ್ಯಮದಲ್ಲಿ ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಡಿ, ಏಕೆಂದರೆ ಜನರಿಗೆ ನಿಮ್ಮಿಂದ ಬೇಕಿರುವುದು ಕೇವಲ ಉಪ್ಪಿನಕಾಯಿ ಅಲ್ಲ, ಗುಣಮಟ್ಟವುಳ್ಳ ಉಪ್ಪಿನಕಾಯಿ.

ಭಾರತದ ಹೆಚ್ಚಿನ ಗೃಹಿಣಿಯರು ಗುಪ್ತ ಸಾಮರ್ಥ್ಯ ಹೊಂದಿದ್ದಾರೆ, ಅದನ್ನು ಹೊರ ತರುವ ಅಗತ್ಯವಿದೆ ಅಷ್ಟೆ. ಅದನ್ನು ಸಣ್ಣ ಪ್ರಮಾಣದ ಉದ್ಯಮ ಯೋಜನೆಗಳ ಮೂಲಕ, ವ್ಯಾಪಾರದ ಅವಕಾಶವನ್ನಾಗಿ ಬದಲಾಯಿಸಿಕೊಳ್ಳಬೇಕು.
Published by:Latha CG
First published: