PM Narendra Modi: ಪ್ರತಿ ಹೆಣ್ಣು ಮಗುವಿಗೆ ಮಾಸಿಕ 5 ಸಾವಿರ ಸಿಗುತ್ತಂತೆ! ಕೇಂದ್ರ ಸರ್ಕಾರದಿಂದ ಸಿಕ್ತು ಸ್ಪಷ್ಟನೆ

ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಇದು ಸರ್ಕಾರ ಹೆಣ್ಣು ಮಕ್ಕಳಿಗೆ ತಿಂಗಳಿಗೆ  5 ಸಾವಿರ ನೀಡುತ್ತಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ.

ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಇದು ಸರ್ಕಾರ ಹೆಣ್ಣು ಮಕ್ಕಳಿಗೆ ತಿಂಗಳಿಗೆ  5 ಸಾವಿರ ನೀಡುತ್ತಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ.

ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಇದು ಸರ್ಕಾರ ಹೆಣ್ಣು ಮಕ್ಕಳಿಗೆ ತಿಂಗಳಿಗೆ  5 ಸಾವಿರ ನೀಡುತ್ತಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ.

  • Share this:
ಮೊದಲೆಲ್ಲಾ ಒಂದು ಸುದ್ದಿ (News) ತಿಳಿಯಬೇಕೆಂದರೆ ಟಿವಿ (TV) ನೋಡಬೇಕಿತ್ತು. ನ್ಯೂಸ್​ಗಾಗಿ ಕಾಯಬೇಕಿತ್ತು. ಸಿಟಿ ಮಂದಿಗೆ ತಿಳಿಯುತ್ತಿದ್ದರೂ, ಹಳ್ಳಿ (Village) ಗಳಿಗೆ ತಲುಪುವಷ್ಟರಲ್ಲಿ ಸಾಕಷ್ಟ ಸಮಯ ತೆಗದುಕೊಳ್ಳುತ್ತಿತ್ತು. ಆದರೆ, ಕಾಲ ಬದಲಾಗಿದೆ. ಈಗೆಲ್ಲಾ ಕೈಯಲ್ಲಿ ಮೊಬೈಲ್ (Mobile) ಇದ್ದರೆ ಯಾವ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿಯಬಹುದು. ಅಷ್ಟರ ಮಟ್ಟಿಗೆ ಸೋಷಿಯಲ್​ ಮೀಡಿಯಾ (Social Media) ಬೆಳೆದುನಿಂತಿದೆ. ಈ ಸಾಮಾಜಿಕ ಜಾಲತಾಣದಲ್ಲಿ ಬರುವ ವಿಡಿಯೋ (Video) , ಫೋಟೋ (Photo) ಗಳನ್ನು ನಮ್ಮ ಜನರು ನಂಬುತ್ತಾರೆ. ಇದು ನಿಜವಾದ ಸುದ್ದಿಯೋ ಅಥವಾ ಸುಳ್ಳು ಸುದ್ದಿ (Fake News) ಯೋ ಎಂಬುದನ್ನು ತಿಳಿದುಕೊಳ್ಳುವಷ್ಟ ಸಮಯ ಕೂಡ ಇರುವುದಿಲ್ಲ. ಒಂದು ಸುದ್ದಿ ಬಂದರೆ ಅದನ್ನು ತನ್ನ ಕಾಂಟ್ಯಾಕ್ಟ್​ನಲ್ಲಿರುವವರಿಗೆಲ್ಲ ಫಾರ್​​ವರ್ಡ್​ ಮಾಡಿಬಿಡುತ್ತಾರೆ. ಹೀಗೆ ಕೆಲ ದಿನಗಳಿಂದ ಸೋಷಿಯಲ್​ ಮೀಡಿಯಾದಲ್ಲಿ ಒಂದು ಸುದ್ದಿ ಹರಿದಾಡುತ್ತಿದೆ. ಇದು ಸರ್ಕಾರ ಹೆಣ್ಣು ಮಕ್ಕಳಿಗೆ ತಿಂಗಳಿಗೆ  5 ಸಾವಿರ ನೀಡುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಪ್ರತಿ ಹೆಣ್ಣು ಮಗುವಿಗೆ ಮಾಸಿಕ 5 ಸಾವಿರು ಸಿಗುತ್ತ!

ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶವೊಂದು ವೈರಲ್ ಆಗುತ್ತಿದ್ದು, ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ ಯೋಜನೆಯಡಿ ಪ್ರತಿ ಹೆಣ್ಣು ಮಗುವಿಗೆ ಮಾಸಿಕ 5000 ರೂಪಾಯಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಈ ಸಂದೇಶಕ್ಕೆ ಸಂಬಂಧಿಸಿದಂತೆ ಸರ್ಕಾರ ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ವಿವರಣೆ ನೀಡಿದೆ. ಕೇಂದ್ರದ ಮೋದಿ ಸರ್ಕಾರವು ಪ್ರಧಾನ ಮಂತ್ರಿ ಕನ್ಯಾ ಆಶೀರ್ವಾದ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿಯಲ್ಲಿ ಸರ್ಕಾರವು ಪ್ರತಿ ಹೆಣ್ಣು ಮಗುವಿಗೆ 5,000 ರೂಪಾಯಿಗಳ ಆರ್ಥಿಕ ಸಹಾಯವನ್ನು ನೀಡುತ್ತಿದೆ ಎಂದು ಯೂಟ್ಯೂಬ್ ವಿಡಿಯೋದಲ್ಲಿ ಹೇಳಲಾಗಿದೆ.

ಈ ಸಂದೇಶ ನಕಲಿ ಎಂದ ಪಿಬಿಐ!

ಭಾರತ ಸರ್ಕಾರದ ಪತ್ರಿಕಾ ಸಂಸ್ಥೆಯಾದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ ಅಥವಾ ಪಿಐಬಿ ಈ ವೈರಲ್ ಸಂದೇಶದ ಸತ್ಯಾಸತ್ಯತೆಯನ್ನು ದೃಢಪಡಿಸಿದೆ. ಈ ಸುದ್ದಿ ಸುಳ್ಳು ಎಂದು ಪಿಐಬಿ ಫ್ಯಾಕ್ಟ್ ಚೆಕ್ ಹ್ಯಾಂಡಲ್ ಪರವಾಗಿ ಟ್ವೀಟ್ ಮಾಡಿದೆ. ಕೇಂದ್ರ ಸರ್ಕಾರದಿಂದ ಅಂತಹ ಯಾವುದೇ ಯೋಜನೆ ಜಾರಿಯಾಗುತ್ತಿಲ್ಲ. ಈ ರೀತಿ ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ರೀತಿಯ ಸುದ್ದಿಗಳು ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ. ಇದನ್ನೆಲ್ಲಾ ನಂಬಬೇಡಿ ಎಂದು ಹೇಳಿದೆ.


ಇದನ್ನೂ ಓದಿ: ಆರ್ಥಿಕ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಖಾತೆಗೆ ಹಣ ಹಾಕುತ್ತೆ ಮೋದಿ ಸರ್ಕಾರ

ಮೊನ್ನೆ ಮತ್ತೊಂದು ಸುಳ್ಳು ಸುದ್ದಿ ಹಬ್ಬಿತ್ತು!

ಇದೇ ರೀತಿಯ ಸುದ್ದಿಯೊಂದು ಮೊನ್ನೆ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಕೆಲಸ ಇಲ್ಲದ ಯುವಕರಿಗೆ ಕೇಂದ್ರ ಸರ್ಕಾರ 5 ಸಾವಿರ ರೂಪಾಯಿಗಳನ್ನು ಅವರಿಗೆ ನೀಡುತ್ತಿದೆ ಎಂದ ಸಂದೇಶ ವೈರಲ್​ ಆಗಿತ್ತು. ಆಗಲೂ ಪಿಬಿಐ ಟ್ವೀಟ್​ ಮಾಡಿ ಇಂಥಹ ಸುದ್ದಿಗಳನ್ನು ನಂಬಬೇಡಿ ಎಂದಿತ್ತು. ಈಗಲೂ ಕಿಡಿಗೇಡಿಗಳು ಇದೇ ರೀತಿಯ ಸುಳ್ಳು ಸಂದೇಶ ಇರುವ ವಿಡಿಯೋವೊಂದನ್ನು ಹರಿಬಿಟಿದ್ದಾರೆ.

ಇದನ್ನೂ ಓದಿ: ಆ್ಯಪ್‌ಗಳಿಂದ ಸಾಲ ಪಡೆಯುವ ಮುನ್ನ ಹುಷಾರು, ಯಾಮಾರಿದ್ರೆ ಅಷ್ಟೇ ಕಥೆ!

ಸರ್ಕಾರಕ್ಕೆ ಸಂಬಂಧಿಸಿದ ತಪ್ಪು ಸುದ್ದಿಗಳನ್ನು ವರದಿ ಮಾಡಿ

ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ತಪ್ಪು ದಾರಿಗೆಳೆಯುವ ಸುದ್ದಿಯನ್ನು ತಿಳಿಯಲು ನೀವು PIB ಫ್ಯಾಕ್ಟ್ ಚೆಕ್‌ನ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. PIB FactCheck WhatsApp ಸಂಖ್ಯೆ 918799711259 ಅಥವಾ pibfactcheck@gmail.com ಗೆ ಮೇಲ್ ಕಳುಹಿಸುವ ಮೂಲಕ ಯಾರಾದರೂ ತಪ್ಪುದಾರಿಗೆಳೆಯುವ ಸುದ್ದಿಗಳ ಸ್ಕ್ರೀನ್‌ಶಾಟ್, ಟ್ವೀಟ್, ಫೇಸ್‌ಬುಕ್ ಪೋಸ್ಟ್ ಅಥವಾ URL ಅನ್ನು ಕಳುಹಿಸಬಹುದು. ಹಾಗೂ ಈ ರೀತಿಯ ಸುಳ್ಳು ಸುದ್ದಿಗಳನ್ನು ನಂಬಬಾರದು.
Published by:Vasudeva M
First published: