EPF Account: ಇನ್ನು ಮುಂದೆ ಉದ್ಯೋಗವನ್ನು ಬದಲಾಯಿಸಿದ್ರು EPF ಖಾತೆದಾರರಿಗೆ ಚಿಂತೆ ಇಲ್ಲ

ಇನ್ನು ಮುಂದೆ ಉದ್ಯೋಗಿಗಳು ಉದ್ಯೋಗವನ್ನು ಬದಲಾಯಿಸುವಾಗ ತಮ್ಮ ಭವಿಷ್ಯ ನಿಧಿಯಲ್ಲಿ ಹಣವನ್ನು ವರ್ಗಾಯಿಸುವ ಅಗತ್ಯತೆ ಇಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಇಷ್ಟು ದಿನ ಉದ್ಯೋಗ ಬದಲಿಸುತ್ತಿದ್ದ ಉದ್ಯೋಗಿಗಳಿಗೆ ತಮ್ಮ ಇಪಿಎಫ್‌ ಖಾತೆ (EPF account)ಬದಲಿಸುವ ಬಗ್ಗೆಯೇ ಚಿಂತೆಯಾಗಿತ್ತು. ಇದರಿಂದ ಸಾಕಷ್ಟು ರೋಸಿ ಹೋಗಿದ್ದ ಉದ್ಯೋಗಿಗಳಿಗೆ ನೆಮ್ಮದಿಯ ಸುದ್ದಿಯೊಂದು ಇದೆ. ಹೌದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (Employees' Futures Fund or EPFO) ಅಥವಾ ಇಪಿಎಫ್‌ಒ ಇತ್ತೀಚೆಗೆ ಕೇಂದ್ರೀಕೃತ ಐಟಿ ವ್ಯವಸ್ಥೆಗಳ ಅಭಿವೃದ್ಧಿಗೆ ಹಸಿರು ನಿಶಾನೆ ತೋರಿಸಿದ್ದು, ಇನ್ನು ಮುಂದೆ ಉದ್ಯೋಗಿಗಳು ಉದ್ಯೋಗವನ್ನು ಬದಲಾಯಿಸುವಾಗ ತಮ್ಮ ಭವಿಷ್ಯ ನಿಧಿಯಲ್ಲಿ ಹಣವನ್ನು ವರ್ಗಾಯಿಸುವ ಅಗತ್ಯತೆ ಇಲ್ಲ.

  ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (Center for Development of Computing) ಅಥವಾ C-DAC ಮೂಲಕ ಸಿಸ್ಟಮ್‌ಗಳ ಅಭಿವೃದ್ಧಿಗೆ ಸ್ಥಳಾಂತರಗೊಂಡ ನಂತರ, ಉದ್ಯೋಗಿ ತಮ್ಮ ಉದ್ಯೋಗವನ್ನು ಬದಲಾಯಿಸಿದರೂ ಸಹ ಅವರ ಭವಿಷ್ಯ ನಿಧಿ ಸಂಖ್ಯೆ ಒಂದೇ ಆಗಿರುತ್ತದೆ. ಇದರರ್ಥ ಅವರು ಖಾತೆಗಳನ್ನು ವರ್ಗಾಯಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ. ಇಪಿಎಫ್‌ಒದ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿಗಳ (ಸಿಬಿಟಿ) 229 ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

  ಇದ್ದರಿಂದ ದೇಶದ 5 ಕೋಟಿಗೂ ಹೆಚ್ಚು EPF ಖಾತೆದಾರರಿಗೆ (EPF Account Holders) ಭಾರಿ ನೆಮ್ಮದಿ ಸಿಕ್ಕಿದಂತಾಗಿದೆ. ಹೌದು, ಇನ್ಮುಂದೆ ಉದ್ಯೋಗವನ್ನು ಬದಲಾಯಿಸುವಾಗ, ಮೊದಲ ಕಂಪನಿಯ ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಹೊಸ ಪಿಎಫ್ ಖಾತೆಗೆ ವರ್ಗಾಯಿಸುವ ಅಗತ್ಯವಿಲ್ಲ. ಕೆಲಸವನ್ನು ಬದಲಾಯಿಸಿದಾಗ, ಹಳೆಯ EPF ಖಾತೆ ಮತ್ತು ಹೊಸ EPF ಖಾತೆಯು ಸ್ವಯಂಚಾಲಿತವಾಗಿ ವಿಲೀನಗೊಂಡು ಯಾವುದೇ ತೊಂದರೆಯಾಗದಂತೆ ಕಾರ್ಯನಿರ್ವಹಿಸಲಿದೆ.

  ಇತ್ತೀಚೆಗೆ ಕೇಂದ್ರ ಕಾರ್ಮಿಕ ರಾಜ್ಯ ಸಚಿವ ಭೂಪೇಂದ್ರ ಯಾದವ್ (Union Labour Minister Bhupendra Yadav) ಅವರ ಅಧ್ಯಕ್ಷತೆಯಲ್ಲಿ ನಡೆದ ಇಪಿಎಫ್‌ಒದ ಕೇಂದ್ರೀಯ ಟ್ರಸ್ಟಿಗಳ (EPFO Central Trustee Meet) ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

  ಈಗ ಒಂದು EPF ಖಾತೆ(Now an EPF account)
  ಅಂದರೆ ಇಪಿಎಫ್ ಖಾತೆದಾರರು ಎಷ್ಟೇ ಉದ್ಯೋಗಗಳನ್ನು ಬದಲಾಯಿಸಿದರೂ ಅವರ ಇಪಿಎಫ್ ಖಾತೆ ಹಾಗೆಯೇ ಮುಂದುವರೆಯಲಿದೆ ಎಂದು ಹೇಳಲಾಗಿದ್ದು, ಹಳೆಯ ಪಿಎಫ್ ಖಾತೆಯ ಬ್ಯಾಲೆನ್ಸ್ ಸ್ವಯಂಚಾಲಿತವಾಗಿ ಅದೇ ಖಾತೆಯಲ್ಲಿ ಜಮಾ ಆಗಲಿದೆ. ಚಂದಾದಾರರು ಬಯಸಿದಲ್ಲಿ, ಹೊಸ ಸಂಸ್ಥೆಯಲ್ಲಿಯೂ ಹಳೆಯ ಖಾತೆಯನ್ನು ಮುಂದುವರಿಸಬಹುದು ಎಂಬ ಆಯ್ಕೆಯನ್ನು ಇದು ಹೊಂದಿದೆ. ಇದಕ್ಕಾಗಿ ಇನ್ನು ಮುಂದೆ ಉದ್ಯೋಗಿಗಳು ಶ್ರಮಪಡಬೇಕಿಲ್ಲ

  ಕೇಸ್-ಟು-ಕೇಸ್ ಆಧಾರ(Case-to-case basis)
  ಭಾರತ ಸರ್ಕಾರವು ಸೂಚಿಸಿದಂತೆ ಹೂಡಿಕೆಯ ಮಾದರಿಯಲ್ಲಿ ಒಳಗೊಂಡಿರುವ ಎಲ್ಲಾ ಆಸ್ತಿ ವರ್ಗಗಳಲ್ಲಿನ ಹೂಡಿಕೆಗಾಗಿ ಕೇಸ್-ಟು-ಕೇಸ್ ಆಧಾರದ ಮೇಲೆ ಹೂಡಿಕೆಯ ಆಯ್ಕೆಗಳನ್ನು ನಿರ್ಧರಿಸಲು ಹಣಕಾಸು ಹೂಡಿಕೆ ಮತ್ತು ಲೆಕ್ಕಪರಿಶೋಧನಾ ಸಮಿತಿಗೆ (FIAC) ಅಧಿಕಾರ ನೀಡಲು ಮಂಡಳಿಯು ನಿರ್ಧರಿಸಿತು. ಪ್ರಸ್ತುತ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಪವರ್ ಗ್ರಿಡ್ ಕಾರ್ಪೊರೇಷನ್ (ಪಿಜಿಸಿಐಎಲ್) ಸಾರ್ವಜನಿಕ ವಲಯದ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳನ್ನು (ಇನ್ವಿಟ್‌ಗಳು) ಪ್ರಾರಂಭಿಸಿವೆ. ಇಪಿಎಫ್‌ಒ ಕೂಡ ಸಾರ್ವಜನಿಕ ವಲಯದ ಬಾಂಡ್‌ಗಳಿಗೆ ಹೋಗುತ್ತದೆ.

  ಇದನ್ನು ಓದಿ: EPFO Update: PF ಖಾತೆಗೆ ಉದ್ಯೋಗದಾತರ ಕೊಡುಗೆಯನ್ನು ಯಾವ ರೀತಿಯಲ್ಲಿ ಉಲ್ಲೇಖಿಸಲಾಗುತ್ತದೆ; ಇಲ್ಲಿದೆ ವಿವರ

  ಇದೇ ವೇಳೆ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು EPFO ​​ನ ವಾರ್ಷಿಕ ಠೇವಣಿಯಲ್ಲಿ ಶೇ. 5 ರಷ್ಟು ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳಲ್ಲಿ (InvITs) ಹೂಡಿಕೆ ಮಾಡಲು ಕೂಡ ಅನುಮೋದನೆ ನೀಡಿದೆ. ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ ಇನ್ವಿಟಿಗಳ ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದು. ಹೀಗಾಗಿ ಇಪಿಎಫ್‌ಒ ಹೂಡಿಕೆಯ ಬಕೆಟ್ ಹೊಸ ಹೂಡಿಕೆ ಮಾಧ್ಯಮವನ್ನು ಸೇರಿಸಲಾಗಿದೆ. ಪ್ರಸ್ತುತ, ಇಪಿಎಫ್‌ಒ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳು (ETF), ಸರ್ಕಾರಿ ಭದ್ರತೆಗಳು (Government Securities) ಮತ್ತು Bondಗಳಲ್ಲಿ ಹೂಡಿಕೆ ಮಾಡಲಾಗುತ್ತಿದೆ.

  ಇದನ್ನು ಓದಿ: EPF India: ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ?; ತಕ್ಷಣವೇ ತಿಳಿಯಬೇಕಾದರೆ ಹೀಗೆ ಮಾಡಿ

  ಉತ್ತಮ ಅವಕಾಶ(Great opportunity)
  ಪ್ರತಿ ತಿಂಗಳು ಸುಮಾರು 15000-16000 ಕೋಟಿ ಇಪಿಎಫ್‌ಒನಲ್ಲಿ ಠೇವಣಿ ಇರಿಸಲಾಗುತ್ತದೆ. 2021-22ರಲ್ಲಿ ಇಪಿಎಫ್‌ಒ ಠೇವಣಿ 1.8 ಲಕ್ಷ ಕೋಟಿಯಿಂದ 1.9 ಲಕ್ಷ ಕೋಟಿವರೆಗೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ಶೇಕಡಾ 15 ರಷ್ಟು ಮೊತ್ತವನ್ನು ಈಕ್ವಿಟಿಯಲ್ಲಿ ಮತ್ತು ಉಳಿದ ಮೊತ್ತವನ್ನು ಡೆಟ್ ಇನ್ಸ್ಟ್ರುಮೆಂಟ್‌ನಲ್ಲಿ ಹೂಡಿಕೆ ಮಾಡಲಾಗುತ್ತದೆ. ಠೇವಣಿಗಳ ಹೆಚ್ಚಳವನ್ನು ಪರಿಗಣಿಸಿ, EPFO ​​ತನ್ನ ಹೂಡಿಕೆಯ ಬಾಸ್ಕೆಟ್ ವಿಸ್ತರಿಸಲು ಉತ್ತಮ ಅವಕಾಶವನ್ನು ಹೊಂದಿದೆ. ಇದರಿಂದಾಗಿ EPFO ​​ಖಾತೆದಾರರು ಹೆಚ್ಚಿನ ಆದಾಯವನ್ನು ಪಡೆಯಲಿದ್ದಾರೆ.
  Published by:vanithasanjevani vanithasanjevani
  First published: