Petrol-Diesel Price Today: 9 ಜಿಲ್ಲೆಗಳಲ್ಲಿ ಮಾತ್ರ ಪೆಟ್ರೋಲ್ ಬೆಲೆ ಏರಿಕೆ, ಇಂದಿನ ದರ ಹೀಗಿದೆ

ಕಳೆದ 8-10 ದಿನಗಳ ಹಿಂದಿದ್ದ ಇಂಧನ ಬೆಲೆಗಳಿಗೆ (Fuel Price) ಹೋಲಿಸಿದರೆ ಈಗ ಬಹುತೇಕ ಹತ್ತು ರೂ. ಗಳಷ್ಟು ಇಳಿಕೆಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೇಂದ್ರ ಸರ್ಕಾರದ ಎಕ್ಸೈಸ್ ಡ್ಯೂಟಿ ಕೈಬಿಟ್ಟಾಗಿನಿಂದ ದೇಶದ ವಾಹನ ಸವಾರರಲ್ಲಿ ಕೊಂಚ ನೆಮ್ಮದಿ ಮೂಡಿದೆ ಅಂತ ಹೇಳಬಹುದು. ಇದರಿಂದಾಗಿ ಕಳೆದ 8-10 ದಿನಗಳ ಹಿಂದಿದ್ದ ಇಂಧನ ಬೆಲೆಗಳಿಗೆ (Fuel Price) ಹೋಲಿಸಿದರೆ ಈಗ ಬಹುತೇಕ ಹತ್ತು ರೂ. ಗಳಷ್ಟು ಇಳಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ ಬಹುತೇಕ ಇಂದು ಇಂಧನ ಬೆಲೆಗಳಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಾಗಿಲ್ಲವಾದರೂ ಕೆಲ ಪೈಸೆಗಳಷ್ಟು ಏರಿಳಿತ ಸಾಮಾನ್ಯವಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆಯೂ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ (Petrol-Diesel) ಬೆಲೆಯಲ್ಲಿ ಏರಿಳಿತ ನಡೆಯುತ್ತಲೇ ಇದೆ. ಕಳೆದ ಹತ್ತು ದಿನಗಳಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಹತ್ತು ರೂಪಾಯಿಗಿಂತಲೂ ಹೆಚ್ಚಳವಾಗಿದ್ದು ಸುಳ್ಳಲ್ಲ. ಆದರೂ ಈಗ ಬೆಲೆಗಳು ಮತ್ತೆ ಇಳಿಕೆಯಾಗಿದೆ.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ.

ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 102.43 (00)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102 (6 ಪೈಸೆ ಏರಿಕೆ)
ಬೆಳಗಾವಿ - ರೂ. 102.32 (4 ಪೈಸೆ ಏರಿಕೆ)
ಬಳ್ಳಾರಿ - ರೂ. 103.13 (57 ಪೈಸೆ ಇಳಿಕೆ)
ಬೀದರ್ - ರೂ. 103.08 (18 ಪೈಸೆ ಏರಿಕೆ)
ವಿಜಯಪುರ - ರೂ. 101.65 (00)
ಚಾಮರಾಜನಗರ - ರೂ. 101.88 (00)
ಚಿಕ್ಕಬಳ್ಳಾಪುರ - ರೂ. 102.39 (28 ಪೈಸೆ ಇಳಿಕೆ)
ಚಿಕ್ಕ್ಮಗಳೂರು - ರೂ. 103.21 (41 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.92 (73 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.21 (13 ಪೈಸೆ ಇಳಿಕೆ)
ದಾವಣಗೆರೆ - ರೂ. 104.09 (19 ಪೈಸೆ ಏರಿಕೆ)
ಧಾರವಾಡ - ರೂ. 101.67 (29 ಪೈಸೆ ಇಳಿಕೆ)
ಗದಗ - ರೂ. 102.72 (56 ಪೈಸೆ ಏರಿಕೆ)
ಕಲಬುರಗಿ - ರೂ. 101.66 (78 ಪೈಸೆ ಇಳಿಕೆ)
ಹಾಸನ - ರೂ. 101.77 (00)
ಹಾವೇರಿ - ರೂ. 102.55 (00)
ಕೊಡಗು - ರೂ. 103.18 (00)
ಕೋಲಾರ - ರೂ. 101.81 (24 ಪೈಸೆ ಇಳಿಕೆ)
ಕೊಪ್ಪಳ - ರೂ. 102.83 (00)
ಮಂಡ್ಯ - ರೂ. 101.74 (8 ಪೈಸೆ ಇಳಿಕೆ)
ಮೈಸೂರು - ರೂ. 101.68 (22 ಪೈಸೆ ಏರಿಕೆ)
ರಾಯಚೂರು - ರೂ. 102.70 (88 ಪೈಸೆ ಏರಿಕೆ)
ರಾಮನಗರ - ರೂ. 102.25 (15 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.75 (14 ಪೈಸೆ ಏರಿಕೆ)
ತುಮಕೂರು - ರೂ. 102.45 (96 ಪೈಸೆ ಇಳಿಕೆ)
ಉಡುಪಿ - ರೂ. 101.83 (19 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 101.98 (13 ಪೈಸೆ ಇಳಿಕೆ)
ಯಾದಗಿರಿ - ರೂ. 102.74 (00)

ಇದನ್ನೂ ಓದಿ: Change Interest Rates: ಜೂನ್ 1 ರಿಂದ ಉಳಿತಾಯ ಖಾತೆಯ ಬಡ್ಡಿದರ ಹೆಚ್ಚಿಸಿದ ಪ್ರಮುಖ ಬ್ಯಾಂಕ್

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.36
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.26
ಬಳ್ಳಾರಿ - ರೂ. 89
ಬೀದರ್ - ರೂ. 88.94
ವಿಜಯಪುರ - ರೂ. 87.66
ಚಾಮರಾಜನಗರ - ರೂ. 87.84
ಚಿಕ್ಕಬಳ್ಳಾಪುರ - ರೂ. 88.29
ಚಿಕ್ಕಮಗಳೂರು - ರೂ. 89
ಚಿತ್ರದುರ್ಗ - ರೂ. 88.55
ದಕ್ಷಿಣ ಕನ್ನಡ - ರೂ. 87.20
ದಾವಣಗೆರೆ - ರೂ. 89.70
ಧಾರವಾಡ - ರೂ. 87.67
ಗದಗ - ರೂ. 88.62
ಕಲಬುರಗಿ - ರೂ. 87.66
ಹಾಸನ - ರೂ. 87.61
ಹಾವೇರಿ - ರೂ. 88.47
ಕೊಡಗು - ರೂ. 88.89
ಕೋಲಾರ - ರೂ. 87.77
ಕೊಪ್ಪಳ - ರೂ. 88.72
ಮಂಡ್ಯ - ರೂ. 87.71
ಮೈಸೂರು - ರೂ. 87.66
ರಾಯಚೂರು - ರೂ. 88.61
ರಾಮನಗರ - ರೂ. 88.17
ಶಿವಮೊಗ್ಗ - ರೂ. 89.44
ತುಮಕೂರು - ರೂ. 89.36
ಉಡುಪಿ - ರೂ. 87.76
ಉತ್ತರ ಕನ್ನಡ - ರೂ. 87.95
ಯಾದಗಿರಿ - ರೂ. 88.63
Published by:Divya D
First published: