Petrol Price Today: ನಿಮ್ಮ ವಾಹನಕ್ಕೆ ಫುಲ್​ ಟ್ಯಾಂಕ್​ ಮಾಡಿಸುವ ಮುನ್ನ ಇಂದಿನ ಪೆಟ್ರೋಲ್​-ಡೀಸೆಲ್ ದರ ತಿಳಿದುಕೊಳ್ಳಿ

ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Petrol and Diesel Rate on Feb 28th 2022,  ರಷ್ಯಾ - ಉಕ್ರೇನ್‌ ಯುದ್ಧ(Russia-Ukraine War) ಪರಿಣಾಮ ದೇಶದಲ್ಲೂ ಇಂಧನ(Fuel) ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಸದ್ಯಕ್ಕೆ ಅಷ್ಟರ ಮಟ್ಟಿಗೆ ಏರಿಕೆ ಕಂಡುಬಂದಿಲ್ಲ. ಈ ಹಿನ್ನೆಲೆ ನಿಮ್ಮ ವಾಹನಗಳಿಗೆ ಫುಲ್‌ ಟ್ಯಾಂಕ್(Full Tank)‌ ಇಂಧನ ಹಾಕಿಸಬೇಕೆಂದವರು ಆರಾಮಾಗಿ ಹಾಕಿಸಬಹುದು. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಅನುಗುಣವಾಗಿಯೂ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಾಣುತ್ತಿದೆ. ಕಚ್ಚಾ ತೈಲ ಬೆಲೆಯ ಆಧಾರದ ಮೇಲೆ ಹಾಗೂ ತೆರಿಗೆಯ ವ್ಯತ್ಯಾಸದ ಕಾರಣದಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ(Petrol-Diesel Price) ವ್ಯತ್ಯಾಸವಾಗುತ್ತಿರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದ್ದು, ಆದರೆ ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

    ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:


    ಬಾಗಲಕೋಟೆ - 100.91 ರೂ. (23 ಪೈಸೆ ಇಳಿಕೆ)
    ಬೆಂಗಳೂರು - 100.58 ರೂ. (00)
    ಬೆಂಗಳೂರು ಗ್ರಾಮಾಂತರ - 100.22 ರೂ. (00)
    ಬೆಳಗಾವಿ - 100.74 ರೂ. (11 ಪೈಸೆ ಏರಿಕೆ)
    ಬಳ್ಳಾರಿ - 101.80 ರೂ. (13 ಪೈಸೆ ಇಳಿಕೆ)
    ಬೀದರ್ - 101.09 ರೂ. (3 ಪೈಸೆ ಇಳಿಕೆ)
    ಬಿಜಾಪುರ - 100.69 ರೂ. (15 ಪೈಸೆ ಏರಿಕೆ)
    ಚಾಮರಾಜನಗರ - 101.05 ರೂ. (24 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - 100.58 ರೂ. (6 ಪೈಸೆ ಇಳಿಕೆ)
    ಚಿಕ್ಕಮಗಳೂರು - 101 ರೂ. (1.39 ರೂ. ಇಳಿಕೆ)
    ಚಿತ್ರದುರ್ಗ - 101.88 ರೂ. (1.06 ರೂ. ಇಳಿಕೆ)
    ದಕ್ಷಿಣ ಕನ್ನಡ - 99.77 ರೂ. (64 ಪೈಸೆ ಇಳಿಕೆ)
    ದಾವಣಗೆರೆ - 102.79 ರೂ. (36 ಪೈಸೆ ಏರಿಕೆ)
    ಧಾರವಾಡ - 100.31 ರೂ. (1 ಪೈಸೆ ಏರಿಕೆ)
    ಗದಗ – 101.12 ರೂ. (22 ಪೈಸೆ ಏರಿಕೆ)
    ಗುಲಬರ್ಗ - 100.40 ರೂ. (12 ಪೈಸೆ ಏರಿಕೆ)
    ಹಾಸನ – 100.77 ರೂ. (22 ಪೈಸೆ ಏರಿಕೆ)
    ಹಾವೇರಿ - 101.03 ರೂ. (17 ಪೈಸೆ ಏರಿಕೆ)
    ಕೊಡಗು – 102.18 ರೂ. (00)
    ಕೋಲಾರ - 100.51 ರೂ. (7 ಪೈಸೆ ಏರಿಕೆ)
    ಕೊಪ್ಪಳ- 101.80 ರೂ. (18 ಪೈಸೆ ಏರಿಕೆ)
    ಮಂಡ್ಯ – 100.50 ರೂ. (17 ಪೈಸೆ ಏರಿಕೆ)
    ಮೈಸೂರು – 100.23 ರೂ. (15 ಪೈಸೆ ಏರಿಕೆ)
    ರಾಯಚೂರು – 101 ರೂ. (37 ಪೈಸೆ ಇಳಿಕೆ)
    ರಾಮನಗರ – 100.94 ರೂ. (28 ಪೈಸೆ ಇಳಿಕೆ)
    ಶಿವಮೊಗ್ಗ – 102.11 ರೂ. (34 ಪೈಸೆ ಇಳಿಕೆ)
    ತುಮಕೂರು – 101.30 ರೂ. (61 ಪೈಸೆ ಇಳಿಕೆ)
    ಉಡುಪಿ - 100.46 ರೂ. (00)
    ಉತ್ತರ ಕನ್ನಡ – 101.48 ರೂ. (86 ಪೈಸೆ ಏರಿಕೆ)
    ಯಾದಗಿರಿ – 101.02 ರೂ. (35 ಪೈಸೆ ಇಳಿಕೆ)

    ಇದನ್ನೂ ಓದಿ: Gold Price Today: ಆಭರಣ ಪ್ರಿಯರಿಗೆ ಸಖತ್ ಗುಡ್ ನ್ಯೂಸ್; ಮತ್ತಷ್ಟು ಇಳಿಕೆ ಕಂಡ ಚಿನ್ನ, ಇಂದೇ ಖರೀದಿಸಿ

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

    ಬಾಗಲಕೋಟೆ – 85.34
    ಬೆಂಗಳೂರು – 85.01
    ಬೆಂಗಳೂರು ಗ್ರಾಮಾಂತರ - 84.68
    ಬೆಳಗಾವಿ – 85.18
    ಬಳ್ಳಾರಿ – 86.15
    ಬೀದರ್ - 85.50
    ಬಿಜಾಪುರ – 85.14
    ಚಾಮರಾಜನಗರ – 85.43
    ಚಿಕ್ಕಬಳ್ಳಾಪುರ – 85.01
    ಚಿಕ್ಕಮಗಳೂರು – 85.35
    ಚಿತ್ರದುರ್ಗ – 86.06
    ದಕ್ಷಿಣ ಕನ್ನಡ – 84.25
    ದಾವಣಗೆರೆ - 86.88
    ಧಾರವಾಡ – 84.79
    ಗದಗ – 85.53
    ಗುಲಬರ್ಗ – 84.87
    ಹಾಸನ – 85.06
    ಹಾವೇರಿ – 85.44
    ಕೊಡಗು – 86.34
    ಕೋಲಾರ – 84.95
    ಕೊಪ್ಪಳ- 86.15
    ಮಂಡ್ಯ – 84.94
    ಮೈಸೂರು – 84.70
    ರಾಯಚೂರು – 85.43
    ರಾಮನಗರ – 85.33
    ಶಿವಮೊಗ್ಗ – 86.31
    ತುಮಕೂರು – 85.67
    ಉಡುಪಿ – 84.87
    ಉತ್ತರ ಕನ್ನಡ – 85.79
    ಯಾದಗಿರಿ – 85.43

    ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

    ಇದನ್ನೂ ಓದಿ: Petrol Price: ರಾಜ್ಯದಲ್ಲಿ ಇಂದು ಹೇಗಿದೆ ಪೆಟ್ರೋಲ್ ಬೆಲೆ? ಇಲ್ಲಿದೆ ಡೀಟೆಲ್ಸ್

    ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6856 ರೂ. (MCX) ಇದ್ದು, 419 ರೂ. ಅಂದರೆ ಶೇ. 5.76 ರಷ್ಟು ಕಡಿಮೆಯಾಗಿದೆ.
    Published by:Latha CG
    First published: