Petrol Price Today: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್​​-ಡೀಸೆಲ್​ ದರ ಹೀಗಿದೆ

Petrol and Diesel Price Today Feb 16th 2022: ರಷ್ಯಾ - ಉಕ್ರೇನ್‌ ಬಿಕ್ಕಟ್ಟು ಸೇರಿ ನಾನಾ ಕಾರಣಗಳಿಂದ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈಗ ಪರಿಸ್ಥಿತಿ ತಹಬದಿಗೆ ಬರುತ್ತಿದ್ದಂತೆ ಕಚ್ಚಾ ತೈಲ ಬೆಲೆ ಇಳಿಕೆಯ ಹಾದಿಯಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಷ್ಯಾ - ಉಕ್ರೇನ್‌ ಬಿಕ್ಕಟ್ಟು ಸೇರಿ ನಾನಾ ಕಾರಣಗಳಿಂದ ಕಚ್ಚಾ ತೈಲ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಈಗ ಪರಿಸ್ಥಿತಿ ತಹಬದಿಗೆ ಬರುತ್ತಿದ್ದಂತೆ ಕಚ್ಚಾ ತೈಲ ಬೆಲೆ ಇಳಿಕೆಯ ಹಾದಿಯಲ್ಲಿದೆ. ಈ ಏರಿಕೆ - ಇಳಿಕೆಯ ಪರಿಣಾಮ ದೇಶ ಹಾಗೂ ನಮ್ಮ ರಾಜ್ಯದ ಮೇಲೂ ಪರಿಣಾಮ ಬೀರುತ್ತದೆ. ದೇಶದಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ ಸಾಮಾನ್ಯವಾಗಿ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಗಳ ಅನುಗುಣವಾಗಿಯೂ ಇಂಧನ ಬೆಲೆಯಲ್ಲಿ ಏರಿಕೆ, ಇಳಿಕೆ ಕಾಣುತ್ತಿದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆ(Petrol-Diesel Price)ಯಲ್ಲಿ ವ್ಯತ್ಯಾಸವಾಗುತ್ತಿದ್ದು, ಆದರೆ ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ(Petrol-Diesel Price) ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:
ಬಾಗಲಕೋಟೆ - 100.98 ರೂ. (10 ಪೈಸೆ ಇಳಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.58 ರೂ. (32 ಪೈಸೆ ಇಳಿಕೆ)
ಬೆಳಗಾವಿ - 100.72 ರೂ. (28 ಪೈಸೆ ಏರಿಕೆ)
ಬಳ್ಳಾರಿ - 101.63 ರೂ. (1.10 ರೂ. ಇಳಿಕೆ)
ಬೀದರ್ - 101.09 ರೂ. (35 ಪೈಸೆ ಇಳಿಕೆ)
ಬಿಜಾಪುರ - 100.92 ರೂ. (58 ಪೈಸೆ ಏರಿಕೆ)
ಚಾಮರಾಜನಗರ - 100.60 ರೂ. (8 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - 100.95 ರೂ. (31 ಪೈಸೆ ಏರಿಕೆ)
ಚಿಕ್ಕಮಗಳೂರು - 101.75 ರೂ. (22 ಪೈಸೆ ಏರಿಕೆ)
ಚಿತ್ರದುರ್ಗ - 102.42 ರೂ. (56 ಪೈಸೆ ಏರಿಕೆ)
ದಕ್ಷಿಣ ಕನ್ನಡ - 100.11 ರೂ. (36 ಪೈಸೆ ಇಳಿಕೆ)
ದಾವಣಗೆರೆ - 101.89 ರೂ. (90 ಪೈಸೆ ಇಳಿಕೆ)
ಧಾರವಾಡ - 100.44 ರೂ. (21 ಪೈಸೆ ಇಳಿಕೆ)
ಗದಗ – 101 ರೂ. (42 ಪೈಸೆ ಇಳಿಕೆ)
ಗುಲಬರ್ಗ - 100.73 ರೂ. (7 ಪೈಸೆ ಇಳಿಕೆ)
ಹಾಸನ – 100.47 ರೂ. (38 ಪೈಸೆ ಇಳಿಕೆ)
ಹಾವೇರಿ - 101.38 ರೂ. (52 ಪೈಸೆ ಏರಿಕೆ)
ಕೊಡಗು – 101.86 ರೂ. (00)
ಕೋಲಾರ - 100.79 ರೂ. (5 ಪೈಸೆ ಏರಿಕೆ)
ಕೊಪ್ಪಳ- 101.52 ರೂ. (14 ಪೈಸೆ ಇಳಿಕೆ)
ಮಂಡ್ಯ – 100.45 ರೂ. (7 ಪೈಸೆ ಏರಿಕೆ)
ಮೈಸೂರು – 100.08 ರೂ. (00)
ರಾಯಚೂರು – 100.39 ರೂ. (5 ಪೈಸೆ ಇಳಿಕೆ)
ರಾಮನಗರ – 100.93 ರೂ. (18 ಪೈಸೆ ಇಳಿಕೆ)
ಶಿವಮೊಗ್ಗ – 102.45 ರೂ. (35 ಪೈಸೆ ಏರಿಕೆ)
ತುಮಕೂರು – 101.28 ರೂ. (54 ಪೈಸೆ ಏರಿಕೆ)
ಉಡುಪಿ - 100.46 ರೂ. (23 ಪೈಸೆ ಏರಿಕೆ)
ಉತ್ತರ ಕನ್ನಡ – 100.62 ರೂ. (00)
ಯಾದಗಿರಿ – 101.37 ರೂ. (12 ಪೈಸೆ ಏರಿಕೆ)



ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ
ಬಾಗಲಕೋಟೆ – 85.40
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.01
ಬೆಳಗಾವಿ – 85.16
ಬಳ್ಳಾರಿ – 86
ಬೀದರ್ - 85.50
ಬಿಜಾಪುರ – 85.35
ಚಾಮರಾಜನಗರ – 85.03
ಚಿಕ್ಕಬಳ್ಳಾಪುರ – 85.35
ಚಿಕ್ಕಮಗಳೂರು – 86.04
ಚಿತ್ರದುರ್ಗ – 86.55
ದಕ್ಷಿಣ ಕನ್ನಡ – 84.56
ದಾವಣಗೆರೆ - 86.22
ಧಾರವಾಡ – 84.90
ಗದಗ – 85.41
ಗುಲಬರ್ಗ – 85.17
ಹಾಸನ – 84.79
ಹಾವೇರಿ – 85.76
ಕೊಡಗು – 86.05
ಕೋಲಾರ – 85.20
ಕೊಪ್ಪಳ- 85.90
ಮಂಡ್ಯ – 84.89
ಮೈಸೂರು – 84.56
ರಾಯಚೂರು – 84.87
ರಾಮನಗರ – 85.33
ಶಿವಮೊಗ್ಗ – 86.62
ತುಮಕೂರು – 85.65
ಉಡುಪಿ – 84.87
ಉತ್ತರ ಕನ್ನಡ – 85.07
ಯಾದಗಿರಿ – 85.75

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.51 ರೂ ಇದ್ದರೆ ಡೀಸೆಲ್​ ಬೆಲೆ 91.53 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 6888 ರೂ. (MCX) ಇದ್ದು, 220 ರೂ. ಅಂದರೆ ಶೇ. 3.1 ರಷ್ಟು ಕಡಿಮೆಯಾಗಿದೆ.

  
Published by:Latha CG
First published: