Petrol Price Today: ಕಚ್ಚಾ ತೈಲ ದರ ಮತ್ತಷ್ಟು ಗಗನಮುಖಿ, ಇಂದಿನ ಪೆಟ್ರೋಲ್​-ಡೀಸೆಲ್ ದರ ಹೀಗಿದೆ

ಸದ್ಯ ಈ ಬೆಲೆ ಏರಿಕೆ ದೇಶದಲ್ಲಿ ಇನ್ನೂ ಜಾರಿಗೆ ಬರದ ಕಾರಣ ನಿಮ್ಮ ವಾಹನಗಳಿಗೆ ಈಗಲೇ ಫುಲ್‌ ಟ್ಯಾಂಕ್‌ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕಿಸಿಟ್ಟುಕೊಳ್ಳುವುದು ಒಳ್ಳೆಯದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol and Diesel Price on March 04th, 2022: ಇತ್ತೀಚಿನ ಕೆಲ ದಿನಗಳಿಂದ ಕಚ್ಚಾ ತೈಲ ದರ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ರಷ್ಯಾ - ಉಕ್ರೇನ್ ಯುದ್ಧ(Russia-Ukraine War). ಇದರ ಪರಿಣಾಮ ಭಾರತದಲ್ಲೂ ಶೀಘ್ರದಲ್ಲೇ ಪೆಟ್ರೋಲ್ - ಡೀಸೆಲ್‌ ಬೆಲೆಯಲ್ಲಿ(Petrol-Diesel Price) ಹೆಚ್ಚಳವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಸದ್ಯ ಈ ಬೆಲೆ ಏರಿಕೆ ದೇಶದಲ್ಲಿ ಇನ್ನೂ ಜಾರಿಗೆ ಬರದ ಕಾರಣ ನಿಮ್ಮ ವಾಹನಗಳಿಗೆ ಈಗಲೇ ಫುಲ್‌ ಟ್ಯಾಂಕ್‌ ಪೆಟ್ರೋಲ್‌ ಅಥವಾ ಡೀಸೆಲ್‌ ಹಾಕಿಸಿಟ್ಟುಕೊಳ್ಳುವುದು ಒಳ್ಳೆಯದು. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

ಬಾಗಲಕೋಟೆ - 101.08 ರೂ. (2 ಪೈಸೆ ಇಳಿಕೆ)
ಬೆಂಗಳೂರು - 100.58 ರೂ. (00)
ಬೆಂಗಳೂರು ಗ್ರಾಮಾಂತರ - 100.22 ರೂ. (00)
ಬೆಳಗಾವಿ - 100.58 ರೂ. (33 ಪೈಸೆ ಇಳಿಕೆ)
ಬಳ್ಳಾರಿ - 102.39 ರೂ. (12 ಪೈಸೆ ಏರಿಕೆ)
ಬೀದರ್ - 101.12 ರೂ. (24 ಪೈಸೆ ಏರಿಕೆ)
ಬಿಜಾಪುರ - 100.82 ರೂ. (00)
ಚಾಮರಾಜನಗರ - 100.71 ರೂ. (00)
ಚಿಕ್ಕಬಳ್ಳಾಪುರ - 100.58 ರೂ. (00)
ಚಿಕ್ಕಮಗಳೂರು - 102.32 ರೂ. (67 ಪೈಸೆ ಇಳಿಕೆ)
ಚಿತ್ರದುರ್ಗ - 102.37 ರೂ. (70 ಪೈಸೆ ಏರಿಕೆ)
ದಕ್ಷಿಣ ಕನ್ನಡ - 100.05 ರೂ. (51 ಪೈಸೆ ಇಳಿಕೆ)
ದಾವಣಗೆರೆ - 102.43 ರೂ. (52 ಪೈಸೆ ಏರಿಕೆ)
ಧಾರವಾಡ - 100.31 ರೂ. (00)
ಗದಗ – 100.87 ರೂ. (13 ಪೈಸೆ ಇಳಿಕೆ)
ಗುಲಬರ್ಗ - 100.58 ರೂ. (46 ಪೈಸೆ ಇಳಿಕೆ)
ಹಾಸನ – 100.42 ರೂ. (3 ಪೈಸೆ ಏರಿಕೆ)
ಹಾವೇರಿ - 101.38 ರೂ. (35 ಪೈಸೆ ಏರಿಕೆ)
ಕೊಡಗು – 101.89 ರೂ. (00)
ಕೋಲಾರ - 100.27 ರೂ. (17 ಪೈಸೆ ಇಳಿಕೆ)
ಕೊಪ್ಪಳ- 101.77 ರೂ. (27 ಪೈಸೆ ಏರಿಕೆ)
ಮಂಡ್ಯ – 100.83 ರೂ. (29 ಪೈಸೆ ಏರಿಕೆ)
ಮೈಸೂರು – 100.08 ರೂ. (00)
ರಾಯಚೂರು – 101.40 ರೂ. (1.01 ರೂ. ಏರಿಕೆ)
ರಾಮನಗರ – 101.06 ರೂ. (2 ಪೈಸೆ ಏರಿಕೆ)
ಶಿವಮೊಗ್ಗ – 102.28 ರೂ. (88 ಪೈಸೆ ಏರಿಕೆ)
ತುಮಕೂರು – 100.81 ರೂ. (67 ಪೈಸೆ ಇಳಿಕೆ)
ಉಡುಪಿ - 99.86 ರೂ. (82 ಪೈಸೆ ಇಳಿಕೆ)
ಉತ್ತರ ಕನ್ನಡ – 101.04 ರೂ. (1.46 ರೂ. ಇಳಿಕೆ)
ಯಾದಗಿರಿ – 101.03 ರೂ. (00)

ಇದನ್ನೂ ಓದಿ: Gold Price Today: ಶುಭ ಶುಕ್ರವಾರದಂದು ಇಳಿಕೆಯಾಯ್ತು ಬಂಗಾರದ ಬೆಲೆ, ಆಭರಣ ಕೊಳ್ಳೋಕೆ ಇದೇ ಸರಿಯಾದ ಸಮಯ!

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 84.68
ಬೆಳಗಾವಿ – 85.03
ಬಳ್ಳಾರಿ – 86.67
ಬೀದರ್ - 85.53
ಬಿಜಾಪುರ – 85.26
ಚಾಮರಾಜನಗರ – 85.12
ಚಿಕ್ಕಬಳ್ಳಾಪುರ – 85.01
ಚಿಕ್ಕಮಗಳೂರು – 86.48
ಚಿತ್ರದುರ್ಗ – 86.50
ದಕ್ಷಿಣ ಕನ್ನಡ – 84.50
ದಾವಣಗೆರೆ - 86.55
ಧಾರವಾಡ – 84.79
ಗದಗ – 85.29
ಗುಲಬರ್ಗ – 85.04
ಹಾಸನ – 84.74
ಹಾವೇರಿ – 85.76
ಕೊಡಗು – 86.06
ಕೋಲಾರ – 84.73
ಕೊಪ್ಪಳ- 86.11
ಮಂಡ್ಯ – 85.24
ಮೈಸೂರು – 84.56
ರಾಯಚೂರು – 85.79
ರಾಮನಗರ – 85.45
ಶಿವಮೊಗ್ಗ – 86.47
ತುಮಕೂರು – 85.83
ಉಡುಪಿ – 84.33
ಉತ್ತರ ಕನ್ನಡ – 85.39
ಯಾದಗಿರಿ – 85.44

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ: ಈ 5 ಬ್ಯಾಂಕ್​​ಗಳು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ Home Loans ನೀಡುತ್ತಿವೆ.. ಸಂಪೂರ್ಣ ಮಾಹಿತಿ ಇಲ್ಲಿದೆ

ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 8,349 ರೂ. (MCX) ಇದ್ದು, 106 ರೂ. ಅಂದರೆ ಶೇ. 1.29 ರಷ್ಟು ಹೆಚ್ಚಾಗಿದೆ. 
Published by:Latha CG
First published: