Petrol And Diesel Price: ಚಿಕ್ಕಮಗಳೂರಲ್ಲಿ 1.67 ರೂ. ಏರಿಕೆಯಾದ ದರ, ನಿಮ್ಮೂರಲ್ಲಿ ಬೆಲೆ ಎಷ್ಟಿದೆ?

ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ ಇಂದು 1 ಲೀಟರ್ ಪೆಟ್ರೋಲ್ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    Petrol and Diesel Price, March 3, 2022: ರಷ್ಯಾ (Russia) ಮತ್ತು ಉಕ್ರೇನ್‌ (Ukraine) ಯುದ್ಧ (War) ಮುಂದುವರಿಯುತ್ತಿದ್ದಂತೆ ಕಚ್ಚಾ ತೈಲ ದರ (Crude oil rate ) ಗಗನಮುಖಿಯಾಗುತ್ತಲೇ ಇದೆ. ಇದರ ಪರಿಣಾಮ ಶೀಘ್ರದಲ್ಲೇ ದೇಶದ ಜನಸಾಮಾನ್ಯರ ಮೇಲೂ ಬೀರಲಿದೆ ಎನ್ನಲಾಗುತ್ತಿದೆ. ಆದರೆ, ಸದ್ಯ ದೇಶದಲ್ಲಿ ಚುನಾವಣೆಗಳು (Election) ನಡೆಯುತ್ತಿರುವ ಕಾರಣದಿಂದ ಬೆಲೆಯನ್ನು (Rate) ಹೆಚ್ಚಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಮುಂದಿನ ವಾರ ಚುನಾವಣೆಗಳ ಫಲಿತಾಂಶದ (Result) ಬಳಿಕ ಬೆಲೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ (Fuel Rate) ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ.

    ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಎಷ್ಟಾಗಿದೆ?

    ಬೆಂಗಳೂರಿನಲ್ಲಿ ಮಾತ್ರ ಈ ವರ್ಷ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru)  ಇಂದು 1 ಲೀಟರ್ ಪೆಟ್ರೋಲ್​ ಅನ್ನು 100.58 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 85.01 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..

    ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:

    ಬಾಗಲಕೋಟೆ - 101.10 ರೂ. (16 ಪೈಸೆ ಇಳಿಕೆ)

    ಬೆಂಗಳೂರು - 100.58 ರೂ. (00)

    ಬೆಂಗಳೂರು ಗ್ರಾಮಾಂತರ - 100.22 ರೂ. (52 ಪೈಸೆ ಇಳಿಕೆ)

    ಬೆಳಗಾವಿ - 100.91 ರೂ. (14 ಪೈಸೆ ಇಳಿಕೆ)

    ಬಳ್ಳಾರಿ - 102.27 ರೂ. (12 ಪೈಸೆ ಇಳಿಕೆ)

    ಬೀದರ್ - 100.88 ರೂ. (00)

    ಬಿಜಾಪುರ - 100.82 ರೂ. (32 ಪೈಸೆ ಏರಿಕೆ)

    ಚಾಮರಾಜನಗರ - 100.71 ರೂ. (00)

    ಚಿಕ್ಕಬಳ್ಳಾಪುರ - 100.58 ರೂ. (46 ಪೈಸೆ ಇಳಿಕೆ)

    ಚಿಕ್ಕಮಗಳೂರು - 102.99 ರೂ. (1.67 ರೂ. ಏರಿಕೆ)

    ಚಿತ್ರದುರ್ಗ - 101.67 ರೂ. (75 ಪೈಸೆ ಇಳಿಕೆ)

    ದಕ್ಷಿಣ ಕನ್ನಡ - 100.56 ರೂ. (41 ಪೈಸೆ ಏರಿಕೆ)

    ದಾವಣಗೆರೆ - 101.91 ರೂ. (52 ಪೈಸೆ ಇಳಿಕೆ)

    ಧಾರವಾಡ - 100.31 ರೂ. (1 ಪೈಸೆ ಏರಿಕೆ)

    ಗದಗ – 101 ರೂ. (13 ಪೈಸೆ ಏರಿಕೆ)

    ಗುಲಬರ್ಗ - 101.04 ರೂ. (76 ಪೈಸೆ ಏರಿಕೆ)

    ಹಾಸನ – 100.39 ರೂ. (00)

    ಹಾವೇರಿ - 101.03 ರೂ. (3 ಪೈಸೆ ಏರಿಕೆ)

    ಕೊಡಗು – 101.89 ರೂ. (19 ಪೈಸೆ ಇಳಿಕೆ)

    ಕೋಲಾರ - 100.44 ರೂ. (7 ಪೈಸೆ ಇಳಿಕೆ)

    ಕೊಪ್ಪಳ- 101.50 ರೂ. (19 ಪೈಸೆ ಇಳಿಕೆ)

    ಮಂಡ್ಯ – 100.54 ರೂ. (24 ಪೈಸೆ ಇಳಿಕೆ)

    ಮೈಸೂರು – 100.08 ರೂ. (00)

    ರಾಯಚೂರು – 100.39 ರೂ. (61 ಪೈಸೆ ಇಳಿಕೆ)

    ರಾಮನಗರ – 101.04 ರೂ. (00)

    ಶಿವಮೊಗ್ಗ – 101.40 ರೂ. (88 ಪೈಸೆ ಇಳಿಕೆ)

    ತುಮಕೂರು – 101.48 ರೂ. (00)

    ಉಡುಪಿ - 100.68 ರೂ. (20 ಪೈಸೆ ಏರಿಕೆ)

    ಉತ್ತರ ಕನ್ನಡ – 102.50 ರೂ. (53 ಪೈಸೆ ಇಳಿಕೆ)

    ಯಾದಗಿರಿ – 101.03 ರೂ. (12 ಪೈಸೆ ಏರಿಕೆ)

    ಇದನ್ನೂ ಓದಿ: Russia vs Ukraine ಯುದ್ಧ ಪರಿಣಾಮ: LIC IPO ಬಿಡುಗಡೆ ಮುಂದೂಡಿಕೆ?

    ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

    ಬಾಗಲಕೋಟೆ – 85.51

    ಬೆಂಗಳೂರು – 85.01

    ಬೆಂಗಳೂರು ಗ್ರಾಮಾಂತರ - 84.68

    ಬೆಳಗಾವಿ – 85.34

    ಬಳ್ಳಾರಿ – 86.56

    ಬೀದರ್ - 85.30

    ಬಿಜಾಪುರ – 85.26

    ಚಾಮರಾಜನಗರ – 85.12

    ಚಿಕ್ಕಬಳ್ಳಾಪುರ – 85.01

    ಚಿಕ್ಕಮಗಳೂರು – 87.09

    ಚಿತ್ರದುರ್ಗ – 85.87

    ದಕ್ಷಿಣ ಕನ್ನಡ – 84.96

    ದಾವಣಗೆರೆ - 86.09

    ಧಾರವಾಡ – 84.79

    ಗದಗ – 85.41

    ಗುಲಬರ್ಗ – 85.45

    ಹಾಸನ – 84.72

    ಹಾವೇರಿ – 85.44

    ಕೊಡಗು – 86.06

    ಕೋಲಾರ – 84.89

    ಕೊಪ್ಪಳ- 85.86

    ಮಂಡ್ಯ – 84.97

    ಮೈಸೂರು – 84.56

    ರಾಯಚೂರು – 84.87

    ರಾಮನಗರ – 85.43

    ಶಿವಮೊಗ್ಗ – 85.68

    ತುಮಕೂರು – 85.83

    ಉಡುಪಿ – 85.07

    ಉತ್ತರ ಕನ್ನಡ – 86.71

    ಯಾದಗಿರಿ – 85.44

    ವಿವಿಧ ಮಹಾನಗರಗಳಲ್ಲಿ ಎಷ್ಟಿದೆ ಇಂಧನ ಬೆಲೆ?

    ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.40 ರೂ ಇದ್ದರೆ ಡೀಸೆಲ್​ ಬೆಲೆ 91.43 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ.

    ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

    ಇದನ್ನೂ ಓದಿ: GST: 9,176 ಕೋಟಿ ರೂ. ಮುಟ್ಟಿದ ಕರ್ನಾಟಕದ ಜಿಎಸ್‌ಟಿ ಸಂಗ್ರಹ, ಶೇ. 21ರಷ್ಟು ಏರಿಕೆ

    ರಾಜ್ಯ ರಾಜಧಾನಿ ಬೆಂಗಳೂರು ಸೇರಿ ದೇಶದ ಹಲವು ಪ್ರಮುಖ ನಗರಗಳಲ್ಲಿ ಹಲವು ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

    ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 8,290 ರೂ. (MCX) ಇದ್ದು, 385 ರೂ. ಅಂದರೆ ಶೇ. 4.87 ರಷ್ಟು ಹೆಚ್ಚಾಗಿದೆ.
    Published by:Annappa Achari
    First published: