Petrol and Diesel Price Down: ಪೆಟ್ರೋಲ್​ 12 ರೂ. ಡೀಸೆಲ್​ 17 ರೂ. ಇಳಿಕೆ: ಇಂದು ಸಂಜೆಯಿಂದಲೇ ಹೊಸ ದರ ಜಾರಿ

Petrol and Diesel Price Down: ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ 5 ರೂ ಕಡಿಮೆ ಆದರೆ, ಡೀಸೆಲ್ ಮೇಲಿನ ಸುಂಕದಲ್ಲಿ 10 ರೂ ಕಡಿತಗೊಳಿಸಿದೆ. ಇಂದು ಸಂಜೆಯಿಂದಲೇ ಈ ಹೊಸ ದರಗಳು ಜಾರಿಗೆ ಬರಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol and Diesel Price Down: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಲೆಸ್ ಮೇಲಿನ ಅಬಕಾರಿ ಸುಂಕದಲ್ಲಿ (Central Govt slashes Excise Duty on Petrol and Diesel) ಭಾರೀ ಕಡಿತಗೊಳಿಸಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕದಲ್ಲಿ 5 ರೂ ಕಡಿಮೆ ಆದರೆ, ಡೀಸೆಲ್ ಮೇಲಿನ ಸುಂಕದಲ್ಲಿ 10 ರೂ ಕಡಿತಗೊಳಿಸಿದೆ. ಇಂದು ಸಂಜೆಯಿಂದಲೇ ಈ ಹೊಸ ದರಗಳು ಜಾರಿಗೆ ಬರಲಿದೆ. ಕೇಂದ್ರ ಸರ್ಕಾರ ದೇಶದ ಜನತೆಗೆ ದೀಪಾವಳಿ ಗಿಫ್ಟ್ (Deepavali gift) ಆಗಿ ಪೆಟ್ರೋಲ್ ಬೆಲೆ ಇಳಿಕೆ ನೀಡಿದೆ. ಅದರ ಬೆನ್ನಲ್ಲೇ ಬಸವರಾಜ್ ಬೊಮ್ಮಾಯಿ (Basavaraj Bommai led Karnataka Government) ನೇತೃತ್ವದ ರಾಜ್ಯ ಸರ್ಕಾರ ಕೂಡ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ತೆರಿಗೆಯನ್ನ ತಲಾ 7 ರೂಗಳಷ್ಟು ಇಳಿಕೆ ಮಾಡಿದೆ. ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 107.64 ರೂಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 104.50 ರೂ. ಗೆ ಮಾರಾಟಮಾಡಲಾಗುತ್ತಿದೆ. 

ಟ್ವೀಟ್​ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ ಅವರು ಸ್ವತಃ ತಾವೇ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 95.50 ರೂಪಾಯಿಗೆ ಇಳಿಕೆಯಾಗಲಿದೆ. ಡೀಸೆಲ್ ಬೆಲೆ 81.50 ರೂಪಾಯಿಯ ಆಸುಪಾಸು ದರಕ್ಕೆ ಇಳಿಯುವ ನಿರೀಕ್ಷೆ ಇದೆ. "ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಡೀಸೆಲ್ ಮೇಲೆ 10 ರೂ ಹಾಗೂ ಪೆಟ್ರೋಲ್ 5 ರೂ ಕಡಿಮೆಗೊಳಿಸಿ ಜನರಿಗೆ ದೀಪಾವಳಿ ಉಡುಗೊರೆ ಕೊಟ್ಟಿದ್ದಾರೆ…. ಕರ್ನಾಟಕ ಸರ್ಕಅರ ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ತಲಾ 7 ರೂ ಕಡಿಮೆಗೊಳಿಸಲು ನಿರ್ಧರಿಸಿದೆ. ಈ ನಮ್ಮ ನಿರ್ಧಾರದಿಂದ ರಾಜ್ಯ ಸರ್ಕಾರಕ್ಕೆ ಅಂದಾಜು 2100 ಕೋಟಿ ರೂ ಕೆಎಸ್​ಟಿಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ರಾಜ್ಯ ಸರ್ಕಾರದ ಈ ನಿರ್ಧಾರ ನಾಳೆ ಸಾಯಂಕಾಲದಿಂದ ಅನ್ವಯ ಆಗುವುದು. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದ ಜನತೆಗೆ ದೀಪಾವಳಿಯ ಉಡುಗೊರೆ ಎಂದು" ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.



ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ

ಬಾಗಲಕೋಟೆ - 108.45 ರೂ. (5 ರೂ. 91 ಪೈಸೆ ಇಳಿಕೆ )
ಬೆಂಗಳೂರು - 107.64 ರೂ. (6 ರೂ. 29 ಪೈಸೆ ಇಳಿಕೆ )
ಬೆಂಗಳೂರು ಗ್ರಾಮಾಂತರ -107.71 ರೂ. (6 ರೂ. 56 ಪೈಸೆ ಇಳಿಕೆ)
ಬೆಳಗಾವಿ - 108.38 ರೂ. (5 ರೂ. 80 ಪೈಸೆ ಇಳಿಕೆ)
ಬಳ್ಳಾರಿ - 109.45 ರೂ. (6 ರೂ. 55 ಪೈಸೆ ಇಳಿಕೆ )
ಬೀದರ್ - 108.07 ರೂ. (6 ರೂ. 35 ಪೈಸೆ ಇಳಿಕೆ)
ಬಿಜಾಪುರ - 107.32 ರೂ. (6 ರೂ 82 ಪೈಸೆ ಇಳಿಕೆ)
ಚಾಮರಾಜನಗರ - 107.58 ರೂ. (6 ರೂ. 79 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - 107.64 ರೂ. (6 ರೂ. 29 ಪೈಸೆ ಇಳಿಕೆ)
ಚಿಕ್ಕಮಗಳೂರು - 108.70 ರೂ. (7 ರೂ. 56 ಪೈಸೆ ಇಳಿಕೆ)
ಚಿತ್ರದುರ್ಗ - 109.80 ರೂ. (5 ರೂ. 81 ಪೈಸೆ ಇಳಿಕೆ)
ದಕ್ಷಿಣ ಕನ್ನಡ - 107.56 ರೂ. (6 ರೂ. 04 ಪೈಸೆ ಇಳಿಕೆ )
ದಾವಣಗೆರೆ - 109.15 ರೂ. (6 ರೂ. 29 ಪೈಸೆ ಇಳಿಕೆ)
ಧಾರವಾಡ - 107.34 ರೂ. (6 ರೂ. 43 ಪೈಸೆ ಇಳಿಕೆ)
ಗದಗ – 107.95 ರೂ. (6 ರೂ 66 ಪೈಸೆ ಇಳಿಕೆ)
ಗುಲಬರ್ಗ - 108.15 ರೂ. (5 ರೂ. 46 ಪೈಸೆ ಇಳಿಕೆ)
ಹಾಸನ – 107.93 ರೂ. (6 ರೂ.23 ಪೈಸೆ ಇಳಿಕೆ)
ಹಾವೇರಿ - 107.94 ರೂ. (7 ರೂ 12 ಪೈಸೆ ಇಳಿಕೆ )
ಕೊಡಗು – 115.50 ರೂ. (15 ಪೈಸೆ ಏರಿಕೆ)
ಕೋಲಾರ - 113.86 ರೂ. (8 ಪೈಸೆ ಏರಿಕೆ)
ಕೊಪ್ಪಳ- 115.18 ರೂ. (22 ಪೈಸೆ ಏರಿಕೆ)
ಮಂಡ್ಯ – 113.52 ರೂ. (16 ಪೈಸೆ ಇಳಿಕೆ)
ಮೈಸೂರು – 114.03 ರೂ. (1 ರೂ 8 ಪೈಸೆ ಏರಿಕೆ )
ರಾಯಚೂರು – 113.72 ರೂ. (82 ಪೈಸೆ ಏರಿಕೆ)
ರಾಮನಗರ – 114.44 ರೂ. (8 ಪೈಸೆ ಇಳಿಕೆ)
ಶಿವಮೊಗ್ಗ – 115.78 ರೂ. (1.11 ಪೈಸೆ ಏರಿಕೆ)
ತುಮಕೂರು – 114.48 ರೂ. (14 ಪೈಸೆ ಇಳಿಕೆ)
ಉಡುಪಿ - 113.39 ರೂ. (7 ಪೈಸೆ ಏರಿಕೆ)
ಉತ್ತರಕನ್ನಡ – 115.66 ರೂ (43 ಪೈಸೆ ಇಳಿಕೆ)
ಯಾದಗಿರಿ – 115.12 ರೂ. (37 ಪೈಸೆ ಇಳಿಕೆ )

ಇದನ್ನು ಓದಿ : ಅಬಕಾರಿ ಸುಂಕ, ವ್ಯಾಟ್ ಕಡಿತ; ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಇಳಿಕೆ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ

ಬಾಗಲಕೋಟೆ – 104.92
ಬೆಂಗಳೂರು – 104.50
ಬೆಂಗಳೂರು ಗ್ರಾಮಾಂತರ - 104.81
ಬೆಳಗಾವಿ – 104.76
ಬಳ್ಳಾರಿ – 106.41
ಬೀದರ್ -104.97
ಬಿಜಾಪುರ – 104.72
ಚಾಮರಾಜನಗರ – 104.90
ಚಿಕ್ಕಬಳ್ಳಾಪುರ – 104.50
ಚಿಕ್ಕಮಗಳೂರು – 106.54
ಚಿತ್ರದುರ್ಗ – 105.90
ದಕ್ಷಿಣ ಕನ್ನಡ – 104.16
ದಾವಣಗೆರೆ -105.90
ಧಾರವಾಡ – 104.38
ಗದಗ – 105.90
ಗುಲಬರ್ಗ – 104.24
ಹಾಸನ – 104.57
ಹಾವೇರಿ – 105.31
ಕೊಡಗು – 105.67
ಕೋಲಾರ – 104.44
ಕೊಪ್ಪಳ- 105.66
ಮಂಡ್ಯ – 104.42
ಮೈಸೂರು –104.01
ರಾಯಚೂರು – 105.19
ರಾಮನಗರ – 105.02
ಶಿವಮೊಗ್ಗ – 105.89
ತುಮಕೂರು –105.33
ಉಡುಪಿ – 103.76
ಉತ್ತರಕನ್ನಡ – 105.84
ಯಾದಗಿರಿ – 104.96

ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 106.66 ರೂ ಇದ್ದರೆ ಡೀಸೆಲ್​ ಬೆಲೆ 102.59 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 110.04 ರೂ ಮತ್ತು ಡೀಸೆಲ್ 98.42 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 115.85 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 106.62 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 110.49 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 101.56 ರೂ.ಗೆ ಮಾರಾಟ ಮಾಡಲಾಗುತ್ತಿದೆ
Published by:Vasudeva M
First published: