• Home
  • »
  • News
  • »
  • business
  • »
  • Today Petrol Price: ಬಳ್ಳಾರಿಯಲ್ಲಿ 1 ರೂ ಹೆಚ್ಚಳವಾದ ಪೆಟ್ರೋಲ್ ಬೆಲೆ - ನಿಮ್ಮ ಊರಿನ ತೈಲ ದರ ಇಲ್ಲಿದೆ ನೋಡಿ

Today Petrol Price: ಬಳ್ಳಾರಿಯಲ್ಲಿ 1 ರೂ ಹೆಚ್ಚಳವಾದ ಪೆಟ್ರೋಲ್ ಬೆಲೆ - ನಿಮ್ಮ ಊರಿನ ತೈಲ ದರ ಇಲ್ಲಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Petrol And Diesel Price: ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ.

ಮುಂದೆ ಓದಿ ...
  • Share this:

ಕೇಂದ್ರ ಸರ್ಕಾರವು (Central government) ಎಕ್ಸೈಸ್ ಡ್ಯೂಟಿ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆಗಳಲ್ಲಿ ಕಳೆದ ಹತ್ತು ದಿನಗಳಿಂದ ಇಂಧನ (Fuel Price) ಬೆಲೆಗಳು ಈ ಮುಂಚೆ ಇದ್ದ ಭಾರಿ ಬೆಲೆಗಳಿಂದ ಕೆಳಗಿಳಿದಿದ್ದು ಒಂದು ಸ್ಥಿರವಾದ ಗತಿಯಲ್ಲಿ ಸಾಗುತ್ತಿವೆ ಎಂದಷ್ಟೆ ಹೇಳಬಹುದು. ಅಷ್ಟಕ್ಕೂ ನಿನ್ನೆಗೆ ಹೋಲಿಸಿದರೆ ಇಂದು ಬಳ್ಳಾರಿಯಲ್ಲಿ ಪೆಟ್ರೋಲ್ ಬೆಲೆ 1 ರೂ. 1 ಪೈಸೆ ಹೆಚ್ಚಳವಾಗಿದೆ. ಮಿಕ್ಕಂತೆ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಾಗಿಲ್ಲವಾದರೂ ಕೆಲ ಪೈಸೆಗಳಷ್ಟು ಏರಿಳಿತ ಸಾಮಾನ್ಯವಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆಯಲ್ಲಿ ಏರಿಳಿತ ನಡೆಯುತ್ತಲೇ ಇದೆ.


ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.


ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.27 (38 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.23 (14 ಪೈಸೆ ಏರಿಕೆ)
ಬೆಳಗಾವಿ - ರೂ. 102.26 (57 ಪೈಸೆ ಏರಿಕೆ)
ಬಳ್ಳಾರಿ - ರೂ. 103.87 (1 ರೂ. 1 ಪೈಸೆ ಏರಿಕೆ)
ಬೀದರ್ - ರೂ. 103.21 (98 ಪೈಸೆ ಏರಿಕೆ)
ವಿಜಯಪುರ - ರೂ. 102.51 (65 ಪೈಸೆ ಏರಿಕೆ)
ಚಾಮರಾಜನಗರ - ರೂ. 101.96 (12 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 102.67 (73 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.53 (95 ಪೈಸೆ ಏರಿಕೆ)
ಚಿತ್ರದುರ್ಗ - ರೂ. 102.87 (73 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.21 (43 ಪೈಸೆ ಇಳಿಕೆ)
ದಾವಣಗೆರೆ - ರೂ. 103.32 (28 ಪೈಸೆ ಇಳಿಕೆ)
ಧಾರವಾಡ - ರೂ. 101.69 (2 ಪೈಸೆ ಏರಿಕೆ)


ಇದನ್ನೂ ಓದಿ: ನೀವು ಬ್ಯುಸಿನೆಸ್​ ಮಾಡ್ಬೇಕು ಅಂತ ಪ್ಲ್ಯಾನ್​ ಮಾಡಿದ್ದೀರಾ? ಹಾಗಿದ್ರೆ ಇಲ್ಲಿ ಲೋನ್​ಗೆ ಅಪ್ಲೈ ಮಾಡಿ


ಗದಗ - ರೂ. 102.76 (54 ಪೈಸೆ ಏರಿಕೆ)
ಕಲಬುರಗಿ - ರೂ. 102.28 (62 ಪೈಸೆ ಏರಿಕೆ)
ಹಾಸನ - ರೂ. 101.63 (39 ಪೈಸೆ ಇಳಿಕೆ)
ಹಾವೇರಿ - ರೂ. 102.45 (7 ಪೈಸೆ ಏರಿಕೆ)
ಕೊಡಗು - ರೂ. 103.16 (3 ಪೈಸೆ ಇಳಿಕೆ)
ಕೋಲಾರ - ರೂ. 101.81 (6 ಪೈಸೆ ಇಳಿಕೆ)
ಕೊಪ್ಪಳ - ರೂ. 102.83 (19 ಪೈಸೆ ಇಳಿಕೆ)
ಮಂಡ್ಯ - ರೂ. 101.84 (5 ಪೈಸೆ ಇಳಿಕೆ)
ಮೈಸೂರು - ರೂ. 101.79 (33 ಪೈಸೆ ಏರಿಕೆ)
ರಾಯಚೂರು - ರೂ. 101.76 (59 ಪೈಸೆ ಇಳಿಕೆ)
ರಾಮನಗರ - ರೂ. 102.25 (14 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.61 (16 ಪೈಸೆ ಏರಿಕೆ)
ತುಮಕೂರು - ರೂ. 102.64 (19 ಪೈಸೆ ಏರಿಕೆ)
ಉಡುಪಿ - ರೂ. 101.92 (9 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 104.14 (16 ಪೈಸೆ ಇಳಿಕೆ)
ಯಾದಗಿರಿ - ರೂ. 102.74 (48 ಪೈಸೆ ಏರಿಕೆ)


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.21
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.15
ಬೆಳಗಾವಿ - ರೂ. 88.21
ಬಳ್ಳಾರಿ - ರೂ. 89.66
ಬೀದರ್ - ರೂ. 89.06
ವಿಜಯಪುರ - ರೂ. 88.43
ಚಾಮರಾಜನಗರ - ರೂ. 87.91
ಚಿಕ್ಕಬಳ್ಳಾಪುರ - ರೂ. 88.55
ಚಿಕ್ಕಮಗಳೂರು - ರೂ. 89.24
ಚಿತ್ರದುರ್ಗ - ರೂ. 88.63
ದಕ್ಷಿಣ ಕನ್ನಡ - ರೂ. 87.20
ದಾವಣಗೆರೆ - ರೂ. 89.04


ಇದನ್ನೂ ಓದಿ: ಅಲ್ಪ ಇಳಿಕೆ ಕಂಡ ಚಿನ್ನದ ಬೆಲೆ, ಸ್ಥಿರತೆ ಕಾಯ್ದುಕೊಂಡ ಬೆಳ್ಳಿ: ಇಂದಿನ ದರಗಳು ಎಷ್ಟಿದೆ ನೋಡಿ


ಧಾರವಾಡ - ರೂ. 87.68
ಗದಗ - ರೂ. 88.65
ಕಲಬುರಗಿ - ರೂ. 88.22
ಹಾಸನ - ರೂ. 87.52
ಹಾವೇರಿ - ರೂ. 88.37
ಕೊಡಗು - ರೂ. 88.86
ಕೋಲಾರ - ರೂ. 87.77
ಕೊಪ್ಪಳ - ರೂ. 88.72
ಮಂಡ್ಯ - ರೂ. 87.80
ಮೈಸೂರು - ರೂ. 87.75
ರಾಯಚೂರು - ರೂ. 87.76
ರಾಮನಗರ - ರೂ. 88.17
ಶಿವಮೊಗ್ಗ - ರೂ. 89.34
ತುಮಕೂರು - ರೂ. 88.52
ಉಡುಪಿ - ರೂ. 87.84
ಉತ್ತರ ಕನ್ನಡ - ರೂ. 89.77
ಯಾದಗಿರಿ - ರೂ. 88.63

Published by:Sandhya M
First published: