Petrol Price Today : ಇಂದಂತೂ ಪೆಟ್ರೋಲ್-ಡೀಸೆಲ್ ದರಗಳು ಹೀಗಿದೆ; ಮುಂದಿನ ದಿನಗಳಲ್ಲಿ ಬೆಲೆ ಏರುವ ಸಾಧ್ಯತೆ!

ರಷ್ಯಾ ಮತ್ತು ಉಕ್ರೇನ್ ಯುದ್ಧದ ವ್ಯತಿರಿಕ್ತ ಪರಿಣಾಮ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಮೇಲೆ ಬೀಳಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Petrol And Diesel Price Today: ನಿಮಗೆ ಗೊತ್ತಿರುವಂತೆ ಜೂನ್ 15, 2017 ರಿಂದಲೆ ಜಾರಿಗೆ ಬಂದಿರುವಂತೆ ನಮ್ಮ ದೇಶದಲ್ಲಿ ಈಗ ಪ್ರತಿನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪರಿಷ್ಕೃತವಾಗುತ್ತಿರುತ್ತವೆ. ದಿನದ ಮುಕ್ತಾಯದವರೆಗೆ ಕರ್ನಾಟಕ(Karnataka)ದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಕೊಂಚ ವ್ಯತ್ಯಾಸ ಉಂಟಾಗುತ್ತಲೇ ಇರುತ್ತದೆ. ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ (Russia And Ukraine War) ದೇಶಗಳ ಮಧ್ಯೆ ಯುದ್ಧ ನಡೆಯುತ್ತಿದ್ದು ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ(International Market)ಯಲ್ಲಿ ಕಚ್ಚಾ ತೈಲದ (Crude Oil) ಬೆಲೆ ಗಗನಕ್ಕೇರಿದೆ. 2014ರ ನಂತರ ಇದೇ ಬಾರಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಒಂದಕ್ಕೆ 105 ಡಾಲರ್ ಮೊತ್ತ ತಲುಪಿದೆ.

ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ವಿಪರೀತ ಪರಿಣಾಮ ಉಂಟಾಗಲಿದ್ದು ಮುಂಬರುವ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಸಾಕಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಇದು ಮುಂದೆ ಜಾಗತಿಕ ಮಟ್ಟದಲ್ಲಿ ಎಲ್ಲ ದೇಶಗಳ ಮೇಲೆ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ. ಭಾರತದ ಮೇಲೂ ಇದರ ಪರಿಣಾಮ ಉಂಟಾಗಲಿದ್ದು ಮುಂದಿನ ಕೆಲ ದಿನಗಳು ನಿರ್ಣಾಯಕವಾಗಲಿದೆ. ಈ ಯುದ್ಧದ ವ್ಯತಿರಿಕ್ತ ಪರಿಣಾಮ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಮೇಲೆ ಬೀಳಬಹುದಾದ ಸಾಧ್ಯತೆ ಇದೆ ಎನ್ನಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿನ ಬೆಲೆ

ನಿನ್ನೆಗೆ ಹೋಲಿಸಿದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಯಾವ ಬದಲಾವಣೆಗಳು ಕಂಡುಬಂದಿಲ್ಲ. ಇಂದು ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 95.41 ರೂ ಮತ್ತು ಡೀಸೆಲ್ 86.67 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 101.51 ರೂ ಇದ್ದು ನಿನ್ನೆಗೆ ಹೋಲಿಸಿದರೆ ದರದಲ್ಲಿ ಕೊಂಚ ಏರಿಕೆಯಾಗಿದೆ. ಡೀಸೆಲ್​ ಬೆಲೆ 91.53 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ 109.98 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 94.14 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 104.67 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 89.79 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ:  Russia-Ukraine Crisis: ಮುಂದಿನ 2 ವರ್ಷದಲ್ಲಿ ಚಿನ್ನದ ಬೆಲೆ 10,000 ರೂ. ಏರಿಕೆ ಸಾಧ್ಯತೆ

ಇಂದಿನ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಕರ್ನಾಟಕದ ಯಾವ ಯಾವ ಭಾಗಗಳಲ್ಲಿ ಏಷ್ಟೆಷ್ಟಿದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ಬೆಲೆ ಹೀಗಿದೆ

ಬಾಗಲಕೋಟೆ - ರೂ. 101.08 (2 ಪೈಸೆ ಇಳಿಕೆ)
ಬೆಂಗಳೂರು - ರೂ. 100.58 (00)
ಬೆಂಗಳೂರು ಗ್ರಾಮಾಂತರ - ರೂ. 100.65 (7 ಪೈಸೆ ಏರಿಕೆ)
ಬೆಳಗಾವಿ - ರೂ. 101.14 (79 ಪೈಸೆ ಏರಿಕೆ)
ಬಳ್ಳಾರಿ - ರೂ. 101.80 (19 ಪೈಸೆ ಇಳಿಕೆ)
ಬೀದರ್ - ರೂ. 101.75 (31 ಪೈಸೆ ಏರಿಕೆ)
ವಿಜಯಪುರ - ರೂ. 100.28 (54 ಪೈಸೆ ಇಳಿಕೆ)
ಚಾಮರಾಜನಗರ - ರೂ. 100.52 (19 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.04 (46 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 101.75 (1.24 ರೂ. ಏರಿಕೆ)
ಚಿತ್ರದುರ್ಗ - ರೂ. 101.27 (40 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 99.84 (28 ಪೈಸೆ ಇಳಿಕೆ)
ದಾವಣಗೆರೆ - ರೂ. 102.79 (88 ಪೈಸೆ ಏರಿಕೆ)
ಧಾರವಾಡ - ರೂ. 100.30 (1 ಪೈಸೆ ಇಳಿಕೆ)
ಗದಗ - ರೂ. 101.38 (38 ಪೈಸೆ ಏರಿಕೆ)
ಕಲಬುರಗಿ - ರೂ. 100.89 (15 ಪೈಸೆ ಇಳಿಕೆ)
ಹಾಸನ - ರೂ. 100.64 (25 ಪೈಸೆ ಏರಿಕೆ)
ಹಾವೇರಿ - ರೂ. 101.21 (18 ಪೈಸೆ ಏರಿಕೆ)
ಕೊಡಗು - ರೂ. 101.86 (22 ಪೈಸೆ ಇಳಿಕೆ)
ಕೋಲಾರ - ರೂ. 100.44 (00)
ಕೊಪ್ಪಳ - ರೂ. 101.45 (5 ಪೈಸೆ ಇಳಿಕೆ)
ಮಂಡ್ಯ - ರೂ. 100.38 (16 ಪೈಸೆ ಇಳಿಕೆ)
ಮೈಸೂರು - ರೂ. 100.32 (24 ಪೈಸೆ ಏರಿಕೆ)
ರಾಯಚೂರು - ರೂ. 100.75 (36 ಪೈಸೆ ಏರಿಕೆ)
ರಾಮನಗರ - ರೂ. 100.70 (34 ಪೈಸೆ ಇಳಿಕೆ)
ಶಿವಮೊಗ್ಗ - ರೂ. 102.45 (1.05 ರೂ. ಏರಿಕೆ)
ತುಮಕೂರು - ರೂ. 100.95 (53 ಪೈಸೆ ಇಳಿಕೆ)
ಉಡುಪಿ - ರೂ. 100.48 (20 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 100.62 (1.82 ರೂ. ಇಳಿಕೆ)
ಯಾದಗಿರಿ - ರೂ. 101.40 (37 ಪೈಸೆ ಏರಿಕೆ)

ಇದನ್ನೂ ಓದಿ:  LIC Credit Card: ನಿಮ್ಮ ಬಳಿ LIC ಪಾಲಿಸಿ ಇದೆಯಾ? ಹಾಗಾದ್ರೆ ನಿಮಗೆ ಸಿಗಲಿದೆ ಉಚಿತ ಕ್ರೆಡಿಟ್ ಕಾರ್ಡ್

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ ಹೀಗಿದೆ

ಬಾಗಲಕೋಟೆ – 85.49
ಬೆಂಗಳೂರು – 85.01
ಬೆಂಗಳೂರು ಗ್ರಾಮಾಂತರ - 85.07
ಬೆಳಗಾವಿ – 85.54
ಬಳ್ಳಾರಿ – 86.15
ಬೀದರ್ - 86.09
ಬಿಜಾಪುರ – 84.76
ಚಾಮರಾಜನಗರ – 84.96
ಚಿಕ್ಕಬಳ್ಳಾಪುರ – 85.43
ಚಿಕ್ಕಮಗಳೂರು – 86.04
ಚಿತ್ರದುರ್ಗ – 85.51
ದಕ್ಷಿಣ ಕನ್ನಡ – 84.31
ದಾವಣಗೆರೆ - 86.88
ಧಾರವಾಡ – 84.78
ಗದಗ – 85.76
ಗುಲಬರ್ಗ – 85.31
ಹಾಸನ – 84.94
ಹಾವೇರಿ – 85.60
ಕೊಡಗು – 86.05
ಕೋಲಾರ – 84.89
ಕೊಪ್ಪಳ- 85.82
ಮಂಡ್ಯ – 84.83
ಮೈಸೂರು – 84.77
ರಾಯಚೂರು – 85.21
ರಾಮನಗರ – 85.12
ಶಿವಮೊಗ್ಗ – 86.62
ತುಮಕೂರು – 85.34
ಉಡುಪಿ – 84.89
ಉತ್ತರ ಕನ್ನಡ – 85.07
ಯಾದಗಿರಿ – 85.78
Published by:Mahmadrafik K
First published: