Petrol-Diesel Price Today: ಗುಡ್​ನ್ಯೂಸ್! ಎಲ್ಲಾ ಜಿಲ್ಲೆಗಳಲ್ಲಿಯೂ ಪೆಟ್ರೋಲ್ ಬೆಲೆ ಭಾರೀ ಇಳಿಕೆ

Petrol-Diesel Price Today: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಶನಿವಾರ (ಮೇ 21) ಕೇಂದ್ರವು ಕ್ರಮವಾಗಿ ಲೀಟರ್‌ಗೆ 8 ಮತ್ತು 6 ರೂ.  ಕಡಿಮೆಯಾಗಿದೆ. ಪರಿಣಾಮ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಪೆಟ್ರೋಲ್-ಡಿಸೇಲ್ ಬೆಲೆ ಭಾರೀ ಇಳಿಕೆ ಕಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಶನಿವಾರ (ಮೇ 21) ಕೇಂದ್ರವು ಕ್ರಮವಾಗಿ ಲೀಟರ್‌ಗೆ 8 ಮತ್ತು 6 ರೂ.  ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಕೇಂದ್ರಕ್ಕೆ ವರ್ಷಕ್ಕೆ ಸುಮಾರು 1 ಲಕ್ಷ ಕೋಟಿ ಆದಾಯವನ್ನು ಕಳೆದುಕೊಳ್ಳುತ್ತದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಟ್ವಿಟರ್‌ನಲ್ಲಿ ಹಣದುಬ್ಬರವನ್ನು ನಿಗ್ರಹಿಸುವ ಮತ್ತು ಉಜ್ವಲ ಯೋಜನೆಯಡಿ ಸಿಲಿಂಡರ್‌ಗಳನ್ನು ಒದಗಿಸುವ ಕುರಿತು ಇತರ ಹೇಳಿಕೆಗಳೊಂದಿಗೆ ಪ್ರಕಟಿಸಿದ್ದಾರೆ. ಉಕ್ರೇನ್ ಯುದ್ಧದ ಹಿನ್ನೆಲೆ ಜಾಗತಿಕ ಕಚ್ಚಾತೈಲ (Crude Oil) ಬೆಲೆ ಕೆಲವು ದಿನಗಳಿಂದ ಏರಿಕೆಯಾಗುತ್ತಲೇ ಇತ್ತು. ಆದರೆ ಈಗ ಇಂಧನ ಬೆಲೆ ದಿಢೀರ್ ಇಳಿಕೆ ಕಂಡಿದೆ. 100ರ ಗಡಿ ದಾಟಿ ಹೊರಟಿರುವ ಇಂಧನ ಬೆಲೆಗಳು ವಾಹನ ಸವಾರರಿಗೆ ಬರೆ ಎಳೆದಂತಾಗಿತ್ತು. ಇಂದು ದೇಶದಲ್ಲಿ ಇಂಧನ ಬೆಲೆ ಎಲ್ಲೆಲ್ಲಿ ಎಷ್ಟಿದೆ ಎಂಬುದರ ಬಗ್ಗೆ ಫುಲ್ ಡಿಟೇಲ್ಸ್ ಹೀಗಿದೆ.

ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ (Petrol Diesel Price) ದರಗಳು ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿತ್ತು. ಕಳೆದ ನಾಲ್ಕು ವಾರದಿಂದಲೂ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಇಂಧನ ಬೆಲೆ ಸ್ಥಿರವಾಗಿತ್ತು. ಆದರೆ ಇಂದು ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂಧನ ಬೆಲೆ ಇಳಿಕೆಯಾಗಿದೆ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 102.43 (9.15 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (9.15 ಪೈಸೆಇಳಿಕೆ)
ಬೆಂಗಳೂರು ಗ್ರಾಮಾಂತರ - ರೂ. 102.00 (9.40 ಪೈಸೆ ಇಳಿಕೆ)
ಬೆಳಗಾವಿ - ರೂ. 102.56 (9.21 ಪೈಸೆ ಇಳಿಕೆ)
ಬಳ್ಳಾರಿ - ರೂ. 103.13 ( 9.60 ಪೈಸೆ ಇಳಿಕೆ)
ಬೀದರ್ - ರೂ. 102.47 (9.77 ಪೈಸೆ ಇಳಿಕೆ)
ವಿಜಯಪುರ - ರೂ. 101.94 (8.95 ಪೈಸೆ ಇಳಿಕೆ)
ಚಾಮರಾಜನಗರ - ರೂ. 101.88 (9.16 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 111.54 (9.14 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 103.21 (9.41 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 102.62 (10.46 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.13 (9.16 ಪೈಸೆ ಇಳಿಕೆ)
ದಾವಣಗೆರೆ - ರೂ. 104.09 (9.06 ಪೈಸೆ ಇಳಿಕೆ)
ಧಾರವಾಡ - ರೂ. 101.69 (9.27 ಪೈಸೆ ಇಳಿಕೆ)
ಗದಗ - ರೂ. 102.47 (9.41 ಪೈಸೆ ಇಳಿಕೆ)
ಕಲಬುರಗಿ - ರೂ. 102.24 (9.20 ಪೈಸೆ ಇಳಿಕೆ)
ಹಾಸನ - ರೂ. 102.28 (9.08 ಪೈಸೆ ಇಳಿಕೆ)
ಹಾವೇರಿ - ರೂ. 102.55 (9.16 ಪೈಸೆ ಇಳಿಕೆ)
ಕೊಡಗು - ರೂ. 102.69 (9.65 ಪೈಸೆ ಇಳಿಕೆ)
ಕೋಲಾರ - ರೂ. 102.31 (8.72 ಪೈಸೆ ಇಳಿಕೆ)
ಕೊಪ್ಪಳ - ರೂ. 102.83 (9.16 ಪೈಸೆ ಇಳಿಕೆ)
ಮಂಡ್ಯ - ರೂ. 102.01 (8.89 ಪೈಸೆ ಇಳಿಕೆ)
ಮೈಸೂರು - ರೂ. 101.46 (9.44 ಇಳಿಕೆ)
ರಾಯಚೂರು - ರೂ. 102.70 (9.16 ಇಳಿಕೆ)
ರಾಮನಗರ - ರೂ. 102.28 (9.12 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.42 (8.89 ಇಳಿಕೆ)
ತುಮಕೂರು - ರೂ. 102.76( 8.76 ಪೈಸೆ ಇಳಿಕೆ)
ಉಡುಪಿ - ರೂ. 101.44 (9.55 ಪೈಸೆ ಇಳಿಕೆ )
ಉತ್ತರ ಕನ್ನಡ - ರೂ. 104.14 (7.00 ರೂಪಾಯಿ ಇಳಿಕೆ)
ಯಾದಗಿರಿ - ರೂ. 102.39 (9.15 ಪೈಸೆ ಇಳಿಕೆ)

ಇದನ್ನೂ ಓದಿ: Cryptocurrency: ಇದೇ ಕಾರಣಕ್ಕೆ ಬಿಲ್ ಗೇಟ್ಸ್ ಕ್ರಿಪ್ಟೋಕರೆನ್ಸಿಯನ್ನು ಹೊಂದಿಲ್ಲ ಅಂತೆ!

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.36
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.47
ಬಳ್ಳಾರಿ - ರೂ. 89.00
ಬೀದರ್ - ರೂ. 88.39
ವಿಜಯಪುರ - ರೂ. 87.91
ಚಾಮರಾಜನಗರ - ರೂ. 87.84
ಚಿಕ್ಕಬಳ್ಳಾಪುರ - ರೂ. 88.31
ಚಿಕ್ಕಮಗಳೂರು - ರೂ. 89.00
ಚಿತ್ರದುರ್ಗ - ರೂ. 88.38
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.70
ಧಾರವಾಡ - ರೂ. 87.68
ಗದಗ - ರೂ. 88.40
ಕಲಬುರಗಿ - ರೂ. 88.19
ಹಾಸನ - ರೂ. 88.07
ಹಾವೇರಿ - ರೂ. 88.47
ಕೊಡಗು - ರೂ. 88.54
ಕೋಲಾರ - ರೂ. 88.22
ಕೊಪ್ಪಳ - ರೂ. 88.72
ಮಂಡ್ಯ - ರೂ. 87.95
ಮೈಸೂರು - ರೂ. 87.45
ರಾಯಚೂರು - ರೂ. 88.61
ರಾಮನಗರ - ರೂ. 88.20
ಶಿವಮೊಗ್ಗ - ರೂ. 89.14
ತುಮಕೂರು - ರೂ. 88.64
ಉಡುಪಿ - ರೂ. 87.41
ಉತ್ತರ ಕನ್ನಡ - ರೂ. 89.78
ಯಾದಗಿರಿ - ರೂ. 88.32
Published by:Divya D
First published: