Petrol-Diesel Price Today: ಚಿತ್ರದುರ್ಗದಲ್ಲಿ ಪೆಟ್ರೋಲ್ ಬೆಲೆ 1 ರೂ ಹೆಚ್ಚಳ, ಉಳಿದ ಕಡೆ ದರ ಹೇಗಿದೆ?

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗ ಈ ಕೆಲ ದಿನಗಳ ಹಿಂದೆ ಇದ್ದ ರೀತಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಿಲ್ಲ (Petrol Diesel Price). ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಹಲವು ದಿನಗಳಿಂದ ಸ್ಥಿರವಾಗಿ ಬೆಲೆ ಕಾಯ್ದುಕೊಂಡು ಬಂದಿದ್ದ ಬೆಂಗಳೂರಿನಲ್ಲಿ (Bengaluru) ಇಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ ಕೆಲ ಪೈಸೆಗಳಷ್ಟು ಏರಿಕೆಯಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ (Crude Oil) ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇದೆ.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 102.54 (2 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.09 (9 ಪೈಸೆ ಏರಿಕೆ)
ಬೆಳಗಾವಿ - ರೂ. 102.56 (87 ಪೈಸೆ ಏರಿಕೆ)
ಬಳ್ಳಾರಿ - ರೂ. 103.87 (00)
ಬೀದರ್ - ರೂ. 102.23 (00)
ವಿಜಯಪುರ - ರೂ. 101.99 (00)
ಚಾಮರಾಜನಗರ - ರೂ. 102.02 (00)
ಚಿಕ್ಕಬಳ್ಳಾಪುರ - ರೂ. 101.94 (45 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 102.80 (23 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.90 (1.03 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.13 (00)
ದಾವಣಗೆರೆ - ರೂ. 103.91 (31 ಪೈಸೆ ಏರಿಕೆ)
ಧಾರವಾಡ - ರೂ. 101.69 (17 ಪೈಸೆ ಇಳಿಕೆ)
ಗದಗ - ರೂ. 102.22 (00)
ಕಲಬುರಗಿ - ರೂ. 101.66 (00)
ಹಾಸನ - ರೂ. 101.94 (31 ಪೈಸೆ ಏರಿಕೆ)
ಹಾವೇರಿ - ರೂ. 102.91 (5 ಪೈಸೆ ಇಳಿಕೆ)
ಕೊಡಗು - ರೂ. 103.20 (21 ಪೈಸೆ ಏರಿಕೆ)
ಕೋಲಾರ - ರೂ. 101.87 (13 ಪೈಸೆ ಏರಿಕೆ)
ಕೊಪ್ಪಳ - ರೂ. 103.13 (00)
ಮಂಡ್ಯ - ರೂ. 102.13 (73 ಪೈಸೆ ಏರಿಕೆ
ಮೈಸೂರು - ರೂ. 101.58 (00)
ರಾಯಚೂರು - ರೂ. 102.54 (00)
ರಾಮನಗರ - ರೂ. 102.39 (14 ಪೈಸೆ ಏರಿಕೆ)
ಶಿವಮೊಗ್ಗ - ರೂ. 102.83 (43 ಪೈಸೆ ಇಳಿಕೆ)
ತುಮಕೂರು - ರೂ. 102.45 (42 ಪೈಸೆ ಏರಿಕೆ)
ಉಡುಪಿ - ರೂ. 101.39 (00)
ಉತ್ತರ ಕನ್ನಡ - ರೂ. 102.94 (00)
ಯಾದಗಿರಿ - ರೂ. 102.74 (48 ಪೈಸೆ ಏರಿಕೆ)

ಇದನ್ನೂ ಓದಿ: Today's Gold-Silver Price: ಸತತ 2ನೇ ದಿನವೂ ಬಂಗಾರದ ಬೆಲೆಯಲ್ಲಿ ಇಳಿಕೆ; ಬೇಗ ಬೇಗ ತಡ ಮಾಡಬೇಡಿ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.45
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.48
ಬಳ್ಳಾರಿ - ರೂ. 89.66
ಬೀದರ್ - ರೂ. 88.18
ವಿಜಯಪುರ - ರೂ. 87.96
ಚಾಮರಾಜನಗರ - ರೂ. 87.96
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.32
ಚಿತ್ರದುರ್ಗ - ರೂ. 88.46
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.47
ಧಾರವಾಡ - ರೂ. 87.68
ಗದಗ - ರೂ. 88. 17
ಕಲಬುರಗಿ - ರೂ. 87.66
ಹಾಸನ - ರೂ. 87.69
ಹಾವೇರಿ - ರೂ. 88.75
ಕೊಡಗು - ರೂ. 88.04
ಕೋಲಾರ - ರೂ. 87.83
ಕೊಪ್ಪಳ - ರೂ. 89
ಮಂಡ್ಯ - ರೂ. 88.06
ಮೈಸೂರು - ರೂ. 87.57
ರಾಯಚೂರು - ರೂ. 88.47
ರಾಮನಗರ - ರೂ. 88.29
ಶಿವಮೊಗ್ಗ - ರೂ. 89.58
ತುಮಕೂರು - ರೂ. 88.36
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 88.76
ಯಾದಗಿರಿ - ರೂ. 88.63
Published by:Divya D
First published: