• Home
  • »
  • News
  • »
  • business
  • »
  • Petrol Diesel Price Today: ವಾರಾಂತ್ಯದಲ್ಲಿ ವಾಹನ ರಸ್ತೆಗಿಳಿಸುವ ಮುನ್ನ ಗಮನಿಸಿ, ಹೀಗಿದೆ ಇಂದಿನ ತೈಲ ದರ

Petrol Diesel Price Today: ವಾರಾಂತ್ಯದಲ್ಲಿ ವಾಹನ ರಸ್ತೆಗಿಳಿಸುವ ಮುನ್ನ ಗಮನಿಸಿ, ಹೀಗಿದೆ ಇಂದಿನ ತೈಲ ದರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೈಲ ಬೆಲೆಯೂ ಸಹ ಸಣ್ಣ-ಪುಟ್ಟ ವ್ಯತ್ಯಾಸಗಳೊಂದಿಗೆ ಏರಿಕೆ-ಇಳಿಕೆ ಕಾಣುತ್ತಲೇ ಇರುತ್ತದೆ. ರಾಜ್ಯದಲ್ಲಿ ಇಂದಿನ ಬೆಲೆ ಇಲ್ಲಿದೆ ನೋಡಿ.

  • Share this:

 ಫುಲ್‌ ಟ್ಯಾಂಕ್‌ ಪಟ್ರೋಲ್‌-ಡೀಸೆಲ್‌ (Petrol And Diesel) ಹಾಕಿಸಿಕೊಳ್ಳೋ ಮುಂಚೆ ಇಂದು ತೈಲದ ರೇಟ್‌ (Crude Oil) ಎಷ್ಟಿದೆ ಅಂತಾ ನೋಡ್ಕೋಬಿಡಿ. ಏಕೆಂದರೆ ತೈಲ ಬೆಲೆ ಕೂಡ ಕಣ್ಣಾಮುಚ್ಚಾಲೇ ಆಡುತ್ತಲೇ ಇರುತ್ತದೆ. ಬಂಗಾರ, ಬೆಳ್ಳಿಗಿಂತ (Gold And Silver Price) ಜನ ಈಗ ತೈಲ ಬೆಲೆ ಏರಿಕೆಯಾದರೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಕಾರಣ ಇಷ್ಟೇ ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ ಬಳಸುವುದರಿಂದ. ಕಚೇರಿ, ಶಾಲೆ ಅಥವಾ ಇನ್ನೇಲ್ಲಾದರೂ ಹೋಗಬೇಕಾದರೆ ವಾಹನಗಳನ್ನು (Vehicles) ಅವಲಂಬಿಸಬೇಕಾಗುತ್ತದೆ. ಆಫೀಸಿಗೆ ಬೈಕ್‌, ಕಾರಲ್ಲೋ ಹೋಗಬೇಕಾದರೆ ಸಂಬಳಕ್ಕಿಂತ ಗಾಡಿಗೆ ಹಾಕಿಸೋ ತೈಲ ಬೆಲೆ ಹೆಚ್ಚಾದರೆ ಉಳಿತಾಯ, ಭವಿಷ್ಯ ಹೇಗೆ ಅಲ್ವಾ? ಇದೇ ಕಾರಣಕ್ಕೆ ಜನ ತೈಲ ಬೆಲೆ ಏರಿಕೆಯಾದರೆ ಪ್ರತಿಭಟನೆ ಅದು ಇದು ಮುಂದಾಗೋದು.


ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುತ್ತದೆ. ವಿಶ್ವದಲ್ಲಿ ತೈಲಕ್ಕೆ ಹೆಚ್ಚಿನ ಬೇಡಿಕೆ ಎನ್ನುವುದಕ್ಕಿಂತ ಅವಶ್ಯಕತೆ ಇದೆ. ಪ್ರತಿದಿನ ಮಿಲಿಯನ್‌ಗಟ್ಟಲೇ ವಾಹನಗಳು ರಸ್ತೆಗಿಳಿಯುತ್ತವೆ. ಹೀಗಾಗಿ ತೈಲ ಪೂರೈಕೆ ಜಗತ್ತಿನಾದ್ಯಂತ ಪ್ರತಿ ಪುಟ್ಟ ಹಳ್ಳಿಗೂ ಬೇಕಿರುವಂತದ್ದು. ಈಗಾಗ್ಲೇ ನೂರರ ಗಡಿ ದಾಟಿರುವ ಪೆಟ್ರೋಲ್‌ ದರದ ಇಂದಿನ ಬೆಲೆಯನ್ನು ತಿಳಿಯೋಣ ಬನ್ನಿ.


ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.


ದೇಶದ ಪ್ರಮುಖ ನಗರಗಳಲ್ಲಿಯ ದರ


ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.74 ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94,33, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.60 (00)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.07(2 ಪೈಸೆ ಇಳಿಕೆ)
ಬೆಳಗಾವಿ - ರೂ. 101.76 (88 ಪೈಸೆ ಇಳಿಕೆ)
ಬಳ್ಳಾರಿ - ರೂ. 103.61 (29 ಪೈಸೆ ಇಳಿಕೆ)
ಬೀದರ್ - ರೂ. 102.28 (00)
ವಿಜಯಪುರ - ರೂ. 102.16 (10 ಪೈಸೆ ಏರಿಕೆ)
ಚಾಮರಾಜನಗರ - ರೂ. 102.10 (4 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 101.94 (00)
ಚಿಕ್ಕಮಗಳೂರು - ರೂ. 103.27 (37 ಪೈಸೆ ಏರಿಕೆ)
ಚಿತ್ರದುರ್ಗ - ರೂ. 103.84 (00)
ದಕ್ಷಿಣ ಕನ್ನಡ - ರೂ. 101.75 (62 ಪೈಸೆ ಏರಿಕೆ)
ದಾವಣಗೆರೆ - ರೂ. 103.67 (18 ಪೈಸೆ ಇಳಿಕೆ)
ಧಾರವಾಡ - ರೂ. 101.71 (00)
ಗದಗ - ರೂ. 102.38 (13 ಪೈಸೆ ಏರಿಕೆ)
ಕಲಬುರಗಿ - ರೂ. 101.71 (00)
ಹಾಸನ - ರೂ. 102.20 (32 ಪೈಸೆ ಏರಿಕೆ)
ಹಾವೇರಿ - ರೂ. 102.41 (48 ಪೈಸೆ ಇಳಿಕೆ)
ಕೊಡಗು - ರೂ. 103.28 (3 ಪೈಸೆ ಇಳಿಕೆ)
ಕೋಲಾರ - ರೂ. 101.81 (6 ಪೈಸೆ ಇಳಿಕೆ)
ಕೊಪ್ಪಳ - ರೂ. 103.05 (16 ಪೈಸೆ ಇಳಿಕೆ)
ಮಂಡ್ಯ - ರೂ. 101.97 (5 ಪೈಸೆ ಏರಿಕೆ)
ಮೈಸೂರು - ರೂ. 101.50 (13 ಪೈಸೆ ಇಳಿಕೆ)
ರಾಯಚೂರು - ರೂ. 101.84 (78 ಪೈಸೆ ಇಳಿಕೆ)
ರಾಮನಗರ - ರೂ.102.39 (00)
ಶಿವಮೊಗ್ಗ - ರೂ. 103.43 (64 ಪೈಸೆ ಏರಿಕೆ)
ತುಮಕೂರು - ರೂ. 102.60 (15 ಪೈಸೆ ಏರಿಕೆ)
ಉಡುಪಿ - ರೂ. 101.38 (1 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 103.79 (85 ಪೈಸೆ ಏರಿಕೆ)
ವಿಜಯನಗರ - 104.11 (1.01 ಪೈಸೆ ಏರಿಕೆ)
ಯಾದಗಿರಿ - ರೂ. 102.43 (36 ಪೈಸೆ ಇಳಿಕೆ)


ಇದನ್ನೂ ಓದಿ: https://kannada.news18.com/news/business/how-much-coins-can-deposit-in-bank-account-know-rbi-rule-vdd-924916.html


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.51
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.01
ಬೆಳಗಾವಿ - ರೂ. 87.76
ಬಳ್ಳಾರಿ - ರೂ. 89.42
ಬೀದರ್ - ರೂ. 88.23
ವಿಜಯಪುರ - ರೂ. 88.11
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 87.89
ಚಿತ್ರದುರ್ಗ - ರೂ. 89.44
ದಕ್ಷಿಣ ಕನ್ನಡ - ರೂ. 87.68
ದಾವಣಗೆರೆ - ರೂ. 89.29
ಧಾರವಾಡ - ರೂ. 87.71
ಗದಗ - ರೂ. 88.31
ಕಲಬುರಗಿ - ರೂ. 87.71
ಹಾಸನ - ರೂ. 87.97
ಹಾವೇರಿ - ರೂ. 88.34
ಕೊಡಗು - ರೂ. 88.94
ಕೋಲಾರ - ರೂ. 87.77
ಕೊಪ್ಪಳ - ರೂ. 88.91
ಮಂಡ್ಯ - ರೂ. 87.92
ಮೈಸೂರು - ರೂ. 87.49
ರಾಯಚೂರು - ರೂ. 87.84
ರಾಮನಗರ - ರೂ. 88.29
ಶಿವಮೊಗ್ಗ - 89.15


ಇದನ್ನೂ ಓದಿ: ಕಾರಿಗೆ ಬೆಂಕಿ ಬಿದ್ರೂ ಇನ್ಶೂರೆನ್ಸ್​ ಕ್ಲೈಮ್ ಆಗುತ್ತಾ? ಇಲ್ಲದಿದ್ದರೆ ಹೀಗ್ ಮಾಡಿ!


ತುಮಕೂರು - ರೂ. 88.49
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 89.52
ವಿಜಯನಗರ - 89.6
ಯಾದಗಿರಿ - ರೂ. 88.36

Published by:ವಾಸುದೇವ್ ಎಂ
First published: