Petrol-Diesel Price Today: ಏರುತ್ತಲೇ ಇದೆ ಪೆಟ್ರೋಲ್-ಡಿಸೇಲ್ ಬೆಲೆ, ಇಂದಿನ ದರ ಹೇಗಿದೆ?

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಂತೂ ಇಂತೂ ಕಳೆದ ಎರಡು ವಾರಗಳಿಂದ ದೇಶದ ಎಲ್ಲೆಡೆ ನಿರಂತರವಾಗಿ ಎರುತ್ತಲೆ ಇದ್ದ ಪೆಟ್ರೋಲ್-ಡೀಸೆಲ್ (Petrol Diesel) ದರಗಳ ಮೇಲೆ ಇಂದು ಸ್ವಲ್ಪ ಬ್ರೇಕ್ ಬಿದ್ದಂತಾಗಿದೆ. ಬೆಂಗಳೂರು (Bengaluru) ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಪೆಟ್ರೋಲ್-ಡೀಸೆಲ್ ಬೆಲೆ ದರಗಳಲ್ಲಿ ಹಲವು ಪೈಸೆಗಳಷ್ಟು ಇಳಿಕೆಯಾಗಿದೆ. ಆದಾಗ್ಯೂ, ಕೆಲ ಜಿಲ್ಲೆಗಳಲ್ಲಿ ಕೆಲ ಪೈಸೆಗಳಷ್ಟು ಏರಿಕೆಯೂ ಆಗಿದೆ. ನಿರಂತರವಾಗಿ ಏರುತ್ತಲೇ ಇದ್ದು ವಾಹನಸವಾರರಿಗೆ ನಿತ್ಯ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆಯೂ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆ ಏರುವುದು ನಿಲ್ಲುತ್ತಲೂ ಇಲ್ಲ. ಕಳೆದ ಹತ್ತು ದಿನಗಳಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಹತ್ತು ರೂಪಾಯಿಗಿಂತಲೂ ಹೆಚ್ಚಳವಾಗಿ ಜನರು ಪರದಾಡುವಂತಾಗಿತ್ತು.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.85, ರೂ. 120.51, ರೂ. 115.12 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.94, ರೂ. 104.77, ರೂ. 99.83 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 105.41 ಆಗಿದ್ದರೆ ಡೀಸೆಲ್ ದರ ರೂ. 96.67 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 111.42 (17 ಪೈಸೆ ಇಳಿಕೆ)
ಬೆಂಗಳೂರು - ರೂ. 111.09 (00)
ಬೆಂಗಳೂರು ಗ್ರಾಮಾಂತರ - ರೂ. 110.15 (41 ಪೈಸೆ ಏರಿಕೆ)
ಬೆಳಗಾವಿ - ರೂ. 111.25 (15 ಪೈಸೆ ಏರಿಕೆ)
ಬಳ್ಳಾರಿ - ರೂ. 113.03 (00)
ಬೀದರ್ - ರೂ. 111.59 (4 ಪೈಸೆ ಏರಿಕೆ)
ವಿಜಯಪುರ - ರೂ. 111.21 (00)
ಚಾಮರಾಜನಗರ - ರೂ. 111.55 (37 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 111.09 (44 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 111.49 (42 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 112.37 (33 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 110.30 (1 ಪೈಸೆ ಏರಿಕೆ)
ದಾವಣಗೆರೆ - ರೂ. 112.61 (48 ಪೈಸೆ ಇಳಿಕೆ)
ಧಾರವಾಡ - ರೂ. 110.84 (00)
ಗದಗ - ರೂ. 111.50 (12 ಪೈಸೆ ಏರಿಕೆ)
ಕಲಬುರಗಿ - ರೂ. 111.92 (80 ಪೈಸೆ ಏರಿಕೆ)
ಹಾಸನ - ರೂ. 110.92 (00)
ಹಾವೇರಿ - ರೂ. 111.71 (18 ಪೈಸೆ ಏರಿಕೆ)
ಕೊಡಗು - ರೂ. 112.34 (2 ಪೈಸೆ ಇಳಿಕೆ)
ಕೋಲಾರ - ರೂ. 111.46 (67 ಪೈಸೆ ಏರಿಕೆ)
ಕೊಪ್ಪಳ - ರೂ. 112.11 (15 ಪೈಸೆ ಇಳಿಕೆ)
ಮಂಡ್ಯ - ರೂ. 111.01 (11 ಪೈಸೆ ಏರಿಕೆ)
ಮೈಸೂರು - ರೂ. 110.76 (15 ಪೈಸೆ ಏರಿಕೆ)
ರಾಯಚೂರು - ರೂ. 111.36 (00)
ರಾಮನಗರ - ರೂ. 111.40 (00)
ಶಿವಮೊಗ್ಗ - ರೂ. 112.57 (1 ಪೈಸೆ ಏರಿಕೆ)
ತುಮಕೂರು - ರೂ. 111.80 (48 ಪೈಸೆ ಏರಿಕೆ)
ಉಡುಪಿ - ರೂ. 110.97 (26 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 111.95(38 ಪೈಸೆ ಏರಿಕೆ)
ಯಾದಗಿರಿ - ರೂ. 111.89 (42 ಪೈಸೆ ಏರಿಕೆ)

ಇದನ್ನೂ ಓದಿ: Gold Price: ಆಭರಣ ಪ್ರಿಯರ ಪಾಲಿಗೆ ಶುಭವಾಗದ ಶುಕ್ರವಾರ! ಇಂದು ದುಬಾರಿಯಾಯ್ತು ಚಿನ್ನ-ಬೆಳ್ಳಿ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.11
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.48
ಬೆಳಗಾವಿ - ರೂ. 94.96
ಬಳ್ಳಾರಿ - ರೂ. 96.56
ಬೀದರ್ - ರೂ. 95.27
ವಿಜಯಪುರ - ರೂ. 94.92
ಚಾಮರಾಜನಗರ - ರೂ. 95.20
ಚಿಕ್ಕಬಳ್ಳಾಪುರ - ರೂ. 94.79
ಚಿಕ್ಕಮಗಳೂರು - ರೂ. 95.11
ಚಿತ್ರದುರ್ಗ - ರೂ. 95.81
ದಕ್ಷಿಣ ಕನ್ನಡ - ರೂ. 94.04
ದಾವಣಗೆರೆ - ರೂ. 96.04
ಧಾರವಾಡ - ರೂ. 94.59
ಗದಗ - ರೂ. 95.18
ಕಲಬುರಗಿ - ರೂ. 94.66
ಹಾಸನ - ರೂ. 94.51
ಹಾವೇರಿ - ರೂ. 95.37
ಕೊಡಗು - ರೂ. 95.79
ಕೋಲಾರ - ರೂ. 94.13
ಕೊಪ್ಪಳ - ರೂ. 95.75
ಮಂಡ್ಯ - ರೂ. 94.72
ಮೈಸೂರು - ರೂ. 94.49
ರಾಯಚೂರು - ರೂ. 95.07
ರಾಮನಗರ - ರೂ. 95.07
ಶಿವಮೊಗ್ಗ - ರೂ. 96.05
ತುಮಕೂರು - ರೂ. 94.43
ಉಡುಪಿ - ರೂ. 94.65
ಉತ್ತರ ಕನ್ನಡ - ರೂ. 95.53
ಯಾದಗಿರಿ - ರೂ. 95.54
Published by:Divya D
First published: