• Home
  • »
  • News
  • »
  • business
  • »
  • Petrol Diesel Price Today: ದೀಪಾವಳಿ ನಂತರ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ವ್ಯತ್ಯಯ; ಇಲ್ಲಿದೆ ನೋಡಿ ಇಂದಿನ ದರ

Petrol Diesel Price Today: ದೀಪಾವಳಿ ನಂತರ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ವ್ಯತ್ಯಯ; ಇಲ್ಲಿದೆ ನೋಡಿ ಇಂದಿನ ದರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • News18 Kannada
  • Last Updated :
  • Bangalore [Bangalore], India
  • Share this:

    ಇಂದು ರಾಜ್ಯದಲ್ಲಿ ಬಹುತೇಕ ಎಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಯಾವುದೇ ಗಮನಾರ್ಹ ಏರಿಳಿತಗಳಾಗಿಲ್ಲ. ಆದರೂ ಎಂದಿನಂತೆ ಕೆಲವು ಪೈಸೆಗಳ ಚಿಕ್ಕ ಪುಟ್ಟ ವ್ಯತ್ಯಾಸಗಳಿರುವುದನ್ನು ಗಮನಿಸಬಹುದು. ಹಿಂದೊಮ್ಮೆ ಅತಿರೇಕಕ್ಕೆ ಹೋಗಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆಯಿಂದಾಗಿ ಪೆಟ್ರೋಲ್-ಡೀಸೆಲ್ ಬೆಲೆಗಳು (Petrol Diesel Price Today) ಗಗನಕ್ಕೇರಿದ್ದವು, ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು (Oil Price) ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದರೂ ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ.


    ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ. ಅಷ್ಟಕ್ಕೂ ಆಗಾಗ ಈ ಇಂಧನ ಬೆಲೆಗಳು ಎಂಬುದು ಶ್ರೀಸಾಮಾನ್ಯನ ಕೈಸುಡುವಂತೆ ಮಾಡುವುದು ಸುಳ್ಳಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.


    ಬೆಂಗಳೂರಲ್ಲಿ ಎಷ್ಟಿದೆ ಇಂದಿನ ದರ?
    ಇನ್ನು ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
    ಬಾಗಲಕೋಟೆ - ರೂ. 102.49 (1 ಪೈಸೆ ಏರಿಕೆ)


    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102 (6 ಪೈಸೆ ಏರಿಕೆ)
    ಬೆಳಗಾವಿ - ರೂ. 102.54 (5 ಪೈಸೆ ಇಳಿಕೆ)
    ಬಳ್ಳಾರಿ - ರೂ. 103.07 (54 ಪೈಸೆ ಇಳಿಕೆ)
    ಬೀದರ್ - ರೂ. 102.52 (24 ಪೈಸೆ ಏರಿಕೆ)
    ವಿಜಯಪುರ - ರೂ. 101.84 (40 ಪೈಸೆ ಇಳಿಕೆ)
    ಚಾಮರಾಜನಗರ - ರೂ. 101.93 (17 ಪೈಸೆ ಇಳಿಕೆ)
    ಚಿಕ್ಕಬಳ್ಳಾಪುರ - ರೂ. 102.40 (46 ಪೈಸೆ ಏರಿಕೆ)
    ಚಿಕ್ಕಮಗಳೂರು - ರೂ. 103.65 (73 ಪೈಸೆ ಏರಿಕೆ)
    ಚಿತ್ರದುರ್ಗ - ರೂ. 103.30 (19 ಪೈಸೆ ಏರಿಕೆ)
    ದಕ್ಷಿಣ ಕನ್ನಡ - ರೂ. 101.13 (52 ಪೈಸೆ ಇಳಿಕೆ)
    ದಾವಣಗೆರೆ - ರೂ. 104.16 (81 ಪೈಸೆ ಏರಿಕೆ)
    ಧಾರವಾಡ - ರೂ. 102.04 (13 ಪೈಸೆ ಏರಿಕೆ)
    ಗದಗ - ರೂ. 102.79 (41 ಪೈಸೆ ಏರಿಕೆ)
    ಕಲಬುರಗಿ - ರೂ. 102.21 (23 ಪೈಸೆ ಇಳಿಕೆ)
    ಹಾಸನ - ರೂ. 101.88 (00)
    ಹಾವೇರಿ - ರೂ. 102.24 (14 ಪೈಸೆ ಇಳಿಕೆ)


    ಇದನ್ನೂ ಓದಿ: HD Devegowda: ಮತ್ತೊಂದು ಅವಧಿಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ದೇವೇಗೌಡ ಆಯ್ಕೆ!


    ಕೊಡಗು - ರೂ. 103.56 (9 ಪೈಸೆ ಏರಿಕೆ)
    ಕೋಲಾರ - ರೂ. 102.16 (35 ಪೈಸೆ ಏರಿಕೆ)
    ಕೊಪ್ಪಳ - ರೂ. 103.05 (19 ಪೈಸೆ ಏರಿಕೆ)
    ಮಂಡ್ಯ - ರೂ. 102.14 (3 ಪೈಸೆ ಇಳಿಕೆ)
    ಮೈಸೂರು - ರೂ. 101.50 (00)
    ರಾಯಚೂರು - ರೂ. 101.90 (6 ಪೈಸೆ ಏರಿಕೆ)
    ರಾಮನಗರ - ರೂ. 102.45 (6 ಪೈಸೆ ಏರಿಕೆ)
    ಶಿವಮೊಗ್ಗ - ರೂ. 103.44 (68 ಪೈಸೆ ಏರಿಕೆ)
    ತುಮಕೂರು - ರೂ. 102.81 (00)
    ಉಡುಪಿ - ರೂ. 101.55 (26 ಪೈಸೆ ಇಳಿಕೆ)
    ಉತ್ತರ ಕನ್ನಡ - ರೂ. 102.14 (23 ಪೈಸೆ ಇಳಿಕೆ)
    ಯಾದಗಿರಿ - ರೂ. 102.65 (22 ಪೈಸೆ ಏರಿಕೆ)


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.41
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.95
    ಬೆಳಗಾವಿ - ರೂ. 88.47
    ಬಳ್ಳಾರಿ - ರೂ. 88.95
    ಬೀದರ್ - ರೂ. 88.44
    ವಿಜಯಪುರ - ರೂ. 87.82
    ಚಾಮರಾಜನಗರ - ರೂ. 87.88
    ಚಿಕ್ಕಬಳ್ಳಾಪುರ - ರೂ. 88.31
    ಚಿಕ್ಕಮಗಳೂರು - ರೂ. 89.33
    ಚಿತ್ರದುರ್ಗ - ರೂ. 88.95
    ದಕ್ಷಿಣ ಕನ್ನಡ - ರೂ. 87.13
    ದಾವಣಗೆರೆ - ರೂ. 89.73
    ಧಾರವಾಡ - ರೂ. 88.01
    ಗದಗ - ರೂ. 88.68
    ಕಲಬುರಗಿ - ರೂ. 88.16
    ಹಾಸನ - ರೂ. 87.67


    ಇದನ್ನೂ ಓದಿ: ATM Withdraw: 1 ಸಾವಿರ ಎಂಟ್ರಿ ಮಾಡಿದ್ರೆ 2 ಸಾವಿರ ರೂಪಾಯಿ ಕೊಡೋ ಎಟಿಎಂ, ಕಿಕ್ಕಿರಿದ ಜನ!


    ಹಾವೇರಿ - ರೂ. 88.19
    ಕೊಡಗು - ರೂ. 89.20
    ಕೋಲಾರ - ರೂ. 88.09
    ಕೊಪ್ಪಳ - ರೂ. 88.91
    ಮಂಡ್ಯ - ರೂ. 88.08
    ಮೈಸೂರು - ರೂ. 87.49
    ರಾಯಚೂರು - ರೂ. 87.89
    ರಾಮನಗರ - ರೂ. 88.36
    ಶಿವಮೊಗ್ಗ - 89.21
    ತುಮಕೂರು - ರೂ. 88.68
    ಉಡುಪಿ - ರೂ. 87.51
    ಉತ್ತರ ಕನ್ನಡ - ರೂ. 88.09
    ಯಾದಗಿರಿ - ರೂ. 88.55

    Published by:ಗುರುಗಣೇಶ ಡಬ್ಗುಳಿ
    First published: