• Home
  • »
  • News
  • »
  • business
  • »
  • Petrol Diesel Price Today: ಉತ್ತರ ಕನ್ನಡ, ಚಿತ್ರದುರ್ಗದಲ್ಲಿ ಪೆಟ್ರೋಲ್ ದರ ಇಳಿಕೆ, ಹಲವು ಜಿಲ್ಲೆಗಳಲ್ಲಿ ಸ್ಥಿರ

Petrol Diesel Price Today: ಉತ್ತರ ಕನ್ನಡ, ಚಿತ್ರದುರ್ಗದಲ್ಲಿ ಪೆಟ್ರೋಲ್ ದರ ಇಳಿಕೆ, ಹಲವು ಜಿಲ್ಲೆಗಳಲ್ಲಿ ಸ್ಥಿರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Share this:

ಉತ್ತರ ಕನ್ನಡದಲ್ಲಿ ನಿನ್ನೆಯಷ್ಟೇ ಏರಿಕೆಯಾಗಿದ್ದ ಪೆಟ್ರೋಲ್ ಬೆಲೆ ಇಂದು 1 ರೂ. 51 ಪೈಸೆಗಳಷ್ಟು ಇಳಿಕೆಯಾಗಿದ್ದು ಚಿತ್ರದುರ್ಗದಲ್ಲೂ ಸಹ 1 ರೂ. 11 ಪೈಸೆಗಳಷ್ಟು ಇಳಿಕೆಯಾಗಿರುವುದನ್ನು (Petrol Diesel Price Today) ಗಮನಿಸಬಹುದು. ಮಿಕ್ಕಂತೆ ರಾಜ್ಯದೆಲ್ಲೆಡೆ ಇಂದಿನ ಪೆಟ್ರೋಲ್-ಡೀಸೆಲ್ ದರಗಳಲ್ಲಿ (Oil Price Today) ಮಾಮೂಲಿನಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸಗಳಿರುವುದನ್ನು ನೋಡಬಹುದು.  ಇಂದು ಇಂಧನ ಎಂಬುದು ದ್ರವ ರೂಪದ ಚಿನ್ನದಂತಿದ್ದು ಅಪಾರವಾದ ಬೇಡಿಕೆ ಹಾಗೂ ಅವಶ್ಯಕತೆಯನ್ನು ಹೊಂದಿದೆ. ಕೈಗಾರಿಕೆಗಳಿಂದ ಹಿಡಿದು ವಾಹನ ಚಾಲನೆಯವರೆಗೆ ಇಂಧನದ ಅಗತ್ಯ ಆಗತ್ಯವಾಗಿದೆ. ನಿತ್ಯವೂ ಇದರ ಬೆಲೆಗಳಲ್ಲಿ (Petrol Price) ಬದಲಾವಣೆ ಆಗುತ್ತಲೇ ಇರುತ್ತದೆ.


ಜಾಗತಿಕವಾಗಿ ಉಂಟಾಗುವ ಕಚ್ಚಾ ತೈಲದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿಯೇ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರಭಾವಿತವಾಗುತ್ತಿರುತ್ತವೆ ಎಂಬುದರಲ್ಲಿ ಸಂಶಯವಿಲ್ಲ . ಆದರೂ ಇತರೆ ಜಾಗತಿಕ ಕಾರಣಗಳೂ ಸಹ ಇದರ ಬೆಲೆಗಳ ಮೇಲೆ ಪ್ರಭಾವ ಬೀರುತ್ತಿರುತ್ತವೆ.


ಸ್ಥಿರವಾದ ಗತಿಯಲ್ಲಿ ಸಾಗುತ್ತಿದೆಯೇ ತೈಲ ದರ?
ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.


ಬೆಂಗಳೂರಿನಲ್ಲಿ ಎಷ್ಟಿದೆ ಚಿನ್ನದ ದರ?
ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.50 (21 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.01 (8 ಪೈಸೆ ಇಳಿಕೆ)
ಬೆಳಗಾವಿ - ರೂ. 101.91 (56 ಪೈಸೆ ಇಳಿಕೆ)
ಬಳ್ಳಾರಿ - ರೂ. 103.07 (83 ಪೈಸೆ ಇಳಿಕೆ)
ಬೀದರ್ - ರೂ. 102.70 (42 ಪೈಸೆ ಏರಿಕೆ)
ವಿಜಯಪುರ - ರೂ. 101.72 (5 ಪೈಸೆ ಇಳಿಕೆ)
ಚಾಮರಾಜನಗರ - ರೂ. 101.93 (17 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 102 (6 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.65 (96 ಪೈಸೆ ಏರಿಕೆ)
ಚಿತ್ರದುರ್ಗ - ರೂ. 102.73 (1 ರೂ. 11 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.84 (36 ಪೈಸೆ ಏರಿಕೆ)
ದಾವಣಗೆರೆ - ರೂ. 103.23 (62 ಪೈಸೆ ಇಳಿಕೆ)
ಧಾರವಾಡ - ರೂ. 102.04 (34 ಪೈಸೆ ಏರಿಕೆ)
ಗದಗ - ರೂ. 102.19 (6 ಪೈಸೆ ಇಳಿಕೆ)
ಕಲಬುರಗಿ - ರೂ. 102.49 (78 ಪೈಸೆ ಏರಿಕೆ)
ಹಾಸನ - ರೂ. 102.11 (23 ಪೈಸೆ ಏರಿಕೆ)
ಹಾವೇರಿ - ರೂ. 102.58 (17 ಪೈಸೆ ಏರಿಕೆ)
ಕೊಡಗು - ರೂ. 103.26 (2 ಪೈಸೆ ಇಳಿಕೆ)
ಕೋಲಾರ - ರೂ. 101.87 (00)
ಕೊಪ್ಪಳ - ರೂ. 103.02 (19 ಪೈಸೆ ಇಳಿಕೆ)
ಮಂಡ್ಯ - ರೂ. 101.86 (31 ಪೈಸೆ ಇಳಿಕೆ)
ಮೈಸೂರು - ರೂ. 101.92 (42 ಪೈಸೆ ಏರಿಕೆ)
ರಾಯಚೂರು - ರೂ. 102.43 (00)
ರಾಮನಗರ - ರೂ. 102.28 (11 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.78 (17 ಪೈಸೆ ಏರಿಕೆ)
ತುಮಕೂರು - ರೂ. 103.41 (60 ಪೈಸೆ ಏರಿಕೆ)
ಉಡುಪಿ - ರೂ. 101.59 (24 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.79 (1 ರೂ. 51 ಪೈಸೆ ಇಳಿಕೆ)
ಯಾದಗಿರಿ - ರೂ. 102.76 (45 ಪೈಸೆ ಏರಿಕೆ)


ಇದನ್ನೂ ಓದಿ: Bank Loan Clearance: ಬ್ಯಾಂಕ್ ಸಾಲ ಕ್ಲಿಯರ್ ಮಾಡ್ಕೊಳ್ಳಿ! ಬಡ್ಡಿಗೆ ಶೇ 40% ರಷ್ಟು ಬಂಪರ್ ರಿಯಾಯಿತಿ ಘೋಷಣೆ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.42
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 87.90
ಬಳ್ಳಾರಿ - ರೂ. 88.95
ಬೀದರ್ - ರೂ. 88.60
ವಿಜಯಪುರ - ರೂ. 87.71
ಚಾಮರಾಜನಗರ - ರೂ. 87.88
ಚಿಕ್ಕಬಳ್ಳಾಪುರ - ರೂ. 87.95
ಚಿಕ್ಕಮಗಳೂರು - ರೂ. 89.33
ಚಿತ್ರದುರ್ಗ - ರೂ. 88.44
ದಕ್ಷಿಣ ಕನ್ನಡ - ರೂ. 87.77
ದಾವಣಗೆರೆ - ರೂ. 88.89
ಧಾರವಾಡ - ರೂ. 88.01
ಗದಗ - ರೂ. 88.14
ಕಲಬುರಗಿ - ರೂ. 88.41
ಹಾಸನ - ರೂ. 87.88
ಹಾವೇರಿ - ರೂ. 88.49
ಕೊಡಗು - ರೂ. 88.92
ಕೋಲಾರ - ರೂ. 87.83
ಕೊಪ್ಪಳ - ರೂ. 88.89
ಮಂಡ್ಯ - ರೂ. 87.82
ಮೈಸೂರು - ರೂ. 87.87


ಇದನ್ನೂ ಓದಿ: Recession: ಒಳಉಡುಪು ಮಾರಾಟ ಕುಸಿದ್ರೆ ಆರ್ಥಿಕ ಕುಸಿತದ ಮುನ್ಸೂಚನೆಯಂತೆ! ಇನ್ನೂ ಸಾಕಷ್ಟು ರೀಸನ್ಸ್​ ಇಲ್ಲಿದೆ​ ನೋಡಿ


ರಾಯಚೂರು - ರೂ. 88.38
ರಾಮನಗರ - ರೂ. 88.20
ಶಿವಮೊಗ್ಗ - 89.45
ತುಮಕೂರು - ರೂ. 89.22
ಉಡುಪಿ - ರೂ. 87.54
ಉತ್ತರ ಕನ್ನಡ - ರೂ. 88.63
ಯಾದಗಿರಿ - ರೂ. 88.66

Published by:ಗುರುಗಣೇಶ ಡಬ್ಗುಳಿ
First published: