• Home
  • »
  • News
  • »
  • business
  • »
  • Karnataka Petrol-Diesel price Today: ವಾಹನದ ಟ್ಯಾಂಕ್ ಫುಲ್ ಮಾಡಿಸೋ ಮುನ್ನ ಇಂದಿನ ತೈಲ ದರ ನೋಡಿ

Karnataka Petrol-Diesel price Today: ವಾಹನದ ಟ್ಯಾಂಕ್ ಫುಲ್ ಮಾಡಿಸೋ ಮುನ್ನ ಇಂದಿನ ತೈಲ ದರ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ

  • Share this:

ಇಂದು ರಾಜ್ಯದಲ್ಲಿ ಬಹುತೇಕ ಎಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ (Petrol Diesel Price0 ದೊಡ್ಡ ಪ್ರಮಾಣದ ಏರಿಕೆ ಅಥವಾ ಇಳಿಕೆಯಾಗಲಿ ಕಂಡುಬಂದಿಲ್ಲ. ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ.ಹಿಂದೊಮ್ಮೆ ಅತಿರೇಕಕ್ಕೆ ಹೋಗಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ (International Market ಕಚ್ಚಾ ತೈಲದ ಬೆಲೆಯಿಂದಾಗಿ (Crude Oil Price) ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರಿದ್ದವು, ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ.


ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.49 (14 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 101.58 (36 ಪೈಸೆ ಇಳಿಕೆ)
ಬೆಳಗಾವಿ - ರೂ. 101.88 (48 ಪೈಸೆ ಇಳಿಕೆ)
ಬಳ್ಳಾರಿ - ರೂ. 103.20 (53 ಪೈಸೆ ಇಳಿಕೆ)
ಬೀದರ್ - ರೂ. 102.52 (29 ಪೈಸೆ ಏರಿಕೆ )
ವಿಜಯಪುರ - ರೂ. 101.77 (52 ಪೈಸೆ ಇಳಿಕೆ)
ಚಾಮರಾಜನಗರ - ರೂ. 101.93 (14 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 102 (6 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 102.85 (92 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.39 (00)
ದಕ್ಷಿಣ ಕನ್ನಡ - ರೂ. 101.82 (66 ಪೈಸೆ ಏರಿಕೆ)
ದಾವಣಗೆರೆ - ರೂ. 103.51 (15 ಪೈಸೆ ಇಳಿಕೆ)
ಧಾರವಾಡ - ರೂ. 102.04 (33 ಪೈಸೆ ಏರಿಕೆ)
ಗದಗ - ರೂ. 102.79 (15 ಪೈಸೆ ಏರಿಕೆ)
ಕಲಬುರಗಿ - ರೂ. 102.21 (21 ಪೈಸೆ ಇಳಿಕೆ)
ಹಾಸನ - ರೂ. 102.12 (00)
ಹಾವೇರಿ - ರೂ. 102.24 (41 ಪೈಸೆ ಇಳಿಕೆ)
ಕೊಡಗು - ರೂ. 103.36 (2 ಪೈಸೆ ಇಳಿಕೆ)
ಕೋಲಾರ - ರೂ. 102.10 (4 ಪೈಸೆ ಇಳಿಕೆ)
ಕೊಪ್ಪಳ - ರೂ. 103.05 (00)
ಮಂಡ್ಯ - ರೂ. 102.14 (64 ಪೈಸೆ ಏರಿಕೆ)
ಮೈಸೂರು - ರೂ. 101.50 (23 ಪೈಸೆ ಇಳಿಕೆ)
ರಾಯಚೂರು - ರೂ. 101.90 (6 ಪೈಸೆ ಏರಿಕೆ)
ರಾಮನಗರ - ರೂ. 102.45 (17 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.47 (20 ಪೈಸೆ ಇಳಿಕೆ)
ತುಮಕೂರು - ರೂ. 102.30 (4 ಪೈಸೆ ಏರಿಕೆ)
ಉಡುಪಿ - ರೂ. 101.92 (10 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.14 (13 ಪೈಸೆ ಏರಿಕೆ)
ಯಾದಗಿರಿ - ರೂ. 102.79 (14 ಪೈಸೆ ಏರಿಕೆ)


ಇದನ್ನೂ ಓದಿ:  Archana Gulati: ಗೂಗಲ್‌ ಇಂಡಿಯಾ ನೀತಿ ಮುಖ್ಯಸ್ಥೆ ರಾಜಿನಾಮೆ, ಉದ್ಯೋಗ ವಹಿಸಿಕೊಂಡ ಐದೇ ತಿಂಗಳಿಗೆ ಏನಾಯ್ತು?


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.41
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 87.87
ಬಳ್ಳಾರಿ - ರೂ. 89.05
ಬೀದರ್ - ರೂ. 88.44
ವಿಜಯಪುರ - ರೂ. 87.77
ಚಾಮರಾಜನಗರ - ರೂ. 87.88
ಚಿಕ್ಕಬಳ್ಳಾಪುರ - ರೂ. 87.95
ಚಿಕ್ಕಮಗಳೂರು - ರೂ. 88.68
ಚಿತ್ರದುರ್ಗ - ರೂ. 89
ದಕ್ಷಿಣ ಕನ್ನಡ - ರೂ. 87.75
ದಾವಣಗೆರೆ - ರೂ. 89.11
ಧಾರವಾಡ - ರೂ. 88.01
ಗದಗ - ರೂ. 88.68
ಕಲಬುರಗಿ - ರೂ. 88.16
ಹಾಸನ - ರೂ. 87.86
ಹಾವೇರಿ - ರೂ. 88.19
ಕೊಡಗು - ರೂ. 88.99
ಕೋಲಾರ - ರೂ. 88.03
ಕೊಪ್ಪಳ - ರೂ. 88.91
ಮಂಡ್ಯ - ರೂ. 88.08
ಮೈಸೂರು - ರೂ. 87.49
ರಾಯಚೂರು - ರೂ. 87.89
ರಾಮನಗರ - ರೂ. 88.36
ಶಿವಮೊಗ್ಗ - 89.17
ತುಮಕೂರು - ರೂ. 88.02
ಉಡುಪಿ - ರೂ. 87.84
ಉತ್ತರ ಕನ್ನಡ - ರೂ. 88.09
ಯಾದಗಿರಿ - ರೂ. 88.68


ಇದನ್ನೂ ಓದಿ:  Fish Farming: ‘ಭೂ-ಆಧಾರಿತ’ ಮೀನು ಸಾಕಾಣಿಕೆ: ಲಾಭದಾಯಕ ಉದ್ಯಮ ಶುರು ಮಾಡಿದ ಅಸ್ಸಾಂ ಮಹಿಳೆ


ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ. ಅಷ್ಟಕ್ಕೂ ಆಗಾಗ ಈ ಇಂಧನ ಬೆಲೆಗಳು ಎಂಬುದು ಶ್ರೀಸಾಮಾನ್ಯನ ಕೈಸುಡುವಂತೆ ಮಾಡುವುದು ಸುಳ್ಳಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.

First published: