• Home
  • »
  • News
  • »
  • business
  • »
  • Karnataka Petrol-Diesel price Today: ಯಾವ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಮಾಹಿತಿ

Karnataka Petrol-Diesel price Today: ಯಾವ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ.

  • Share this:

ಇಂದು ರಾಜ್ಯದಲ್ಲಿ ಬಹುತೇಕ ಎಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ (Petrol Diesel Price) ದೊಡ್ಡ ಪ್ರಮಾಣದ ಏರಿಕೆ ಅಥವಾ ಇಳಿಕೆಯಾಗಲಿ ಕಂಡುಬಂದಿಲ್ಲ. ಆದರೆ, ಉತ್ತರ ಕನ್ನಡದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ (Petrol Price) 99 ಪೈಸೆಗಳಷ್ಟು ಇಳಿಕೆಯಾಗಿರುವುದನ್ನು ಗಮನಿಸಬಹುದು ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಹಿಂದೊಮ್ಮೆ ಅತಿರೇಕಕ್ಕೆ ಹೋಗಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ (International Market) ಕಚ್ಚಾ ತೈಲದ (Crude Oil) ಬೆಲೆಯಿಂದಾಗಿ ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರಿದ್ದವು, ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ.


ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.63 (15 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 101.94 (36 ಪೈಸೆ ಏರಿಕೆ)
ಬೆಳಗಾವಿ - ರೂ. 102.36 (2 ಪೈಸೆ ಏರಿಕೆ)
ಬಳ್ಳಾರಿ - ರೂ. 103.73 (12 ಪೈಸೆ ಏರಿಕೆ)
ಬೀದರ್ - ರೂ. 102.23 (5 ಪೈಸೆ ಇಳಿಕೆ)
ವಿಜಯಪುರ - ರೂ. 102.29 (5 ಪೈಸೆ ಏರಿಕೆ)
ಚಾಮರಾಜನಗರ - ರೂ. 102.07 (3 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.94 (45 ಪೈಸೆ ಇಳಿಕೆ)
ಚಿಕ್ಕಮಗಳೂರು 103.77 (63 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.39 (19 ಪೈಸೆ ಏರಿಕೆ )
ದಕ್ಷಿಣ ಕನ್ನಡ - ರೂ. 101.16 (35 ಪೈಸೆ ಇಳಿಕೆ)
ದಾವಣಗೆರೆ - ರೂ. 103.66 (22 ಪೈಸೆ ಏರಿಕೆ)
ಧಾರವಾಡ - ರೂ. 101.71 (00)
ಗದಗ - ರೂ. 102.64 (26 ಪೈಸೆ ಏರಿಕೆ)
ಕಲಬುರಗಿ - ರೂ. 102.42 (71 ಪೈಸೆ ಏರಿಕೆ)
ಹಾಸನ - ರೂ. 102.12 (15 ಪೈಸೆ ಏರಿಕೆ)
ಹಾವೇರಿ - ರೂ. 102.65 (27 ಪೈಸೆ ಏರಿಕೆ)
ಕೊಡಗು - ರೂ. 103.38 (28 ಪೈಸೆ ಇಳಿಕೆ)
ಕೋಲಾರ - ರೂ. 102.14 (33 ಪೈಸೆ ಏರಿಕೆ)
ಕೊಪ್ಪಳ - ರೂ. 103.05 (19 ಪೈಸೆ ಏರಿಕೆ)
ಮಂಡ್ಯ - ರೂ. 101.50 (67 ಪೈಸೆ ಇಳಿಕೆ)
ಮೈಸೂರು - ರೂ. 101.73 (23 ಪೈಸೆ ಏರಿಕೆ)
ರಾಯಚೂರು - ರೂ. 101.84 (00)
ರಾಮನಗರ - ರೂ. 102.28 (11 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.67 (87 ಪೈಸೆ ಏರಿಕೆ)
ತುಮಕೂರು - ರೂ. 102.26 (55 ಪೈಸೆ ಇಳಿಕೆ)
ಉಡುಪಿ - ರೂ. 102.02 (21 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 102.01 (99 ಪೈಸೆ ಇಳಿಕೆ)
ಯಾದಗಿರಿ - ರೂ. 102.65 (22 ಪೈಸೆ ಏರಿಕೆ)


ಇದನ್ನೂ ಓದಿ:  Gold-Silver Price Today: ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ, ಆಭರಣ ಕೊಳ್ಳಲು ಸೂಕ್ತ ಸಮಯ: ಹೀಗಿದೆ ಇಂದಿನ ರೇಟ್​!


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.54
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.89
ಬೆಳಗಾವಿ - ರೂ. 88.30
ಬಳ್ಳಾರಿ - ರೂ. 89.53
ಬೀದರ್ - ರೂ. 88.18
ವಿಜಯಪುರ - ರೂ. 88.23
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 88.89
ಚಿಕ್ಕಮಗಳೂರು - ರೂ. 89.40
ಚಿತ್ರದುರ್ಗ - ರೂ. 89
ದಕ್ಷಿಣ ಕನ್ನಡ - ರೂ. 87.15
ದಾವಣಗೆರೆ - ರೂ. 89.24
ಧಾರವಾಡ - ರೂ. 87.71
ಗದಗ - ರೂ. 88.55
ಕಲಬುರಗಿ - ರೂ. 88.35
ಹಾಸನ - ರೂ. 87.86
ಹಾವೇರಿ - ರೂ. 88.56
ಕೊಡಗು - ರೂ. 89
ಕೋಲಾರ - ರೂ. 88.08
ಕೊಪ್ಪಳ - ರೂ. 88.91
ಮಂಡ್ಯ - ರೂ. 87.49
ಮೈಸೂರು - ರೂ. 87.71
ರಾಯಚೂರು - ರೂ. 87.84
ರಾಮನಗರ - ರೂ. 88.20
ಶಿವಮೊಗ್ಗ - 89.33
ತುಮಕೂರು - ರೂ. 88.18
ಉಡುಪಿ - ರೂ. 87.93
ಉತ್ತರ ಕನ್ನಡ - ರೂ. 87.98
ಯಾದಗಿರಿ - ರೂ. 88.55


ಇದನ್ನೂ ಓದಿ:  7th Pay Commission: ಮೋದಿ ಸರ್ಕಾರದಿಂದ ಬಿಗ್ ಅಪ್‌ಡೇಟ್, ಲಕ್ಷಾಂತರ ಕಾರ್ಮಿಕರಿಗೆ ನೇರ ಲಾಭ!


ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ. ಅಷ್ಟಕ್ಕೂ ಆಗಾಗ ಈ ಇಂಧನ ಬೆಲೆಗಳು ಎಂಬುದು ಶ್ರೀಸಾಮಾನ್ಯನ ಕೈಸುಡುವಂತೆ ಮಾಡುವುದು ಸುಳ್ಳಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.

Published by:Mahmadrafik K
First published: