Petrol-Diesel Price Today: 6 ಜಿಲ್ಲೆಗಳಲ್ಲಿ ಇಂಧನ ದರದಲ್ಲಿ ವ್ಯತ್ಯಾಸವಿಲ್ಲ, ರಾಜ್ಯದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರ ಹೀಗಿದೆ

ದೇಶದ ಎಲ್ಲೆಡೆಗಳಲ್ಲಿ ಕಳೆದ ಕೆಲ ದಿನಗಳಿಂದ ಇಂಧನ ಬೆಲೆಗಳು (Fuel Price) ಈ ಮುಂಚೆ ಇದ್ದ ಭಾರಿ ಬೆಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈಗಂತೂ ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಿದೆ, ಪರಿಣಾಮ ದೇಶದ ಎಲ್ಲೆಡೆಗಳಲ್ಲಿ ಕಳೆದ ಕೆಲ ದಿನಗಳಿಂದ ಇಂಧನ ಬೆಲೆಗಳು (Fuel Price) ಈ ಮುಂಚೆ ಇದ್ದ ಭಾರಿ ಬೆಲೆಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯ. ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇಂಧನ ಬೆಲೆಯಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಾಗಿಲ್ಲವಾದರೂ ಕೆಲ ಪೈಸೆಗಳಷ್ಟು ಏರಿಳಿತ ಸಾಮಾನ್ಯವಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಕಚ್ಚಾ ತೈಲದ (Crude Oil) ಬೆಲೆ ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆಯಲ್ಲಿ (Petrol-Diesel Rate) ಏರಿಳಿತ ನಡೆಯುತ್ತಲೇ ಇದೆ.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 111.35, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.28, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.33 (10 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 101.94 (36 ಪೈಸೆ ಏರಿಕೆ)
ಬೆಳಗಾವಿ - ರೂ. 102.66 (00)
ಬಳ್ಳಾರಿ - ರೂ. 103.52 (39 ಪೈಸೆ ಏರಿಕೆ)
ಬೀದರ್ - ರೂ. 102.39 (14 ಪೈಸೆ ಇಳಿಕೆ)
ವಿಜಯಪುರ - ರೂ. 101.86 (2 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.03 (15 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 102.54 (85 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.47 (26 ಪೈಸೆ ಏರಿಕೆ)
ಚಿತ್ರದುರ್ಗ - ರೂ. 103.22 (73 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.47 (30 ಪೈಸೆ ಇಳಿಕೆ)
ದಾವಣಗೆರೆ - ರೂ. 103.28 (4 ಪೈಸೆ ಇಳಿಕೆ)
ಧಾರವಾಡ - ರೂ. 101.91 (14 ಪೈಸೆ ಏರಿಕೆ)
ಗದಗ - ರೂ. 102.47 (00)
ಕಲಬುರಗಿ - ರೂ. 102.09 (2 ಪೈಸೆ ಏರಿಕೆ)
ಹಾಸನ - ರೂ. 101.63 (16 ಪೈಸೆ ಇಳಿಕೆ)
ಹಾವೇರಿ - ರೂ. 102.72 (21 ಪೈಸೆ ಇಳಿಕೆ)
ಕೊಡಗು - ರೂ. 103.43 (74 ಪೈಸೆ ಏರಿಕೆ)
ಕೋಲಾರ - ರೂ. 102.10 (77 ಪೈಸೆ ಏರಿಕೆ)
ಕೊಪ್ಪಳ - ರೂ. 103.07 (12 ಪೈಸೆ ಏರಿಕೆ)
ಮಂಡ್ಯ - ರೂ. 102.01 (22 ಪೈಸೆ ಏರಿಕೆ)
ಮೈಸೂರು - ರೂ. 101.46 (33 ಪೈಸೆ ಇಳಿಕೆ)
ರಾಯಚೂರು - ರೂ. 101.76 (00)
ರಾಮನಗರ - ರೂ. 102.05 (34 ಪೈಸೆ ಇಳಿಕೆ)
ಶಿವಮೊಗ್ಗ- ರೂ. 103.26 (35 ಪೈಸೆ ಇಳಿಕೆ)
ತುಮಕೂರು - ರೂ. 102.03 (61 ಪೈಸೆ ಇಳಿಕೆ)
ಉಡುಪಿ - ರೂ. 101.39 (53 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 101.98 (00)
ಯಾದಗಿರಿ - ರೂ. 102.39 (00)

ಇದನ್ನೂ ಓದಿ: Today Gold Price: ಬಂಗಾರದ ಬೆಲೆ ಕೊಳ್ಳುವವರಿಗೆ ಭಾರವಾಯಿತೇ? ಇಂದಿನ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ?

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.27
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.89
ಬೆಳಗಾವಿ - ರೂ. 88.56
ಬಳ್ಳಾರಿ - ರೂ. 89.33
ಬೀದರ್ - ರೂ. 88.32
ವಿಜಯಪುರ - ರೂ. 88.65
ಚಾಮರಾಜನಗರ - ರೂ. 87.97
ಚಿಕ್ಕಬಳ್ಳಾಪುರ - ರೂ. 88.43
ಚಿಕ್ಕಮಗಳೂರು - ರೂ. 89.21
ಚಿತ್ರದುರ್ಗ - ರೂ. 88.95
ದಕ್ಷಿಣ ಕನ್ನಡ - ರೂ. 87.43
ದಾವಣಗೆರೆ - ರೂ. 89
ಧಾರವಾಡ - ರೂ. 87.89
ಗದಗ - ರೂ. 88.40
ಕಲಬುರಗಿ - ರೂ. 88.05
ಹಾಸನ - ರೂ. 87.52
ಹಾವೇರಿ - ರೂ. 88.62
ಕೊಡಗು - ರೂ. 88.12
ಕೋಲಾರ - ರೂ. 87.03
ಕೊಪ್ಪಳ - ರೂ. 88.93
ಮಂಡ್ಯ - ರೂ. 87.95
ಮೈಸೂರು - ರೂ. 87.45
ರಾಯಚೂರು - ರೂ. 87.76
ರಾಮನಗರ - ರೂ. 88.99
ಶಿವಮೊಗ್ಗ - ರೂ. 89.04
ತುಮಕೂರು - ರೂ. 87.88
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 87.95
ಯಾದಗಿರಿ - ರೂ. 88.32
Published by:Divya D
First published: