Petrol-Diesel price Today: 15 ಜಿಲ್ಲೆಗಳಲ್ಲಿ ನಿನ್ನೆಯ ಬೆಲೆಯಲ್ಲಿಯೇ ಖರೀದಿಸಿ ಪೆಟ್ರೋಲ್; ಇವತ್ತಿನ ದರ ಹೀಗಿದೆ

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಯಥಾಸ್ಥಿತಿ ಇದೆ. ಉಳಿದ ಹಲವು ಜಿಲ್ಲೆಗಳಲ್ಲಿ ಏರಿಳಿತ ಕಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 Petrol And Diesel Price Today: ಈಗ ಈ ಕೆಲ ದಿನಗಳ ಹಿಂದೆ ಇದ್ದ ರೀತಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಅಲ್ಪ ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ (International Market) ಕಚ್ಚಾ ತೈಲದ ಬೆಲೆ (Crude Oil Price) ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದಕ್ಕಿಂತ ಕೊಂಚ ಕಡಿಮೆ ಬೆಲೆಯಲ್ಲಿ ಇಂಧನ ಸಿಗುತ್ತಿದ್ದರೂ ಸಹ ನೂರರ ಗಡಿ ದಾಟಿರುವ ಇಂಧನದ ಬೆಲೆ ಶ್ರೀಸಾಮಾನ್ಯನಿಗೆ ಇದು ಇನ್ನೂ ನುಂಗಲಾರದ ತುತ್ತಾಗಿದೆ ಎನ್ನಬಹುದು. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ದೇಶದಲ್ಲಿ ಹಣದುಬ್ಬರ (Inflation) ಸಹ ಹೆಚ್ಚಾಗುತ್ತಿದೆ. ಈ ಎಲ್ಲಾ ಅಂಶಗಳು ಜನಸಾಮಾನ್ಯರ ದಿನನಿತ್ಯದ ಬಳಕೆಯ ವಸ್ತುಗಳ ಮೇಲೆ ಪರಿಣಾಮ ಬೀರುತ್ತಿದೆ.

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 97.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಇದನ್ನೂ ಓದಿ:  Gold and Silver Price: ಏರಿಕೆ ಕಂಡ ಬಂಗಾರದ ಬೆಲೆ, ಬೆಳ್ಳಿ ದರದಲ್ಲಿ ಇಳಿಕೆ! ನಿಮ್ಮೂರಲ್ಲಿ ರೇಟ್ ಎಷ್ಟಿದೆ ತಿಳಿಯಿರಿ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 102.61 ( 16 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.09 (51 ಪೈಸೆ ಏರಿಕೆ)
ಬೆಳಗಾವಿ - ರೂ. 102.40 (67 ಪೈಸೆ ಏರಿಕೆ)
ಬಳ್ಳಾರಿ - ರೂ. 103.70 (12 ಪೈಸೆ ಏರಿಕೆ)
ಬೀದರ್ - ರೂ. 102.23 (00)
ವಿಜಯಪುರ - ರೂ. 101.86 (32 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.06 (00)
ಚಿಕ್ಕಬಳ್ಳಾಪುರ - ರೂ. 101.69 (30 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 102.75 (1.65 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.90 (73 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.85 (34 ಪೈಸೆ ಏರಿಕೆ)
ದಾವಣಗೆರೆ - ರೂ. 103.91 (50 ಪೈಸೆ ಏರಿಕೆ)
ಧಾರವಾಡ - ರೂ. 101.69 (00)
ಗದಗ - ರೂ. 102.22 (13 ಪೈಸೆ ಏರಿಕೆ)
ಕಲಬುರಗಿ - ರೂ. 101.89 (5 ಪೈಸೆ ಏರಿಕೆ)
ಹಾಸನ - ರೂ. 101.094 (00)
ಹಾವೇರಿ - ರೂ. 102.35 (00)
ಕೊಡಗು - ರೂ. 103.3 8 (00)
ಕೋಲಾರ - ರೂ. 101.81 (00)
ಕೊಪ್ಪಳ - ರೂ. 102.83 (00)
ಮಂಡ್ಯ - ರೂ. 102.13 (00)
ಮೈಸೂರು - ರೂ. 101.46 (00)
ರಾಯಚೂರು - ರೂ. 101.76 (00 )
ರಾಮನಗರ - ರೂ. 102.39 (00)
ಶಿವಮೊಗ್ಗ - ರೂ. 102.80 (00)
ತುಮಕೂರು - ರೂ. 102.81 (00)
ಉಡುಪಿ - ರೂ. 101.83 (2 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 104.30 (1.30 ಪೈಸೆ ಏರಿಕೆ)
ಯಾದಗಿರಿ - ರೂ. 102.26 (12 ಪೈಸೆ ಇಳಿಕೆ)

ಇದನ್ನೂ ಓದಿ:  Savings Tips: ಏನೇ ಮಾಡಿದ್ರೂ ದುಡ್ಡು ಸೇವ್​ ಮಾಡೋಕೆ ಆಗ್ತಿಲ್ವಾ? ಈ ಟಿಪ್ಸ್​ ಫಾಲೋ ಮಾಡಿ, ಆಮೇಲೆ ನೀವೇ ಸೂಪರ್​ ಅಂತೀರಾ!

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 88.51
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.03
ಬೆಳಗಾವಿ - ರೂ. 88.33
ಬಳ್ಳಾರಿ - ರೂ. 89.50
ಬೀದರ್ - ರೂ. 88.18
ವಿಜಯಪುರ - ರೂ. 87.85
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.67
ಚಿಕ್ಕಮಗಳೂರು - ರೂ. 88.48
ಚಿತ್ರದುರ್ಗ - ರೂ. 89.46
ದಕ್ಷಿಣ ಕನ್ನಡ - ರೂ. 87.78
ದಾವಣಗೆರೆ - ರೂ. 89.47
ಧಾರವಾಡ - ರೂ. 87.68
ಗದಗ - ರೂ. 88.17
ಕಲಬುರಗಿ - ರೂ. 87.87
ಹಾಸನ - ರೂ. 87.69
ಹಾವೇರಿ - ರೂ. 88.28
ಕೊಡಗು - ರೂ. 88.89
ಕೋಲಾರ - ರೂ. 87.83
ಕೊಪ್ಪಳ - ರೂ. 89
ಮಂಡ್ಯ - ರೂ. 88.06
ಮೈಸೂರು - ರೂ. 87.45
ರಾಯಚೂರು - ರೂ. 87.76
ರಾಮನಗರ - ರೂ. 88.31
ಶಿವಮೊಗ್ಗ - ರೂ. 88.56
ತುಮಕೂರು - ರೂ. 88.68
ಉಡುಪಿ - ರೂ. 87.76
ಉತ್ತರ ಕನ್ನಡ - ರೂ. 89.99
ಯಾದಗಿರಿ - ರೂ. 88.21
Published by:Mahmadrafik K
First published: