Petrol-Diesel Price Today: ಪೈಸೆಗಳ ವ್ಯತ್ಯಾಸ, ಇಂದು ಪೆಟ್ರೋಲ್-ಡಿಸೇಲ್ ಬೆಲೆ ಹೀಗಿದೆ

ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ. ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದೂ ಸಹ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತದಲ್ಲಿ ಬೆಂಗಳೂರು (Bengaluru) ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ (Petrol Diesel) ದರಗಳು ಸ್ಥಿರವಾಗಿವೆ. ರಾಜ್ಯದ ಇತರೆ ನಗರಗಳಲ್ಲಿ ಕೆಲ ಪೈಸೆಗಳಷ್ಟು ಏರಿಕೆ/ಇಳಿಕೆ ಆಗಿರುವುದನ್ನು ಗಮನಿಸಬಹುದು. ಆದರೆ, ನಿನ್ನೆಗೆ ಹೋಲಿಸಿದರೆ ಇಂದು ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬೆಲೆ 1 ರೂ. 42 ಪೈಸೆ ಇಳಿಕೆಯಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆಯೂ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆ ಏರುವುದು/ಇಳಿಯುವುದೂ ನಿಲ್ಲುತ್ತಿಲ್ಲ. ಕಳೆದ ಹತ್ತು ದಿನಗಳಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಹತ್ತು ರೂಪಾಯಿಗಿಂತಲೂ ಹೆಚ್ಚಳವಾಗಿ ಜನರು ಪರದಾಡುವಂತಾಗಿತ್ತು. ಆದರೆ ಕಳೆದ 4-5 ದಿನಗಳಿಂದ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿದೆ.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ.

ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ. ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದೂ ಸಹ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 111.59 (00)
ಬೆಂಗಳೂರು - ರೂ. 111.09 (00)
ಬೆಂಗಳೂರು ಗ್ರಾಮಾಂತರ - ರೂ. 111.16 (16 ಪೈಸೆ ಇಳಿಕೆ)
ಬೆಳಗಾವಿ - ರೂ. 111.10 (25 ಪೈಸೆ ಏರಿಕೆ)
ಬಳ್ಳಾರಿ - ರೂ. 113.03 (22 ಪೈಸೆ ಇಳಿಕೆ)
ಬೀದರ್ - ರೂ. 111.63 (11 ಪೈಸೆ ಇಳಿಕೆ)
ವಿಜಯಪುರ - ರೂ. 111.21 (22 ಪೈಸೆ ಇಳಿಕೆ)
ಚಾಮರಾಜನಗರ - ರೂ. 111.18 (37 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 111.09 (18 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 112.07 (58 ಪೈಸೆ ಏರಿಕೆ)
ಚಿತ್ರದುರ್ಗ - ರೂ. 112.51 (13 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 110.63 (34 ಪೈಸೆ ಏರಿಕೆ)
ದಾವಣಗೆರೆ - ರೂ. 113.09 (84 ಪೈಸೆ ಏರಿಕೆ)
ಧಾರವಾಡ - ರೂ.110.84 (00)
ಗದಗ - ರೂ. 111.38 (52 ಪೈಸೆ ಇಳಿಕೆ)
ಕಲಬುರಗಿ - ರೂ. 111.10 (34 ಪೈಸೆ ಇಳಿಕೆ)
ಹಾಸನ - ರೂ. 111.16 (6 ಪೈಸೆ ಏರಿಕೆ)
ಹಾವೇರಿ - ರೂ. 111.98 (56 ಪೈಸೆ ಇಳಿಕೆ)
ಕೊಡಗು - ರೂ. 112.36 (2 ಪೈಸೆ ಏರಿಕೆ)
ಕೋಲಾರ - ರೂ. 111.32 (2 ಪೈಸೆ ಏರಿಕೆ)
ಕೊಪ್ಪಳ - ರೂ. 112.11 (26 ಪೈಸೆ ಇಳಿಕೆ)
ಮಂಡ್ಯ - ರೂ. 110.90 (28 ಪೈಸೆ ಇಳಿಕೆ)
ಮೈಸೂರು - ರೂ. 110.61 (15 ಪೈಸೆ ಏರಿಕೆ)
ರಾಯಚೂರು - ರೂ. 110.36 (55 ಪೈಸೆ ಇಳಿಕೆ)
ರಾಮನಗರ - ರೂ. 111.56 (2 ಪೈಸೆ ಏರಿಕೆ)
ಶಿವಮೊಗ್ಗ - ರೂ. 112.56 (33 ಪೈಸೆ ಏರಿಕೆ)
ತುಮಕೂರು - ರೂ. 111.60 (5 ಪೈಸೆ ಇಳಿಕೆ)
ಉಡುಪಿ - ರೂ. 110.67 (12 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 112.87 (77 ಪೈಸೆ ಏರಿಕೆ)
ಯಾದಗಿರಿ - ರೂ. 111.53 (1 ಪೈಸೆ ಏರಿಕೆ)

ಇದನ್ನೂ ಓದಿ: Gold Price: ಸ್ಥಿರತೆ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರದಲ್ಲಿ 900 ರೂ. ಇಳಿಕೆ; ಇಂದಿನ ಬೆಲೆ ವಿವರ ಇಲ್ಲಿದೆ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.26
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.86
ಬೆಳಗಾವಿ - ರೂ. 94.82
ಬಳ್ಳಾರಿ - ರೂ. 96.56
ಬೀದರ್ - ರೂ. 95.30
ವಿಜಯಪುರ - ರೂ. 94.92
ಚಾಮರಾಜನಗರ - ರೂ. 94.87
ಚಿಕ್ಕಬಳ್ಳಾಪುರ - ರೂ. 94.79
ಚಿಕ್ಕಮಗಳೂರು - ರೂ. 95.57
ಚಿತ್ರದುರ್ಗ - ರೂ. 95.94
ದಕ್ಷಿಣ ಕನ್ನಡ - ರೂ. 94.34
ದಾವಣಗೆರೆ - ರೂ. 96.46
ಧಾರವಾಡ - ರೂ. 94.59
ಗದಗ - ರೂ. 95.07
ಕಲಬುರಗಿ - ರೂ. 94.82
ಹಾಸನ - ರೂ. 94.72
ಹಾವೇರಿ - ರೂ. 95.61
ಕೊಡಗು - ರೂ. 95.80
ಕೋಲಾರ - ರೂ. 95
ಕೊಪ್ಪಳ - ರೂ. 95.75
ಮಂಡ್ಯ - ರೂ. 94.72
ಮೈಸೂರು - ರೂ. 94.35
ರಾಯಚೂರು - ರೂ. 95.07
ರಾಮನಗರ - ರೂ. 95.21
ಶಿವಮೊಗ್ಗ - ರೂ. 96.04
ತುಮಕೂರು - ರೂ. 95.12
ಉಡುಪಿ - ರೂ. 94.38
ಉತ್ತರ ಕನ್ನಡ - ರೂ. 95.36
ಯಾದಗಿರಿ - ರೂ. 95.21
Published by:Divya D
First published: