ಇಂದು ಸಹ ರಾಜ್ಯದಲ್ಲಿ ಬಹುತೇಕ ಕಡೆ ಚಿಕ್ಕ ಪುಟ್ಟ ಪೈಸೆಗಳಷ್ಟು ವ್ಯತ್ಯಾಸವನ್ನು ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ (Petrol And Diesel Price) ಕಾಣಬಹುದಾಗಿದೆ. ಆದರೆ ರಾಜ್ಯದ ಉತ್ತರ ಕನ್ನಡ (Uttara Kannada) ಹಾಗೂ ವಿಜಯನಗರ (Vijayanagara) ಜಿಲ್ಲೆಗಳಲ್ಲಿ ನಿನ್ನೆಗೆ ಹೋಲಿಸಿದರೆ ಇಂಧನ ಬೆಲೆ ಇಂದು ಕ್ರಮವಾಗಿ ಒಂದು ರೂ. ಗಿಂತ ಜಾಸ್ತಿ ಹಾಗೂ ಕಡಿಮೆಯಾಗಿದೆ. ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ (Petrol Price) 1 ರೂ. 93 ಪೈಸೆಗಳಷ್ಟು ಏರಿದ್ದರೆ ಅದೇ ನೂತನ ಜಿಲ್ಲೆ ವಿಜಯನಗರದಲ್ಲಿ ಪೆಟ್ರೋಲ್ ಬೆಲೆ ನಿನ್ನೆಗಿಂತ 1 ರೂ. 28 ಪೈಸೆಗಳಷ್ಟು ಇಳಿದಿದೆ. ಇಂದು ಜಗತ್ತಿಗೆ ಈ ಇಂಧನ ಶಕ್ತಿಗಳ (Oil Price) ಅವಶ್ಯಕತೆ ತೀವ್ರವಾಗಿದೆ. ಕೈಗಾರಿಕೆಗಳಿಂದ ಹಿಡಿದು ವಾಹನಗಳವರೆಗೆ ನಿತ್ಯವೂ ಪೆಟ್ರೋಲ್ ಹಾಗೂ ಡೀಸೆಲ್ ಅಗತ್ಯತೆ ಇದ್ದೆ ಇರುತ್ತದೆ.
ಹಾಗಾಗಿ ಪ್ರಪಂಚದಾದ್ಯಂತ ಇಂಧನಕ್ಕೆ ಅಪಾರವಾದ ಬೇಡಿಕೆಯಿರುತ್ತದೆ. ಪ್ರತಿನಿತ್ಯ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿಂದಾಗಿ ಇಂಧನ ಅಥವಾ ಕಚ್ಚಾ ತೈಲದ ಬೆಲೆಗಳು ಪ್ರಭಾವಿಸಲ್ಪಡುತ್ತಿರುತ್ತವೆ. ಉದಾಹರಣೆಗೆ ಕಳೆದ ವರ್ಷ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆಗಳು ಆಗಸದೆತ್ತರಕ್ಕೆ ಏರಿದ್ದವು. ಭಾರತವು ಇದರಲ್ಲಿ ಹೊರತಾಗಿರಲಿಲ್ಲ. ಕ್ರಮೇಣ ಮತ್ತೆ ಬೆಲೆಗಳು ನಿಯಂತ್ರಣಕ್ಕೆ ಬಂದಿವೆ.
ಇನ್ನೊಂದು ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಭಾರತದಲ್ಲಿ ಯಾವುದೇ ತೈಲದ ನಿಕ್ಷೇಪವಿಲ್ಲ ಆದರೆ ಒಂದುವರೆ ಬಿಲಿಯನ್ ಹತ್ತಿರದಷ್ಟು ಜನಸಂಖ್ಯೆ ಹೊಂದಿರುವ ದೇಶದಲ್ಲಿ ಇಂಧನದ ಅವಶ್ಯಕತೆ ಅತಿ ಹೆಚ್ಚಾಗಿದೆ. ಹಾಗಾಗಿ ಭಾರತ ತನ್ನ ದಿನನಿತ್ಯದ ತೈಲದ ಅವಶ್ಯಕತೆಗಾಗಿ ಕಚ್ಚಾ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ.
ಇತ್ತೀಚಿಗಷ್ಟೇ ರಷ್ಯಾದಿಂದಲೂ ಸಹ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗೆ ಆಮದು ಮಾಡಿಕೊಂಡ ಕಚ್ಚಾ ತೈಲವನ್ನು ತದನಂತರ ಇಲ್ಲಿ ಸಂಸ್ಕರಿಸಿ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ದೇಶಾದ್ಯಂತ ವಿತರಿಸಲಾಗುತ್ತದೆ.
ಈ ರೀತಿಯಾಗಿ ದೇಶದ ಮೂಲೆ ಮೂಲೆಗೆ ತಲುಪುವ ಇಂಧನದ ಮೇಲೆ ಹಲವಾರು ಸುಂಕಗಳನ್ನು ಹಾಕಲಾಗುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಇದು ತಲುಪಿದಾಗ ಮೂಲ ಬೆಲೆಗಿಂತ ಹೆಚ್ಚಿನ ಬೆಲೆ ಇರುವುದನ್ನು ಗಮನಿಸಬಹುದು. ನಿತ್ಯವೂ ಇಂಧನ ಬೆಲೆಗಳು ಹಲವು ಕಾರಣಗಳಿಂದಾಗಿ ಪ್ರಭಾವಿಸಲ್ಪಡುವುದರಿಂದ ಪ್ರತಿನಿತ್ಯ ಅವುಗಳ ಬೆಲೆಗಳು ಭಿನ್ನವಾಗಿದ್ದು ನಿತ್ಯದ ಅಪ್ಡೇಟ್ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿರುತ್ತದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.73, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.33, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.71 (23 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.09 (15 ಪೈಸೆ ಏರಿಕೆ)
ಬೆಳಗಾವಿ - ರೂ. 102.47 (12 ಪೈಸೆ ಇಳಿಕೆ)
ಬಳ್ಳಾರಿ - ರೂ. 103.90 (29 ಪೈಸೆ ಏರಿಕೆ)
ಬೀದರ್ - ರೂ. 102.28 (00)
ವಿಜಯಪುರ - ರೂ. 101.93 (21 ಪೈಸೆ ಏರಿಕೆ)
ಚಾಮರಾಜನಗರ - ರೂ. 102.10 (00)
ಚಿಕ್ಕಬಳ್ಳಾಪುರ - ರೂ. 101.94 (00)
ಚಿಕ್ಕಮಗಳೂರು - ರೂ. 102.83 (29 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.90 (90 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.51 (34 ಪೈಸೆ ಇಳಿಕೆ)
ದಾವಣಗೆರೆ - ರೂ. 103.91 (50 ಪೈಸೆ ಏರಿಕೆ)
ಧಾರವಾಡ - ರೂ. 101.70 (1 ಪೈಸೆ ಇಳಿಕೆ)
ಗದಗ - ರೂ. 102.25 (13 ಪೈಸೆ ಇಳಿಕೆ)
ಕಲಬುರಗಿ - ರೂ. 101.71 (73 ಪೈಸೆ ಇಳಿಕೆ)
ಹಾಸನ - ರೂ. 101.94 (39 ಪೈಸೆ ಇಳಿಕೆ)
ಹಾವೇರಿ - ರೂ. 102.38 (00)
ಕೊಡಗು - ರೂ. 103.26 (00)
ಕೋಲಾರ - ರೂ. 101.87 (6 ಪೈಸೆ ಏರಿಕೆ)
ಕೊಪ್ಪಳ - ರೂ. 103.21 (11 ಪೈಸೆ ಏರಿಕೆ)
ಮಂಡ್ಯ - ರೂ. 102.17 (00)
ಮೈಸೂರು - ರೂ. 101.50 (00)
ರಾಯಚೂರು - ರೂ. 102.43 (59 ಪೈಸೆ ಏರಿಕೆ)
ರಾಮನಗರ - ರೂ. 102.39 (00)
ಶಿವಮೊಗ್ಗ - ರೂ. 103.76 (86 ಪೈಸೆ ಏರಿಕೆ)
ತುಮಕೂರು - ರೂ. 102.81 (00)
ಉಡುಪಿ - ರೂ. 101.83 (2 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 104.30 (1 ರೂ. 93 ಪೈಸೆ ಏರಿಕೆ)
ವಿಜಯನಗರ - ರೂ. 102.89 (1 ರೂ. 28 ಪೈಸೆ ಇಳಿಕೆ)
ಯಾದಗಿರಿ - ರೂ. 102.31 (48 ಪೈಸೆ ಇಳಿಕೆ)
ಇದನ್ನೂ ಓದಿ: Budget 2023: ಇಂದು ಬಜೆಟ್ ಮಂಡಿಸಿ 2 ವಿಶೇಷ ಗೌರವಕ್ಕೆ ಪಾತ್ರರಾದ ನಿರ್ಮಲಾ! ಈ ವಿಚಾರದಲ್ಲಿ ಸಚಿವೆ ಸಾಧನೆ ಏನು ಗೊತ್ತಾ?
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.61
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.39
ಬಳ್ಳಾರಿ - ರೂ. 89.68
ಬೀದರ್ - ರೂ. 88.23
ವಿಜಯಪುರ - ರೂ. 87.90
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.53
ಚಿತ್ರದುರ್ಗ - ರೂ. 89.48
ದಕ್ಷಿಣ ಕನ್ನಡ - ರೂ. 87.47
ದಾವಣಗೆರೆ - ರೂ. 89.48
ಧಾರವಾಡ - ರೂ. 87.70
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.71
ಹಾವೇರಿ - ರೂ. 88.31
ಕೊಡಗು - ರೂ. 88.92
ಕೋಲಾರ - ರೂ. 87.83
ಕೊಪ್ಪಳ - ರೂ. 89.08
ಮಂಡ್ಯ - ರೂ. 88.10
ಮೈಸೂರು - ರೂ. 87.49
ರಾಯಚೂರು - ರೂ. 88.38
ರಾಮನಗರ - ರೂ. 88.29
ಶಿವಮೊಗ್ಗ - 89.40
ತುಮಕೂರು - ರೂ. 88.68
ಉಡುಪಿ - ರೂ. 87.76
ಉತ್ತರ ಕನ್ನಡ - ರೂ. 89.99
ವಿಜಯನಗರ - ರೂ. 88.77
ಯಾದಗಿರಿ - ರೂ. 88.25
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ