Petrol Diesel Price Today: ಸದ್ಯಕ್ಕೆ ಕಡಿಮೆಯಾಗಲ್ವಂತೆ ಪೆಟ್ರೋಲ್-ಡೀಸೆಲ್ ಬೆಲೆ, ಈಗ ಲೀಟರ್​ಗೆ 111 ರೂಪಾಯಿಗೂ ಹೆಚ್ಚು!

Petrol and Diesel Price: ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:

Petrol Price Today: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ (Petrol and Diesel Price) ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಬುಧವಾರವಾದ ಇಂದೂ ಸಹ ತೈಲ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ಬಡವರ ಕೈಗೆ ಎಟುಕದಂತಾಗಿದೆ. ಈಗಾಗಲೇ ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿರುವ ಜನ ದಿನನಿತ್ಯ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂದು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಬೆಂಗಳೂರಿನಲ್ಲಷ್ಟೆ ಸ್ಥಿರವಾಗಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 109.53 ರೂ ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 100.37 ರೂ.ಗೆ ಮಾರಾಟ ಮಾಡಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ಕುರಿತ ವಿವರ ಇಲ್ಲಿದೆ.


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ;


ಬಾಗಲಕೋಟೆ - 110.05 ರೂ. (00)


ಬೆಂಗಳೂರು - 109.53 ರೂ. (00)


ಬೆಂಗಳೂರು ಗ್ರಾಮಾಂತರ -109.16ರೂ. (00)


ಬೆಳಗಾವಿ - 109.82 ರೂ. (34 ಪೈಸೆ ಇಳಿಕೆ)


ಬಳ್ಳಾರಿ - 111.55 ರೂ. (00 )


ಬೀದರ್ - 110 ರೂ. (00)


ಬಿಜಾಪುರ - 109.59 ರೂ. (35 ಪೈಸೆ ಏರಿಕೆ)


ಚಾಮರಾಜನಗರ - 109.53- ರೂ. (79 ಪೈಸೆ ಇಳಿಕೆ)


ಚಿಕ್ಕಬಳ್ಳಾಪುರ - 109.53 ರೂ. (48 ಪೈಸೆ ಇಳಿಕೆ)


ಚಿಕ್ಕಮಗಳೂರು - 110.93 ರೂ. (8 ಪೈಸೆ ಇಳಿಕೆ)


ಚಿತ್ರದುರ್ಗ - 111.28 ರೂ. (49 ಪೈಸೆ ಏರಿಕೆ)


ದಕ್ಷಿಣ ಕನ್ನಡ - 109.39 ರೂ. (24 ಪೈಸೆ ಏರಿಕೆ)


ದಾವಣಗೆರೆ - 111.54 ರೂ. (85 ಪೈಸೆ ಏರಿಕೆ)


ಧಾರವಾಡ - 109.42 ರೂ. (15 ಪೈಸೆ ಏರಿಕೆ)


ಗದಗ – 110.28 ರೂ. (16 ಪೈಸೆ ಏರಿಕೆ)


ಗುಲಬುರ್ಗ - 109.85 ರೂ. (41 ಪೈಸೆ ಏರಿಕೆ)


ಹಾಸನ – 109.28 ರೂ. (00)


ಹಾವೇರಿ - 110.18 ರೂ. (17 ಪೈಸೆ ಇಳಿಕೆ)


ಕೊಡಗು – 110.86 ರೂ. (40 ಪೈಸೆ ಏರಿಕೆ)


ಕೋಲಾರ - 109.69 ರೂ. (23 ಪೈಸೆ ಏರಿಕೆ)


ಕೊಪ್ಪಳ- 110.47 ರೂ. (00)


ಮಂಡ್ಯ – 109.55 ರೂ. (23 ಪೈಸೆ ಏರಿಕೆ)


ಮೈಸೂರು – 109.02 ರೂ. (24 ಪೈಸೆ ಇಳಿಕೆ )


ರಾಯಚೂರು – 110.22 ರೂ. (6 ಪೈಸೆ ಏರಿಕೆ)


ರಾಮನಗರ – 110.01 ರೂ. ( 6 ಪೈಸೆ ಇಳಿಕೆ)


ಶಿವಮೊಗ್ಗ – 111.18 ರೂ. (88 ಪೈಸೆ ಏರಿಕೆ)


ತುಮಕೂರು – 110.01 ರೂ. (28 ಪೈಸೆ ಇಳಿಕೆ)


ಉಡುಪಿ - 109.40 ರೂ. (15 ಪೈಸೆ ಇಳಿಕೆ)


ಉತ್ತರಕನ್ನಡ – 110.57 ರೂ . (32 ಪೈಸೆ ಇಳಿಕೆ)


ಯಾದಗಿರಿ – 109.87 ರೂ. (47 ಪೈಸೆ ಇಳಿಕೆ ).


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 100.88


ಬೆಂಗಳೂರು – 100.37


ಬೆಂಗಳೂರು ಗ್ರಾಮಾಂತರ : 100.04


ಬೆಳಗಾವಿ – 100.67


ಬಳ್ಳಾರಿ – 102.25


ಬೀದರ್ -100.83


ಬಿಜಾಪುರ – 100.46


ಚಾಮರಾಜನಗರ – 100.37


ಚಿಕ್ಕಬಳ್ಳಾಪುರ – 100.37


ಚಿಕ್ಕಮಗಳೂರು – 101.52


ಚಿತ್ರದುರ್ಗ – 101.86


ದಕ್ಷಿಣ ಕನ್ನಡ – 100.21


ದಾವಣಗೆರೆ -102.10


ಧಾರವಾಡ – 100.16


ಗದಗ – 101.09


ಗುಲಬರ್ಗ – 100.69


ಹಾಸನ – 100.03


ಹಾವೇರಿ – 100.99


ಕೊಡಗು – 101.47


ಕೋಲಾರ – 100.53


ಕೊಪ್ಪಳ- 101.26


ಮಂಡ್ಯ – 100.39


ಮೈಸೂರು –99.91


ರಾಯಚೂರು – 101.04


ರಾಮನಗರ – 100.82


ಶಿವಮೊಗ್ಗ – 101.81


ತುಮಕೂರು –100.70


ಉಡುಪಿ – 100.22


ಉತ್ತರಕನ್ನಡ – 101.29


ಯಾದಗಿರಿ – 100.71


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 103.16 ರೂ ಇದ್ದರೆ ಡೀಸೆಲ್​ ಬೆಲೆ 99.07 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 105.84 ರೂ ಮತ್ತು ಡೀಸೆಲ್ 94.57 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ಪೆಟ್ರೋಲ್ 111.77 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು 102.52 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ಜಾಗತಿಕ ತೈಲ ಬೆಲೆ ವ್ಯತ್ಯಾಸ

ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ 06:00 ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.


ಇದನ್ನೂ ಓದಿ: Bhabesh Kalita| ಪೆಟ್ರೋಲ್ ಬೆಲೆ 200ಕ್ಕೆ ಏರಿದರೆ ಟ್ರಿಪಲ್ ರೈಡಿಂಗ್​ಗೆ ಅವಕಾಶ; ಅಸ್ಸಾಂ ಬಿಜೆಪಿ ಅಧ್ಯಕ್ಷನ ವಿಲಕ್ಷಣ ಹೇಳಿಕೆ!

ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.


Published by:Soumya KN
First published: