• Home
  • »
  • News
  • »
  • business
  • »
  • Karnataka Petrol Diesel Price: 16 ಜಿಲ್ಲೆಯಲ್ಲಿ ಏರಿಕೆಯಾಯ್ತು ಪೆಟ್ರೋಲ್; ಇಲ್ಲಿದೆ ಇಂದಿನ ದರ

Karnataka Petrol Diesel Price: 16 ಜಿಲ್ಲೆಯಲ್ಲಿ ಏರಿಕೆಯಾಯ್ತು ಪೆಟ್ರೋಲ್; ಇಲ್ಲಿದೆ ಇಂದಿನ ದರ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಡೀಸೆಲ್‌ ದರದಲ್ಲೂ ಪೈಸೆಗಳಷ್ಟು ವ್ಯತ್ಯಾಸ ಕಂಡುಬಂದಿದೆ. ಮೇ 21ರ ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ, ಡೀಸೆಲ್ (Diesel Price) ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ.

  • Trending Desk
  • Last Updated :
  • Karnataka, India
  • Share this:

Petrol And Diesel Price Today: ರಾಜ್ಯದ 16 ಜಿಲ್ಲೆಗಳಲ್ಲಿ ಪೆಟ್ರೋಲ್‌ ಬೆಲೆ (Petrol Price) ಏರಿಕೆ ಕಂಡಿದ್ದು, ಹೊಸ ಜಿಲ್ಲೆ ವಿಜಯನಗರ ಸೇರಿದಂತೆ ಇನ್ನುಳಿದ ಜಿಲ್ಲೆಗಳಲ್ಲಿ ಪೆಟ್ರೋಲ್‌ ದರ ಇಳಿಕೆಯಾಗಿದೆ. ಡೀಸೆಲ್‌ ದರದಲ್ಲೂ ಪೈಸೆಗಳಷ್ಟು ವ್ಯತ್ಯಾಸ ಕಂಡುಬಂದಿದೆ. ಮೇ 21ರ ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ, ಡೀಸೆಲ್ (Diesel Price) ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ಪೆಟ್ರೋಲ್ ಬೆಲೆಯಲ್ಲಿ 9.50 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 7 ರೂಪಾಯಿ ಇಳಿಕೆಯಾಗಿತ್ತು. ಈ ಮೂಲಕ ಜನತೆಗೆ ಬಿಗ್ ರಿಲೀಫ್ ಸಿಕ್ಕಿತ್ತು. ಅಂದಿನಿಂದ ಇಂದಿನವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಂತಹ ದೊಡ್ಡದಾದ ಯಾವುದೇ ಬದಲಾವಣೆಯಾಗಿಲ್ಲ.


ಇನ್ನು, ರಾಜಧಾನಿ ಬೆಂಗಳೂರು (Bengaluru Price) ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೋಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.73, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


petrol diesel price today in december 29th 2022 stg mrq
ಸಾಂದರ್ಭಿಕ ಚಿತ್ರ


ತೈಲ ಬೆಲೆಯೂ ಸಹ ಸಣ್ಣ-ಪುಟ್ಟ ವ್ಯತ್ಯಾಸಗಳೊಂದಿಗೆ ಏರಿಕೆ-ಇಳಿಕೆ ಕಾಣುತ್ತಲೇ ಇರುತ್ತದೆ. ರಾಜ್ಯದಲ್ಲಿ ಇಂದಿನ ಬೆಲೆ ನೋಡುವುದಾದರೆ,


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.60 (11 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.09 (16 ಪೈಸೆ ಇಳಿಕೆ)
ಬೆಳಗಾವಿ - ರೂ. 102.64 (76 ಪೈಸೆ ಏರಿಕೆ)
ಬಳ್ಳಾರಿ - ರೂ. 103.90 (87 ಪೈಸೆ ಏರಿಕೆ)
ಬೀದರ್ - ರೂ. 102.28 (11 ಪೈಸೆ ಏರಿಕೆ)
ವಿಜಯಪುರ - ರೂ. 102.06 (29 ಪೈಸೆ ಏರಿಕೆ)
ಚಾಮರಾಜನಗರ - ರೂ. 102.06 (7 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.94 (6 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 102.90 (5 ಪೈಸೆ ಏರಿಕೆ)
ಚಿತ್ರದುರ್ಗ - ರೂ. 103.84 (54 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.13 (69 ಪೈಸೆ ಇಳಿಕೆ)
ದಾವಣಗೆರೆ - ರೂ. 103.85 (43 ಪೈಸೆ ಏರಿಕೆ)
ಧಾರವಾಡ - ರೂ. 101.71 (33 ಪೈಸೆ ಇಳಿಕೆ)
ಗದಗ - ರೂ. 102.25 (54 ಪೈಸೆ ಇಳಿಕೆ)
ಕಲಬುರಗಿ - ರೂ. 101.71 (50 ಪೈಸೆ ಇಳಿಕೆ)
ಹಾಸನ - ರೂ. 101.88 (44 ಪೈಸೆ ಇಳಿಕೆ)
ಹಾವೇರಿ - ರೂ. 102.89 (65 ಪೈಸೆ ಏರಿಕೆ)
ಕೊಡಗು - ರೂ. 103.31 (62 ಪೈಸೆ ಏರಿಕೆ)
ಕೋಲಾರ - ರೂ. 101.87 (00)
ಕೊಪ್ಪಳ - ರೂ. 103.21 (19 ಪೈಸೆ ಏರಿಕೆ)
ಮಂಡ್ಯ - ರೂ. 101.94 (20 ಪೈಸೆ ಇಳಿಕೆ)
ಮೈಸೂರು - ರೂ. 101.63 (13 ಪೈಸೆ ಏರಿಕೆ)
ರಾಯಚೂರು - ರೂ. 102.62 (72 ಪೈಸೆ ಏರಿಕೆ)
ರಾಮನಗರ - ರೂ.102.39 (6 ಪೈಸೆ ಇಳಿಕೆ)
ಶಿವಮೊಗ್ಗ - ರೂ. 102.79 (64 ಪೈಸೆ ಇಳಿಕೆ)
ತುಮಕೂರು - ರೂ. 102.45 (24 ಪೈಸೆ ಏರಿಕೆ)
ಉಡುಪಿ - ರೂ. 101.39 (4 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.94 (80 ಪೈಸೆ ಏರಿಕೆ)
ವಿಜಯನಗರ - 103.12 (8 ಪೈಸೆ ಇಳಿಕೆ)
ಯಾದಗಿರಿ - ರೂ. 102.79 (35 ಪೈಸೆ ಏರಿಕೆ)


ಸಾಂದರ್ಭಿಕ ಚಿತ್ರ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.51
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.55
ಬಳ್ಳಾರಿ - ರೂ. 88.68
ಬೀದರ್ - ರೂ. 88.23
ವಿಜಯಪುರ - ರೂ. 88.02
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.62
ಚಿತ್ರದುರ್ಗ - ರೂ. 89.44
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.45
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.67
ಹಾವೇರಿ - ರೂ. 88.77
ಕೊಡಗು - ರೂ. 88.97
ಕೋಲಾರ - ರೂ. 87.83
ಕೊಪ್ಪಳ - ರೂ. 89.08
ಮಂಡ್ಯ - ರೂ. 87.89
ಮೈಸೂರು - ರೂ. 87.61
ರಾಯಚೂರು - ರೂ. 88.54
ರಾಮನಗರ - ರೂ. 88.29
ಶಿವಮೊಗ್ಗ - 88.56
ತುಮಕೂರು - ರೂ. 88.36
ಉಡುಪಿ - ರೂ. 88.76
ಉತ್ತರ ಕನ್ನಡ - ರೂ. 88.98
ವಿಜಯನಗರ - 88.98
ಯಾದಗಿರಿ - ರೂ. 88.68


ಇದನ್ನೂ ಓದಿ:  Zomato: ಪ್ರತಿ ನಿಮಿಷಕ್ಕೂ 185 ಬಿರಿಯಾನಿ, 139 ಪಿಜ್ಜಾ ಡೆಲಿವರಿ! ಏನ್​ ಗುರೂ ಜೊಮ್ಯಾಟೊ ಸ್ಪೀಡ್​


ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ.


ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.

Published by:Mahmadrafik K
First published: