• Home
 • »
 • News
 • »
 • business
 • »
 • Petrol-Diesel Price Today: ಪೆಟ್ರೋಲ್, ಡೀಸೆಲ್ ಬೆಲೆ ವಿಚಾರದಲ್ಲಿ ಬೆಂಗಳೂರಿಗರಿಗೆ ಸಮಾಧಾನಕರ ಸುದ್ದಿ

Petrol-Diesel Price Today: ಪೆಟ್ರೋಲ್, ಡೀಸೆಲ್ ಬೆಲೆ ವಿಚಾರದಲ್ಲಿ ಬೆಂಗಳೂರಿಗರಿಗೆ ಸಮಾಧಾನಕರ ಸುದ್ದಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

 • Trending Desk
 • 3-MIN READ
 • Last Updated :
 • Bangalore [Bangalore], India
 • Share this:

  ಬಂಗಾರ (Gold) ಎಂಬುದು ಹೇಗೆ ಅಮೂಲ್ಯವಾಗಿದೆಯೋ ಅದೇ ರೀತಿ ದ್ರವರೂಪದಲ್ಲಿರುವ ಇಂಧನವೂ (Fuel Prices) ಅಪಾರ ಬೆಲೆಯುಳ್ಳದ್ದಾಗಿದೆ. ಮೊದಲಿಗೆ ನೈಸರ್ಗಿಕವಾಗಿ ಕಚ್ಚಾ ತೈಲವನ್ನು ಪಡೆದು ತದನಂತರ ಅದನ್ನು ರಿಫೈನ್ ಮಾಡುವ ಮೂಲಕ ತಯಾರಿಸಲಾಗುವ ಪೆಟ್ರೋಲ್ ಅಥವಾ ಡೀಸೆಲ್ (Petrol-Diesel) ಇಂಧನಕ್ಕಾಗಲಿ ಜಗತ್ತಿನಾದ್ಯಂತೆ ಬೇಡಿಕೆಯಿದೆ.


  ಈ ಇಂಧನದಿಂದಲೇ ನಿತ್ಯ ಸಾವಿರಾರು ಕೈಗಾರಿಕಾ ಚಟುವಟಿಕೆಗಳು ನಡೆಯುವುದಲ್ಲದೆ ವಿಶ್ವಾದ್ಯಂತ ಶತಕೋಟಿಗಳಷ್ಟು ವ್ಯವಹಾರ ನಡೆಯುತ್ತದೆ. ಪ್ರತಿನಿತ್ಯ ಸಾರಿಗೆ ಸಂಚಾರಕ್ಕೆ ಅಗತ್ಯವಾಗಿ ಬೇಕಾಗಿರುವ ಇಂಧನ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆ ಹೊಂದಿದೆ.


  ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


  ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.65, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.25, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


  ಬಾಗಲಕೋಟೆ - ರೂ. 102.55 (16 ಪೈಸೆ ಏರಿಕೆ)
  ಬೆಂಗಳೂರು - ರೂ. 101.94 (00)
  ಬೆಂಗಳೂರು - ಗ್ರಾಮಾಂತರ - ರೂ. 102.09 (16 ಪೈಸೆ ಇಳಿಕೆ)
  ಬೆಳಗಾವಿ - ರೂ. 102.64 (73 ಪೈಸೆ ಏರಿಕೆ)
  ಬಳ್ಳಾರಿ - ರೂ. 103.73 (52 ಪೈಸೆ ಏರಿಕೆ)
  ಬೀದರ್ - ರೂ. 102.28 (85 ಪೈಸೆ ಇಳಿಕೆ)
  ವಿಜಯಪುರ - ರೂ. 101.72 (40 ಪೈಸೆ ಇಳಿಕೆ)
  ಚಾಮರಾಜನಗರ - ರೂ. 102.06 (7 ಪೈಸೆ ಇಳಿಕೆ)
  ಚಿಕ್ಕಬಳ್ಳಾಪುರ - ರೂ. 101.94 (45 ಪೈಸೆ ಇಳಿಕೆ)
  ಚಿಕ್ಕಮಗಳೂರು - ರೂ. 102.93 (13 ಪೈಸೆ ಇಳಿಕೆ)
  ಚಿತ್ರದುರ್ಗ - ರೂ. 103.90 (19 ಪೈಸೆ ಇಳಿಕೆ)
  ದಕ್ಷಿಣ ಕನ್ನಡ - ರೂ. 101.34 (43 ಪೈಸೆ ಇಳಿಕೆ)
  ದಾವಣಗೆರೆ - ರೂ. 103.91 (00)
  ಧಾರವಾಡ - ರೂ. 101.70 (00)
  ಗದಗ - ರೂ. 102.25 (50 ಪೈಸೆ ಇಳಿಕೆ)
  ಕಲಬುರಗಿ - ರೂ. 102.10 (2 ಪೈಸೆ ಇಳಿಕೆ)
  ಹಾಸನ - ರೂ. 102.18 (9 ಪೈಸೆ ಏರಿಕೆ)
  ಹಾವೇರಿ - ರೂ. 102.89 (14 ಪೈಸೆ ಏರಿಕೆ)
  ಕೊಡಗು - ರೂ. 103.31 (5 ಪೈಸೆ ಏರಿಕೆ)
  ಕೋಲಾರ - ರೂ. 101.87 (00)
  ಕೊಪ್ಪಳ - ರೂ. 103.21 (35 ಪೈಸೆ ಏರಿಕೆ)
  ಮಂಡ್ಯ - ರೂ. 102.17 (39 ಪೈಸೆ ಏರಿಕೆ)
  ಮೈಸೂರು - ರೂ. 101.50 (00)
  ರಾಯಚೂರು - ರೂ. 102.67 (83 ಪೈಸೆ ಏರಿಕೆ)
  ರಾಮನಗರ - ರೂ. 102.39 (34 ಪೈಸೆ ಏರಿಕೆ)
  ಶಿವಮೊಗ್ಗ - ರೂ. 102.93 (23 ಪೈಸೆ ಇಳಿಕೆ)
  ತುಮಕೂರು - ರೂ. 102.45 (68 ಪೈಸೆ ಇಳಿಕೆ)
  ಉಡುಪಿ - ರೂ. 101.59 (24 ಪೈಸೆ ಇಳಿಕೆ)
  ಉತ್ತರ ಕನ್ನಡ - ರೂ. 102.94 (93 ಪೈಸೆ ಏರಿಕೆ)
  ವಿಜಯನಗರ - ರೂ. 103.12 (17 ಪೈಸೆ ಇಳಿಕೆ)
  ಯಾದಗಿರಿ - ರೂ. 102.31 (13 ಪೈಸೆ ಇಳಿಕೆ)


  ಇದನ್ನೂ ಓದಿ: Gold-Silver Price Today: ಚಿನ್ನದ ದರ ಅಲ್ಪ ಏರಿಕೆ, ಬದಲಾಗದ ಬೆಳ್ಳಿ ಬೆಲೆ: ಹೀಗಿದೆ ನೋಡಿ ಇಂದಿನ ರೇಟ್


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


  ಬಾಗಲಕೋಟೆ - ರೂ. 88.46
  ಬೆಂಗಳೂರು - ರೂ. 87.89
  ಬೆಂಗಳೂರು ಗ್ರಾಮಾಂತರ - ರೂ. 88.03
  ಬೆಳಗಾವಿ - ರೂ. 88.55
  ಬಳ್ಳಾರಿ - ರೂ. 89.53
  ಬೀದರ್ - ರೂ. 88.23
  ವಿಜಯಪುರ - ರೂ. 87.71
  ಚಾಮರಾಜನಗರ - ರೂ. 88
  ಚಿಕ್ಕಬಳ್ಳಾಪುರ - ರೂ. 87.89
  ಚಿಕ್ಕಮಗಳೂರು - ರೂ. 88.64
  ಚಿತ್ರದುರ್ಗ - ರೂ. 89.48
  ದಕ್ಷಿಣ ಕನ್ನಡ - ರೂ. 87.31
  ದಾವಣಗೆರೆ - ರೂ. 89.48
  ಧಾರವಾಡ - ರೂ. 87.70
  ಗದಗ - ರೂ. 88.20
  ಕಲಬುರಗಿ - ರೂ. 88.06
  ಹಾಸನ - ರೂ. 87.92
  ಹಾವೇರಿ - ರೂ. 88.77
  ಕೊಡಗು - ರೂ. 88.97
  ಕೋಲಾರ - ರೂ. 87.83
  ಕೊಪ್ಪಳ - ರೂ. 89.08
  ಮಂಡ್ಯ - ರೂ. 88.10
  ಮೈಸೂರು - ರೂ. 87.49
  ರಾಯಚೂರು - ರೂ. 88.59
  ರಾಮನಗರ - ರೂ. 88.29
  ಶಿವಮೊಗ್ಗ - 88.65
  ತುಮಕೂರು - ರೂ. 88.36
  ಉಡುಪಿ - ರೂ. 87.54
  ಉತ್ತರ ಕನ್ನಡ - ರೂ. 88.76
  ವಿಜಯನಗರ - ರೂ. 88.98
  ಯಾದಗಿರಿ - ರೂ. 88.25
  ಕಳೆದ ವರ್ಷವಷ್ಟೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ ಕೆಲ ಸಮಯದ ನಂತರ ವಿಶ್ವದಲ್ಲೆಲ್ಲ ತೈಲದ ಅಪಾರ ಕೊರತೆಯುಂಟಾಗಿ ಕಚ್ಚಾ ತೈಲದ ಬೆಲೆಗಳು ಆಕಾಶದೆತ್ತರಕ್ಕೆ ಏರಿದ್ದವು. ಇದರಿಂದಾಗಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಹುತೇಕ ಎಲ್ಲ ದೇಶಗಳು ಪರದಾಡಿದ್ದವು ಗೊತ್ತೇ ಇದೆ. ಆದರೆ ತದನಂತರ ಮತ್ತೆ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಆದಾಗ್ಯೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿತ್ಯ ಕಚ್ಚಾ ತೈಲದಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.


  ಇನ್ನು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಒಂದೇ ರೀತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಅವುಗಳ ಬೆಲೆಗಳು ಹಲವಾರು ಜಾಗತಿಕ ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ. ಹಾಗಾಗಿ ಪ್ರತಿನಿತ್ಯ ಇಂಧನ ಬೆಲೆಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿದ್ದೇ ಇರುತ್ತವೆ.

  Published by:Kavya V
  First published: