• Home
  • »
  • News
  • »
  • business
  • »
  • Petrol-Diesel Price Today: ರಾಜ್ಯದಲ್ಲಿ ಮತ್ತೆ ಪೆಟ್ರೋಲ್ ಬೆಲೆ ಏರಿಕೆ: ಇಂದಿನ ದರದ ಮಾಹಿತಿ ಇಲ್ಲಿದೆ

Petrol-Diesel Price Today: ರಾಜ್ಯದಲ್ಲಿ ಮತ್ತೆ ಪೆಟ್ರೋಲ್ ಬೆಲೆ ಏರಿಕೆ: ಇಂದಿನ ದರದ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿನ್ನೆಗೆ ಹೋಲಿಸಿದರೆ ಇಂದು ಚಿತ್ರದುರ್ಗದಲ್ಲಿ ಪೆಟ್ರೋಲ್ ಬೆಲೆಯಲ್ಲಿ 1 ರೂ. 30 ಪೈಸೆಗಳಷ್ಟು ಏರಿಕೆಯಾಗಿದೆ. ಮಿಕ್ಕಂತೆ ರಾಜ್ಯದ ಇತರೆ ನಗರ ಪ್ರದೇಶಗಳಲ್ಲಿ ಕೆಲ ಪೈಸೆಗಳಷ್ಟು ಏರಿಳಿತಗಳು ಮುಂದುವರೆದಿದ್ದು ಒಟ್ಟಾರೆ ಒಂದೇ ರೀತಿಯ ಸ್ಥಿರವಾದ ದರಗಳಿವೆ.

  • Trending Desk
  • Last Updated :
  • Bangalore [Bangalore], India
  • Share this:

    ಇಂದು ರಾಜ್ಯದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳಲ್ಲಿ (Petrol-Diesel Price)  ಗಮನಾರ್ಹವಾದಂತಹ ಯಾವುದೇ ರೀತಿಯ ದರ ಬದಲಾವಣೆಗಳಾಗಿಲ್ಲವಾದರೂ ಚಿತ್ರದುರ್ಗದಲ್ಲಿ ಪೆಟ್ರೋಲ್ (Petrol Price) ಹಾಗೂ ಡೀಸೆಲ್ ಬೆಲೆಗಳಲ್ಲಿ (Diesel Price) ಏರಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ ಇಂದು ಚಿತ್ರದುರ್ಗದಲ್ಲಿ ಪೆಟ್ರೋಲ್ ಬೆಲೆಯಲ್ಲಿ 1 ರೂ. 30 ಪೈಸೆಗಳಷ್ಟು ಏರಿಕೆಯಾಗಿದೆ. ಮಿಕ್ಕಂತೆ ರಾಜ್ಯದ ಇತರೆ ನಗರ ಪ್ರದೇಶಗಳಲ್ಲಿ ಕೆಲ ಪೈಸೆಗಳಷ್ಟು ಏರಿಳಿತಗಳು ಮುಂದುವರೆದಿದ್ದು ಒಟ್ಟಾರೆ ಒಂದೇ ರೀತಿಯ ಸ್ಥಿರವಾದ ದರಗಳಿವೆ.


    ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.39 (55 ಪೈಸೆ ಇಳಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.25 (24 ಪೈಸೆ ಏರಿಕೆ)
    ಬೆಳಗಾವಿ - ರೂ. 102.47 (56 ಪೈಸೆ ಏರಿಕೆ)
    ಬಳ್ಳಾರಿ - ರೂ. 103.21 (14 ಪೈಸೆ ಏರಿಕೆ)
    ಬೀದರ್ - ರೂ. 103.13 (43 ಪೈಸೆ ಏರಿಕೆ)
    ವಿಜಯಪುರ - ರೂ. 102.12 (20 ಪೈಸೆ ಏರಿಕೆ)
    ಚಾಮರಾಜನಗರ - ರೂ. 102.13 (20 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - ರೂ. 102.39 (39 ಪೈಸೆ ಏರಿಕೆ)
    ಚಿಕ್ಕಮಗಳೂರು - ರೂ. 103.06 (59 ಪೈಸೆ ಇಳಿಕೆ)
    ಚಿತ್ರದುರ್ಗ - ರೂ. 104.03 (1 ರೂ. 30 ಪೈಸೆ ಏರಿಕೆ)
    ದಕ್ಷಿಣ ಕನ್ನಡ - ರೂ. 101.26 (8 ಪೈಸೆ ಇಳಿಕೆ)
    ದಾವಣಗೆರೆ - ರೂ. 103.57 (34 ಪೈಸೆ ಏರಿಕೆ)
    ಧಾರವಾಡ - ರೂ. 101.70 (34 ಪೈಸೆ ಇಳಿಕೆ)
    ಗದಗ - ರೂ. 102.75 (56 ಪೈಸೆ ಏರಿಕೆ)
    ಕಲಬುರಗಿ - ರೂ. 102.21 (28 ಪೈಸೆ ಇಳಿಕೆ)
    ಹಾಸನ - ರೂ. 102.32 (7 ಪೈಸೆ ಇಳಿಕೆ)
    ಹಾವೇರಿ - ರೂ. 102.75 (17 ಪೈಸೆ ಏರಿಕೆ)
    ಕೊಡಗು - ರೂ. 103.26 (57 ಪೈಸೆ ಏರಿಕೆ)
    ಕೋಲಾರ - ರೂ. 101.87 (23 ಪೈಸೆ ಇಳಿಕೆ)
    ಕೊಪ್ಪಳ - ರೂ. 102.86 (8 ಪೈಸೆ ಇಳಿಕೆ)
    ಮಂಡ್ಯ - ರೂ. 101.78 (8 ಪೈಸೆ ಇಳಿಕೆ)
    ಮೈಸೂರು - ರೂ. 101.50 (42 ಪೈಸೆ ಇಳಿಕೆ)
    ರಾಯಚೂರು - ರೂ. 102.71 (81 ಪೈಸೆ ಏರಿಕೆ)
    ರಾಮನಗರ - ರೂ. 102.05 (23 ಪೈಸೆ ಇಳಿಕೆ)
    ಶಿವಮೊಗ್ಗ - ರೂ. 103.16 (62 ಪೈಸೆ ಇಳಿಕೆ)
    ತುಮಕೂರು - ರೂ. 103.13 (51 ಪೈಸೆ ಇಳಿಕೆ)
    ಉಡುಪಿ - ರೂ. 101.83 (42 ಪೈಸೆ ಇಳಿಕೆ)
    ಉತ್ತರ ಕನ್ನಡ - ರೂ. 102.01 (78 ಪೈಸೆ ಇಳಿಕೆ)
    ಯಾದಗಿರಿ - ರೂ. 102.79 (00)


    ಇದನ್ನೂ ಓದಿ: Gold-Silver Price Today: ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್: ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದೆಷ್ಟು? ನೀವೇ ನೋಡಿ


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.32
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 88.17
    ಬೆಳಗಾವಿ - ರೂ. 88.40
    ಬಳ್ಳಾರಿ - ರೂ. 89.08
    ಬೀದರ್ - ರೂ. 88.99
    ವಿಜಯಪುರ - ರೂ. 88.07
    ಚಾಮರಾಜನಗರ - ರೂ. 88.07
    ಚಿಕ್ಕಬಳ್ಳಾಪುರ - ರೂ. 88.29
    ಚಿಕ್ಕಮಗಳೂರು - ರೂ. 88.87
    ಚಿತ್ರದುರ್ಗ - ರೂ. 89.62
    ದಕ್ಷಿಣ ಕನ್ನಡ - ರೂ. 87.25
    ದಾವಣಗೆರೆ - ರೂ. 89.20
    ಧಾರವಾಡ - ರೂ. 87.70
    ಗದಗ - ರೂ. 88.65
    ಕಲಬುರಗಿ - ರೂ. 88.16
    ಹಾಸನ - ರೂ. 88.07
    ಹಾವೇರಿ - ರೂ. 88.64
    ಕೊಡಗು - ರೂ. 88.92
    ಕೋಲಾರ - ರೂ. 87.83
    ಕೊಪ್ಪಳ - ರೂ. 88.75
    ಮಂಡ್ಯ - ರೂ. 87.75
    ಮೈಸೂರು - ರೂ. 87.49
    ರಾಯಚೂರು - ರೂ. 88.63
    ರಾಮನಗರ - ರೂ. 87.99
    ಶಿವಮೊಗ್ಗ - 88.96
    ತುಮಕೂರು - ರೂ. 88.96
    ಉಡುಪಿ - ರೂ. 87.76
    ಉತ್ತರ ಕನ್ನಡ - ರೂ. 87.98
    ಯಾದಗಿರಿ - ರೂ. 88.68


    ದ್ರವರೂಪದ ಚಿನ್ನದಂತಿರುವ ಪೆಟ್ರೋಲ್ ಹಾಗೂ ಡೀಸೆಲ್ ಗಳಿಗೆ ವಿಶ್ವದಾದ್ಯಂತ ಅಪಾರವಾದ ಬೇಡಿಕೆಯಿದೆ. ಸಾಕಷ್ಟು ಪ್ರಮುಖ ಕೈಗಾರಿಕಾ ಚಟುವಟಿಕೆಗಳು ಹಾಗೂ ವಾಹನಗಳ ಸಂಚಾರ ಇಂಧನದ ಮೇಲೆಯೇ ಅವಲಂಬಿತವಾಗಿರುವುದರಿಂದ ಇಂಧನಕ್ಕೆ ಬೇಡಿಕೆಯಿದೆ. ಆದರೆ, ಇಂಧನ ಬೆಲೆ ಎಂಬುದು ಸ್ಥಿರವಾಗಿರುವ ಅಂಶವಲ್ಲ. ಹಲವಾರು ಜಾಗತಿಕ ಕಾರಣಗಳಿಂದಾಗಿ ಅದರ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ.


    ಈ ವರ್ಷಾರಂಭದ ಸಮಯದಲ್ಲಿ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ್ದಂತಹ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರಿದ್ದವು. ಇದರಿಂದಾಗಿ ಎಲ್ಲೆಡೆ ಇಂಧನದ ಕೊರತೆಯುಂಟಾಗಿ ಬೇಡಿಕೆ ದ್ವಿಗುಣವಾಗಿತ್ತು. ಸಾಮಾನ್ಯ ಭಾರತೀಯ ಪ್ರಜೆ ನಿತ್ಯ ರಸ್ತೆಯಲ್ಲಿ ವಾಹನವನ್ನು ಬಳಸಲೂ ಸಹ ಪರದಾಡುವಂತಾಗಿತ್ತು. ಸದ್ಯ, ಆ ಪರಿಸ್ಥಿತಿ ಇಂದಿಲ್ಲವಾದರೂ ನಿತ್ಯ ಇದರ ಬೆಲೆಯಲ್ಲಿ ವ್ಯತ್ಯಾಸವಾಗುತ್ತಲೆ ಇರುತ್ತದೆ.

    Published by:Kavya V
    First published: