• Home
  • »
  • News
  • »
  • business
  • »
  • Petrol-Diesel Price Today: ಇಂದು ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ: ಮಾಹಿತಿ ಇಲ್ಲಿದೆ

Petrol-Diesel Price Today: ಇಂದು ಈ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ: ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ , ಡೀಸೆಲ್ ದರ ರೂ. 87.89 ಆಗಿದೆ.

  • Trending Desk
  • 4-MIN READ
  • Last Updated :
  • Bangalore [Bangalore], India
  • Share this:

    ಇಂದು ರಾಜ್ಯದಲ್ಲಿ ಪೆಟ್ರೋಲ್ ( Petrol Price) ಹಾಗೂ ಡೀಸೆಲ್ ಬೆಲೆಗಳಲ್ಲಿ ( Diesel Price) ಗಮನಾರ್ಹವಾದಂತಹ ಯಾವುದೇ ರೀತಿಯ ದರ ಬದಲಾವಣೆಗಳಾಗಿಲ್ಲ. ಎಂದಿನಂತೆ ಕೆಲ ಪೈಸೆಗಳಷ್ಟು ಏರಿಳಿತಗಳು ಮುಂದುವರೆದಿದ್ದು ಒಟ್ಟಾರೆ ಒಂದೇ ರೀತಿಯ ಸ್ಥಿರವಾದ ದರಗಳು ಜಿಲ್ಲಾ ಕೇಂದ್ರಗಳಲ್ಲಿರುವುದನ್ನು ಗಮನಿಸಬಹುದು. ಇಂದು ವಿಶ್ವದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್  (Petrol-Diesel Price Today) ಇಂಧನಗಳಿಗೆ ಅಪಾರವಾದ ಬೇಡಿಕೆಯಿದೆ. ನಿತ್ಯ ದಿನಚರಿಯ ಹಲವಾರು ಪ್ರಮುಖ ಕೆಲಸಗಳಿಗೆ ಇಂಧನ ಅವಶ್ಯಕವಾಗಿದ್ದು ಇಂಧನಕ್ಕೆ ಸದಾ ಡಿಮ್ಯಾಂಡ್ ಇದ್ದೆ ಇದೆ. ಆದರೆ, ಇಂಧನ ಬೆಲೆ ಎಂಬುದು ಸ್ಥಿರವಾಗಿರುವ ಅಂಶವಲ್ಲ. ಹಲವಾರು ಜಾಗತಿಕ ಕಾರಣಗಳಿಂದಾಗಿ ಅದರ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಲೇ ಇರುತ್ತದೆ.


    ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.94 (44 ಪೈಸೆ ಏರಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.01 (00)
    ಬೆಳಗಾವಿ - ರೂ. 101.91 (6 ಪೈಸೆ ಇಳಿಕೆ)
    ಬಳ್ಳಾರಿ - ರೂ. 103.07 (83 ಪೈಸೆ ಇಳಿಕೆ)
    ಬೀದರ್ - ರೂ. 102.70 (18 ಪೈಸೆ ಏರಿಕೆ)
    ವಿಜಯಪುರ - ರೂ. 101.92 (20 ಪೈಸೆ ಇಳಿಕೆ)
    ಚಾಮರಾಜನಗರ - ರೂ. 101.93 (14 ಪೈಸೆ ಇಳಿಕೆ)
    ಚಿಕ್ಕಬಳ್ಳಾಪುರ - ರೂ. 102 (6 ಪೈಸೆ ಏರಿಕೆ)
    ಚಿಕ್ಕಮಗಳೂರು - ರೂ. 103.65 (00)
    ಚಿತ್ರದುರ್ಗ - ರೂ. 102.73 (74 ಪೈಸೆ ಇಳಿಕೆ)
    ದಕ್ಷಿಣ ಕನ್ನಡ - ರೂ. 101.34 (23 ಪೈಸೆ ಇಳಿಕೆ)
    ದಾವಣಗೆರೆ - ರೂ. 103.23 (81 ಪೈಸೆ ಇಳಿಕೆ)
    ಧಾರವಾಡ - ರೂ. 102.04 (33 ಪೈಸೆ ಏರಿಕೆ)
    ಗದಗ - ರೂ. 102.19 (6 ಪೈಸೆ ಇಳಿಕೆ)
    ಕಲಬುರಗಿ - ರೂ. 102.49 (49 ಪೈಸೆ ಏರಿಕೆ)
    ಹಾಸನ - ರೂ. 102.39 (5 ಪೈಸೆ ಏರಿಕೆ)
    ಹಾವೇರಿ - ರೂ. 102.58 (17 ಪೈಸೆ ಏರಿಕೆ)
    ಕೊಡಗು - ರೂ. 102.69 (59 ಪೈಸೆ ಇಳಿಕೆ)
    ಕೋಲಾರ - ರೂ. 102.10 (6 ಪೈಸೆ ಇಳಿಕೆ)
    ಕೊಪ್ಪಳ - ರೂ. 102.94 (19 ಪೈಸೆ ಇಳಿಕೆ)
    ಮಂಡ್ಯ - ರೂ. 101.86 (8 ಪೈಸೆ ಏರಿಕೆ)
    ಮೈಸೂರು - ರೂ. 101.92 (10 ಪೈಸೆ ಇಳಿಕೆ)
    ರಾಯಚೂರು - ರೂ. 101.90 (39 ಪೈಸೆ ಇಳಿಕೆ)
    ರಾಮನಗರ - ರೂ. 102.28 (12 ಪೈಸೆ ಇಳಿಕೆ)
    ಶಿವಮೊಗ್ಗ - ರೂ. 103.78 (34 ಪೈಸೆ ಏರಿಕೆ)
    ತುಮಕೂರು - ರೂ. 102.64 (36 ಪೈಸೆ ಏರಿಕೆ)
    ಉಡುಪಿ - ರೂ. 102.25 (88 ಪೈಸೆ ಏರಿಕೆ)
    ಉತ್ತರ ಕನ್ನಡ - ರೂ. 102.79 (42 ಪೈಸೆ ಏರಿಕೆ)
    ಯಾದಗಿರಿ - ರೂ. 102.79 (36 ಪೈಸೆ ಏರಿಕೆ)


    ಇದನ್ನೂ ಓದಿ: ಜರ್ಮನಿಯಲ್ಲೂ ಇಲ್ವಂತೆ ಈ ಸೇವೆ! Paytm ಕ್ರಾಂತಿಯಿಂದ ಹಲವು ಬದಲಾವಣೆ


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.81
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.95
    ಬೆಳಗಾವಿ - ರೂ. 87.90
    ಬಳ್ಳಾರಿ - ರೂ. 88.95
    ಬೀದರ್ - ರೂ. 88.60
    ವಿಜಯಪುರ - ರೂ. 87.90
    ಚಾಮರಾಜನಗರ - ರೂ. 87.88
    ಚಿಕ್ಕಬಳ್ಳಾಪುರ - ರೂ. 87.95
    ಚಿಕ್ಕಮಗಳೂರು - ರೂ. 89.33
    ಚಿತ್ರದುರ್ಗ - ರೂ. 88.44
    ದಕ್ಷಿಣ ಕನ್ನಡ - ರೂ. 87.31
    ದಾವಣಗೆರೆ - ರೂ. 88.89
    ಧಾರವಾಡ - ರೂ. 88.01
    ಗದಗ - ರೂ. 88.14
    ಕಲಬುರಗಿ - ರೂ. 88.41
    ಹಾಸನ - ರೂ. 88.13
    ಹಾವೇರಿ - ರೂ. 88.49
    ಕೊಡಗು - ರೂ. 88.54
    ಕೋಲಾರ - ರೂ. 88.03
    ಕೊಪ್ಪಳ - ರೂ. 88.83
    ಮಂಡ್ಯ - ರೂ. 87.82
    ಮೈಸೂರು - ರೂ. 87.87
    ರಾಯಚೂರು - ರೂ. 87.89
    ರಾಮನಗರ - ರೂ. 88.20
    ಶಿವಮೊಗ್ಗ - 89.45
    ತುಮಕೂರು - ರೂ. 88.52
    ಉಡುಪಿ - ರೂ. 88.14
    ಉತ್ತರ ಕನ್ನಡ - ರೂ. 88.63
    ಯಾದಗಿರಿ - ರೂ. 88.68


    ಈ ಹಿಂದೆ ರಷ್ಯಾ ಉಕ್ರೇನ್ ಯುದ್ಧ ನಡೆದಂತಹ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆ ಗಗನಕ್ಕೇರಿತ್ತು. ಇದರಿಂದಾಗಿ ದೇಶದೆಲ್ಲೆಡೆ ಇಂಧನ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದನ್ನು ಗಮನಿಸಬಹುದಾಗಿತ್ತು. ಶ್ರೀಸಮಾನ್ಯನು ನಿತ್ಯ ರಸ್ತೆಯಲ್ಲಿ ವಾಹನವನ್ನು ಬಳಸಲೂ ಸಹ ಪರದಾಡುವಂತಾಗಿತ್ತು.ಆದರೆ, ಕೆಲ ಸಮಯದ ಹಿಂದೆ ಕೇಂದ್ರ ಸರ್ಕಾರವು ಸುಂಕಗವನ್ನು ಕೈಬಿಟ್ಟಿದ್ದರಿಂದ ಇಂದು ಇಂಧನ ಬೆಲೆಯು ಒಂದು ರೀತಿಯಲ್ಲಿ ಸ್ಥಿರವಾಗಿರುವುದನ್ನು ನೋಡಬಹುದು.


    ಹಲವು ದಿನನಿತ್ಯದ ಪ್ರಮುಖ ಕೈಗಾರಿಕೆ ಚಟುವಟಿಕೆಗಳು ನಡೆಯಲು ಇಂಧನ ಅವಶ್ಯಕವಾಗಿದೆ. ಇನ್ನು ಜಾಗತಿಕವಾಗಿ ಉಂಟಾಗುವ ಕಚ್ಚಾ ತೈಲದ ಬೆಲೆಗಳಲ್ಲಿನ ವ್ಯತ್ಯಾಸದಿಂದಾಗಿಯೇ ನಿತ್ಯವೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಬದಲಾವಣೆಗಳಾಗುತ್ತಿರುತ್ತವೆ.

    Published by:Kavya V
    First published: