• Home
  • »
  • News
  • »
  • business
  • »
  • Petrol-Diesel Price Today: ಆರಕ್ಕೇರದ ಮೂರಕ್ಕಿಳಿಯದ ಪೆಟ್ರೋಲ್​-ಡೀಸೆಲ್​ ಬೆಲೆ! ನಿಮ್ಮ ನಗರದಲ್ಲಿಂದು ಎಷ್ಟಿದೆ ಅಂತ ನೋಡಿ

Petrol-Diesel Price Today: ಆರಕ್ಕೇರದ ಮೂರಕ್ಕಿಳಿಯದ ಪೆಟ್ರೋಲ್​-ಡೀಸೆಲ್​ ಬೆಲೆ! ನಿಮ್ಮ ನಗರದಲ್ಲಿಂದು ಎಷ್ಟಿದೆ ಅಂತ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Petrol Diesel: ಬೆಂಗಳೂರು (Bengaluru) ಮಹಾನಗರದಲ್ಲಿ ಇಂದು ಪೆಟ್ರೋಲ್ ಬೆಲೆ ಐದು ಪೈಸೆಗಳಷ್ಟು ಏರಿದ್ದರೆ ಬಳ್ಳಾರಿಯಲ್ಲಿ 1 ರೂ. 1 ಪೈಸೆಗಳಷ್ಟು ಇಳಿದಿದೆ. ಮಿಕ್ಕಂತೆ ಎಲ್ಲೆಡೆ ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದೆ.

  • Share this:

Karnataka Petrol-Diesel price Today: ಇಂದು ರಾಜ್ಯದಲ್ಲಿ ಬಹುತೇಕ ಎಲ್ಲೆಡೆ ಪೆಟ್ರೋಲ್-ಡೀಸೆಲ್ (Petrol-Diesel price) ಬೆಲೆಗಳಲ್ಲಿ ದೊಡ್ಡ ಪ್ರಮಾಣದ ಏರಿಕೆ ಅಥವಾ ಇಳಿಕೆಯಾಗಲಿ ಕಂಡುಬಂದಿಲ್ಲ. ಆದಾಗ್ಯೂ ಬೆಂಗಳೂರು (Bengaluru) ಮಹಾನಗರದಲ್ಲಿ ಇಂದು ಪೆಟ್ರೋಲ್ ಬೆಲೆ ಐದು ಪೈಸೆಗಳಷ್ಟು ಏರಿದ್ದರೆ ಬಳ್ಳಾರಿಯಲ್ಲಿ 1 ರೂ. 1 ಪೈಸೆಗಳಷ್ಟು ಇಳಿದಿದೆ. ಮಿಕ್ಕಂತೆ ಎಲ್ಲೆಡೆ ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದೆ. ಹಿಂದೊಮ್ಮೆ ಅತಿರೇಕಕ್ಕೆ ಹೋಗಿದ್ದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ (Crude Oi ದ ಬೆಲೆಯಿಂದಾಗಿ ಪೆಟ್ರೋಲ್-ಡೀಸೆಲ್ ಬೆಲೆಗಳು ಗಗನಕ್ಕೇರಿದ್ದವು, ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ.


ಹೆಚ್ಚಿನ  ಬದಲಾವಣೆ ಇಲ್ಲ!


ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇರುತ್ತದೆ.


ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ-ತೈಲದ ಬೆಲೆ ಏರಿಳಿತಗಳು ನಿರಂತರವಾಗಿದ್ದು ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಳಿತವಾಗುವುದು ಸಹಜವೇ ಆಗಿದೆ. ಅಷ್ಟಕ್ಕೂ ಆಗಾಗ ಈ ಇಂಧನ ಬೆಲೆಗಳು ಎಂಬುದು ಶ್ರೀಸಾಮಾನ್ಯನ ಕೈಸುಡುವಂತೆ ಮಾಡುವುದು ಸುಳ್ಳಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಹಾಗೆ ಮುಂದುವರೆದಿದ್ದು ಭವಿಷ್ಯದಲ್ಲಿ ಇಂಧನದ ಬೆಲೆಗಳು ಏನಾಗುವುದೋ ಕಾದು ನೋಡಬೇಕು.


ಇದನ್ನೂ ಓದಿ: ಏರುತ್ತಿದ್ದ ಚಿನ್ನದ ದರ ಮತ್ತೆ ಕುಸಿತ, ಖರೀದಿಗೆ ಇದು ಸೂಕ್ತ ದಿನ: ಹೀಗಿದೆ ನೋಡಿ ಇಂದಿನ ರೇಟ್


ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.99 ಆಗಿದ್ದರೆ ಡೀಸೆಲ್ ದರ ರೂ. 87.94 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


ಬಾಗಲಕೋಟೆ - ರೂ. 102.50 (17 ಪೈಸೆ ಏರಿಕೆ)
ಬೆಂಗಳೂರು - ರೂ. 101.99 (5 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ - ರೂ. 101.58 (00)
ಬೆಳಗಾವಿ - ರೂ. 101.97 (37 ಪೈಸೆ ಇಳಿಕೆ)
ಬಳ್ಳಾರಿ - ರೂ. 102.89 (1 ರೂ. 1 ಪೈಸೆ ಇಳಿಕೆ)
ಬೀದರ್ - ರೂ. 102.52 (75 ಪೈಸೆ ಇಳಿಕೆ)
ವಿಜಯಪುರ - ರೂ. 102.12 (40 ಪೈಸೆ ಏರಿಕೆ)
ಚಾಮರಾಜನಗರ - ರೂ. 102.07 (14 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 102 (17 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 102.94 (2 ಪೈಸೆ ಏರಿಕೆ)
ಚಿತ್ರದುರ್ಗ - ರೂ. 103.47 (74 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.13 (34 ಪೈಸೆ ಇಳಿಕೆ)
ದಾವಣಗೆರೆ - ರೂ. 104.04 (47 ಪೈಸೆ ಏರಿಕೆ)
ಧಾರವಾಡ - ರೂ. 101.71 (28 ಪೈಸೆ ಇಳಿಕೆ)
ಗದಗ - ರೂ. 102.25 (6 ಪೈಸೆ ಏರಿಕೆ)
ಕಲಬುರಗಿ - ರೂ. 102 (13 ಪೈಸೆ ಇಳಿಕೆ)
ಹಾಸನ - ರೂ. 101.88 (15 ಪೈಸೆ ಇಳಿಕೆ)
ಹಾವೇರಿ - ರೂ. 102.85 (38 ಪೈಸೆ ಏರಿಕೆ)
ಕೊಡಗು - ರೂ. 103.28 (4 ಪೈಸೆ ಇಳಿಕೆ)
ಕೋಲಾರ - ರೂ. 101.87 (00)
ಕೊಪ್ಪಳ - ರೂ. 103.13 (27 ಪೈಸೆ ಏರಿಕೆ)
ಮಂಡ್ಯ - ರೂ. 101.78 (10 ಪೈಸೆ ಇಳಿಕೆ)
ಮೈಸೂರು - ರೂ. 101.78 (39 ಪೈಸೆ ಇಳಿಕೆ)
ರಾಯಚೂರು - ರೂ. 102.29 (32 ಪೈಸೆ ಏರಿಕೆ)
ರಾಮನಗರ - ರೂ. 102.28 (3 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.43 (00)
ತುಮಕೂರು - ರೂ. 102.54 (28 ಪೈಸೆ ಏರಿಕೆ)
ಉಡುಪಿ - ರೂ. 101.97 (5 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 103.01 (00)
ಯಾದಗಿರಿ - ರೂ. 102.43 (36 ಪೈಸೆ ಇಳಿಕೆ)


ಇದನ್ನೂ ಓದಿ: ಬರೀ ಸಿನಿಮಾದಿಂದಲ್ಲ, ಇಲ್ಲಿಂದಲೂ ಸಿಕ್ಕಾಪಟ್ಟೆ ದುಡ್ಡು ಮಾಡ್ತಿರೋ ಸ್ಟಾರ್​ ನಟರಿವರು!


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.42
ಬೆಂಗಳೂರು - ರೂ. 87.94
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 87.94
ಬಳ್ಳಾರಿ - ರೂ. 88.77
ಬೀದರ್ - ರೂ. 88.44
ವಿಜಯಪುರ - ರೂ. 88.07
ಚಾಮರಾಜನಗರ - ರೂ. 88.01
ಚಿಕ್ಕಬಳ್ಳಾಪುರ - ರೂ. 87.95
ಚಿಕ್ಕಮಗಳೂರು - ರೂ. 88.67
ಚಿತ್ರದುರ್ಗ - ರೂ. 89.10
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.63
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.97
ಹಾಸನ - ರೂ. 87.67
ಹಾವೇರಿ - ರೂ. 88.74
ಕೊಡಗು - ರೂ. 88.94
ಕೋಲಾರ - ರೂ. 87.83
ಕೊಪ್ಪಳ - ರೂ. 88.99
ಮಂಡ್ಯ - ರೂ. 87.75
ಮೈಸೂರು - ರೂ. 87.75
ರಾಯಚೂರು - ರೂ. 88.25
ರಾಮನಗರ - ರೂ. 88.20
ಶಿವಮೊಗ್ಗ - 89.15
ತುಮಕೂರು - ರೂ. 88.43
ಉಡುಪಿ - ರೂ. 87.89
ಉತ್ತರ ಕನ್ನಡ - ರೂ. 88.80
ಯಾದಗಿರಿ - ರೂ. 88.36

Published by:ವಾಸುದೇವ್ ಎಂ
First published: