• Home
  • »
  • News
  • »
  • business
  • »
  • Petrol-Diesel Price Today: ವಾಹನ ಸವಾರರೇ ಅಲರ್ಟ್: ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ನೋಡಿ

Petrol-Diesel Price Today: ವಾಹನ ಸವಾರರೇ ಅಲರ್ಟ್: ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Trending Desk
  • 5-MIN READ
  • Last Updated :
  • Share this:

    ಫುಲ್‌ ಟ್ಯಾಂಕ್‌ ಪಟ್ರೋಲ್‌-ಡೀಸೆಲ್‌ (Petrol-Diesel) ಹಾಕಿಸಿಕೊಳ್ಳೋ ಮುಂಚೆ ಇಂದು ತೈಲದ ರೇಟ್‌ (Fuel Price) ಎಷ್ಟಿದೆ ಅಂತಾ ನೋಡ್ಕೋಬಿಡಿ. ಏಕೆಂದರೆ ತೈಲ ಬೆಲೆ ಕೂಡ ಕಣ್ಣಾಮುಚ್ಚಾಲೇ ಆಡುತ್ತಲೇ ಇರುತ್ತದೆ. ಬಂಗಾರ, ಬೆಳ್ಳಿಗಿಂತ ಜನ ಈಗ ತೈಲ ಬೆಲೆ ಏರಿಕೆಯಾದರೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಕಾರಣ ಇಷ್ಟೇ ಪ್ರತಿನಿತ್ಯ ಓಡಾಡಲು ಸಾರಿಗೆ ವ್ಯವಸ್ಥೆ ಬಳಸುವುದರಿಂದ. ಕಚೇರಿ, ಶಾಲೆ ಅಥವಾ ಇನ್ನೇಲ್ಲಾದರೂ ಹೋಗಬೇಕಾದರೆ ವಾಹನಗಳನ್ನು ಅವಲಂಬಿಸಬೇಕಾಗುತ್ತದೆ. ಆಫೀಸಿಗೆ ಬೈಕ್‌, ಕಾರಲ್ಲೋ ಹೋಗಬೇಕಾದರೆ ಸಂಬಳಕ್ಕಿಂತ ಗಾಡಿಗೆ ಹಾಕಿಸೋ ತೈಲ ಬೆಲೆ ಹೆಚ್ಚಾದರೆ ಉಳಿತಾಯ, ಭವಿಷ್ಯ ಹೇಗೆ ಅಲ್ವಾ! 


    ಪೆಟ್ರೋಲ್‌ ದರ
    ಮೇ 21ರ ಶನಿವಾರ ಪೆಟ್ರೋಲ್ ಮೇಲೆ 8 ರೂಪಾಯಿ, ಡೀಸೆಲ್ ಮೇಲೆ 6 ರೂಪಾಯಿ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಇದರಿಂದ ಪೆಟ್ರೋಲ್ ಬೆಲೆಯಲ್ಲಿ 9.50 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 7 ರೂಪಾಯಿ ಇಳಿಕೆಯಾಗಿತ್ತು. ಈ ಮೂಲಕ ಜನತೆಗೆ ಬಿಗ್ ರಿಲೀಫ್ ಸಿಕ್ಕಿತ್ತು. ಅಂದಿನಿಂದ ಇಂದಿನವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಂತಹ ದೊಡ್ಡದಾದ ಯಾವುದೇ ಬದಲಾವಣೆಯಾಗಿಲ್ಲ.


    ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.55 (5 ಪೈಸೆ ಏರಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 101.99 (2 ಪೈಸೆ ಇಳಿಕೆ)
    ಬೆಳಗಾವಿ - ರೂ. 102.64 (73 ಪೈಸೆ ಏರಿಕೆ)
    ಬಳ್ಳಾರಿ - ರೂ. 103.90 (83 ಪೈಸೆ ಏರಿಕೆ)
    ಬೀದರ್ - ರೂ. 102.64 (6 ಪೈಸೆ ಇಳಿಕೆ)
    ವಿಜಯಪುರ - ರೂ. 102.27 (35 ಪೈಸೆ ಏರಿಕೆ)
    ಚಾಮರಾಜನಗರ - ರೂ. 102.13 (20 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - ರೂ. 102.33 (12 ಪೈಸೆ ಏರಿಕೆ)
    ಚಿಕ್ಕಮಗಳೂರು - ರೂ. 102.33 (1.32 ಪೈಸೆ ಇಳಿಕೆ)
    ಚಿತ್ರದುರ್ಗ - ರೂ. 103.83 (1.10 ಪೈಸೆ ಏರಿಕೆ)
    ದಕ್ಷಿಣ ಕನ್ನಡ - ರೂ. 101.16 (18 ಪೈಸೆ ಇಳಿಕೆ)
    ದಾವಣಗೆರೆ - ರೂ. 103.85 (62 ಪೈಸೆ ಏರಿಕೆ)
    ಧಾರವಾಡ - ರೂ. 101.71 (33 ಪೈಸೆ ಇಳಿಕೆ)
    ಗದಗ - ರೂ. 102.38 (19 ಪೈಸೆ ಏರಿಕೆ)
    ಕಲಬುರಗಿ - ರೂ. 102.34 (15 ಪೈಸೆ ಇಳಿಕೆ)
    ಹಾಸನ - ರೂ. 102.03 (36 ಪೈಸೆ ಇಳಿಕೆ)
    ಹಾವೇರಿ - ರೂ. 102.89 (31 ಪೈಸೆ ಏರಿಕೆ)
    ಕೊಡಗು - ರೂ. 103.69 (87 ಪೈಸೆ ಇಳಿಕೆ)
    ಕೋಲಾರ - ರೂ. 102.10 (00)
    ಕೊಪ್ಪಳ - ರೂ. 103.24 (30 ಪೈಸೆ ಏರಿಕೆ)
    ಮಂಡ್ಯ - ರೂ. 101.61 (17 ಪೈಸೆ ಇಳಿಕೆ)
    ಮೈಸೂರು - ರೂ. 101.83 (9 ಪೈಸೆ ಇಳಿಕೆ)
    ರಾಯಚೂರು - ರೂ. 101.90 (6 ಪೈಸೆ ಏರಿಕೆ)
    ರಾಮನಗರ - ರೂ.102.78 (88 ಪೈಸೆ ಏರಿಕೆ)
    ಶಿವಮೊಗ್ಗ - ರೂ. 102.79 (1.1 ಪೈಸೆ ಇಳಿಕೆ)
    ತುಮಕೂರು - ರೂ. 102.62 (2 ಪೈಸೆ ಏರಿಕೆ)
    ಉಡುಪಿ - ರೂ. 101.81 (44 ಪೈಸೆ ಇಳಿಕೆ)
    ಉತ್ತರ ಕನ್ನಡ - ರೂ. 102.94 (15 ಪೈಸೆ ಏರಿಕೆ)
    ಯಾದಗಿರಿ - ರೂ. 102.76 (3 ಪೈಸೆ ಏರಿಕೆ)


    ಇದನ್ನೂ ಓದಿ: Small Saving Schemes: ಹೊಸ ವರ್ಷಕ್ಕೆ ಮಧ್ಯಮ ವರ್ಗಕ್ಕೆ ಮೋದಿ ಬಂಪರ್​ ಗಿಫ್ಟ್​? ಕೇಂದ್ರದ ಮಹತ್ವದ ನಿರ್ಧಾರ?


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.46
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.94
    ಬೆಳಗಾವಿ - ರೂ. 88.55
    ಬಳ್ಳಾರಿ - ರೂ. 89.68
    ಬೀದರ್ - ರೂ. 88.54
    ವಿಜಯಪುರ - ರೂ. 88.21
    ಚಾಮರಾಜನಗರ - ರೂ. 88.07
    ಚಿಕ್ಕಬಳ್ಳಾಪುರ - ರೂ. 88.05
    ಚಿಕ್ಕಮಗಳೂರು - ರೂ. 88.21
    ಚಿತ್ರದುರ್ಗ - ರೂ. 89.43
    ದಕ್ಷಿಣ ಕನ್ನಡ - ರೂ. 87.15
    ದಾವಣಗೆರೆ - ರೂ. 89.45
    ಧಾರವಾಡ - ರೂ. 87.71
    ಗದಗ - ರೂ. 88.31
    ಕಲಬುರಗಿ - ರೂ. 88.27
    ಹಾಸನ - ರೂ. 87.81
    ಹಾವೇರಿ - ರೂ. 88.77
    ಕೊಡಗು - ರೂ. 88.54
    ಕೋಲಾರ - ರೂ. 88.03
    ಕೊಪ್ಪಳ - ರೂ. 89.09
    ಮಂಡ್ಯ - ರೂ. 87.59
    ಮೈಸೂರು - ರೂ. 87.80
    ರಾಯಚೂರು - ರೂ. 88.69
    ರಾಮನಗರ - ರೂ. 88.29
    ಶಿವಮೊಗ್ಗ - 89.56
    ತುಮಕೂರು - ರೂ. 88.50
    ಉಡುಪಿ - ರೂ. 87.74
    ಉತ್ತರ ಕನ್ನಡ - ರೂ. 88.76
    ಯಾದಗಿರಿ - ರೂ. 88.66


    ಈಗಂತೂ ಪೆಟ್ರೋಲ್-ಡೀಸೆಲ್‌ಗೂ ಚಿನ್ನದ ಬೆಲೆ ಬಂದಿದೆ ಅಂತಾ ನಮಗೆಲ್ಲಾ ಗೊತ್ತು. ಸುಖಾಸುಮ್ಮನೆ ಬೈಕ್‌, ಕಾರಿನಲ್ಲಿ ಹೋಗುತ್ತಿದ್ದರೆ ಮನೆಯಲ್ಲಿ ಪೆಟ್ರೋಲ್‌ ಏನು ನೀರಾ? ಅಂತಾ ಕೇಳುತ್ತಾರೆ. ಇಂಧನಗಳು ಈಗ ದ್ರವ ರೂಪದ ಚಿನ್ನವಾಗಿವೆ. ಅದರ ಬೆಲೆಯನ್ನು ನೋಡಿಕೊಂಡು ಅಗತ್ಯವಿದ್ದಲ್ಲಿ ವಾಹನಗಳನ್ನು ಬಳಸುವುದು ಉತ್ತಮ. ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುತ್ತದೆ. ವಿಶ್ವದಲ್ಲಿ ತೈಲಕ್ಕೆ ಹೆಚ್ಚಿನ ಬೇಡಿಕೆ ಎನ್ನುವುದಕ್ಕಿಂತ ಅವಶ್ಯಕತೆ ಇದೆ. ಪ್ರತಿದಿನ ಮಿಲಿಯನ್‌ಗಟ್ಟಲೇ ವಾಹನಗಳು ರಸ್ತೆಗಿಳಿಯುತ್ತವೆ. ಹೀಗಾಗಿ ತೈಲ ಪೂರೈಕೆ ಜಗತ್ತಿನಾದ್ಯಂತ ಪ್ರತಿ ಪುಟ್ಟ ಹಳ್ಳಿಗೂ ಬೇಕಿರುವಂತದ್ದು.


    ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.

    Published by:Kavya V
    First published: