• Home
  • »
  • News
  • »
  • business
  • »
  • Petrol-Diesel Price Today: ವಾಹನ ಸವಾರರಿಗೆ ಶಾಕ್: ಪೆಟ್ರೋಲ್ ಬೆಲೆ ಏರಿಕೆ, ಇಲ್ಲಿದೆ ಡಿಟೇಲ್ಸ್

Petrol-Diesel Price Today: ವಾಹನ ಸವಾರರಿಗೆ ಶಾಕ್: ಪೆಟ್ರೋಲ್ ಬೆಲೆ ಏರಿಕೆ, ಇಲ್ಲಿದೆ ಡಿಟೇಲ್ಸ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Trending Desk
  • Last Updated :
  • Bangalore [Bangalore], India
  • Share this:

    ಈಗಂತೂ ಪೆಟ್ರೋಲ್-ಡೀಸೆಲ್‌ಗೂ (Petrol-Diesel Price) ಚಿನ್ನದ ಬೆಲೆ ಬಂದಿದೆ ಅಂತಾ ನಮಗೆಲ್ಲಾ ಗೊತ್ತು. ಸುಖಾಸುಮ್ಮನೆ ಬೈಕ್‌, ಕಾರಿನಲ್ಲಿ ಹೋಗುತ್ತಿದ್ದರೆ ಮನೆಯಲ್ಲಿ ಪೆಟ್ರೋಲ್‌ ಏನು ನೀರಾ? ಅಂತಾ ಕೇಳುತ್ತಾರೆ. ಇಂಧನಗಳು (Fuel Price) ಈಗ ದ್ರವ ರೂಪದ ಚಿನ್ನವಾಗಿವೆ. ಅದರ ಬೆಲೆಯನ್ನು ನೋಡಿಕೊಂಡು ಅಗತ್ಯವಿದ್ದಲ್ಲಿ ವಾಹನಗಳನ್ನು ಬಳಸುವುದು ಉತ್ತಮ. ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುತ್ತದೆ. ವಿಶ್ವದಲ್ಲಿ ತೈಲಕ್ಕೆ ಹೆಚ್ಚಿನ ಬೇಡಿಕೆ ಎನ್ನುವುದಕ್ಕಿಂತ ಅವಶ್ಯಕತೆ ಇದೆ. ಪ್ರತಿದಿನ ಮಿಲಿಯನ್‌ಗಟ್ಟಲೇ ವಾಹನಗಳು ರಸ್ತೆಗಿಳಿಯುತ್ತವೆ. ಹೀಗಾಗಿ ತೈಲ ಪೂರೈಕೆ ಜಗತ್ತಿನಾದ್ಯಂತ ಪ್ರತಿ ಪುಟ್ಟ ಹಳ್ಳಿಗೂ ಬೇಕಿರುವಂತದ್ದು. ಈಗಾಗ್ಲೇ ನೂರರ ಗಡಿ ದಾಟಿರುವ ಪೆಟ್ರೋಲ್‌ ದರ (Petrol Price) ಇಂದಿನ ಬೆಲೆಯನ್ನು ತಿಳಿಯೋಣ ಬನ್ನಿ.


    ದೇಶದಲ್ಲಿ ಹಣದುಬ್ಬರ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ನಡುವೆ ಮೇ 21ರಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಮೂಲಕ ಜನತೆಗೆ ಬಿಗ್ ರಿಲೀಫ್ ನೀಡಿತ್ತು. ಅಂದಿನಿಂದ ಇಂದಿನವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಂತಹ ದೊಡ್ಡದಾದ ಯಾವುದೇ ಬದಲಾವಣೆಯಾಗಿಲ್ಲ.


    ಇನ್ನು, ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.50 (00)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.01 (24 ಪೈಸೆ ಇಳಿಕೆ)
    ಬೆಳಗಾವಿ - ರೂ. 101.91 (82 ಪೈಸೆ ಇಳಿಕೆ)
    ಬಳ್ಳಾರಿ - ರೂ. 103.07 (14 ಪೈಸೆ ಇಳಿಕೆ)
    ಬೀದರ್ - ರೂ. 102.70 (12 ಪೈಸೆ ಏರಿಕೆ)
    ವಿಜಯಪುರ - ರೂ. 102.92 (92 ಪೈಸೆ ಏರಿಕೆ)
    ಚಾಮರಾಜನಗರ - ರೂ. 101.93 (20 ಪೈಸೆ ಇಳಿಕೆ)
    ಚಿಕ್ಕಬಳ್ಳಾಪುರ - ರೂ. 102.40 (40 ಪೈಸೆ ಏರಿಕೆ)
    ಚಿಕ್ಕಮಗಳೂರು - ರೂ. 103.65 (59 ಪೈಸೆ ಏರಿಕೆ)
    ಚಿತ್ರದುರ್ಗ - ರೂ. 102.73 (38 ಪೈಸೆ ಇಳಿಕೆ)
    ದಕ್ಷಿಣ ಕನ್ನಡ - ರೂ. 101.34 (21 ಪೈಸೆ ಏರಿಕೆ)
    ದಾವಣಗೆರೆ - ರೂ. 103.23 (34 ಪೈಸೆ ಇಳಿಕೆ)
    ಧಾರವಾಡ - ರೂ. 102.04 (33 ಪೈಸೆ ಏರಿಕೆ)
    ಗದಗ - ರೂ. 102.19 (56 ಪೈಸೆ ಏರಿಕೆ)
    ಕಲಬುರಗಿ - ರೂ. 102.49 (78 ಪೈಸೆ ಏರಿಕೆ)
    ಹಾಸನ - ರೂ. 102.30 (36 ಪೈಸೆ ಏರಿಕೆ)
    ಹಾವೇರಿ - ರೂ. 102.58 (28 ಪೈಸೆ ಏರಿಕೆ)
    ಕೊಡಗು - ರೂ. 103.56 (30 ಪೈಸೆ ಏರಿಕೆ)
    ಕೋಲಾರ - ರೂ. 102.10 (23 ಪೈಸೆ ಏರಿಕೆ)
    ಕೊಪ್ಪಳ - ರೂ. 102.94 (8 ಪೈಸೆ ಏರಿಕೆ)
    ಮಂಡ್ಯ - ರೂ. 101.78 (4 ಪೈಸೆ ಏರಿಕೆ)
    ಮೈಸೂರು - ರೂ. 101.92 (9 ಪೈಸೆ ಏರಿಕೆ)
    ರಾಯಚೂರು - ರೂ. 101.90 (6 ಪೈಸೆ ಏರಿಕೆ)
    ರಾಮನಗರ - ರೂ.102.28 (3 ಪೈಸೆ ಏರಿಕೆ)
    ಶಿವಮೊಗ್ಗ - ರೂ. 103.78 (62 ಪೈಸೆ ಏರಿಕೆ)
    ತುಮಕೂರು - ರೂ. 102.64 (00)
    ಉಡುಪಿ - ರೂ. 102.25 (42 ಪೈಸೆ ಏರಿಕೆ)
    ಉತ್ತರ ಕನ್ನಡ - ರೂ. 102.79 (78 ಪೈಸೆ ಏರಿಕೆ)
    ಯಾದಗಿರಿ - ರೂ. 102.79 (00)


    ಇದನ್ನೂ ಓದಿ: Business Tips: 2023ರಲ್ಲಿ ಯಶಸ್ವಿ ವ್ಯವಹಾರ ನಡೆಸಲು ಈ ಐದು ಸಲಹೆಗಳನ್ನು ಪಾಲಿಸಿ


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.42
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.95
    ಬೆಳಗಾವಿ - ರೂ. 87.90
    ಬಳ್ಳಾರಿ - ರೂ. 88.95
    ಬೀದರ್ - ರೂ. 88.60
    ವಿಜಯಪುರ - ರೂ. 87.90
    ಚಾಮರಾಜನಗರ - ರೂ. 87.88
    ಚಿಕ್ಕಬಳ್ಳಾಪುರ - ರೂ. 87.95
    ಚಿಕ್ಕಮಗಳೂರು - ರೂ. 89.33
    ಚಿತ್ರದುರ್ಗ - ರೂ. 88.44
    ದಕ್ಷಿಣ ಕನ್ನಡ - ರೂ. 87.31
    ದಾವಣಗೆರೆ - ರೂ. 88.89
    ಧಾರವಾಡ - ರೂ. 88.01
    ಗದಗ - ರೂ. 88.14
    ಕಲಬುರಗಿ - ರೂ. 88.41
    ಹಾಸನ - ರೂ. 88.13
    ಹಾವೇರಿ - ರೂ. 88.49
    ಕೊಡಗು - ರೂ. 89.20
    ಕೋಲಾರ - ರೂ. 88.03
    ಕೊಪ್ಪಳ - ರೂ. 88.83
    ಮಂಡ್ಯ - ರೂ. 87.75
    ಮೈಸೂರು - ರೂ. 87.87
    ರಾಯಚೂರು - ರೂ. 87.89
    ರಾಮನಗರ - ರೂ. 88.20
    ಶಿವಮೊಗ್ಗ - 89.45
    ತುಮಕೂರು - ರೂ. 88.52
    ಉಡುಪಿ - ರೂ. 88.14
    ಉತ್ತರ ಕನ್ನಡ - ರೂ. 88.63
    ಯಾದಗಿರಿ - ರೂ. 88.68


    ಪೆಟ್ರೋಲ್‌-ಡೀಸೆಲ್‌ ದರಗಳು ಸರ್ಕಾರದ ಆದೇಶದ ಹೊರತಾಗಿ ಹೆಚ್ಚಿನ ಏರಿಕೆ-ಇಳಿಕೆ ಕಾಣುವುದಿಲ್ಲ, ಬದಲಿಗೆ ಸಣ್ಣ ವ್ಯತ್ಯಾಸಗಳು ನಡೆಯುತ್ತಿರುತ್ತವೆ. ಅಂತೆಯೇ ಇಂದೂ ಸಹ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಮಾಮೂಲಿನಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸ ಕಂಡು ಬಂದಿದೆ.


    ಕೆಲ ಸಮಯದ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಗಗನಕ್ಕೇರಿದ್ದವು. ಆ ಸಮಯದಲ್ಲಿ ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು. ಆದರೆ ಪರಿಸ್ಥಿತಿ ಇಂದು ಹಾಗಿಲ್ಲ. ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಅಲ್ಪ ಸ್ವಲ್ಪ ವ್ಯತ್ಯಾಸಗಳೊಂದಿಗೆ ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಇಂದು ಗಮನಿಸಬಹುದು.

    Published by:Kavya V
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು