• Home
 • »
 • News
 • »
 • business
 • »
 • Petrol Diesel Price Today: ವಾರಾಂತ್ಯದಲ್ಲಿ ವಾಹನ ರಸ್ತೆಗಿಳಿಸುವ ಮುನ್ನ ಗಮನಿಸಿ, ಹೀಗಿದೆ ತೈಲ ದರ

Petrol Diesel Price Today: ವಾರಾಂತ್ಯದಲ್ಲಿ ವಾಹನ ರಸ್ತೆಗಿಳಿಸುವ ಮುನ್ನ ಗಮನಿಸಿ, ಹೀಗಿದೆ ತೈಲ ದರ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ದೇಶದಲ್ಲಿ ಹಣದುಬ್ಬರ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ನಡುವೆ ಮೇ 21ರಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಮೂಲಕ ಜನತೆಗೆ ಬಿಗ್ ರಿಲೀಫ್ ನೀಡಿತ್ತು.

 • News18 Kannada
 • Last Updated :
 • Karnataka, India
 • Share this:

  ವಾರಾಂತ್ಯದಲ್ಲಿ ವಾಹನಗಳನ್ನು ರಸ್ತೆಗಿಳಿಸುತ್ತಿದ್ದೀರಾ? ಹಾಗಾದರೆ ಒಮ್ಮೆ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಗಮನಿಸಿಬಿಡುವುದು ಒಳಿತು. ಈಗಂತೂ ಪೆಟ್ರೋಲ್-ಡೀಸೆಲ್‌ಗೂ (Petrol -Diesel)ಚಿನ್ನದ ಬೆಲೆ ಬಂದಿದೆ ಅಂತಾ ನಮಗೆಲ್ಲಾ ಗೊತ್ತು. ಸುಖಾಸುಮ್ಮನೆ ಬೈಕ್‌, ಕಾರಿನಲ್ಲಿ ಹೋಗುತ್ತಿದ್ದರೆ ಮನೆಯಲ್ಲಿ ಪೆಟ್ರೋಲ್‌ ಏನು ನೀರಾ? ಅಂತಾ ಕೇಳುತ್ತಾರೆ. ಇಂಧನಗಳು ಈಗ ದ್ರವ ರೂಪದ ಚಿನ್ನವಾಗಿವೆ. ಅದರ ಬೆಲೆಯನ್ನು ನೋಡಿಕೊಂಡು, ಅಗತ್ಯವಿದ್ದಲ್ಲಿ ವಾಹನಗಳನ್ನು ಬಳಸುವುದು ಉತ್ತಮ. ಬೇಡಿಕೆ ಹೆಚ್ಚಾದಲ್ಲಿ ಬೆಲೆಯೂ ಹೆಚ್ಚಾಗುತ್ತದೆ. ವಿಶ್ವದಲ್ಲಿ ತೈಲಕ್ಕೆ ಹೆಚ್ಚಿನ ಬೇಡಿಕೆ ಎನ್ನುವುದಕ್ಕಿಂತ ಅವಶ್ಯಕತೆ ಇದೆ. ಪ್ರತಿದಿನ ಮಿಲಿಯನ್‌ಗಟ್ಟಲೇ ವಾಹನಗಳು ರಸ್ತೆಗಿಳಿಯುತ್ತವೆ. ಹೀಗಾಗಿ ತೈಲ ಪೂರೈಕೆ ಜಗತ್ತಿನಾದ್ಯಂತ ಪ್ರತಿ ಪುಟ್ಟ ಹಳ್ಳಿಗೂ ಬೇಕಿರುವಂತದ್ದು. ಈಗಾಗ್ಲೇ ನೂರರ ಗಡಿ ದಾಟಿರುವ ಪೆಟ್ರೋಲ್‌ ದರ ದ ಇಂದಿನ ಬೆಲೆಯನ್ನು (Fuel Price) ತಿಳಿಯೋಣ ಬನ್ನಿ.


  ದೇಶದಲ್ಲಿ ಹಣದುಬ್ಬರ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಈ ನಡುವೆ ಮೇ 21ರಂದು ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಮೂಲಕ ಜನತೆಗೆ ಬಿಗ್ ರಿಲೀಫ್ ನೀಡಿತ್ತು. ಅಂದಿನಿಂದ ಇಂದಿನವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಅಂತಹ ದೊಡ್ಡದಾದ ಯಾವುದೇ ಬದಲಾವಣೆಯಾಗಿಲ್ಲ.


  ಗಗನಕ್ಕೇರಿದ್ದ ತೈಲ ದರ
  ಇತ್ತೀಚಿಗಷ್ಟೇ ಅಂದರೆ ಕೆಲ ಸಮಯದ ಹಿಂದೆ ಕೇಂದ್ರ ಸರ್ಕಾರವು ಸುಂಕವನ್ನು ಕೈಬಿಟ್ಟಿದ್ದರಿಂದ ಇಂದು ಇಂಧನ ಬೆಲೆಯಲ್ಲಿ ಅಷ್ಟೊಂದು ಏರಿಕೆ ಕಂಡುಬರುತ್ತಿಲ್ಲ. ಅದಕ್ಕೂ ಹಿಂದೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಗಗನಕ್ಕೇರಿತ್ತು. ವಾಹನ ಸವಾರರರು ರಸ್ತೆ ಮೇಲೆ ವಾಹನ ಇಳಿಸಲೂ ಸಹ ಪರದಾಡುವಂತಾಗಿತ್ತು.


  ಬೆಂಗಳೂರಲ್ಲಿ ಇಷ್ಟಿದೆ ಪೆಟ್ರೋಲ್-ಡೀಸೆಲ್ ದರ
  ಇಂದು ಬೆಂಗಳೂರು ನಗರದಲ್ಲಿ ಪೆಟ್ರೋಲ್ ದರ ಒಂದು ಲೀಟರ್​ಗೆ  ₹ 101.94 ಇದ್ದು ಡೀಸೆಲ್ ದರ ಬೆಂಗಳೂರು ನಗರ ಭಾಗದಲ್ಲಿ ₹ 87.89 ರಷ್ಟಿದೆ.


  ಇಲ್ಲಿದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್ ದರ


  ಬಾಗಲಕೋಟೆ  ₹ 102.50


  ಬೆಂಗಳೂರು ನಗರ ₹ 101.94


  ಬೆಂಗಳೂರು ಗ್ರಾಮೀಣ ₹ 102.25


  ಬೆಳಗಾವಿ ₹ 102.73


  ಬಳ್ಳಾರಿ  ₹ 103.21


  ಬೀದರ್  ₹ 102.58


  ವಿಜಯಪುರ ₹ 102


  ಚಾಮರಾಜನಗರ ₹ 102.13


  ಚಿಕ್ಕಬಳ್ಳಾಪುರ ₹ 102.40


  ಚಿಕ್ಕಬಳ್ಳಾಪುರ ₹ 103.06


  ಚಿತ್ರದುರ್ಗ ₹ 103.11


  ದಕ್ಷಿಣ ಕನ್ನಡ ₹ 101.13


  ದಾವಣಗೆರೆ ₹ 103.57


  ಧಾರವಾರ ₹ 101.71


  ಗದಗ ₹ 102.75


  ಕಲಬುರಗಿ ₹ 101.71


  ಹಾಸನ ₹ 102.03


  ಹಾವೇರಿ ₹ 102.30


  ಕೊಡಗು ₹ 103.26


  ಕೋಲಾರ ₹ 101.87


  ಕೊಪ್ಪಳ ₹ 102.86


  ಮಂಡ್ಯ ₹ 101.74


  ಮೈಸೂರು ₹ 101.83


  ರಾಯಚೂರು ₹ 101.84


  ರಾಮನಗರ ₹ 102.25


  ಶಿವಮೊಗ್ಗ ₹ 103.16


  ತುಮಕೂರು ₹ 102.64


  ಉಡುಪಿ ₹ 101.83


  ಉತ್ತರ ಕನ್ನಡ ₹ 102.01


  ಯಾದಗಿರಿ ₹ 102.79


  ಇದನ್ನೂ ಓದಿ: Money Mantra: ಈ ರಾಶಿಯವರಿಗಿಂದು ಆಫೀಸ್​ನಲ್ಲಿ ಕಾದಿದೆ ಗುಡ್ ನ್ಯೂಸ್​​, ಬೇಡ ಬೇಡ ಅಂದ್ರೂ ಪ್ರಮೋಷನ್​ ಸಿಗುತ್ತಂತೆ!


  ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳನ್ನೂ ಇಲ್ಲಿ ನೋಡಿಬಿಡಿ


  ಬಾಗಲಕೋಟೆ ₹ 88.42


  ಬೆಂಗಳೂರು ನಗರ ₹ 87.89


  ಬೆಂಗಳೂರು ಗ್ರಾಮೀಣ ₹ 88.17


  ಬೆಳಗಾವಿ ₹ 88.63


  ಬಳ್ಳಾರಿ ₹ 89.08


  ಬೀದರ್ ₹ 88.50


  ವಿಜಯಪುರ ₹ 87.97


  ಚಾಮರಾಜನಗರ ₹ 88.07


  ಚಿಕ್ಕಬಳ್ಳಾಪುರ ₹ 88.31


  ಚಿಕ್ಕಮಗಳೂರು ₹ 88.87


  ಚಿತ್ರದುರ್ಗ ₹ 88.79


  ದಕ್ಷಿಣ ಕನ್ನಡ ₹ 87.13


  ದಾವಣಗೆರೆ ₹ 89.20


  ಧಾರವಾಡ ₹ 87.71


  ಗದಗ ₹ 88.65


  ಕಲಬುರಗಿ ₹ 87.71


  ಹಾಸನ ₹ 87.81


  ಹಾವೇರಿ ₹ 88.24


  ಕೊಡಗು ₹ 88.92


  ಕೋಲಾರ ₹ 87.83


  ಕೊಪ್ಪಳ ₹ 88.75


  ಮಂಡ್ಯ ₹ 87.71


  ಮೈಸೂರು ₹ 87.80


  ರಾಯಚೂರು ₹ 87.84


  ರಾಮನಗರ ₹ 88.17


  ಶಿವಮೊಗ್ಗ ₹ 88.96


  ಇದನ್ನೂ ಓದಿ: Innovation: ಕೈಗೆಟಕುವ ಬೆಲೆಯಲ್ಲಿ ಕೃಷಿಯಂತ್ರ ತಯಾರಿಸಿದ ಮೆಕ್ಯಾನಿಕ್​


  ತುಮಕೂರು ₹ 88.52


  ಉಡುಪಿ ₹ 87.76


  ಉತ್ತರ ಕನ್ನಡ ₹ 87.98


  ಯಾದಗಿರಿ  ₹ 88.68

  Published by:ಗುರುಗಣೇಶ ಡಬ್ಗುಳಿ
  First published: