• Home
  • »
  • News
  • »
  • business
  • »
  • Petrol-Diesel Price Today: ವಿಜಯನಗರ ಜಿಲ್ಲೆಯಲ್ಲಿ ಪೆಟ್ರೋಲ್ ದರ 1 ರೂ. 28 ಪೈಸೆ ಏರಿಕೆ, ಬೆಂಗಳೂರಲ್ಲಿ ಎಷ್ಟಾಗಿದೆ?

Petrol-Diesel Price Today: ವಿಜಯನಗರ ಜಿಲ್ಲೆಯಲ್ಲಿ ಪೆಟ್ರೋಲ್ ದರ 1 ರೂ. 28 ಪೈಸೆ ಏರಿಕೆ, ಬೆಂಗಳೂರಲ್ಲಿ ಎಷ್ಟಾಗಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿಜಯನಗರ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ನಿನ್ನೆಗೆ ಹೋಲಿಸಿದರೆ 1 ರೂ. 28 ಪೈಸೆಗಳಷ್ಟು ಏರಿಕೆಯಾಗಿದೆ. ಎಂದಿನಂತೆ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಸ್ಥಿರವಾದ ಗತಿಯಲ್ಲೇ ಸಾಗುತ್ತಿವೆ.

  • Trending Desk
  • Last Updated :
  • Karnataka, India
  • Share this:

    ಇಂದು ಇಂಧನಗಳಾದ ಪೆಟ್ರೋಲ್ (Petrol) ಆಗಲಿ ಅಥವಾ ಡೀಸೆಲ್ (Diesel) ಆಗಲಿ ಮಾನವನ ಬದುಕಿನ ಅವಿಭಾಜ್ಯ ಅಂಗಗಳಂತೆಯೇ ಗುರುತಿಸಲ್ಪಡುತ್ತಿವೆ. ಏಕೆಂದರೆ ಪ್ರತಿನಿತ್ಯ ಬೆಳಗಾದರೆ ಸಾಕು ಕೋಟ್ಯಂತರ ವಾಹನಗಳು (Vehicles) ನಿತ್ಯದ ಕೆಲಸಕ್ಕಾಗಿ ರಸ್ತೆಗಿಳಿಯುತ್ತವೆ ಹಾಗೂ ಅವುಗಳ ಸಂಚಾರಕ್ಕೆ ಇಂಧನ (Fuel) ಅವಶ್ಯಕವಾಗಿ ಬೇಕಾಗಿರುತ್ತದೆ. ಇದರಿಂದಾಗಿಯೇ ಪೆಟ್ರೋಲ್/ಡೀಸೆಲ್ ಅನ್ನು ದ್ರವರೂಪದ ಬಂಗಾರ ಎಂದೇ ಪರಿಗಣಿಸಲಾಗುತ್ತದೆ.


     ಕರ್ನಾಟಕದಲ್ಲೂ ಸಹ ಪ್ರತಿನಿತ್ಯ ತೈಲದ ಬೆಲೆಯಲ್ಲಿ ವ್ಯತ್ಯಾಸಗಳಾಗುತ್ತಲೇ ಇರುತ್ತದೆ. ಇಂದು ಸಹ ರಾಜ್ಯದ ಎಲ್ಲೆಡೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಕೆಲ ಚಿಕ್ಕ ಪುಟ್ಟ ಪೈಸೆಗಳನ್ನು ಕಾಣಬಹುದಾಗಿದ್ದು ನೂತನವಾಗಿ ರೂಪಗೊಂಡಿರುವ ವಿಜಯನಗರ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ನಿನ್ನೆಗೆ ಹೋಲಿಸಿದರೆ 1 ರೂ. 28 ಪೈಸೆಗಳಷ್ಟು ಏರಿಕೆಯಾಗಿದೆ. ಎಂದಿನಂತೆ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಸ್ಥಿರವಾದ ಗತಿಯಲ್ಲೇ ಸಾಗುತ್ತಿವೆ. ಮಿಕ್ಕಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲ ಪೈಸೆಗಳಷ್ಟು ವ್ಯತ್ಯಾಸ ಸಾಮಾನ್ಯವಾಗಿದೆ.


    ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.27 (43 ಪೈಸೆ ಇಳಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.07 (49 ಪೈಸೆ ಏರಿಕೆ)
    ಬೆಳಗಾವಿ - ರೂ. 102.20 (49 ಪೈಸೆ ಇಳಿಕೆ)
    ಬಳ್ಳಾರಿ - ರೂ. 103.61 (29 ಪೈಸೆ ಇಳಿಕೆ)
    ಬೀದರ್ - ರೂ. 102.28 (30 ಪೈಸೆ ಇಳಿಕೆ)
    ವಿಜಯಪುರ - ರೂ. 101.72 (52 ಪೈಸೆ ಇಳಿಕೆ)
    ಚಾಮರಾಜನಗರ - ರೂ. 102.10 (00)
    ಚಿಕ್ಕಬಳ್ಳಾಪುರ - ರೂ. 101.94 (45 ಪೈಸೆ ಇಳಿಕೆ)
    ಚಿಕ್ಕಮಗಳೂರು - ರೂ. 102.66 (80 ಪೈಸೆ ಇಳಿಕೆ)
    ಚಿತ್ರದುರ್ಗ - ರೂ. 103.90 (00)
    ದಕ್ಷಿಣ ಕನ್ನಡ - ರೂ. 101.75 (62 ಪೈಸೆ ಏರಿಕೆ)
    ದಾವಣಗೆರೆ - ರೂ. 103.73 (18 ಪೈಸೆ ಇಳಿಕೆ)
    ಧಾರವಾಡ - ರೂ. 101.71 (00)
    ಗದಗ - ರೂ. 102.38 (31 ಪೈಸೆ ಇಳಿಕೆ)
    ಕಲಬುರಗಿ - ರೂ. 101.71 (00)
    ಹಾಸನ - ರೂ. 102.26 (19 ಪೈಸೆ ಏರಿಕೆ)
    ಹಾವೇರಿ - ರೂ. 102.38 (20 ಪೈಸೆ ಇಳಿಕೆ)
    ಕೊಡಗು - ರೂ. 103.47 (21 ಪೈಸೆ ಏರಿಕೆ)
    ಕೋಲಾರ - ರೂ. 101.81 (17 ಪೈಸೆ ಏರಿಕೆ)
    ಕೊಪ್ಪಳ - ರೂ. 103.05 (3 ಪೈಸೆ ಏರಿಕೆ)
    ಮಂಡ್ಯ - ರೂ. 101.97 (23 ಪೈಸೆ ಏರಿಕೆ)
    ಮೈಸೂರು - ರೂ. 101.50 (00)
    ರಾಯಚೂರು - ರೂ. 101.84 (99 ಪೈಸೆ ಇಳಿಕೆ)
    ರಾಮನಗರ - ರೂ. 102.40 (26 ಪೈಸೆ ಏರಿಕೆ)
    ಶಿವಮೊಗ್ಗ - ರೂ. 103.58 (00)
    ತುಮಕೂರು - ರೂ. 102.60 (21 ಪೈಸೆ ಇಳಿಕೆ)
    ಉಡುಪಿ - ರೂ. 101.38 (15 ಪೈಸೆ ಏರಿಕೆ)
    ಉತ್ತರ ಕನ್ನಡ - ರೂ. 103 (68 ಪೈಸೆ ಏರಿಕೆ)
    ವಿಜಯನಗರ - ರೂ. 104.17 (1 ರೂ. 28 ಪೈಸೆ ಏರಿಕೆ)
    ಯಾದಗಿರಿ - ರೂ. 102.43 (00)


    ಇದನ್ನೂ ಓದಿ: Maruti Suzuki: ಮಾರುತಿ ಕಾರುಗಳ ಮಾಲೀಕರೇ ಅಲರ್ಟ್​, ನಿಮ್ಮ ಕಾರುಗಳನ್ನು ಕಂಪನಿ ಹಿಂಪಡೆಯಲಿದೆ!


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.21
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 88.01
    ಬೆಳಗಾವಿ - ರೂ. 88.15
    ಬಳ್ಳಾರಿ - ರೂ. 89.42
    ಬೀದರ್ - ರೂ. 88.23
    ವಿಜಯಪುರ - ರೂ. 87.71
    ಚಾಮರಾಜನಗರ - ರೂ. 88.04
    ಚಿಕ್ಕಬಳ್ಳಾಪುರ - ರೂ. 87.89
    ಚಿಕ್ಕಮಗಳೂರು - ರೂ. 88.38
    ಚಿತ್ರದುರ್ಗ - ರೂ. 89.48
    ದಕ್ಷಿಣ ಕನ್ನಡ - ರೂ. 87.68
    ದಾವಣಗೆರೆ - ರೂ. 89.33
    ಧಾರವಾಡ - ರೂ. 87.71
    ಗದಗ - ರೂ. 88.31
    ಕಲಬುರಗಿ - ರೂ. 87.71
    ಹಾಸನ - ರೂ. 88
    ಹಾವೇರಿ - ರೂ. 88.31
    ಕೊಡಗು - ರೂ. 89.10
    ಕೋಲಾರ - ರೂ. 87.77
    ಕೊಪ್ಪಳ - ರೂ. 88.91
    ಮಂಡ್ಯ - ರೂ. 87.92
    ಮೈಸೂರು - ರೂ. 87.49
    ರಾಯಚೂರು - ರೂ. 87.84
    ರಾಮನಗರ - ರೂ. 88.31
    ಶಿವಮೊಗ್ಗ - 89.24
    ತುಮಕೂರು - ರೂ. 88.49
    ಉಡುಪಿ - ರೂ. 87.36
    ಉತ್ತರ ಕನ್ನಡ - ರೂ. 88.82
    ವಿಜಯನಗರ - ರೂ. 89.72
    ಯಾದಗಿರಿ - ರೂ. 88.36


    ಈ ಇಂಧನ ಶಕ್ತಿಗಳಾದ ಪೆಟ್ರೋಲ್ ಹಾಗೂ ಡೀಸೆಲ್ ಗಳು ಹಾಗೇ ಸರಳವಾಗಿ ದೊರೆಯುವ ವಸ್ತುಗಳಲ್ಲ. ಇದು ಕಚ್ಚಾ ತೈಲದ ರೂಪದಲ್ಲಿದ್ದು ಸಮುದ್ರದಾಳ ಅಥವಾ ಭೂಗತವಾಗಿ ಲಭಿಸುತ್ತದೆ. ಅಲ್ಲಿಂದ ಇದನ್ನು ಹೊರತೆಗೆದು ಸಂಸ್ಕರಿಸಿ ಅದರಿಂದ ಬೇಕಾದ ಇಂಧನಗಳನ್ನು ಉತ್ಪಾದಿಸಲಾಗುತ್ತದೆ. ಈ ಇಂಧನ ಶಕ್ತಿಗಳ ಅವಶ್ಯಕತೆ ನಿತ್ಯ ಜಾಗತಿಕವಾಗಿ ಎಲ್ಲೆಡೆ ಇರುವುದರಿಂದ ಇದರ ಬೆಲೆಗಳು ಸಹ ಡೈನಮಿಕ್ ಆಗಿರುತ್ತವೆ ಹಾಗೂ ಹಲವು ಜಾಗತಿಕವಾಗಿ ಏರ್ಪಡುವ ಕಾರಣಗಳಿಂದಾಗಿ ಪ್ರತಿನಿತ್ಯ ಪ್ರಭಾವಿಸಲ್ಪಡುತ್ತಿರುತ್ತದೆ.




    ಹೀಗೆ ಕೆಲ ತೈಲ ನಿಕ್ಷೇಪಗಳಿರುವ ದೇಶಗಳಿಂದ ಹೊರತೆಗೆಯಲಾಗುವ ಕಚ್ಚಾ ತೈಲವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ ಮತ್ತು ಬ್ಯಾರಲ್ ಒಂದಕ್ಕೆ ಇಂತಿಷ್ಟು ಡಾಲರ್ ಕೊಟ್ಟು ಅದನ್ನು ಖರೀದಿ ಮಾಡಲಾಗುತ್ತಿರುತ್ತದೆ.


    ಭಾರತದಲ್ಲಿ ಯಾವುದೇ ತೈಲದ ನಿಕ್ಷೇಪವಿರದ ಕಾರಣ ಭಾರತ ತನ್ನ ದಿನನಿತ್ಯದ ತೈಲದ ಅವಶ್ಯಕತೆಗಾಗಿ ಕಚ್ಚಾ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಇತ್ತೀಚಿಗಷ್ಟೇ ರಷ್ಯಾದಿಂದಲೂ ಸಹ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗೆ ಆಮದು ಮಾಡಿಕೊಂಡ ಕಚ್ಚಾ ತೈಲವನ್ನು ತದನಂತರ ಇಲ್ಲಿ ಸಂಸ್ಕರಿಸಿ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ದೇಶಾದ್ಯಂತ ವಿತರಿಸಲಾಗುತ್ತದೆ.

    Published by:Kavya V
    First published: