• Home
  • »
  • News
  • »
  • business
  • »
  • Petrol-Diesel Price Today: ಇಂದು ರಾಜ್ಯದ 14 ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಏರಿಕೆ: ಸಂಪೂರ್ಣ ಮಾಹಿತಿ ಇಲ್ಲಿದೆ

Petrol-Diesel Price Today: ಇಂದು ರಾಜ್ಯದ 14 ಜಿಲ್ಲೆಗಳಲ್ಲಿ ಪೆಟ್ರೋಲ್ ದರ ಏರಿಕೆ: ಸಂಪೂರ್ಣ ಮಾಹಿತಿ ಇಲ್ಲಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

  • Trending Desk
  • Last Updated :
  • Bangalore [Bangalore], India
  • Share this:

    ಪೆಟ್ರೋಲ್-ಡೀಸೆಲ್ ಬೆಲೆಗಳಿಗೆ (Petrol-Diesel Price) ಸಂಬಂಧಿಸಿದಂತೆ ಇಂದು ರಾಜ್ಯದಲ್ಲಿ ಯಾವುದೇ ರೀತಿಯ ಗಮನಾರ್ಹ ಬದಲಾವಣೆಯಾಗಿಲ್ಲ. ಆದಾಗ್ಯೂ ಎಂದಿನಂತೆ ಕೆಲ ಪೈಸೆಗಳಷ್ಟು ಏರಿಳಿತ ಸಹಜವಾಗುದೆ. ಇತ್ತೀಚಿನ ಕೆಲ ಸಮಯದಿಂದ ಇಂಧನ ಬೆಲೆಗಳು (Fuel Prices India) ನಿತ್ಯ ಪರಿಷ್ಕರಿಸಲ್ಪಡುವುದರಿಂದ ಜನರಿಗೆ ಅದರ ನಿತ್ಯದ ಅಪ್ಡೇಟ್ ಸಾಕಷ್ಟು ಉಪಯುಕ್ತವಾಗಿರುತ್ತದೆ ಎಂಬುದು ನಮ್ಮ ಉದ್ದೇಶವಾಗಿದೆ.


     ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


    ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


    ಬಾಗಲಕೋಟೆ - ರೂ. 102.50 (5 ಪೈಸೆ ಇಳಿಕೆ)
    ಬೆಂಗಳೂರು - ರೂ. 101.94 (00)
    ಬೆಂಗಳೂರು ಗ್ರಾಮಾಂತರ - ರೂ. 102.01 (8 ಪೈಸೆ ಇಳಿಕೆ)
    ಬೆಳಗಾವಿ - ರೂ. 102.47 (17 ಪೈಸೆ ಇಳಿಕೆ)
    ಬಳ್ಳಾರಿ - ರೂ. 103.90 (17 ಪೈಸೆ ಏರಿಕೆ)
    ಬೀದರ್ - ರೂ. 102.52 (24 ಪೈಸೆ ಏರಿಕೆ)
    ವಿಜಯಪುರ - ರೂ. 102.20 (48 ಪೈಸೆ ಏರಿಕೆ)
    ಚಾಮರಾಜನಗರ - ರೂ. 102.07 (1 ಪೈಸೆ ಏರಿಕೆ)
    ಚಿಕ್ಕಬಳ್ಳಾಪುರ - ರೂ. 101.94 (00)
    ಚಿಕ್ಕಮಗಳೂರು - ರೂ. 103.46 (53 ಪೈಸೆ ಏರಿಕೆ)
    ಚಿತ್ರದುರ್ಗ - ರೂ. 103.52 (38 ಪೈಸೆ ಇಳಿಕೆ)
    ದಕ್ಷಿಣ ಕನ್ನಡ - ರೂ. 101.47 (13 ಪೈಸೆ ಏರಿಕೆ)
    ದಾವಣಗೆರೆ - ರೂ. 104.10 (19 ಪೈಸೆ ಏರಿಕೆ)
    ಧಾರವಾಡ - ರೂ. 101.71 (1ಪೈಸೆ ಏರಿಕೆ)
    ಗದಗ - ರೂ. 102.25 (00)
    ಕಲಬುರಗಿ - ರೂ. 101.71 (39 ಪೈಸೆ ಇಳಿಕೆ)
    ಹಾಸನ - ರೂ. 101.94 (24 ಪೈಸೆ ಇಳಿಕೆ)
    ಹಾವೇರಿ - ರೂ. 102.85 (4 ಪೈಸೆ ಇಳಿಕೆ)
    ಕೊಡಗು - ರೂ. 103.47 (16 ಪೈಸೆ ಏರಿಕೆ)
    ಕೋಲಾರ - ರೂ. 102.16 (29 ಪೈಸೆ ಏರಿಕೆ)
    ಕೊಪ್ಪಳ - ರೂ. 103.03 (18 ಪೈಸೆ ಇಳಿಕೆ)
    ಮಂಡ್ಯ - ರೂ. 101.78 (39 ಪೈಸೆ ಇಳಿಕೆ)
    ಮೈಸೂರು - ರೂ. 101.50 (00)
    ರಾಯಚೂರು - ರೂ. 102.29 (38 ಪೈಸೆ ಇಳಿಕೆ)
    ರಾಮನಗರ - ರೂ. 102.40 (1 ಪೈಸೆ ಏರಿಕೆ)
    ಶಿವಮೊಗ್ಗ - ರೂ. 103.59 (66 ಪೈಸೆ ಏರಿಕೆ)
    ತುಮಕೂರು - ರೂ. 102.45 (00)
    ಉಡುಪಿ - ರೂ. 101.44 (15 ಪೈಸೆ ಇಳಿಕೆ)
    ಉತ್ತರ ಕನ್ನಡ - ರೂ. 103.01 (7 ಪೈಸೆ ಏರಿಕೆ)
    ವಿಜಯನಗರ - ರೂ. 102.89 (23 ಪೈಸೆ ಇಳಿಕೆ)
    ಯಾದಗಿರಿ - ರೂ. 102.77 (46 ಪೈಸೆ ಏರಿಕೆ)


    ಇದನ್ನೂ ಓದಿ: UPI Transactions: ಕೇಂದ್ರದಿಂದ ಬ್ಯಾಂಕ್​ ಗ್ರಾಹಕರಿಗೆ ಸಿಹಿ ಸುದ್ದಿ, ಇನ್ಮುಂದೆ ಯಾವುದೇ GST ಇರೋದಿಲ್ಲ!


    ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


    ಬಾಗಲಕೋಟೆ - ರೂ. 88.42
    ಬೆಂಗಳೂರು - ರೂ. 87.89
    ಬೆಂಗಳೂರು ಗ್ರಾಮಾಂತರ - ರೂ. 87.95
    ಬೆಳಗಾವಿ - ರೂ. 88.39
    ಬಳ್ಳಾರಿ - ರೂ. 89.68
    ಬೀದರ್ - ರೂ. 88.44
    ವಿಜಯಪುರ - ರೂ. 88.15
    ಚಾಮರಾಜನಗರ - ರೂ. 88.01
    ಚಿಕ್ಕಬಳ್ಳಾಪುರ - ರೂ. 87.89
    ಚಿಕ್ಕಮಗಳೂರು - ರೂ. 89.07
    ಚಿತ್ರದುರ್ಗ - ರೂ. 89.14
    ದಕ್ಷಿಣ ಕನ್ನಡ - ರೂ. 87.43
    ದಾವಣಗೆರೆ - ರೂ. 89.66
    ಧಾರವಾಡ - ರೂ. 87.71
    ಗದಗ - ರೂ. 88.20
    ಕಲಬುರಗಿ - ರೂ. 87.71
    ಹಾಸನ - ರೂ. 87.71
    ಹಾವೇರಿ - ರೂ. 88.74
    ಕೊಡಗು - ರೂ. 89.10
    ಕೋಲಾರ - ರೂ. 88.09
    ಕೊಪ್ಪಳ - ರೂ. 88.92
    ಮಂಡ್ಯ - ರೂ. 87.75
    ಮೈಸೂರು - ರೂ. 87.49
    ರಾಯಚೂರು - ರೂ. 88.25
    ರಾಮನಗರ - ರೂ. 88.31
    ಶಿವಮೊಗ್ಗ - 89.25
    ತುಮಕೂರು - ರೂ. 88.36
    ಉಡುಪಿ - ರೂ. 87.41
    ಉತ್ತರ ಕನ್ನಡ - ರೂ. 88.80
    ವಿಜಯನಗರ - ರೂ. 88.77
    ಯಾದಗಿರಿ - ರೂ. 88.66


    ಇಂಧನ ಶಕ್ತಿ ಅದರಲ್ಲೂ ವಿಶೇಷವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ನಿಜಕ್ಕೂ ದ್ರವ ರೂಪದಲ್ಲಿರುವ ಅಮೂಲ್ಯ ವಸ್ತುಗಳಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ ಈ ಶಕ್ತಿಗಳ ಮೇಲೆ ನಮ್ಮ ಪ್ರತಿನಿತ್ಯದ ಜೀವನ ಅವಲಂಬಿತವಾಗಿದೆ, ಈ ಎರಡೂ ಇಂಧನಗಳಿಲ್ಲವೆಂದರೆ ವಾಸ್ತವದಲ್ಲಿ ಈ ಜಗತ್ತೇ ನಿಂತು ಹೋಗುವುದರಲ್ಲಿ ಸಂಶಯವೇ ಇಲ್ಲ.




    ಹಾಗಾಗಿ ಜಗತ್ತಿನಾದ್ಯಂತ ಇಂಧನದ ಬೇಡಿಕೆ ಅಗತ್ಯ ಹಾಗೂ ಅವಶ್ಯಕ ಬೇಡಿಕೆ. ಅದರಂತೆ ನಮಗೆ ಪೆಟ್ರೋಲ್-ಡೀಸೆಲ್ ದೊರೆಯುವಂತಹ ಮೂಲ ವಸ್ತುವಾದ ಕಚ್ಚಾ ತೈಲವೂ ಅಷ್ಟೆ ಬೆಲೆ ಬಾಳುವಂತಹದ್ದು. ಭಾರತದಲ್ಲಿ ತೈಲದ ಯಾವ ನೈಸರ್ಗಿಕ ಮೂಲಗಳೂ ಇಲ್ಲ. ಹಾಗಾಗಿ ಭಾರತ ತನ್ನ ಇಂಧನಕ್ಕಾಗಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಕೇವಲ ಭಾರತ ಮಾತ್ರವಲ್ಲದೆ ಬಹಳಷ್ಟು ದೇಶಗಳು ಕಚ್ಚಾ ತೈಲದ ಮೇಲೆ ಅವಲಂಬಿತವಾಗಿವೆ.


    ಹಾಗಾಗಿಯೇ ಜಗತ್ತಿನಾದ್ಯಂತ ಕಚ್ಚಾ ತೈಲಕ್ಕೆ ಹೆಚ್ಚಿನ ಬೇಡಿಕೆಯಿದೆ ಮತ್ತು ನಿತ್ಯ ಹಲವಾರು ಜಾಗತಿಕ ಕಾರಣಗಳಿಂದಾಗಿ ತೈಲದ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಒಂದೇ ರೀತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಉದಾಹರಣೆಗೆ ಮೊದಲ ಬಾರಿಗೆ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ ಕೆಲ ದಿನಗಳಲ್ಲೇ ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೆಟುಕದಂತೆ ಗಗನಮುಖಿಯಾಗಿದ್ದವು.

    Published by:Kavya V
    First published: