• Home
 • »
 • News
 • »
 • business
 • »
 • Petrol-Diesel Price Today: ಕೊಂಚ ಇಳಿಕೆ ಕಂಡ ಪೆಟ್ರೋಲ್ ದರ: ಎಲ್ಲಾ ಜಿಲ್ಲೆಗಳಲ್ಲಿನ ಬೆಲೆಯ ಮಾಹಿತಿ ಇಲ್ಲಿದೆ

Petrol-Diesel Price Today: ಕೊಂಚ ಇಳಿಕೆ ಕಂಡ ಪೆಟ್ರೋಲ್ ದರ: ಎಲ್ಲಾ ಜಿಲ್ಲೆಗಳಲ್ಲಿನ ಬೆಲೆಯ ಮಾಹಿತಿ ಇಲ್ಲಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ.

 • Share this:

  ನಿನ್ನೆಯಂತೆಯೇ ಅಲ್ಪ-ಸ್ವಲ್ಪ ವ್ಯತ್ಯಾಸಗಳೊಂದಿಗೆ ರಾಜ್ಯದಲ್ಲಿ ಎಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳು (Petrol-Diesel Price) ಬಹುತೇಕ ಸ್ಥಿರವಾಗಿವೆ ಆದಾಗ್ಯೂ ವಿಜಯನಗರದಲ್ಲಿ ಮಾತ್ರವೇ 1 ರೂ. 14 ಪೈಸೆಗಳಷ್ಟು ಪೆಟ್ರೋಲ್ ಬೆಲೆಯಲ್ಲಿ ( Petrol Price) ಇಳಿಕೆಯಾಗಿದೆ. ಪೆಟ್ರೋಲ್-ಡೀಸೆಲ್ ಇಂಧನಗಳು ದಿನನಿತ್ಯ ವಾಹನಗಳ ಬಳಕೆಗೆ ಬಲು ಅವಶ್ಯಕವಾಗಿದ್ದು ಅವುಗಳ ಬೆಲೆಗಳಲ್ಲಿ ನಿತ್ಯದ ಅಪ್ಡೇಟ್ ಬಲು ಸಹಕಾರಿಯಾಗಿರುತ್ತದೆ.


  ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು


  ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು


  ಬಾಗಲಕೋಟೆ - ರೂ. 102.60 (10 ಪೈಸೆ ಏರಿಕೆ)
  ಬೆಂಗಳೂರು - ರೂ. 101.94 (00)
  ಬೆಂಗಳೂರು ಗ್ರಾಮಾಂತರ - ರೂ. 102.09 (8 ಪೈಸೆ ಏರಿಕೆ)
  ಬೆಳಗಾವಿ - ರೂ. 102.64 (67 ಪೈಸೆ ಏರಿಕೆ)
  ಬಳ್ಳಾರಿ - ರೂ. 103.90 (33 ಪೈಸೆ ಏರಿಕೆ)
  ಬೀದರ್ - ರೂ. 102.28 (24 ಪೈಸೆ ಇಳಿಕೆ)
  ವಿಜಯಪುರ - ರೂ. 102.06 (6 ಪೈಸೆ ಇಳಿಕೆ)
  ಚಾಮರಾಜನಗರ - ರೂ. 102.06 (1 ಪೈಸೆ ಇಳಿಕೆ)
  ಚಿಕ್ಕಬಳ್ಳಾಪುರ - ರೂ. 102.39 (45 ಪೈಸೆ ಏರಿಕೆ)
  ಚಿಕ್ಕಮಗಳೂರು - ರೂ. 102.93 (86 ಪೈಸೆ ಇಳಿಕೆ)
  ಚಿತ್ರದುರ್ಗ - ರೂ. 103.90 (4 ಪೈಸೆ ಏರಿಕೆ)
  ದಕ್ಷಿಣ ಕನ್ನಡ - ರೂ. 101.13 (00)
  ದಾವಣಗೆರೆ - ರೂ. 103.91 (00)
  ಧಾರವಾಡ - ರೂ. 101.71 (00)
  ಗದಗ - ರೂ. 102.25 (00)
  ಕಲಬುರಗಿ - ರೂ. 101.71 (29 ಪೈಸೆ ಇಳಿಕೆ)
  ಹಾಸನ - ರೂ. 101.94 (46 ಪೈಸೆ ಇಳಿಕೆ)
  ಹಾವೇರಿ - ರೂ. 102.89 (14 ಪೈಸೆ ಏರಿಕೆ)
  ಕೊಡಗು - ರೂ. 103.31 (3 ಪೈಸೆ ಏರಿಕೆ)
  ಕೋಲಾರ - ರೂ. 101.87 (29 ಪೈಸೆ ಇಳಿಕೆ)
  ಕೊಪ್ಪಳ - ರೂ. 103.21 (8 ಪೈಸೆ ಏರಿಕೆ)
  ಮಂಡ್ಯ - ರೂ. 102.17 (39 ಪೈಸೆ ಏರಿಕೆ)
  ಮೈಸೂರು - ರೂ. 101.63 (13 ಪೈಸೆ ಏರಿಕೆ)
  ರಾಯಚೂರು - ರೂ. 102.62 (33 ಪೈಸೆ ಏರಿಕೆ)
  ರಾಮನಗರ - ರೂ. 102.39 (1 ಪೈಸೆ ಇಳಿಕೆ)
  ಶಿವಮೊಗ್ಗ - ರೂ. 102.93 (65 ಪೈಸೆ ಇಳಿಕೆ)
  ತುಮಕೂರು - ರೂ. 102.45 (11 ಪೈಸೆ ಏರಿಕೆ)
  ಉಡುಪಿ - ರೂ. 101.39 (58 ಪೈಸೆ ಇಳಿಕೆ)
  ಉತ್ತರ ಕನ್ನಡ - ರೂ. 102.94 (00)
  ವಿಜಯನಗರ - ರೂ. 103.12 (1 ರೂ. 14 ಪೈಸೆ ಇಳಿಕೆ)
  ಯಾದಗಿರಿ - ರೂ. 102.79 (36 ಪೈಸೆ ಏರಿಕೆ)


  ಇದನ್ನೂ ಓದಿ: Money Mantra: ಜೊತೆಯಲ್ಲಿದ್ದವರೇ ಬೆನ್ನಿಗೆ ಚೂರಿ ಹಾಕೋದು, ಈ 3 ರಾಶಿಯವರಿಂದು ಎಚ್ಚರದಿಂದಿರಿ!


  ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


  ಬಾಗಲಕೋಟೆ - ರೂ. 88.51
  ಬೆಂಗಳೂರು - ರೂ. 87.89
  ಬೆಂಗಳೂರು ಗ್ರಾಮಾಂತರ - ರೂ. 88.03
  ಬೆಳಗಾವಿ - ರೂ. 88.55
  ಬಳ್ಳಾರಿ - ರೂ. 89.68
  ಬೀದರ್ - ರೂ. 88.23
  ವಿಜಯಪುರ - ರೂ. 88.02
  ಚಾಮರಾಜನಗರ - ರೂ. 88
  ಚಿಕ್ಕಬಳ್ಳಾಪುರ - ರೂ. 88.29
  ಚಿಕ್ಕಮಗಳೂರು - ರೂ. 88.64
  ಚಿತ್ರದುರ್ಗ - ರೂ. 89.48
  ದಕ್ಷಿಣ ಕನ್ನಡ - ರೂ. 87.13
  ದಾವಣಗೆರೆ - ರೂ. 89.48
  ಧಾರವಾಡ - ರೂ. 87.71
  ಗದಗ - ರೂ. 88.20
  ಕಲಬುರಗಿ - ರೂ. 87.71
  ಹಾಸನ - ರೂ. 87.71
  ಹಾವೇರಿ - ರೂ. 88.77
  ಕೊಡಗು - ರೂ. 88.97
  ಕೋಲಾರ - ರೂ. 87.83
  ಕೊಪ್ಪಳ - ರೂ. 89.08
  ಮಂಡ್ಯ - ರೂ. 88.10
  ಮೈಸೂರು - ರೂ. 87.61
  ರಾಯಚೂರು - ರೂ. 88.54
  ರಾಮನಗರ - ರೂ. 88.29
  ಶಿವಮೊಗ್ಗ - 88.65
  ತುಮಕೂರು - ರೂ. 88.36
  ಉಡುಪಿ - ರೂ. 87.36
  ಉತ್ತರ ಕನ್ನಡ - ರೂ. 88.76
  ವಿಜಯನಗರ - 88.98
  ಯಾದಗಿರಿ - ರೂ. 88.68


  ಅಷ್ಟಕ್ಕೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಒಂದೇ ರೀತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಅವುಗಳ ಬೆಲೆಗಳು ಹಲವಾರು ಜಾಗತಿಕ ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ. ಕಳೆದ ವರ್ಷವಷ್ಟೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದ ಕೆಲ ದಿನಗಳ ನಂತರ ಕಚ್ಚಾ ತೈಲದ ಬೆಲೆಗಳು ಆಕಾಶದೆತ್ತರಕ್ಕೆ ಏರಿದ್ದವು.


  ಇದರಿಂದ ಜಗತ್ತಿನಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಅಸಾಮಾನ್ಯವಾದ ಏರಿಕೆಯಾಗಿದ್ದನ್ನು ಗಮನಿಸಬಹುದು. ಇದರಿಂದ ಭಾರತವೂ ಹೊರತಾಗಿರಲಿಲ್ಲ. ರಸ್ತೆ ಯ ಮೇಲೆ ವಾಹನಗಳನ್ನು ತೆಗೆಯಲೂ ಸಹ ಜನರು ಪರದಾಡುವಂತಾಗಿತ್ತು. ಆದರೆ ತದನಂತರ ಮತ್ತೆ ಪರಿಸ್ಥಿತಿ ಹತೋಟಿಗೆ ಬಂದಿತು.


  ಕಚ್ಚಾ ತೈಲದಿಂದ ಮಾಡಲಾಗುವ ದಿನಬಳಕೆಯ ಪೆಟ್ರೋಲ್ ಹಾಗೂ ಡೀಸೆಲ್ ಇಂಧನ ದ್ರವ ರೂಪದ ಬಂಗಾರವಿದ್ದಂತೆ. ದಿನ ನಿತ್ಯದ ಹಲವು ಪ್ರಮುಖ ಚಟುವಟಿಕೆಗಳಿಗೆ ಇಂಧನ ಅತ್ಯವಶ್ಯಕವಾಗಿದ್ದು ಜಗತ್ತಿನಾದ್ಯಂತ ಅಪಾರವಾದ ಬೇಡಿಕೆ ಪಡೆದಿವೆ. ಹಾಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲಕ್ಕೆ ಸಾಕಷ್ಟು ಡಿಮ್ಯಾಂಡ್ ಇದೆ.

  Published by:Kavya V
  First published: