Fuel Price: ಪೆಟ್ರೋಲ್, ಡೀಸೆಲ್ ಬೆಲೆ ಹೀಗೆ ಇಳಿಸಬಹುದು! ನಿತಿನ್ ಗಡ್ಕರಿ ಹೀಗಂದ್ರು

ವ್ಯಾಪಾರ ಮತ್ತು ವಾಣಿಜ್ಯವನ್ನು ಸುಲಭಗೊಳಿಸಲು ಜಲಮಾರ್ಗಗಳನ್ನು ಉತ್ತೇಜಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು ಜಲಮಾರ್ಗವು ಅತ್ಯಂತ  ಕಡಿಮೆ ವೆಚ್ಚದ-ಅಗ್ಗದ ಸಂಪರ್ಕ ವಿಧಾನವಾಗಿದೆ ಎಂದು ಅವರು ಸಲಹೆ ನೀಡಿದರು.

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

  • Share this:
    ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಇಳಿಕೆ (Fuel prices) ಮಾಡಬಹುದು. ಆದರೆ ಪೆಟ್ರೋಲ್, ಡೀಸೆಲ್​ಗಳಂತಹ ಇಂಧನಗಳನ್ನು ಹೊರತಪಡಿಸಿ ಪರ್ಯಾಯ ಇಂಧನ ಮೂಲಗಳನ್ನು ಹುಡುಕುವುದು ಈ ಹೊತ್ತಿನ ಅನಿವಾರ್ಯವಾಗಿದೆ. ಹೀಗೆ ಪರ್ಯಾಯ ಇಂಧನ ಮೂಲಗಳು (Alternate Sources) ಯಥೇಚ್ಛವಾಗಿ ಹುಟ್ಟಿಕೊಂಡರೆ ಹೆಚ್ಚುತ್ತಿರುವ ತೈಲ ಮತ್ತು ಅನಿಲ ಬೆಲೆಗಳು ಇಳಿಕೆಯೂ ಆಗಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಸಲಹೆ ನೀಡಿದ್ದಾರೆ.  ಹೆಚ್ಚುತ್ತಿರುವ ಇಂಧನ ಬೆಲೆಗಳಿಂದಾಗಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇಂಧನದ ಪರ್ಯಾಯ ಮೂಲಗಳನ್ನು, ವಿಶೇಷವಾಗಿ ಮೆಥೆನಾಲ್ (Methanol) ಬಳಕೆಯನ್ನು ಅನ್ವೇಷಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಒತ್ತಿ ಹೇಳಿದರು.

    ವ್ಯಾಪಾರ ಮತ್ತು ವಾಣಿಜ್ಯವನ್ನು ಸುಲಭಗೊಳಿಸಲು ಜಲಮಾರ್ಗಗಳನ್ನು ಉತ್ತೇಜಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು ಜಲಮಾರ್ಗವು ಅತ್ಯಂತ  ಕಡಿಮೆ ವೆಚ್ಚದ-ಅಗ್ಗದ ಸಂಪರ್ಕ ವಿಧಾನವಾಗಿದೆ ಎಂದು ಅವರು ಸಲಹೆ ನೀಡಿದರು.

    ಮಿಥೆನಾಲ್ ಕಡಿಮೆ ವೆಚ್ಚದಾಯಕ
    ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಏರಿಕೆಯೊಂದಿಗೆ ಹೆಚ್ಚುವರಿ ಸರಳವಾಗಿ ಮತ್ತು ಅಗ್ಗದ ಅನಿಲವನ್ನು ಕಂಡುಹಿಡಿಯುವುದು ಅಗತ್ಯವಾಗಿದೆ ಎಂದು ಗಡ್ಕರಿ ಅವರು ಎರಡು ದಿನಗಳ ಜಲಮಾರ್ಗಗಳ ಸಮಾವೇಶ-2022 ರ ಮುಕ್ತಾಯದ ದಿನದಂದು ಡಿಜಿಟಲ್ ಒಪ್ಪಂದ ಕಾರ್ಯಕ್ರಮದಲ್ಲಿ ಸೂಚಿಸಿದ್ದಾರೆ.

    ಡೀಸೆಲ್‌ಗಿಂತ ಮಿಥೆನಾಲ್ ಕಡಿಮೆ ವೆಚ್ಚದ್ದಾಗಿದೆ. ಭಿನ್ನ ಅನಿಲದ ಬಳಕೆಯನ್ನು ಉತ್ತೇಜಿಸುವುದು ಅವಶ್ಯಕವಾಗಿದೆ.  ಅಸ್ಸಾಂ ಪ್ರಸ್ತುತ ದಿನಕ್ಕೆ 100 ಟನ್ ಮೆಥನಾಲ್ ಅನ್ನು ಉತ್ಪಾದಿಸುತ್ತದೆ. ಅದನ್ನು 500 ಕ್ಕೆ ಏರಿಸಬಹುದು ಎಂದು ಅವರು ಹೇಳಿದರು.

    ತಲಾ ಆದಾಯ ಮತ್ತು ಜಿಡಿಪಿ ಹೆಚ್ಚಳ
    ಜಲಮಾರ್ಗಗಳ ಹೆಚ್ಚಿನ ಬಳಕೆಗೆ ಒತ್ತು ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಇದು ಉನ್ನತ ವಾಣಿಜ್ಯ ಮತ್ತು ಉದ್ಯಮಕ್ಕೆ ಕಾರಣವಾಗಬೇಕು ಎಂದು ಹೇಳಿದರು. ಇದು ಉದ್ಯೋಗದ ಸಾಮರ್ಥ್ಯವನ್ನು ಸೃಷ್ಟಿಸಲು ಮತ್ತು ತಲಾ ಆದಾಯ ಮತ್ತು ಜಿಡಿಪಿಯನ್ನು ಹೆಚ್ಚಿಸಲು ದೇಶಕ್ಕೆ ಸಹಕಾರಿಯಾಗಲಿದೆ ಎಂದು ಅವರು ಭವಿಷ್ಯದ ಮಾರ್ಗಗಳನ್ನು ಸೂಚಿಸಿದರು.

    ಇದನ್ನೂ ಓದಿ:Shehbaz Sharif Net Worth: ಪಾಕ್ ಹೊಸ ಪ್ರಧಾನಿ ಶೆಹಬಾಜ್ ಷರೀಫ್ ಬಡವರೇ? ಶ್ರೀಮಂತರೇ?

    ಹೆದ್ದಾರಿಯ ಸಾರಿಗೆ ಬೆಲೆ ₹ 10 ಆಗಿದ್ದರೆ, ರೈಲ್ವೆಯಲ್ಲಿ ₹ 6  ಆಗಿದೆ. ಆದರೆ ಇದೇ ಸಾರಿಗೆ ವೆಚ್ಚ ಜಲಮಾರ್ಗದ ಮೂಲಕ ಆದರೆ 1 ರೂಪಾಯಿಗೆ ಇಳಿಯುತ್ತದೆ ಎಂದು ಅವರು ಸೂಚಿಸಿದರು. ಪ್ರಸ್ತುತ ಸಾರಿಗೆ ಬೆಲೆಯು ವಿಪರೀತವಾಗಿದೆ. ಇದು ರಫ್ತುಗಳನ್ನು ಹೆಚ್ಚಿಸಲು ಮತ್ತು ಜಾಗತಿಕವಾಗಿ ಭಾರತೀಯ ಸರಕುಗಳನ್ನು ಹೆಚ್ಚುವರಿ ರಫ್ತುಗೊಳ್ಳಲು ಸಹಕಾರಿಯಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದರು.

    ಜಲಮಾರ್ಗ ಮುಖ್ಯ
    "ಲಾಜಿಸ್ಟಿಕ್ಸ್ ಬೆಲೆ ಒಳಗೊಂಡಿರುವುದರಿಂದ ಜಲಮಾರ್ಗಗಳು ಅತ್ಯಗತ್ಯ. ಜಲಮಾರ್ಗಗಳ ಮೂಲಕ ಲಾಜಿಸ್ಟಿಕ್ ಪರಿಣಾಮಕಾರಿತ್ವವು ನಮಗೆಲ್ಲರಿಗೂ ಅಂತಿಮ ಉದ್ದೇಶವಾಗಿದೆ ಎಂದು ಕೇಂದ್ರ ಹೆದ್ದಾರಿ ಸಾರಿಗೆ ಸಚಿವರು ಹೇಳಿದ್ದಾರೆ.

    Petrol-Diesel Price Today: ಕಚ್ಚಾ ತೈಲ ಬೆಲೆ ಕೊಂಚ ಇಳಿಕೆ
    16 ದಿನಗಳಲ್ಲಿ 10 ರೂ. ಗೂ ಹೆಚ್ಚು ಏರಿಕೆ ಕಂಡಿದ್ದ ಪೆಟ್ರೋಲ್‌, ಡೀಸೆಲ್ (Diesel)‌ ಬೆಲೆ ಏರಿಕೆಗೆ ಸ್ವಲ್ಪ ಬ್ರೇಕ್‌ ಬಿದ್ದಿದೆ. ಕಳೆದ 6 ದಿನಗಳಿಂದ ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗುತ್ತಿಲ್ಲ.

    ಈ ಹಿನ್ನೆಲೆ ನಿಜಕ್ಕೂ ದೇಶದ ವಾಹನ ಸವಾರರಿಗೆ ಸ್ವಲ್ಪ ರಿಲೀಫ್‌ (Relief) ನೀಡುವ ಸುದ್ದಿ ಇದು. ಆದರೂ, ದೇಶದಲ್ಲಿ ಮೊದಲೆಲ್ಲ ತಿಂಗಳಿಗೆ ಸಾಮಾನ್ಯವಾಗಿ ಎರಡು ಬಾರಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ವ್ಯತ್ಯಾಸ ಕಾಣಿಸುತ್ತಿತ್ತು. ಆದರೆ, ಜೂನ್ 15, 2017 ರಿಂದ ಇಂಧನ ದರ (Fuel Price) ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ.

    ಇದನ್ನೂ ಓದಿ: Petrol-Diesel Price Today: ಕಚ್ಚಾ ತೈಲ ಬೆಲೆ ಕೊಂಚ ಇಳಿಕೆ, ಪೆಟ್ರೋಲ್, ಡೀಸೆಲ್ ಇಂದಿನ ದರ ಹೀಗಿದೆ

    ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 111.09 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 94.79 ರೂ. ಗೆ ಮಾರಾಟ ಮಾಡಲಾಗುತ್ತಿದೆ.
    Published by:guruganesh bhat
    First published: