Petrol-Diesel Price Today: ಇಂದೂ ತುಟ್ಟಿಯಾದ ಪೆಟ್ರೋಲ್-ಡೀಸೆಲ್, ನಿಮ್ಮ ಜಿಲ್ಲೆಗಳಲ್ಲಿ ಇಂದಿನ ದರ ಹೀಗಿದೆ

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 110.25 ಆಗಿದ್ದರೆ ಡೀಸೆಲ್ ದರ ರೂ. 94.01 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.11, ರೂ. 119.67, ರೂ. 114.28 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.19, ರೂ. 103.92, ರೂ. 99.02 ಆಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಹತ್ತು ದಿನಗಳಿಂದ ದೇಶದ ಎಲ್ಲೆಡೆ ಪೆಟ್ರೋಲ್-ಡೀಸೆಲ್ (Petrol Diesel Price) ದರಗಳು ನಿತ್ಯ ಏರುತ್ತಲೇ ಇವೆ. ಇದರಿಂದ ವಾಹನಸವಾರರಿಗೆ ನಿತ್ಯ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ. ನಿನ್ನೆಗೆ ಹೋಲಿಸಿದರೆ ಇಂದು ರಾಜ್ಯದ ಹಲವೆಡೆ ಪೆಟ್ರೋಲ್ ಬೆಲೆಯಲ್ಲಿ ಒಂದು ರೂ. ಗಿಂತಲೂ ಹೆಚ್ಚಾಗಿದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International Market) ಕಚ್ಚಾ ತೈಲದ (Crude Oil) ಬೆಲೆ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆ ಏರುವುದು ನಿಲ್ಲುತ್ತಿಲ್ಲ. ಕಳೆದ ಒಂದು ವಾರದಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಎಂಟು ರೂಪಾಯಿಗಿಂತಲೂ ಹೆಚ್ಚಳವಾಗಿದ್ದು ಜನರು ಪರಿತಪಿಸುವಂತಾಗಿದೆ.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 111.16 ಆಗಿದ್ದರೆ ಡೀಸೆಲ್ ದರ ರೂ. 94.86 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.11, ರೂ. 119.67, ರೂ. 114.28 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.19, ರೂ. 103.92, ರೂ. 99.02 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 104.61 ಆಗಿದ್ದರೆ ಡೀಸೆಲ್ ದರ ರೂ. 95.87 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 111.59 (1 ರೂ. ಏರಿಕೆ)
ಬೆಂಗಳೂರು - ರೂ. 111.16 (84 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ 111.40 (1 ರೂ. ಏರಿಕೆ)
ಬೆಳಗಾವಿ - ರೂ. 111.42 (1 ರೂ. 57 ಪೈಸೆ ಏರಿಕೆ)
ಬಳ್ಳಾರಿ - ರೂ. 112.73 (1 ರೂ. 42 ಪೈಸೆ ಏರಿಕೆ)
ಬೀದರ್ - ರೂ. 111.37 (00)
ವಿಜಯಪುರ - ರೂ. 111.22 (44 ಪೈಸೆ ಏರಿಕೆ)
ಚಾಮರಾಜನಗರ - ರೂ. 111.18 (83 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 111.15 (39 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 112. 36(63 ಪೈಸೆ ಏರಿಕೆ)
ಚಿತ್ರದುರ್ಗ - ರೂ. 111.78 (65 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 110.92 (97 ಪೈಸೆ ಏರಿಕೆ)
ದಾವಣಗೆರೆ - ರೂ. 113.15 (1 ರೂ. 16 ಪೈಸೆ ಏರಿಕೆ)
ಧಾರವಾಡ - ರೂ. 110.96 (84 ಪೈಸೆ ಏರಿಕೆ)
ಗದಗ - ರೂ. 111.32 (34 ಪೈಸೆ ಏರಿಕೆ)
ಕಲಬುರಗಿ - ರೂ. 111.23 (80 ಪೈಸೆ ಏರಿಕೆ)
ಹಾಸನ - ರೂ. 110.92 (1 ರೂ. 8 ಪೈಸೆ ಏರಿಕೆ)
ಹಾವೇರಿ - ರೂ. 112.09 (99 ಪೈಸೆ ಏರಿಕೆ)
ಕೊಡಗು - ರೂ. 112.55 (90 ಪೈಸೆ ಏರಿಕೆ)
ಕೋಲಾರ - ರೂ. 111.25 (84 ಪೈಸೆ ಏರಿಕೆ)
ಕೊಪ್ಪಳ - ರೂ. 112.11 (1 ರೂ. 2 ಪೈಸೆ ಏರಿಕೆ)
ಮಂಡ್ಯ - ರೂ. 110.85 (1 ರೂ. ಏರಿಕೆ )
ಮೈಸೂರು - ರೂ. 110.74 (84 ಪೈಸೆ ಏರಿಕೆ)
ರಾಯಚೂರು - ರೂ. 111.05 (1 ರೂ. 54 ಪೈಸೆ ಏರಿಕೆ)
ರಾಮನಗರ - ರೂ. 111.44 (1 ರೂ. 18 ಪೈಸೆ ಏರಿಕೆ)
ಶಿವಮೊಗ್ಗ - ರೂ. 112.56 (44 ಪೈಸೆ ಏರಿಕೆ)
ತುಮಕೂರು - ರೂ. 112.13 (17 ಪೈಸೆ ಏರಿಕೆ)
ಉಡುಪಿ - ರೂ. 110.60 (1 ರೂ. 3 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 111.14 (1 ರೂ. 81 ಪೈಸೆ ಏರಿಕೆ)
ಯಾದಗಿರಿ - ರೂ. 110.89 (48 ಪೈಸೆ ಏರಿಕೆ)

ಇದನ್ನೂ ಓದಿ: Gold and Silver Price Today : ಸ್ಥಿರತೆ ಕಾಯ್ದುಕೊಂಡ ಚಿನ್ನ, ಕುಸಿದ ಬೆಳ್ಳಿ : ಇಂದಿನ ದರ ಹೀಗಿದೆ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 94.53
ಬೆಂಗಳೂರು - ರೂ. 94.86
ಬೆಂಗಳೂರು ಗ್ರಾಮಾಂತರ - ರೂ. 94.15
ಬೆಳಗಾವಿ - ರೂ. 95.11
ಬಳ್ಳಾರಿ - ರೂ. 96.29
ಬೀದರ್ - ರೂ. 95.97
ವಿಜಯಪುರ - ರೂ. 94.93
ಚಾಮರಾಜನಗರ - ರೂ. 94.87
ಚಿಕ್ಕಬಳ್ಳಾಪುರ - ರೂ. 94.85
ಚಿಕ್ಕಮಗಳೂರು - ರೂ. 95.91
ಚಿತ್ರದುರ್ಗ - ರೂ. 95.28
ದಕ್ಷಿಣ ಕನ್ನಡ - ರೂ. 94.60
ದಾವಣಗೆರೆ - ರೂ. 96.52
ಧಾರವಾಡ - ರೂ. 94.69
ಗದಗ - ರೂ. 95.02
ಕಲಬುರಗಿ - ರೂ. 94.94
ಹಾಸನ - ರೂ. 93.51
ಹಾವೇರಿ - ರೂ. 94.71
ಕೊಡಗು - ರೂ. 95.97
ಕೋಲಾರ - ರೂ. 94.94
ಕೊಪ್ಪಳ - ರೂ. 95.75
ಮಂಡ್ಯ - ರೂ. 94.57
ಮೈಸೂರು - ರೂ. 94.47
ರಾಯಚೂರು - ರೂ. 94.79
ರಾಮನಗರ - ರೂ. 95.10
ಶಿವಮೊಗ್ಗ - ರೂ. 96.04
ತುಮಕೂರು - ರೂ. 94.73
ಉಡುಪಿ - ರೂ. 94.31
ಉತ್ತರ ಕನ್ನಡ - ರೂ. 94.85
ಯಾದಗಿರಿ - ರೂ. 95.54
Published by:Divya D
First published: