Petrol Price Today: ಇಂದೂ ಹೆಚ್ಚಳ ಕಾಯ್ದುಕೊಂಡ ಪೆಟ್ರೋಲ್-ಡೀಸೆಲ್, ನಿಮ್ಮ ಜಿಲ್ಲೆಗಳಲ್ಲಿ ಇಂದಿನ ದರ ಹೀಗಿದೆ
ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.
ಕಳೆದ ಹತ್ತು ದಿನಗಳಿಂದ ವಾಹನಸವಾರರಿಗೆ ನಿತ್ಯ ಬೆಲೆ ಏರಿಕೆಯ (Price Rice) ಕಿರುಕುಳ ಉಂಟಾಗುತ್ತಿರುವುದರಲ್ಲಿ ಎರಡು ಮಾತಿಲ್ಲ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (Market) ಕಚ್ಚಾ ತೈಲದ (Crude Oil) ಬೆಲೆ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆ ಏರುವುದು ನಿಲ್ಲುತ್ತಿಲ್ಲ. ಕಳೆದ ಒಂದು ವಾರದಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಎಂಟು ರೂಪಾಯಿಗಿಂತಲೂ ಹೆಚ್ಚಳವಾಗಿದ್ದು ಜನರು ಪರಿತಪಿಸುವಂತಾಗಿದೆ.
ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.
ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 109.41 ಆಗಿದ್ದರೆ ಡೀಸೆಲ್ ದರ ರೂ. 93.23 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.109.34, ರೂ. 118.83, ರೂ. 113.45 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 99.42, ರೂ. 103.07, ರೂ. 98.22 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 103.81 ಆಗಿದ್ದರೆ ಡೀಸೆಲ್ ದರ ರೂ. 95.07 ಆಗಿದೆ.