ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಯನ್ನು ಶನಿವಾರ ಲೀಟರ್ಗೆ ತಲಾ 80 ಪೈಸೆ ಹೆಚ್ಚಿಸಲಾಗಿದೆ. ತೈಲ ಸಂಸ್ಥೆಗಳು (Oil Company) ಕಚ್ಚಾ ತೈಲ ಬೆಲೆಯಲ್ಲಿ ಹೆಚ್ಚಳವನ್ನು ಗ್ರಾಹಕರಿಗೆ ವರ್ಗಾಯಿಸಿದ್ದರಿಂದ ಐದು ದಿನಗಳಲ್ಲಿ ನಾಲ್ಕನೇ ಬಾರಿ ಇಂಧನ ಬೆಲೆ ಹೆಚ್ಚಳವಾಗಿದೆ. ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ದೆಹಲಿಯಲ್ಲಿ (Delhi) ಪೆಟ್ರೋಲ್ ದರವು ಈ ಹಿಂದೆ 97.81 ರೂ.ಗೆ ಹೋಲಿಸಿದರೆ ಈಗ 98.61 ರೂ ಆಗಿದೆ. ಮಾರ್ಚ್ 22 ರಂದು ದರ ಪರಿಷ್ಕರಣೆಯಲ್ಲಿ ನಾಲ್ಕೂವರೆ ತಿಂಗಳ ಸುದೀರ್ಘ ವಿರಾಮದ ಅಂತ್ಯದ ನಂತರ ನಾಲ್ಕು ಬಾರಿ ಹೆಚ್ಚಳವಾಗಿದ್ದು ಲೀಟರ್ಗೆ 80 ಪೈಸೆಯಾಗಿದೆ. ಜೂನ್ 2017 ರಲ್ಲಿ ದೈನಂದಿನ ಬೆಲೆ ಪರಿಷ್ಕರಣೆ ಪ್ರಾರಂಭವಾದಾಗಿನಿಂದ ಈ ಹೆಚ್ಚಳವು ಹೆಚ್ಚಿನ ಪರಿಣಾಮ ತೋರಿಸುತ್ತಿದೆ. ನಾಲ್ಕು ಬಾರಿ ಹೆಚ್ಚಳದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ಗೆ 3.20 ರೂ. ಹೆಚ್ಚಳವಾಗಿದೆ.
ಉತ್ತರ ಪ್ರದೇಶ ಮತ್ತು ಪಂಜಾಬ್ನಂತಹ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ನವೆಂಬರ್ 4 ರಿಂದ ಬೆಲೆಗಳು ತಟಸ್ಥವಾಗಿತ್ತು. ಈ ಅವಧಿಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ಗೆ ಸುಮಾರು $30 ರಷ್ಟು ಏರಿತು. ಮಾರ್ಚ್ 10 ರಂದು ವಿಧಾನಸಭೆ ಚುನಾವಣೆ ಮುಗಿದ ನಂತರ ದರ ಪರಿಷ್ಕರಣೆ ನಿರೀಕ್ಷಿಸಲಾಗಿತ್ತು. ಕೆಲ ದಿನಗಳಿಂದ ನಿರೀಕ್ಷಿಸಲಾಗುತ್ತಿದ್ದಂತೆಯೇ ಭಾರತದಾದ್ಯಂತ ಪೆಟ್ರೋಲ್-ಡೀಸೆಲ್ ದರಗಳಲ್ಲಿ ಇನ್ನಷ್ಟು ಹೆಚ್ಚಳವಾಗಬಹುದಾದ ಸೂಚನೆಗಳು ಸಿಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ರಷ್ಯಾ-ಉಕ್ರೇನ್ ಬಿಕ್ಕಟ್ಟಿನಿಂದ ಉಂಟಾಗಿರುವ ಕಚ್ಚಾ ತೈಲದ (Crude Oil) ಬೆಲೆಯಲ್ಲಾಗುತ್ತಿರುವ ಹೆಚ್ಚಳ ಎನ್ನಲಾಗುತ್ತಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 104.55 (70 ಪೈಸೆ ಏರಿಕೆ)
ಬೆಂಗಳೂರು - ರೂ. 103.93 (82 ಪೈಸೆ ಏರಿಕೆ)
ಬೆಂಗಳೂರು ಗ್ರಾಮಾಂತರ - ರೂ. 104.01 (79 ಪೈಸೆ ಏರಿಕೆ)
ಬೆಳಗಾವಿ - ರೂ. 104.42 (1.22 ಪೈಸೆ ಏರಿಕೆ)
ಬಳ್ಳಾರಿ - ರೂ. 105.24 (83 ಪೈಸೆ ಏರಿಕೆ)
ಬೀದರ್ - ರೂ. 104.23 (75 ಪೈಸೆ ಏರಿಕೆ)
ವಿಜಯಪುರ - ರೂ. 103.99 (77 ಪೈಸೆ ಇಳಿಕೆ)
ಚಾಮರಾಜನಗರ - ರೂ. 104.02 (78 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 103.93 (32 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 104.47 (86 ಪೈಸೆ ಏರಿಕೆ)
ಚಿತ್ರದುರ್ಗ - ರೂ. 105.71 (56 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 103.13 (75 ಪೈಸೆ ಏರಿಕೆ)
ದಾವಣಗೆರೆ - ರೂ. 105.73 (36 ಪೈಸೆ ಏರಿಕೆ)
ಧಾರವಾಡ - ರೂ. 103.96 (36 ಪೈಸೆ ಏರಿಕೆ)
ಗದಗ - ರೂ. 104.22 (56 ಪೈಸೆ ಏರಿಕೆ)
ಕಲಬುರಗಿ - ರೂ. 102.65(86 ಪೈಸೆ ಏರಿಕೆ)
ಹಾಸನ - ರೂ. 103.76 (36 ಪೈಸೆ ಏರಿಕೆ)
ಹಾವೇರಿ - ರೂ. 104.90 (17 ಪೈಸೆ ಏರಿಕೆ)
ಕೊಡಗು - ರೂ. 105.25 (95 ಪೈಸೆ ಏರಿಕೆ)
ಕೋಲಾರ - ರೂ. 104.16 (23 ಪೈಸೆ ಏರಿಕೆ)
ಕೊಪ್ಪಳ - ರೂ. 105.12 (14 ಪೈಸೆ ಏರಿಕೆ)
ಮಂಡ್ಯ - ರೂ. 103.84 (41 ಪೈಸೆ ಏರಿಕೆ)
ಮೈಸೂರು - ರೂ. 103.88 (97 ಪೈಸೆ ಏರಿಕೆ)
ರಾಯಚೂರು - ರೂ. 104.54 (8 ಪೈಸೆ ಏರಿಕೆ)
ರಾಮನಗರ - ರೂ. 104.40 (7 ಪೈಸೆ ಏರಿಕೆ)
ಶಿವಮೊಗ್ಗ - ರೂ. 105.40 (19 ಪೈಸೆ ಏರಿಕೆ)
ತುಮಕೂರು - ರೂ. 104.46 (74 ಪೈಸೆ ಏರಿಕೆ)
ಉಡುಪಿ - ರೂ. 103.39 (25 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 103.94 (18 ಪೈಸೆ ಏರಿಕೆ)
ಯಾದಗಿರಿ - ರೂ. 104.26 (13 ಪೈಸೆ ಇಳಿಕೆ)
ಇದನ್ನೂ ಓದಿ: Petrol Price Today: ಪೆಟ್ರೋಲ್, ಡಿಸೇಲ್ ದರ ಹೆಚ್ಚಳ, ನಿಮ್ಮೂರಲ್ಲಿ ಇಂದು ಎಷ್ಟಿದೆ?
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.72
ಬೆಂಗಳೂರು - ರೂ. 88.14
ಬೆಂಗಳೂರು ಗ್ರಾಮಾಂತರ - ರೂ. 88.20
ಬೆಳಗಾವಿ - ರೂ. 88.60
ಬಳ್ಳಾರಿ - ರೂ. 89.33
ಬೀದರ್ - ರೂ. 88.42
ವಿಜಯಪುರ - ರೂ. 88.21
ಚಾಮರಾಜನಗರ - ರೂ. 88.21
ಚಿಕ್ಕಬಳ್ಳಾಪುರ - ರೂ. 88.14
ಚಿಕ್ಕಮಗಳೂರು - ರೂ. 88.52
ಚಿತ್ರದುರ್ಗ - ರೂ. 89.61
ದಕ್ಷಿಣ ಕನ್ನಡ - ರೂ. 87.37
ದಾವಣಗೆರೆ - ರೂ. 89.63
ಧಾರವಾಡ - ರೂ. 88.18
ಗದಗ - ರೂ. 88.41
ಕಲಬುರಗಿ - ರೂ. 87.91
ಹಾಸನ - ರೂ. 86.29
ಹಾವೇರಿ - ರೂ. 89.01
ಕೊಡಗು - ರೂ. 89.20
ಕೋಲಾರ - ರೂ. 88.34
ಕೊಪ್ಪಳ - ರೂ. 89.25
ಮಂಡ್ಯ - ರೂ. 88.05
ಮೈಸೂರು - ರೂ. 87.81
ರಾಯಚೂರು - ರೂ. 86.72
ರಾಮನಗರ - ರೂ. 88.56
ಶಿವಮೊಗ್ಗ - ರೂ. 88.04
ತುಮಕೂರು - ರೂ. 88.60
ಉಡುಪಿ - ರೂ. 87.60
ಉತ್ತರ ಕನ್ನಡ - ರೂ. 89.01
ಯಾದಗಿರಿ - ರೂ. 88.45
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ