ಉತ್ತರ ಕನ್ನಡದಲ್ಲಿ 2 ರೂ. 62 ಪೈಸೆಯಷ್ಟು ಏರಿಕೆ ಕಂಡ ಪೆಟ್ರೋಲ್‌ ದರ: ನಿಮ್ಮ ನಗರಗಳಲ್ಲಿ ಇಂದಿನ ಪೆಟ್ರೋಲ್‌, ಡೀಸೆಲ್‌ ದರ ನೋಡಿ..

ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 107.30 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 91.27 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ರಷ್ಯಾ - ಉಕ್ರೇನ್ ಯುದ್ಧ (Russia Ukraine War) ಪರಿಣಾಮ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ವ್ಯತ್ಯಾಸವಾಗುತ್ತಿದೆ. ಕಳೆದ 2 ದಿನಗಳಿಂದ ಇಳಿಕೆಯ ಹಾದಿಯಲ್ಲಿದ್ದ ಕಚ್ಚಾ ತೈಲ (Crude Oil) ದರ ಮತ್ತೆ ಏರಿಕೆಯ ಹಾದಿಯಲ್ಲಿದೆ. ಇದರಂತೆ, ದೇಶದಲ್ಲೂ ಕಳೆದ 8 - 10 ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯ ಹಾದಿಯಲ್ಲಿದೆ. ದೇಶದ ಬಹುತೇಕ ನಗರಗಳಲ್ಲಿ ಇಂಧನ ದರ ಪ್ರತಿದಿನ ಬೆಳಗ್ಗೆ 6 ಗಂಟೆಗೆ ವ್ಯತ್ಯಾಸವಾಗುತ್ತಲೇ ಇರುತ್ತದೆ. ಇದೇ ರೀತಿ, ರಾಜ್ಯದಲ್ಲೂ ಸಹ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಇತರೆಡೆ ಪ್ರತಿದಿನ ಪೆಟ್ರೋಲ್‌, ಡೀಸೆಲ್ (Diesel)‌ ಬೆಲೆಯಲ್ಲಿ ವ್ಯತ್ಯಾಸವಾಗುತ್ತಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bangalore) ಇಂದು 1 ಲೀಟರ್ ಪೆಟ್ರೋಲ್​ ಅನ್ನು 107.30 ರೂ. ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 91.27 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಹಾಗೂ ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ..


ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರ ವಿವರ:


ಬಾಗಲಕೋಟೆ - 107.79 ರೂ. (82 ಪೈಸೆ ಏರಿಕೆ)


ಬೆಂಗಳೂರು -107.30ರೂ. (84 ಪೈಸೆ ಏರಿಕೆ)


ಬೆಂಗಳೂರು ಗ್ರಾಮಾಂತರ -107.37ರೂ. (91 ಪೈಸೆ ಏರಿಕೆ)


ಬೆಳಗಾವಿ - 107.31 ರೂ. (1.06 ರೂ. ಏರಿಕೆ)


ಬಳ್ಳಾರಿ - 109.24 ರೂ. (1.41 ರೂ. ಏರಿಕೆ)


ಬೀದರ್ - 107.84 ರೂ. (54 ಪೈಸೆ ಏರಿಕೆ)


ಬಿಜಾಪುರ - 107.02 ರೂ. (32 ಪೈಸೆ ಏರಿಕೆ)


ಚಾಮರಾಜನಗರ - 108.12 ರೂ. (1.54 ರೂ. ಏರಿಕೆ)


ಚಿಕ್ಕಬಳ್ಳಾಪುರ - 107.30 ರೂ. (84 ಪೈಸೆ ಏರಿಕೆ)


ಚಿಕ್ಕಮಗಳೂರು - 108.99 ರೂ. (20 ಪೈಸೆ ಏರಿಕೆ)


ಚಿತ್ರದುರ್ಗ - 108.72 ರೂ. (1.19 ರೂ. ಏರಿಕೆ)


ದಕ್ಷಿಣ ಕನ್ನಡ - 106.58 ರೂ. (21 ಪೈಸೆ ಏರಿಕೆ)


ದಾವಣಗೆರೆ - 109.30 ರೂ. (1.54 ರೂ. ಏರಿಕೆ)


ಧಾರವಾಡ - 107.05 ರೂ. (84 ಪೈಸೆ ಏರಿಕೆ)


ಗದಗ – 107.59 ರೂ. (72 ಪೈಸೆ ಏರಿಕೆ)


ಗುಲಬರ್ಗ - 107.31 ರೂ. (1.13 ರೂ. ಏರಿಕೆ)


ಹಾಸನ – 107.37 ರೂ. (1.08 ರೂ. ಏರಿಕೆ)


ಹಾವೇರಿ - 107.92 ರೂ. (1.02 ರೂ. ಏರಿಕೆ)


ಕೊಡಗು – 108.55 ರೂ. (63 ಪೈಸೆ ಏರಿಕೆ)


ಕೋಲಾರ - 107.17 ರೂ. (84 ಪೈಸೆ ಏರಿಕೆ)


ಕೊಪ್ಪಳ- 108.32 ರೂ. (73 ಪೈಸೆ ಏರಿಕೆ)


ಮಂಡ್ಯ – 106.82 ರೂ. (16 ಪೈಸೆ ಏರಿಕೆ)


ಮೈಸೂರು – 107.05 ರೂ. (1.07 ರೂ. ಏರಿಕೆ)


ರಾಯಚೂರು – 107.57 ರೂ. (1.29 ರೂ. ಏರಿಕೆ)


ರಾಮನಗರ – 107.77 ರೂ. (86 ಪೈಸೆ ಏರಿಕೆ)


ಶಿವಮೊಗ್ಗ – 109.11 ರೂ. (1.86 ರೂ. ಏರಿಕೆ)


ತುಮಕೂರು – 108.37 ರೂ. (1.03 ರೂ. ಏರಿಕೆ)


ಉಡುಪಿ - 106.88 ರೂ. (54 ಪೈಸೆ ಏರಿಕೆ)


ಉತ್ತರ ಕನ್ನಡ – 109.51 ರೂ. (2.62 ರೂ. ಏರಿಕೆ)


ಯಾದಗಿರಿ – 108.10 ರೂ. (1.20 ರೂ. ಏರಿಕೆ)


 ಇದನ್ನೂ ಓದಿ: Gold Price: ಯುಗಾದಿ ಹೊಸ್ತಿಲಲ್ಲೇ ಮನೆಗೆ ಬರಲಿ ಚಿನ್ನ! ಬೆಲೆ ಇಳಿದಿದೆ ಇಂದೇ ಬೆಳ್ಳಿ-ಬಂಗಾರ ಖರೀದಿಸೋಣ


ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ಬೆಲೆ


ಬಾಗಲಕೋಟೆ – 91.73


ಬೆಂಗಳೂರು –91.27


ಬೆಂಗಳೂರು ಗ್ರಾಮಾಂತರ - 91.33


ಬೆಳಗಾವಿ – 91.30


ಬಳ್ಳಾರಿ – 93.04


ಬೀದರ್ - 91.77


ಬಿಜಾಪುರ – 91.03


ಚಾಮರಾಜನಗರ – 92


ಚಿಕ್ಕಬಳ್ಳಾಪುರ – 91.27


ಚಿಕ್ಕಮಗಳೂರು – 92.69


ಚಿತ್ರದುರ್ಗ – 92.42


ದಕ್ಷಿಣ ಕನ್ನಡ – 90.58


ದಾವಣಗೆರೆ - 92.94


ಧಾರವಾಡ – 91.06


ಗದಗ – 91.55


ಗುಲಬರ್ಗ – 91.30


ಹಾಸನ – 91.20


ಹಾವೇರಿ – 91.85


ಕೊಡಗು – 92.27


ಕೋಲಾರ – 91.15


ಕೊಪ್ಪಳ- 92.22


ಮಂಡ್ಯ – 90.83


ಮೈಸೂರು – 91.04


ರಾಯಚೂರು – 91.55


ರಾಮನಗರ – 91.69


ಶಿವಮೊಗ್ಗ – 92.82


ತುಮಕೂರು – 92.11


ಉಡುಪಿ – 90.85


ಉತ್ತರ ಕನ್ನಡ – 93.16


ಯಾದಗಿರಿ – 92.01


ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್​ ಬೆಲೆ 107.45 ರೂ ಇದ್ದರೆ ಡೀಸೆಲ್​ ಬೆಲೆ 97.52 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 101.81 ರೂ ಮತ್ತು ಡೀಸೆಲ್ 93.07 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ 116.72 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 100.94 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದೇ ರೀತಿ ಕೋಲ್ಕತ್ತದಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 111.35 ರೂ.ಗೆ ಮಾರಾಟ ಮಾಡಲಾಗುತ್ತಿದ್ದರೆ, ಡೀಸೆಲ್ ಅನ್ನು 96.22 ರೂ.ಗೆ ಮಾರಾಟ ಮಾಡಲಾಗುತ್ತಿದೆ.


ಇನ್ನೊಂದೆಡೆ, ಕಚ್ಚಾ ತೈಲ ಬೆಲೆ 1 ಬ್ಯಾರೆಲ್‌ಗೆ 8,113 ರೂ. (MCX) ಇದ್ದು, 203 ರೂ. ಅಂದರೆ ಶೇ. 2.57 ರಷ್ಟು ಹೆಚ್ಚಾಗಿದೆ.

Published by:Divya D
First published: