Petrol-Diesel Price Today: ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಬದಲಾವಣೆ ಇಲ್ಲ, ಹೀಗಿದೆ ಇಂದಿನ ದರ

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಜ್ಯದಲ್ಲಿ ಇಂದು ಇಂಧನ ಬೆಲೆಗಳಲ್ಲಿ ಅಷ್ಟೊಂದು ಮಹತ್ತರ ಬದಲಾವಣೆಗಳಾಗಿಲ್ಲ. ಕಳೆದ ಕೆಲ ದಿನಗಳಿಂದ ಭಾರತದಲ್ಲಿ ಬೆಂಗಳೂರು (Bengaluru) ಸೇರಿದಂತೆ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ದರಗಳು (Petrol Price) ಅತಿಶಯವಾದ ಏರಿಳಿತಗಳಿಲ್ಲದೆ ಸ್ಥಿರವಾಗಿವೆ. ಆದಾಗ್ಯೂ ಕೆಲ ಪೈಸೆಗಳಷ್ಟು ಏರಿಕೆ/ಇಳಿಕೆ ಆಗುತ್ತಿರುವುದನ್ನು ಗಮನಿಸಬಹುದು. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ (Crude Oil) ಬೆಲೆಯೂ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆಯಲ್ಲಿ ಏರಿಳಿತ ನಡೆಯುತ್ತಲೇ ಇದೆ. ಕಳೆದ ಹತ್ತು ದಿನಗಳಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಹತ್ತು ರೂಪಾಯಿಗಿಂತಲೂ ಹೆಚ್ಚಳವಾಗಿರುವುದು ಸುಳ್ಳಲ್ಲ. ಆದಾಗ್ಯೂ, ಕಳೆದ ಕೆಲ ದಿನಗಳಿಂದ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿದೆ.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ಬೆಂಗಳೂರಲ್ಲಿ ಹೇಗಿದೆ ಇಂಧನ ಬೆಲೆ?

ರಾಜಧಾನಿ ಬೆಂಗಳೂರು ನಗರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದೂ ಸಹ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಳವಾಗಿಲ್ಲ. ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.85, ರೂ. 120.51, ರೂ. 115.12 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.94, ರೂ. 104.77, ರೂ. 99.83 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 105.41 ಆಗಿದ್ದರೆ ಡೀಸೆಲ್ ದರ ರೂ. 96.67 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 111.61 (8 ಪೈಸೆ ಇಳಿಕೆ)
ಬೆಂಗಳೂರು - ರೂ. 111.09 (00)
ಬೆಂಗಳೂರು ಗ್ರಾಮಾಂತರ - ರೂ. 110.74 (51 ಪೈಸೆ ಇಳಿಕೆ)
ಬೆಳಗಾವಿ - ರೂ. 111.67 (5 ಪೈಸೆ ಇಳಿಕೆ)
ಬಳ್ಳಾರಿ - ರೂ. 112.73 (30 ಪೈಸೆ ಇಳಿಕೆ)
ಬೀದರ್ - ರೂ. 111.39 (00)
ವಿಜಯಪುರ - ರೂ. 110.81 (34 ಪೈಸೆ ಇಳಿಕೆ)
ಚಾಮರಾಜನಗರ - ರೂ. 111.22 (5 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 111.09 (00)
ಚಿಕ್ಕಮಗಳೂರು - ರೂ. 112.62 (62 ಪೈಸೆ ಏರಿಕೆ)
ಚಿತ್ರದುರ್ಗ - ರೂ. 112.16 (73 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 110.81 (52 ಪೈಸೆ ಏರಿಕೆ)
ದಾವಣಗೆರೆ - ರೂ. 112.40 (49 ಪೈಸೆ ಇಳಿಕೆ)
ಧಾರವಾಡ - ರೂ. 110.84 (00)
ಗದಗ - ರೂ. 111.50 (12 ಪೈಸೆ ಏರಿಕೆ)
ಕಲಬುರಗಿ - ರೂ. 110.81 (00)
ಹಾಸನ - ರೂ. 110.92 (00)
ಹಾವೇರಿ - ರೂ. 111.53 (49 ಪೈಸೆ ಇಳಿಕೆ)
ಕೊಡಗು - ರೂ. 112.36 (4 ಪೈಸೆ ಇಳಿಕೆ)
ಕೋಲಾರ - ರೂ. 110.96 (7 ಪೈಸೆ ಇಳಿಕೆ)
ಕೊಪ್ಪಳ - ರೂ. 111.99 (29 ಪೈಸೆ ಇಳಿಕೆ)
ಮಂಡ್ಯ - ರೂ. 111.29 (00)
ಮೈಸೂರು - ರೂ. 110.61 (13 ಪೈಸೆ ಇಳಿಕೆ)
ರಾಯಚೂರು - ರೂ. 110.91 (79 ಪೈಸೆ ಇಳಿಕೆ)
ರಾಮನಗರ - ರೂ. 111.54 (00)
ಶಿವಮೊಗ್ಗ - ರೂ. 111.89 (2 ಪೈಸೆ ಇಳಿಕೆ)
ತುಮಕೂರು - ರೂ. 111.97 (36 ಪೈಸೆ ಏರಿಕೆ)
ಉಡುಪಿ - ರೂ. 111.18 (63 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 112.94 (84 ಪೈಸೆ ಏರಿಕೆ)
ಯಾದಗಿರಿ - ರೂ. 111.53 (36 ಪೈಸೆ ಇಳಿಕೆ)

ಇದನ್ನೂ ಓದಿ: Inspiring Story: 2000 ರೂ. ಹೂಡಿಕೆಯಿಂದ ಶುರುವಾದ ಮಹಿಳೆಯ ಹೋಮ್ ಫುಡ್; ಇಂದು ಕೋಟಿ ಕೋಟಿ ಸಂಪಾದಿಸುವ ವ್ಯವಹಾರ

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.28
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.48
ಬೆಳಗಾವಿ - ರೂ. 95.34
ಬಳ್ಳಾರಿ - ರೂ. 96.29
ಬೀದರ್ - ರೂ. 95.08
ವಿಜಯಪುರ - ರೂ. 94.56
ಚಾಮರಾಜನಗರ - ರೂ. 94.90
ಚಿಕ್ಕಬಳ್ಳಾಪುರ - ರೂ. 94.79
ಚಿಕ್ಕಮಗಳೂರು - ರೂ. 96.03
ಚಿತ್ರದುರ್ಗ - ರೂ. 95.62
ದಕ್ಷಿಣ ಕನ್ನಡ - ರೂ. 94.50
ದಾವಣಗೆರೆ - ರೂ. 95.84
ಧಾರವಾಡ - ರೂ. 94.59
ಗದಗ - ರೂ. 95.18
ಕಲಬುರಗಿ - ರೂ. 94.56
ಹಾಸನ - ರೂ. 94.51
ಹಾವೇರಿ - ರೂ. 95.21
ಕೊಡಗು - ರೂ. 95.80
ಕೋಲಾರ - ರೂ. 94.68
ಕೊಪ್ಪಳ - ರೂ. 95.62
ಮಂಡ್ಯ - ರೂ. 94.97
ಮೈಸೂರು - ರೂ. 94.35
ರಾಯಚೂರು - ರೂ. 94.67
ರಾಮನಗರ - ರೂ. 95.20
ಶಿವಮೊಗ್ಗ - ರೂ. 95.43
ತುಮಕೂರು - ರೂ. 95.59
ಉಡುಪಿ - ರೂ. 94.83
ಉತ್ತರ ಕನ್ನಡ - ರೂ. 96.43
ಯಾದಗಿರಿ - ರೂ. 95.21
Published by:Divya D
First published: