Petrol-Diesel Price Today: ಸ್ವಲ್ಪ ಏರಿಳಿತ, ಇಂದಿನ ಪೆಟ್ರೋಲ್, ಡಿಸೇಲ್ ಬೆಲೆ ಹೀಗಿದೆ

ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ಎರಡು ವಾರಗಳಿಂದ ದೇಶದ ಎಲ್ಲೆಡೆ ನಿರಂತರವಾಗಿ ಎರುತ್ತಲೆ ಇದ್ದ ಪೆಟ್ರೋಲ್-ಡೀಸೆಲ್ ದರಗಳ (Petrol Diesel) ಮೇಲೆ ಇಂದು ಸ್ವಲ್ಪ ಬ್ರೇಕ್ ಬಿದ್ದಂತಾಗಿದೆ. ನಿನ್ನೆಗೆ ಹೋಲಿಸಿದರೆ ಬೆಂಗಳೂರು (Bengaluru) ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದು ಪೆಟ್ರೋಲ್-ಡೀಸೆಲ್ ಬೆಲೆ ದರಗಳಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಆದಾಗ್ಯೂ, ಕೆಲ ಜಿಲ್ಲೆಗಳಲ್ಲಿ ಕೆಲ ಪೈಸೆಗಳಷ್ಟು ಏರಿಕೆ/ಇಳಿಕೆ ಆಗಿರುವುದನ್ನು ಗಮನಿಸಬಹುದು. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International market) ಕಚ್ಚಾ ತೈಲದ ಬೆಲೆಯೂ ಇಳಿಯುತ್ತಿಲ್ಲ, ಇತ್ತ ದೇಶದಲ್ಲಿ ನಿತ್ಯ ಒಂದಿಷ್ಟು ಪೈಸೆಗಳಷ್ಟು ಪೆಟ್ರೋಲ್-ಡಿಸೆಲ್ ಬೆಲೆ ಏರುವುದು/ಇಳಿಯುವುದೂ ನಿಲ್ಲುತ್ತಿಲ್ಲ. ಕಳೆದ ಹತ್ತು ದಿನಗಳಲ್ಲಿ ದೇಶದೆಲ್ಲೆಡೆ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ ಹತ್ತು ರೂಪಾಯಿಗಿಂತಲೂ ಹೆಚ್ಚಳವಾಗಿ ಜನರು ಪರದಾಡುವಂತಾಗಿತ್ತು. ಆದರೆ ಕಳೆದ 2-3 ದಿನಗಳಿಂದ ಬೆಲೆಯಲ್ಲಿ ಸ್ಥಿರತೆ ಕಂಡುಬರುತ್ತಿದೆ.

ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.

ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 111.09 ಆಗಿದ್ದರೆ ಡೀಸೆಲ್ ದರ ರೂ. 94.79 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.110.85, ರೂ. 120.51, ರೂ. 115.12 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 100.94, ರೂ. 104.77, ರೂ. 99.83 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 105.41 ಆಗಿದ್ದರೆ ಡೀಸೆಲ್ ದರ ರೂ. 96.67 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು

ಬಾಗಲಕೋಟೆ - ರೂ. 111.77 (31 ಪೈಸೆ ಏರಿಕೆ)
ಬೆಂಗಳೂರು - ರೂ.111.09 (00)
ಬೆಂಗಳೂರು ಗ್ರಾಮಾಂತರ - ರೂ. 111.16 (00)
ಬೆಳಗಾವಿ - ರೂ. 111.21 (11 ಪೈಸೆ ಏರಿಕೆ)
ಬಳ್ಳಾರಿ - ರೂ. 112.91 (12 ಪೈಸೆ ಇಳಿಕೆ)
ಬೀದರ್ - ರೂ. 111.39 (24 ಪೈಸೆ ಇಳಿಕೆ)
ವಿಜಯಪುರ - ರೂ. 111.21 (13 ಪೈಸೆ ಇಳಿಕೆ)
ಚಾಮರಾಜನಗರ - ರೂ. 111.22 (00)
ಚಿಕ್ಕಬಳ್ಳಾಪುರ - ರೂ. 111.09 (00)
ಚಿಕ್ಕಮಗಳೂರು - ರೂ. 112.39 (4 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 113.67 (1 ರೂ. 16 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 110.29 (28 ಪೈಸೆ ಇಳಿಕೆ)
ದಾವಣಗೆರೆ - ರೂ. 112.72 (37 ಪೈಸೆ ಇಳಿಕೆ)
ಧಾರವಾಡ - ರೂ. 110.84 (00)
ಗದಗ - ರೂ. 111.38 (00)
ಕಲಬುರಗಿ - ರೂ. 110.81 (00)
ಹಾಸನ - ರೂ. 111.38 (43 ಪೈಸೆ ಏರಿಕೆ)
ಹಾವೇರಿ - ರೂ. 111.98 (00)
ಕೊಡಗು - ರೂ. 112.18 (37 ಪೈಸೆ ಇಳಿಕೆ)
ಕೋಲಾರ - ರೂ. 110.96 (17 ಪೈಸೆ ಏರಿಕೆ)
ಕೊಪ್ಪಳ - ರೂ. 112.18 (7 ಪೈಸೆ ಏರಿಕೆ)
ಮಂಡ್ಯ - ರೂ. 110.72 (62 ಪೈಸೆ ಇಳಿಕೆ)
ಮೈಸೂರು - ರೂ. 110.61 (00)
ರಾಯಚೂರು - ರೂ. 110.91 (99 ಪೈಸೆ ಇಳಿಕೆ)
ರಾಮನಗರ - ರೂ. 111.30 (26 ಪೈಸೆ ಇಳಿಕೆ)
ಶಿವಮೊಗ್ಗ - ರೂ. 112.56 (1 ಪೈಸೆ ಇಳಿಕೆ)
ತುಮಕೂರು - ರೂ. 111.61 (00)
ಉಡುಪಿ - ರೂ. 110.60 (21 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 111.65 (1 ರೂ. 65 ಪೈಸೆ ಇಳಿಕೆ)
ಯಾದಗಿರಿ - ರೂ. 111.53 (64 ಪೈಸೆ ಇಳಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ - ರೂ. 95.43
ಬೆಂಗಳೂರು - ರೂ. 94.79
ಬೆಂಗಳೂರು ಗ್ರಾಮಾಂತರ - ರೂ. 94.86
ಬೆಳಗಾವಿ - ರೂ. 94.93
ಬಳ್ಳಾರಿ - ರೂ. 96.45
ಬೀದರ್ - ರೂ. 95.08
ವಿಜಯಪುರ - ರೂ. 94.92
ಚಾಮರಾಜನಗರ - ರೂ. 94.90
ಚಿಕ್ಕಬಳ್ಳಾಪುರ - ರೂ. 94.79
ಚಿಕ್ಕಮಗಳೂರು - ರೂ. 95.88
ಚಿತ್ರದುರ್ಗ - ರೂ. 96.99
ದಕ್ಷಿಣ ಕನ್ನಡ - ರೂ. 94.03
ದಾವಣಗೆರೆ - ರೂ. 96.13
ಧಾರವಾಡ - ರೂ. 94.59
ಗದಗ - ರೂ. 95.07
ಕಲಬುರಗಿ - ರೂ. 94.56
ಹಾಸನ - ರೂ. 94.93
ಹಾವೇರಿ - ರೂ. 95.61
ಕೊಡಗು - ರೂ. 95.61
ಕೋಲಾರ - ರೂ. 94.68
ಕೊಪ್ಪಳ - ರೂ. 95.79
ಮಂಡ್ಯ - ರೂ. 94.45
ಮೈಸೂರು - ರೂ. 94.35
ರಾಯಚೂರು - ರೂ. 94.67
ರಾಮನಗರ - ರೂ. 94.98
ಶಿವಮೊಗ್ಗ - ರೂ. 96.04
ತುಮಕೂರು - ರೂ. 95.26
ಉಡುಪಿ - ರೂ. 94.31
ಉತ್ತರ ಕನ್ನಡ - ರೂ. 95.26
ಯಾದಗಿರಿ - ರೂ. 95.21
Published by:Divya D
First published: