ಇಂದು ರಾಜ್ಯದ (Karnataka) ಎಲ್ಲ ನಗರ ಕೇಂದ್ರಗಳಲ್ಲಿ ಇಂಧನ ಬೆಲೆಯಲ್ಲಿ (Fuel Prices) ಎಂದಿನಂತೆ ಅಲ್ಪ ಏರಿಳಿತಗಳು ಕಂಡುಬಂದಿದ್ದು ಬಳ್ಳಾರಿಯಲ್ಲಿ ಮಾತ್ರ ಪೆಟ್ರೋಲ್ ಬೆಲೆಯಲ್ಲಿ(Petrol Price) 1 ರೂ. 22 ಪೈಸೆಗಳಷ್ಟು ಇಳಿಕೆಯಾಗಿದೆ. ಕಚ್ಚಾ ತೈಲವನ್ನು ಪ್ರೊಸೆಸ್ ಮಾಡಿ ಉತ್ಪತ್ತಿ ಮಾಡಲಾಗುವ ಪೆಟ್ರೋಲ್ ಅಥವಾ ಡೀಸೆಲ್ (Petrol-Diesel) ದ್ರವ ರೂಪದಲ್ಲಿರುವ ಬಂಗಾರವೆಂದೇ ಪರಿಗಣಿಸಲಾಗುತ್ತದೆ, ಕಾರಣ ಜಾಗತಿಕವಾಗಿ ಅದಕ್ಕಿರುವ ಅಪಾರವಾದ ಮೌಲ್ಯ. ಏಕೆಂದರೆ ಬಸ್ಸುಗಳಾಗಲಿ, ರೈಲಾಗಲಿ ಅಥವಾ ದೊಡ್ಡ ಪ್ರಮಾಣದ ಕೈಗರಿಕೆಗಳಾಗಲಿ ಇಲ್ಲವೆ ವಿದ್ಯುತ್ ಉತ್ಪಾದನೆಗಾಗಲಿ ಇಂಧನವು ಬಳಸಲ್ಪಡುತ್ತದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.50 (23 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.01 (00)
ಬೆಳಗಾವಿ - ರೂ. 101.91 (63 ಪೈಸೆ ಇಳಿಕೆ)
ಬಳ್ಳಾರಿ - ರೂ. 103.04 (1 ರೂ. 22 ಪೈಸೆ ಇಳಿಕೆ)
ಬೀದರ್ - ರೂ. 102.70 (18 ಪೈಸೆ ಏರಿಕೆ)
ವಿಜಯಪುರ - ರೂ. 101.93 (31 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.13 (20 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 102 (40 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 103.70 (00)
ಚಿತ್ರದುರ್ಗ - ರೂ. 103.36 (26 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.34 (13 ಪೈಸೆ ಇಳಿಕೆ)
ದಾವಣಗೆರೆ - ರೂ. 103.29 (5 ಪೈಸೆ ಇಳಿಕೆ)
ಧಾರವಾಡ - ರೂ. 102.04 (19 ಪೈಸೆ ಏರಿಕೆ)
ಗದಗ - ರೂ. 102.19 (6 ಪೈಸೆ ಇಳಿಕೆ)
ಕಲಬುರಗಿ - ರೂ. 102.49 (35 ಪೈಸೆ ಏರಿಕೆ)
ಹಾಸನ - ರೂ. 101.94 (51 ಪೈಸೆ ಇಳಿಕೆ)
ಹಾವೇರಿ - ರೂ. 102.41 (50 ಪೈಸೆ ಏರಿಕೆ)
ಕೊಡಗು - ರೂ. 103.26 (00)
ಕೋಲಾರ - ರೂ. 102.10 (23 ಪೈಸೆ ಏರಿಕೆ)
ಕೊಪ್ಪಳ - ರೂ. 103.02 (8 ಪೈಸೆ ಏರಿಕೆ)
ಮಂಡ್ಯ - ರೂ. 101.86 (2 ಪೈಸೆ ಇಳಿಕೆ)
ಮೈಸೂರು - ರೂ. 101.50 (25 ಪೈಸೆ ಇಳಿಕೆ)
ರಾಯಚೂರು - ರೂ. 101.90 (6 ಪೈಸೆ ಏರಿಕೆ)
ರಾಮನಗರ - ರೂ. 102.45 (20 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.44 (14 ಪೈಸೆ ಇಳಿಕೆ)
ತುಮಕೂರು - ರೂ. 103.41 (60 ಪೈಸೆ ಏರಿಕೆ)
ಉಡುಪಿ - ರೂ. 102.25 (86 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 102.79 (78 ಪೈಸೆ ಏರಿಕೆ)
ವಿಜಯನಗರ - ರೂ. 103.29 (40 ಪೈಸೆ ಏರಿಕೆ)
ಯಾದಗಿರಿ - ರೂ. 102.65 (14 ಪೈಸೆ ಇಳಿಕೆ)
ಇದನ್ನೂ ಓದಿ: Money Mantra: ಈ ರಾಶಿಯವರಗಿಂದು ಪ್ರಮೋಷನ್ ಪಕ್ಕಾ! ಯಾರ್ ಏನೇ ಅಂದ್ರೂ ಗೆಲುವು ನಿಮ್ಮದೇ!
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.42
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 87.90
ಬಳ್ಳಾರಿ - ರೂ. 88.93
ಬೀದರ್ - ರೂ. 88.60
ವಿಜಯಪುರ - ರೂ. 87.90
ಚಾಮರಾಜನಗರ - ರೂ. 88.07
ಚಿಕ್ಕಬಳ್ಳಾಪುರ - ರೂ. 87.95
ಚಿಕ್ಕಮಗಳೂರು - ರೂ. 89.36
ಚಿತ್ರದುರ್ಗ - ರೂ. 88.99
ದಕ್ಷಿಣ ಕನ್ನಡ - ರೂ. 87.31
ದಾವಣಗೆರೆ - ರೂ. 88.92
ಧಾರವಾಡ - ರೂ. 88.01
ಗದಗ - ರೂ. 88.14
ಕಲಬುರಗಿ - ರೂ. 88.41
ಹಾಸನ - ರೂ. 87.71
ಹಾವೇರಿ - ರೂ. 88.34
ಕೊಡಗು - ರೂ. 88.92
ಕೋಲಾರ - ರೂ. 88.03
ಕೊಪ್ಪಳ - ರೂ. 88.89
ಮಂಡ್ಯ - ರೂ. 87.82
ಮೈಸೂರು - ರೂ. 87.49
ರಾಯಚೂರು - ರೂ. 87.89
ರಾಮನಗರ - ರೂ. 88.36
ಶಿವಮೊಗ್ಗ - 89.21
ತುಮಕೂರು - ರೂ. 89.22
ಉಡುಪಿ - ರೂ. 88.14
ಉತ್ತರ ಕನ್ನಡ - ರೂ. 88.63
ವಿಜಯನಗರ - ರೂ. 89.13
ಯಾದಗಿರಿ - ರೂ. 88.55
ಇಂಧನ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆ ಹೊಂದಿದೆ. ಇನ್ನು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಗಳು ಒಂದೇ ರೀತಿ ಯಾವಾಗಲೂ ಸ್ಥಿರವಾಗಿರುವುದಿಲ್ಲ. ಅವುಗಳ ಬೆಲೆಗಳು ಹಲವಾರು ಜಾಗತಿಕ ಅಂಶಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತದೆ. ಹಾಗಾಗಿ ಪ್ರತಿನಿತ್ಯ ಇಂಧನ ಬೆಲೆಗಳಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸಗಳಿದ್ದೇ ಇರುತ್ತವೆ.
ಕಳೆದ ವರ್ಷವಷ್ಟೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ ಕೆಲ ಸಮಯದ ನಂತರ ವಿಶ್ವದಲ್ಲೆಲ್ಲ ತೈಲದ ಅಪಾರ ಕೊರತೆಯುಂಟಾಗಿ ಕಚ್ಚಾ ತೈಲದ ಬೆಲೆಗಳು ಆಕಾಶದೆತ್ತರಕ್ಕೆ ಏರಿದ್ದವು. ಇದರಿಂದಾಗಿ ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಹುತೇಕ ಎಲ್ಲ ದೇಶಗಳು ಪರದಾಡಿದ್ದವು ಗೊತ್ತೇ ಇದೆ. ಆದರೆ ತದನಂತರ ಮತ್ತೆ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಆದಾಗ್ಯೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿತ್ಯ ಕಚ್ಚಾ ತೈಲದಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ