Petrol-Diesel Price Today: ಕೊಂಚ ಇಳಿಕೆ ಕಂಡ ಪೆಟ್ರೋಲ್ ದರ: ಎಲ್ಲಾ ಜಿಲ್ಲೆಗಳಲ್ಲಿನ ತೈಲಬೆಲೆ ಮಾಹಿತಿ ಇಲ್ಲಿದೆ

ಪೆಟ್ರೋಲ್ ದರ

ಪೆಟ್ರೋಲ್ ದರ

ಪೆಟ್ರೋಲ್ ಮತ್ತು ಡೀಸೆಲ್ ಬಹುಪಾಲು ಜನರ ದೈನಂದಿನ ಜೀವನದ ಒಂದು ಭಾಗವಾಗಿ ಬಿಟ್ಟಿದೆ. ವಾಹನ ಸವಾರರು ಎಲ್ಲೇ ಹೋಗಬೇಕಿದ್ರೂ ಪೆಟ್ರೋಲ್ ಅಥವಾ ಡೀಸೆಲ್ ಇಲ್ಲದೆ ಹೋಗೋಕಾಗಲ್ಲ. ಹೀಗಾಗಿ ಸಹಜವಾಗಿಯೇ ಪ್ರತಿ ದಿನ ತೈಲ ಬೆಲೆ ಏರಿಳಿಕೆಯ ಬಗ್ಗೆ ಗಮನ ವಹಿಸ್ತಾರೆ. ಇಂದು ನಿಮ್ಮ ನಗರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ವಿವರ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Bangalore, India
  • Share this:

ಬೆಂಗಳೂರು: ಪೆಟ್ರೋಲ್-ಡೀಸೆಲ್‌ಗಳು (Petrol Diesel) ಈಗ ಪ್ರತಿಯೊಂದು ಊರು, ಕೇರಿ, ದೇಶಗಳ ಅವಿಭಾಜ್ಯ ಅಂಗ. ಇಂಧನ ಬೆಲೆ (Fuel Price) ಏರಿಕೆ ಒಂದು ಸರಪಳಿ ಇದ್ದ ಹಾಗೆ. ಯಾಕೆಂದರೆ ತೈಲ ಬೆಲೆ ಏರಿಕೆ (Petrol Price) ಕಂಡರೆ ಸಹಜವಾಗಿಯೇ ಅದನ್ನು ಅವಲಂಬಿಸಿರುವ ಬಸ್‌ ದರ, ಕ್ಯಾಬ್‌, ದರ, ತರಕಾರಿ, ಬ್ಯಾಂಕ್‌ ಬಡ್ಡಿ ದರ, ಕೊರಿಯರ್‌ ಸೇವೆ ಅಷ್ಟೇ ಯಾಕೆ ದೇಶದ ಕರೆನ್ಸಿ ಮೇಲೂ ಪರಿಣಾಮ ಬೀರುತ್ತದೆ.


ಹೀಗಾಗಿ ಪ್ರತಿನಿತ್ಯ ಗಾಡಿಗೆ ಇಂಧನ ತುಂಬಿಸಿ ಕೆಲಸ-ಕಾರ್ಯಗಳಿಗೆ ಹೋಗುವವರಿಂದ ಹಿಡಿದು ಬಸ್‌, ಕ್ಯಾಬ್‌ ಅಂತಾ ಇತರೆ ಸಾರ್ವಜನಿಕ ಮತ್ತು ಬಾಡಿಗೆ ವಾಹನಗಳನ್ನು ಹಿಡಿದು ಹೋಗುವವರಿಗೆ ಈ ಇಂಧನ ಬೆಲೆಯದ್ದೇ ಚಿಂತೆ. ಹೀಗಾಗಿ ಪ್ರತಿಯೊಬ್ಬ ನಾಗರೀಕನೂ ಇಂಧನ ಬೆಲೆ ಕೈಸುಡದಂತೆ ಇರಲಿ ಎಂದು ಬಯಸುತ್ತಾನೆ.


ಇದನ್ನೂ ಓದಿ: Bengaluru: ಕದ್ದ ಚಿನ್ನ ವಾಪಸ್ ಮಾಡು ಅಂದ್ರೆ ಹೈಡ್ರಾಮಾ! ವೈರಲ್​ ವಿಡಿಯೋ ಹಿಂದಿನ ಸೀಕ್ರೆಟ್ ರಿವೀಲ್


ಹಾಗಾದರೆ ಇಂದು ಪೆಟ್ರೋಲ್‌, ಡೀಸೆಲ್‌ ಬೆಲೆ ಎಷ್ಟಾಗಿದೆ? ಎಲ್ಲೆಲ್ಲಿ ಇಳಿಕೆ, ಏರಿಕೆ ಕಂಡಿದೆ ಎಂಬುದನ್ನು ಇಲ್ಲಿ ತಿಳಿಯೋಣ.


ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.60 (3 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.09 (15 ಪೈಸೆ ಏರಿಕೆ)
ಬೆಳಗಾವಿ - ರೂ. 102.64 (28 ಪೈಸೆ ಏರಿಕೆ)
ಬಳ್ಳಾರಿ - ರೂ. 103.90 (83 ಪೈಸೆ ಏರಿಕೆ)
ಬೀದರ್ - ರೂ. 102.28 (21 ಪೈಸೆ ಇಳಿಕೆ)
ವಿಜಯಪುರ - ರೂ. 102.06 (23 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.06 (1 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.94 (00)
ಚಿಕ್ಕಮಗಳೂರು - ರೂ. 102.66 (19 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.90 (90 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.13 (3 ಪೈಸೆ ಇಳಿಕೆ)
ದಾವಣಗೆರೆ - ರೂ. 103.91 (16 ಪೈಸೆ ಇಳಿಕೆ)
ಧಾರವಾಡ - ರೂ. 101.71 (00)
ಗದಗ - ರೂ. 102.25 (39 ಪೈಸೆ ಇಳಿಕೆ)
ಕಲಬುರಗಿ - ರೂ. 101.71 (71 ಪೈಸೆ ಇಳಿಕೆ)
ಹಾಸನ - ರೂ. 101.94 (24 ಪೈಸೆ ಇಳಿಕೆ)
ಹಾವೇರಿ - ರೂ. 102.89 (24 ಪೈಸೆ ಏರಿಕೆ)
ಕೊಡಗು - ರೂ. 103.31 (5 ಪೈಸೆ ಏರಿಕೆ)
ಕೋಲಾರ - ರೂ. 101.87 (27 ಪೈಸೆ ಇಳಿಕೆ)
ಕೊಪ್ಪಳ - ರೂ. 103.05 (10 ಪೈಸೆ ಇಳಿಕೆ)
ಮಂಡ್ಯ - ರೂ. 102.17 (29 ಪೈಸೆ ಏರಿಕೆ)
ಮೈಸೂರು - ರೂ. 101.63 (10 ಪೈಸೆ ಇಳಿಕೆ)
ರಾಯಚೂರು - ರೂ. 102.62 (33 ಪೈಸೆ ಏರಿಕೆ)
ರಾಮನಗರ - ರೂ. 102.39 (11 ಪೈಸೆ ಏರಿಕೆ)
ಶಿವಮೊಗ್ಗ - ರೂ. 102.93 (74 ಪೈಸೆ ಇಳಿಕೆ)
ತುಮಕೂರು - ರೂ. 102.45 (19 ಪೈಸೆ ಏರಿಕೆ)
ಉಡುಪಿ - ರೂ. 101.39 (63 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.94 (15 ಪೈಸೆ ಏರಿಕೆ)
ವಿಜಯನಗರ - ರೂ. 103.12 (61 ಪೈಸೆ ಏರಿಕೆ)
ಯಾದಗಿರಿ - ರೂ. 102.79 (00)


ಇದನ್ನೂ ಓದಿ: Petrol-Diesel Price Today: ವಿಜಯನಗರದಲ್ಲಿ ಪೆಟ್ರೋಲ್ ದರ 1.28 ಪೈಸೆ ಇಳಿಕೆ; ಉಳಿದ ಜಿಲ್ಲೆಗಳಲ್ಲಿ ಎಷ್ಟಿದೆ ಬೆಲೆ ನೋಡಿ


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.51
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 88.03
ಬೆಳಗಾವಿ - ರೂ. 88.55
ಬಳ್ಳಾರಿ - ರೂ. 88.68
ಬೀದರ್ - ರೂ. 88.23
ವಿಜಯಪುರ - ರೂ. 88.02
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.38
ಚಿತ್ರದುರ್ಗ - ರೂ. 89.48
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.48
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.71
ಹಾವೇರಿ - ರೂ. 88.77
ಕೊಡಗು - ರೂ. 88.97
ಕೋಲಾರ - ರೂ. 87.83
ಕೊಪ್ಪಳ - ರೂ. 88.91
ಮಂಡ್ಯ - ರೂ. 88.10
ಮೈಸೂರು - ರೂ. 87.61
ರಾಯಚೂರು - ರೂ. 88.54
ರಾಮನಗರ - ರೂ. 88.29
ಶಿವಮೊಗ್ಗ - 88.65
ತುಮಕೂರು - ರೂ. 88.36
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 88.76
ವಿಜಯನಗರ - ರೂ. 88.98
ಯಾದಗಿರಿ - ರೂ. 88.68




ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪೆಟ್ರೋಲ್ ಹಾಗೂ ಡೀಸಲ್ ಬೆಲೆಗಳನ್ನು ನಿರ್ಧರಿಸಲು ಪ್ರಮುಖ ಪಾತ್ರವಹಿಸುತ್ತದೆ. ಪ್ರತಿನಿತ್ಯ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿಂದಾಗಿ ಇಂಧನ ಅಥವಾ ಕಚ್ಚಾ ತೈಲದ ಬೆಲೆಗಳು ಪ್ರಭಾವಿಸಲ್ಪಡುತ್ತಿರುತ್ತವೆ. ಉದಾಹರಣೆಗೆ ಕಳೆದ ವರ್ಷ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆಗಳು ಆಗಸದೆತ್ತರಕ್ಕೆ ಏರಿದ್ದವು.

First published: