ಬೆಂಗಳೂರು: ಪೆಟ್ರೋಲ್ - ಡೀಸೆಲ್ (Petrol and Diesel) ಇಲ್ಲದೇ ಜೀವನವೇ ಸಾಗೋದಿಲ್ಲ ಅನ್ನೋವಷ್ಟರ ವಾಹನ ಸವಾರರ ಬದುಕು ಬಂದು ನಿಂತಿದೆ. ದುಡಿಮೆ, ಆಫೀಸ್ ಸೇರಿದಂತೆ ಏನೇ ಓಡಾಟ ಮಾಡೋದಿದ್ದರೂ ವಾಹನ ಇದ್ದವರಿಗೆ ತೈಲ ಬೆಲೆಯದ್ದೇ ಚಿಂತೆ. ಯಾವಾಗಪ್ಪಾ ಪೆಟ್ರೋಲ್, ಡೀಸೆಲ್ ಬೆಲೆ (Diesel Price) ಇಳಿಕೆ ಆಗುತ್ತೆ ಅಂತಾ ಕಳೆದ ಅನೇಕ ಸಮಯಗಳಿಂದ ಕಾಯುತ್ತಲೇ ಬಂದಿದ್ದಾರೆ. ಹೀಗಾಗಿ ದೈನಂದಿನ ಬದುಕಿನ ಅತ್ಯಗತ್ಯ ವಸ್ತುಗಳಲ್ಲಿ ಒಂದಾದ ತೈಲ ಬೆಲೆಯ ಏರಿಳಿತ ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಹಾವು ಏಣಿಯಾಟ ತರ ಆಗುತ್ತಿರುತ್ತದೆ. ಪೈಸೆ ಲೆಕ್ಕದಲ್ಲಿ (Petrol Rate) ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಆದರೂ ಕೂಡ ಸಂಭ್ರಮಿಸುವ ಅನೇಕ ವಾಹನ ಸವಾರರು ನಮ್ಮ ಮಧ್ಯೆಯೇ ಇರುತ್ತಾರೆ. ಹೀಗಾಗಿ ಇಂದು (ಭಾನುವಾರ) ತೈಲ ಎಷ್ಟಿದೆ ಅನ್ನೋದರ ಕುರಿತ ವಿವರ ಇಲ್ಲಿದೆ.
ದೇಶದ ಪ್ರಮುಖ ನಗರಗಳಲ್ಲಿ ತೈಲ ಬೆಲೆ ಎಷ್ಟಿದೆ?
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ, ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ ನಲ್ಲಿ ಪೆಟ್ರೋಲ್ ದರ 102.73 ಇದ್ದರೆ, ಮುಂಬೈನಲ್ಲಿ 106.31, ಮತ್ತು ಕೊಲ್ಕತ್ತಾದಲ್ಲಿ 106.3 ಇದೆ. ಇನ್ನು ಅದೇ ನಗರಗಳಲ್ಲಿ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನುಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಇದನ್ನೂ ಓದಿ: Career Tips: ಒಳ್ಳೆಯ ಸಂಬಳವಿದ್ದರೂ ಉದ್ಯೋಗಿಗಳು ಕೆಲಸ ಬಿಡಲು ಕಾರಣವೇನು ಗೊತ್ತೇ, ನಿಜಕ್ಕೂ ಶಾಕಿಂಗ್
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೇಗಿದೆ ತೈಲ ದರ?
- ಬಾಗಲಕೋಟೆ - ರೂ. 102.48 (0.07 ಪೈಸೆ ಇಳಿಕೆ)
- ಬೆಂಗಳೂರು - ರೂ. 101.94 (ತಟಸ್ಥ)
- ಬೆಂಗಳೂರು ಗ್ರಾಮಾಂತರ - ರೂ. 101.94 (0.15 ಪೈಸೆ ಇಳಿಕೆ)
- ಬೆಳಗಾವಿ - ರೂ. 102.59 (0.05 ಪೈಸೆ ಇಳಿಕೆ)
- ಬಳ್ಳಾರಿ - ರೂ. 103.61 (0.12 ಪೈಸೆ ಇಳಿಕೆ)
- ಬೀದರ್ - ರೂ. 102.28 (ತಟಸ್ಥ)
- ಚಾಮರಾಜನಗರ - ರೂ. 102.10 (0.04 ಪೈಸೆ ಏರಿಕೆ)
- ಚಿಕ್ಕಬಳ್ಳಾಪುರ - ರೂ. 101.94 (ತಟಸ್ಥ)
- ಚಿಕ್ಕಮಗಳೂರು - ರೂ. 103.12 (0.19 ಪೈಸೆ ಏರಿಕೆ)
- ಚಿತ್ರದುರ್ಗ - ರೂ. 103.00 (0.90 ಪೈಸೆ ಇಳಿಕೆ)
- ದಕ್ಷಿಣ ಕನ್ನಡ - ರೂ. 101.65 (0.31 ಪೈಸೆ ಏರಿಕೆ)
- ದಾವಣಗೆರೆ - ರೂ. 103.41 (0.50 ಪೈಸೆ ಇಳಿಕೆ)
- ಧಾರವಾಡ - ರೂ. 101.71 (0.01 ಪೈಸೆ ಏರಿಕೆ)
- ಗದಗ - ರೂ. 102.38 (0.13 ಪೈಸೆ ಏರಿಕೆ)
- ಕಲಬುರಗಿ - ರೂ. 102.44 (0.34 ಪೈಸೆ ಏರಿಕೆ)
- ಹಾಸನ - ರೂ. 101.94 (0.24 ಪೈಸೆ ಇಳಿಕೆ)
- ಹಾವೇರಿ - ರೂ. 102.38 (51 ಪೈಸೆ ಇಳಿಕೆ)
- ಕೊಡಗು - ರೂ. 103.26 (0.05 ಪೈಸೆ ಇಳಿಕೆ)
- ಕೋಲಾರ - ರೂ. 101.81 (0.06 ಪೈಸೆ ಇಳಿಕೆ)
- ಕೊಪ್ಪಳ - ರೂ. 102.86 (35 ಪೈಸೆ ಇಳಿಕೆ)
- ಮಂಡ್ಯ - ರೂ. 102.17 (ತಟಸ್ಥ)
- ಮೈಸೂರು - ರೂ. 101.50 (ತಟಸ್ಥ)
- ರಾಯಚೂರು - ರೂ. 101.84 (83 ಪೈಸೆ ಇಳಿಕೆ)
- ರಾಮನಗರ - ರೂ. 102.39 (ತಟಸ್ಥ)
- ಶಿವಮೊಗ್ಗ - ರೂ. 102.90 (0.03 ಪೈಸೆ ಇಳಿಕೆ)
- ತುಮಕೂರು - ರೂ. 102.81 (0.36 ಪೈಸೆ ಏರಿಕೆ)
- ಉಡುಪಿ - ರೂ. 101.81 (0.22 ಪೈಸೆ ಏರಿಕೆ)
- ಉತ್ತರ ಕನ್ನಡ - ರೂ. 102.37 (0.57 ಪೈಸೆ ಏರಿಕೆ)
- ಯಾದಗಿರಿ - ರೂ. 102.43 (0.12 ಪೈಸೆ ಏರಿಕೆ)
ಇದನ್ನೂ ಓದಿ: Petrol-Diesel Price Today: ಇಂದು ರಾಜ್ಯದ ಯಾವ ಜಿಲ್ಲೆಗಳಲ್ಲಿ ಪೆಟ್ರೋಲ್-ಡೀಸೆಲ್ ದರ ಏರಿಕೆ ಆಗಿದೆ?
ಇನ್ನು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಡೀಸೆಲ್ ದರ ಹೀಗಿದೆ.
- ಬಾಗಲಕೋಟೆ - ರೂ. 88.40
- ಬೆಂಗಳೂರು - ರೂ. 87.89
- ಬೆಂಗಳೂರು ಗ್ರಾಮಾಂತರ - ರೂ. 87.89
- ಬೆಳಗಾವಿ - ರೂ. 88.50
- ಬಳ್ಳಾರಿ - ರೂ. 89.42
- ಬೀದರ್ - ರೂ. 88.23
- ಚಾಮರಾಜನಗರ - ರೂ. 88.04
- ಚಿಕ್ಕಬಳ್ಳಾಪುರ - ರೂ. 87.89
- ಚಿಕ್ಕಮಗಳೂರು - ರೂ. 88.60
- ಚಿತ್ರದುರ್ಗ - ರೂ. 88.66
- ದಕ್ಷಿಣ ಕನ್ನಡ - ರೂ. 87.60
- ದಾವಣಗೆರೆ - ರೂ. 89.04
- ಧಾರವಾಡ - ರೂ. 87.71
- ಗದಗ - ರೂ. 88.31
- ಕಲಬುರಗಿ - ರೂ. 88.37
- ಹಾಸನ - ರೂ. 87.71
- ಹಾವೇರಿ - ರೂ. 88.31
- ಕೊಡಗು - ರೂ. 88.92
- ಕೋಲಾರ - ರೂ. 87.77
- ಕೊಪ್ಪಳ - ರೂ. 88.75
- ಮಂಡ್ಯ - ರೂ. 88.10
- ಮೈಸೂರು - ರೂ. 87.49
- ರಾಯಚೂರು - ರೂ. 87.84
- ರಾಮನಗರ - ರೂ. 88.29
- ಶಿವಮೊಗ್ಗ - 88.63
- ತುಮಕೂರು - ರೂ. 88.68
- ಉಡುಪಿ - ರೂ. 87.74
- ಉತ್ತರ ಕನ್ನಡ - ರೂ. 88.25
- ಯಾದಗಿರಿ - ರೂ. 88.36
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಪೆಟ್ರೋಲ್ ಹಾಗೂ ಡೀಸಲ್ ಬೆಲೆಗಳನ್ನು ನಿರ್ಧರಿಸಲು ಪ್ರಮುಖ ಪಾತ್ರವಹಿಸುತ್ತದೆ. ಪ್ರತಿನಿತ್ಯ ಹಲವಾರು ಅಂತಾರಾಷ್ಟ್ರೀಯ ಕಾರಣಗಳಿಂದಾಗಿ ಇಂಧನ ಅಥವಾ ಕಚ್ಚಾ ತೈಲದ ಬೆಲೆಗಳು ಪ್ರಭಾವಿಸಲ್ಪಡುತ್ತಿರುತ್ತವೆ. ಉದಾಹರಣೆಗೆ ಕಳೆದ ವರ್ಷ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆಗಳು ಆಗಸದೆತ್ತರಕ್ಕೆ ಏರಿದ್ದವು.
ಇತ್ತೀಚಿಗಷ್ಟೇ ರಷ್ಯಾದಿಂದಲೂ ಸಹ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗೆ ಆಮದು ಮಾಡಿಕೊಂಡ ಕಚ್ಚಾ ತೈಲವನ್ನು ತದನಂತರ ಇಲ್ಲಿ ಸಂಸ್ಕರಿಸಿ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ದೇಶಾದ್ಯಂತ ವಿತರಿಸಲಾಗುತ್ತದೆ.