ಇಂಧನ (Fuel) ಎಂಬುದು ಇಂದಿನ ಜಗತ್ತಿನ ಅತ್ಯಂತ ಅವಶ್ಯಕ ಅಗತ್ಯತೆಗಳಲ್ಲಿ ಒಂದಾಗಿದೆ. ದಿನ ಬೆಳಗಾದರೆ ಸಾಕು ರಸ್ತೆಗಿಳಿಯುವ ವಾಹನಗಳು ಹಾಗೂ ಹಲವು ಕೈಗಾರಿಕೆಗಳು ಇಂಧನವಿಲ್ಲದೆ (Petrol-Diesel) ಕಾರ್ಯಾಚರಣೆ ಮಾಡಲು ಸಾಧ್ಯವೇ ಇಲ್ಲ. ಹಾಗಾಗಿ ಇಂಧನಕ್ಕೆ ಸಾಕಷ್ಟು ಡಿಮ್ಯಾಂಡ್ ಇದೆ. ಕಳೆದ ವರ್ಷ ರಷ್ಯಾ ಉಕ್ರೇನ್ ಮೇಲೆ ಯುದ್ಧ ಸಾರಿದ್ದ ಸಂದರ್ಭದಲ್ಲಿ ಕಚ್ಚಾ ತೈಲದ ಪೂರೈಕೆ ಸರಪಣಿಯ೦ಲ್ಲಿ ಅಡಚಣೆ ಉಂಟಾಗಿತ್ತು. ಇದರ ಪರಿಣಾಮದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ವಿಪರೀತವಾಗಿ ಏರಿದ್ದನ್ನು(Price Hike) ಇಲ್ಲಿ ನೆನಪಿಸಿಕೊಳ್ಳಬಹುದು. ಭಾರತವು ಸಹ ಕಚ್ಚಾ ತೈಲದ ಬೆಲೆ ಏರಿಕೆಯ ಪೆಟ್ಟನ್ನು ತಿಂದಿತ್ತು.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಇಂಧನ ದರಗಳಲ್ಲಿ ಅಲ್ಪ ಏರಿಕೆಯಾಗಿದೆ. ಪೆಟ್ರೋಲ್ ರೂ. 102.01 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.62 (23 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.01 (24 ಪೈಸೆ ಇಳಿಕೆ)
ಬೆಳಗಾವಿ - ರೂ. 102.54 (63 ಪೈಸೆ ಏರಿಕೆ)
ಬಳ್ಳಾರಿ - ರೂ. 103.90 (69 ಪೈಸೆ ಏರಿಕೆ)
ಬೀದರ್ - ರೂ. 102.28 (85 ಪೈಸೆ ಇಳಿಕೆ)
ವಿಜಯಪುರ - ರೂ. 101.72 (40 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.06 (7 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.94 (45 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 102.93 (13 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.82 (27 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.13 (64 ಪೈಸೆ ಇಳಿಕೆ)
ದಾವಣಗೆರೆ - ರೂ. 103.91 (35 ಪೈಸೆ ಇಳಿಕೆ)
ಧಾರವಾಡ - ರೂ. 101.99 (29 ಪೈಸೆ ಏರಿಕೆ)
ಗದಗ - ರೂ. 102.25 (50 ಪೈಸೆ ಇಳಿಕೆ)
ಕಲಬುರಗಿ - ರೂ. 101.71 (74 ಪೈಸೆ ಇಳಿಕೆ)
ಹಾಸನ - ರೂ. 101.94 (44 ಪೈಸೆ ಇಳಿಕೆ)
ಹಾವೇರಿ - ರೂ. 102.84 (9 ಪೈಸೆ ಏರಿಕೆ)
ಕೊಡಗು - ರೂ. 103.32 (6 ಪೈಸೆ ಏರಿಕೆ)
ಕೋಲಾರ - ರೂ. 102.16 (29 ಪೈಸೆ ಏರಿಕೆ)
ಕೊಪ್ಪಳ - ರೂ. 103.21 (35 ಪೈಸೆ ಏರಿಕೆ)
ಮಂಡ್ಯ - ರೂ. 101.88 (10 ಪೈಸೆ ಏರಿಕೆ)
ಮೈಸೂರು - ರೂ. 101.72 (22 ಪೈಸೆ ಏರಿಕೆ)
ರಾಯಚೂರು - ರೂ. 102.62 (16 ಪೈಸೆ ಇಳಿಕೆ)
ರಾಮನಗರ - ರೂ. 102.40 (35ಪೈಸೆ ಏರಿಕೆ)
ಶಿವಮೊಗ್ಗ - ರೂ. 103.58 (42 ಪೈಸೆ ಏರಿಕೆ)
ತುಮಕೂರು - ರೂ. 102.45 (68 ಪೈಸೆ ಇಳಿಕೆ)
ಉಡುಪಿ - ರೂ. 101.39 (44 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.94 (93 ಪೈಸೆ ಏರಿಕೆ)
ವಿಜಯನಗರ - ರೂ. 103.12 (8 ಪೈಸೆ ಇಳಿಕೆ)
ಯಾದಗಿರಿ - ರೂ. 102.31 (13 ಪೈಸೆ ಇಳಿಕೆ)
ಇದನ್ನೂ ಓದಿ: PM Narendra Modi: ಇಂದು ಬೆಳಗಾವಿಯಲ್ಲಿ ದೇಶದ ರೈತರಿಗೆ ಗುಡ್ ನ್ಯೂಸ್ ಕೊಡಲಿದ್ದಾರೆ ಪ್ರಧಾನಿ ಮೋದಿ
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.53
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.46
ಬಳ್ಳಾರಿ - ರೂ. 89.68
ಬೀದರ್ - ರೂ. 88.23
ವಿಜಯಪುರ - ರೂ. 87.71
ಚಾಮರಾಜನಗರ - ರೂ. 88
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.64
ಚಿತ್ರದುರ್ಗ - ರೂ. 89.41
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.48
ಧಾರವಾಡ - ರೂ. 87.96
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.71
ಹಾವೇರಿ - ರೂ. 88.73
ಕೊಡಗು - ರೂ. 88.98
ಕೋಲಾರ - ರೂ. 88.09
ಕೊಪ್ಪಳ - ರೂ. 89.08
ಮಂಡ್ಯ - ರೂ. 87.84
ಮೈಸೂರು - ರೂ. 87.70
ರಾಯಚೂರು - ರೂ. 88.54
ರಾಮನಗರ - ರೂ. 88.31
ಶಿವಮೊಗ್ಗ - 89.24
ತುಮಕೂರು - ರೂ. 88.36
ಉಡುಪಿ - ರೂ. 87.36
ಉತ್ತರ ಕನ್ನಡ - ರೂ. 88.76
ವಿಜಯನಗರ - ರೂ. 88.98
ಯಾದಗಿರಿ - ರೂ. 88.25
ಇಂಧನವು ನವೀಕರಿಸಲಾಗದ ಶಕ್ತಿಯ ಮೂಲಗಳಾಗಿರುವುದರಿಂದ ಸಮಯೋಚಿತ ಹಾಗೂ ಅರ್ಥಗರ್ಭಿತವಾಗಿ ಇದನ್ನು ಬಳಸಬೇಕಾಗಿರುವುದು ಅವಶ್ಯಕ. ಇದು ದ್ರವರೂಪದಲ್ಲಿರುವ ಬಂಗಾರವಿದ್ದಂತೆ ಎನ್ನಬಹುದು. ಇನ್ನು ಇಂಧನದ ರೂಪವಾದ ಕಚ್ಚಾ ತೈಲವನ್ನು ಭೂಗರ್ಭ ಅಥವಾ ಸಮುದ್ರ ಗರ್ಭದಿಂದ ಹೊರತೆಗೆದು ಅದನ್ನು ಸಂಸ್ಕರಿಸಿ ಅದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಅನ್ನು ಉತ್ಪಾದಿಸಲಾಗುತ್ತದೆ.
ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಗಳಿಗೆ ಎಲ್ಲೆಡೆ ಬೇಡಿಕೆಯಿದ್ದು ನಿತ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಲವು ಅಂಶಗಳಿಂದಾಗಿ ಕಚ್ಚಾ ತೈಲದ ಬೆಲೆಗಳು ಪ್ರಭಾವಿಸಲ್ಪಡುತ್ತಿರುತ್ತವೆ. ಭಾರತದಲ್ಲಿ ಯಾವುದೇ ತೈಲ ನಿಕ್ಷೇಪಗಳಿರದ ಕಾರಣ ತನ್ನ ನಿತ್ಯದ ಅಗಾಧ ಪೂರೈಕೆಗಾಗಿ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹಾಗೂ ಸಾಕಷ್ಟು ಏರಿಳಿತ ಉಂಟಾಗುವ ಮಾರುಕಟ್ಟೆ ಬೆಲೆಗಳಿಂದಾಗಿ ಭಾರತದಲ್ಲೂ ಇಂಧನದ ಬೆಲೆಗಳು ಪ್ರಭಾವಿಸಲ್ಪಡುತ್ತಿರುತ್ತವೆ. ಕಚ್ಚಾ ತೈಲದ ವ್ಯಾಪಾರ ವಹಿವಾಟು ನಿತ್ಯ ವಿಶ್ವಾದ್ಯಂತ ಕೋಟಿ ಡಾಲರ್ ಗಳಷ್ಟು ನಡೆಯುತ್ತಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ