ಇಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಇಂಧನ ಬೆಲೆಗಳ (Fuel Price) ಮೇಲೆ ಒಂದು ನೋಟ ಬೀರುವುದಾದರೆ ಕೆಲ ಪೈಸೆಗಳಷ್ಟು ಚಿಕ್ಕಪುಟ್ಟ ವ್ಯತ್ಯಾಸಗಳೊಂದಿಗೆ ಬಹುತೇಕ ಎಲ್ಲೆಡೆ ಪೆಟ್ರೋಲ್ ಹಾಗೂ ಡೀಸೆಲ್ ದರಗಳು (Petrol-Diesel Price ) ಸ್ಥಿರವಾಗಿವೆ. ಅಷ್ಟಕ್ಕೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ನೇರವಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗಳ ಮೇಲೆ ಅವಲಂಬಿತವಾಗಿದ್ದು ನಿತ್ಯ ಬದಲಾಗುತ್ತಲೇ ಇರುತ್ತದೆ. ಕಳೆದ ವರ್ಷ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಿದ್ದ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆಗಳು ತ್ವರಿತವಾಗಿ ಗಗಮನಮುಖಿ ಮೊತ್ತಕ್ಕೆ ಏರಿಕೆಯಾಗಿದ್ದವು. ಈ ಸಂದರ್ಭದಲ್ಲಿ ಜಾಗತಿಕವಾಗಿ ಎಲ್ಲೆಡೆ ಪಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಅತಿಯಾಗಿ ಏರಿದ್ದವು ಹಾಗೂ ಭಾರತವು ಇದರಲ್ಲಿ ಹೊರತಾಗಿರಲಿಲ್ಲ. ಕ್ರಮೇಣ ಮತ್ತೆ ಬೆಲೆಗಳು ನಿಯಂತ್ರಣಕ್ಕೆ ಬಂದಿವೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.75, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.34, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.48 (2 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 101.94 (7 ಪೈಸೆ ಇಳಿಕೆ)
ಬೆಳಗಾವಿ - ರೂ. 102.59 (68 ಪೈಸೆ ಏರಿಕೆ)
ಬಳ್ಳಾರಿ - ರೂ. 103.61 (54 ಪೈಸೆ ಏರಿಕೆ)
ಬೀದರ್ - ರೂ. 102.28 (42 ಪೈಸೆ ಇಳಿಕೆ)
ವಿಜಯಪುರ - ರೂ. 101.72 (20 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.10 (3 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.94 (6 ಪೈಸೆ ಇಳಿಕೆ)
ಚಿಕ್ಕಮಗಳೂರು - ರೂ. 103.12 (58 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103 (36 ಪೈಸೆ ಇಳಿಕೆ)
ದಕ್ಷಿಣ ಕನ್ನಡ - ರೂ. 101.85 (51 ಪೈಸೆ ಏರಿಕೆ)
ದಾವಣಗೆರೆ - ರೂ. 103.41 (12 ಪೈಸೆ ಏರಿಕೆ)
ಧಾರವಾಡ - ರೂ. 101.71 (33 ಪೈಸೆ ಇಳಿಕೆ)
ಗದಗ - ರೂ. 102.38 (19 ಪೈಸೆ ಏರಿಕೆ)
ಕಲಬುರಗಿ - ರೂ. 102.44 (5 ಪೈಸೆ ಇಳಿಕೆ)
ಹಾಸನ - ರೂ. 102.33 (37 ಪೈಸೆ ಏರಿಕೆ)
ಹಾವೇರಿ - ರೂ. 102.38 (14 ಪೈಸೆ ಏರಿಕೆ)
ಕೊಡಗು - ರೂ. 103.26 (30 ಪೈಸೆ ಇಳಿಕೆ)
ಕೋಲಾರ - ರೂ. 101.81 (6 ಪೈಸೆ ಇಳಿಕೆ)
ಕೊಪ್ಪಳ - ರೂ. 103.10 (24 ಪೈಸೆ ಏರಿಕೆ)
ಮಂಡ್ಯ - ರೂ. 102.17 (31 ಪೈಸೆ ಏರಿಕೆ)
ಮೈಸೂರು - ರೂ. 101.50 (00)
ರಾಯಚೂರು - ರೂ. 101.84 (00)
ರಾಮನಗರ - ರೂ. 102.39 (11 ಪೈಸೆ ಏರಿಕೆ)
ಶಿವಮೊಗ್ಗ - ರೂ. 102.90 (54 ಪೈಸೆ ಇಳಿಕೆ)
ತುಮಕೂರು - ರೂ. 102.81 (60 ಪೈಸೆ ಇಳಿಕೆ)
ಉಡುಪಿ - ರೂ. 101.81 (44 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.37 (42 ಪೈಸೆ ಇಳಿಕೆ)
ವಿಜಯನಗರ - ರೂ. 104.17 (88 ಪೈಸೆ ಏರಿಕೆ)
ಯಾದಗಿರಿ - ರೂ. 102.79 (14 ಪೈಸೆ ಏರಿಕೆ)
ಇದನ್ನೂ ಓದಿ: LPG Cylinder Price: ಬಜೆಟ್ ದಿನ ಎಲ್ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಯ್ತಾ? ಇಳಿಕೆಯಾಯ್ತಾ?
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.40
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.89
ಬೆಳಗಾವಿ - ರೂ. 88.50
ಬಳ್ಳಾರಿ - ರೂ. 89.42
ಬೀದರ್ - ರೂ. 88.23
ವಿಜಯಪುರ - ರೂ. 87.71
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.60
ಚಿತ್ರದುರ್ಗ - ರೂ. 88.66
ದಕ್ಷಿಣ ಕನ್ನಡ - ರೂ. 87.78
ದಾವಣಗೆರೆ - ರೂ. 89.04
ಧಾರವಾಡ - ರೂ. 87.71
ಗದಗ - ರೂ. 88.31
ಕಲಬುರಗಿ - ರೂ. 88.37
ಹಾಸನ - ರೂ. 88.06
ಹಾವೇರಿ - ರೂ. 88.31
ಕೊಡಗು - ರೂ. 88.92
ಕೋಲಾರ - ರೂ. 87.77
ಕೊಪ್ಪಳ - ರೂ. 88.96
ಮಂಡ್ಯ - ರೂ. 88.10
ಮೈಸೂರು - ರೂ. 87.49
ರಾಯಚೂರು - ರೂ. 87.84
ರಾಮನಗರ - ರೂ. 88.29
ಶಿವಮೊಗ್ಗ - 88.63
ತುಮಕೂರು - ರೂ. 88.68
ಉಡುಪಿ - ರೂ. 87.74
ಉತ್ತರ ಕನ್ನಡ - ರೂ. 88.25
ವಿಜಯನಗರ - ರೂ. 89.72
ಯಾದಗಿರಿ - ರೂ. 88.68
ಇಂದು ಜಗತ್ತಿಗೆ ಈ ಇಂಧನ ಶಕ್ತಿಗಳ ಅವಶ್ಯಕತೆ ತೀವ್ರವಾಗಿದೆ. ಕೈಗಾರಿಕೆಗಳಿಂದ ಹಿಡಿದು ವಾಹನಗಳವರೆಗೆ ನಿತ್ಯವೂ ಪೆಟ್ರೋಲ್ ಹಾಗೂ ಡೀಸೆಲ್ ಅಗತ್ಯತೆ ಇದ್ದೆ ಇರುತ್ತದೆ. ಹಾಗಾಗಿ ಪ್ರಪಂಚದಾದ್ಯಂತ ಇಂಧನಕ್ಕೆ ಅಪಾರವಾದ ಬೇಡಿಕೆಯಿದ್ದು ನಿತ್ಯ ಇವುಗಳ ಬೆಲೆಗಳು ಹಲವಾರು ಅಂತಾರಾಷ್ಟ್ರೀಯ ಕಾರಣಗಳಿಂದಾಗಿ ಪ್ರಭಾವಿಸಲ್ಪಡುತ್ತಿರುತ್ತವೆ.
ಭಾರತದಲ್ಲಿ ಯಾವುದೇ ತೈಲದ ನಿಕ್ಷೇಪವಿರದ ಕಾರಣ ಭಾರತ ತನ್ನ ದಿನನಿತ್ಯದ ತೈಲದ ಅವಶ್ಯಕತೆಗಾಗಿ ಕಚ್ಚಾ ತೈಲವನ್ನು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಇತ್ತೀಚಿಗಷ್ಟೇ ರಷ್ಯಾದಿಂದಲೂ ಸಹ ಭಾರತ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಹೀಗೆ ಆಮದು ಮಾಡಿಕೊಂಡ ಕಚ್ಚಾ ತೈಲವನ್ನು ತದನಂತರ ಇಲ್ಲಿ ಸಂಸ್ಕರಿಸಿ ಪೆಟ್ರೋಲ್ ಹಾಗೂ ಡೀಸೆಲ್ ಗಳನ್ನು ದೇಶಾದ್ಯಂತ ವಿತರಿಸಲಾಗುತ್ತದೆ.
ಈ ರೀತಿಯಾಗಿ ದೇಶದ ಮೂಲೆ ಮೂಲೆಗೆ ತಲುಪುವ ಇಂಧನದ ಮೇಲೆ ಹಲವಾರು ಸುಂಕಗಳನ್ನು ಹಾಕಲಾಗುತ್ತದೆ. ಅಂತಿಮವಾಗಿ ಗ್ರಾಹಕರಿಗೆ ಇದು ತಲುಪಿದಾಗ ಮೂಲ ಬೆಲೆಗಿಂತ ಹೆಚ್ಚಿನ ಬೆಲೆ ಇರುವುದನ್ನು ಗಮನಿಸಬಹುದು. ನಿತ್ಯವೂ ಇಂಧನ ಬೆಲೆಗಳು ಹಲವು ಕಾರಣಗಳಿಂದಾಗಿ ಪ್ರಭಾವಿಸಲ್ಪಡುವುದರಿಂದ ಪ್ರತಿನಿತ್ಯ ಅವುಗಳ ಬೆಲೆಗಳು ಭಿನ್ನವಾಗಿದ್ದು ನಿತ್ಯದ ಅಪ್ಡೇಟ್ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ