Petrol-Diesel Price Today: ಚಿತ್ರದುರ್ಗದಲ್ಲಿ 90 ರೂಪಾಯಿ ಆಯ್ತು ಡೀಸೆಲ್‌ ಬೆಲೆ: ಪೆಟ್ರೋಲ್‌ ದರ ಎಷ್ಟಿದೆ?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಬರೆ ಬೀಳೋದಂತೂ ಸತ್ಯ. ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್‌ನ ದೈನಂದಿನ ಬೆಲೆ ವಿವರ ಇಲ್ಲಿದೆ.

  • Share this:

Petrol And Diesel Rate Today: ಪೆಟ್ರೋಲ್-ಡೀಸೆಲ್ ಸೇರಿ ಇಂಧನ ದರಗಳು ಆವತ್ತು ಇಳಿಕೆ ಆಗುತ್ತದೆ, ಇವತ್ತು ಇಳಿಕೆ ಆಗುತ್ತದೆ ಎಂದು ಕಾಯುತ್ತಿರುವ ಜನರಿಗೆ ಈವರೆಗೆ ಯಾವ ಖುಷಿ ಸಮಾಚಾರನೂ ಇಲ್ಲ. ಹೆಚ್ಚಿನ ಏರಿಕೆ-ಇಳಿಕೆ ಇಲ್ಲದಿದ್ದರೂ ಸಣ್ಣಪುಟ್ಟ ಬದಲಾವಣೆಗಳು ಮಾತ್ರ ತೈಲ ಬೆಲೆಯಲ್ಲಿ ನಡೆಯುತ್ತಲೇ ಇದೆ.


ದೇಶ ಓಡುತ್ತಿರುವುದೇ ಪೆಟ್ರೋಲ್-ಡೀಸೆಲ್‌ನಿಂದ ಎಂದರೂ ತಪ್ಪಾಗಲಾರದು. ಹೀಗಿರುವಾಗ ಬೆಲೆ ವಿಚಾರ ಇಲ್ಲಿ ಕಾಳಜಿ ಹೊಂದಿರುವಂತದ್ದು. ಬೇಡಿಕೆ ಜೊತೆಜೊತೆಯಲ್ಲಿಯೇ ಇದರ ಉತ್ಪಾದನೆ ಕೂಡ ಹೆಚ್ಚಿನ ಸವಾಲುಗಳಿಂದ ಕೂಡಿರುವುದರಿಂದ ಇದರ ಬೆಲೆ ಕೂಡ ದುಬಾರಿಯಾಗಿದೆ.


ಪೆಟ್ರೋಲ್ ಮತ್ತು ಡೀಸೆಲ್‌ಗಳಂತಹ ಇಂಧನವನ್ನು ಸಮುದ್ರದಾಳದಲ್ಲಿ ದೊರಕುವ ಕಚ್ಚಾ ತೈಲವನ್ನು ಹೊರತೆಗೆದು ಸಂಸ್ಕರಿಸಿ ಉತ್ಪಾದಿಸಲಾಗುತ್ತದೆ. ಜಗತ್ತಿನಾದ್ಯಂತ ಕೆಲವೇ ರಾಷ್ಟ್ರಗಳು ಹೀಗೆ ಕಚ್ಚಾ ತೈಲದ ನಿಕ್ಷೇಪಗಳನ್ನು ಹೊಂದಿದ್ದು ಆ ರಾಷ್ಟ್ರಗಳಿಂದ ಜಗತ್ತಿನ ಇತರೆ ರಾಷ್ಟ್ರಗಳು ಕಚ್ಚಾ ತೈಲ ಖರೀದಿಸುತ್ತವೆ. ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹಾಗೂ ಮಾರುಕಟ್ಟೆ ಎರಡೂ ಇದೆ. ಇನ್ನು ಈ ಇಂಧನಗಳನ್ನು ಕಚ್ಚಾತೈಲದಿಂದ ಉತ್ಪಾದಿಸಲಾಗುತ್ತದೆ ಹಾಗೂ ಕಚ್ಚಾ ತೈಲದ ನಿಕ್ಷೇಪಗಳಿರುವ ರಾಷ್ಟ್ರಗಳು ಇದನ್ನು ಹೊರತೆಗೆದು ಮಾರಾಟ ಮಾಡುತ್ತವೆ.


ಇದನ್ನೂ ಓದಿ: DA Hike News: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್​​ ನ್ಯೂಸ್​, ಡಿಎ ಶೇಕಡಾ 46ಕ್ಕೆ ಏರಿಕೆ!


ಇಂದಿನ ಬೆಲೆ ನೋಡುವುದಾದರೆ, ರಾಜ್ಯದ ಎಲ್ಲೆಡೆ ಇಂಧನ ದರದಲ್ಲಿ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ, ಆದಾಗ್ಯೂ ಪ್ರತಿನಿತ್ಯದಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸವಿರುವುದನ್ನು ಗಮನಿಸಬಹುದಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿದಿನದಂತೆ ಸ್ಥಿರವಾದ ಗತಿಯಲ್ಲೇ ಮುಂದುವರೆದಿದೆ.


ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.68 (29 ಪೈಸೆ ಇಳಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.01 (7 ಪೈಸೆ ಏರಿಕೆ)
ಬೆಳಗಾವಿ - ರೂ. 102.13 (52 ಪೈಸೆ ಇಳಿಕೆ)
ಬಳ್ಳಾರಿ - ರೂ. 103.78 (00)
ಬೀದರ್ - ರೂ. 102.28 (57 ಪೈಸೆ ಏರಿಕೆ)
ವಿಜಯಪುರ - ರೂ. 102.12 (00)
ಚಾಮರಾಜನಗರ - ರೂ. 102.13 (ಪೈಸೆ ಏರಿಕೆ)
ಚಿಕ್ಕಬಳ್ಳಾಪುರ - ರೂ. 102.39 (45 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.06 (70 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 104.41 (59 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.13 (64 ಪೈಸೆ ಇಳಿಕೆ)
ದಾವಣಗೆರೆ - ರೂ. 103.46 (27 ಪೈಸೆ ಇಳಿಕೆ)
ಧಾರವಾಡ - ರೂ. 101.71 (1 ಪೈಸೆ ಏರಿಕೆ)
ಗದಗ - ರೂ. 102.25 (50 ಪೈಸೆ ಇಳಿಕೆ)
ಕಲಬುರಗಿ - ರೂ. 101.71 (00)
ಹಾಸನ - ರೂ. 102.13 (14 ಪೈಸೆ ಏರಿಕೆ)
ಹಾವೇರಿ - ರೂ. 102.58 (17 ಪೈಸೆ ಇಳಿಕೆ)
ಕೊಡಗು - ರೂ. 103.13 (00)
ಕೋಲಾರ - ರೂ. 101.81 (6 ಪೈಸೆ ಇಳಿಕೆ)
ಕೊಪ್ಪಳ - ರೂ. 103.05 (19 ಪೈಸೆ ಏರಿಕೆ)
ಮಂಡ್ಯ - ರೂ. 101.61 (17 ಪೈಸೆ ಇಳಿಕೆ)
ಮೈಸೂರು - ರೂ. 101.50 (28 ಪೈಸೆ ಇಳಿಕೆ)
ರಾಯಚೂರು - ರೂ. 101.84 (00)
ರಾಮನಗರ - ರೂ. 102.40 (15 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.26 (13 ಪೈಸೆ ಇಳಿಕೆ)
ತುಮಕೂರು - ರೂ. 102.45 (68 ಪೈಸೆ ಇಳಿಕೆ)
ಉಡುಪಿ - ರೂ. 101.44 (39 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.49 (48 ಪೈಸೆ ಏರಿಕೆ)
ವಿಜಯನಗರ - ರೂ. 102.89 (31 ಪೈಸೆ ಇಳಿಕೆ)
ಯಾದಗಿರಿ - ರೂ. 102.43 (1 ಪೈಸೆ ಇಳಿಕೆ)


ಇದನ್ನೂ ಓದಿ: Dilip Surana: 66 ಕೋಟಿಯ ಬಂಗಲೆ ಖರೀದಿಸಿದ ಡೋಲೋ 650 ಕಂಪನಿ ಓನರ್!


ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು


ಬಾಗಲಕೋಟೆ - ರೂ. 88.59
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.95
ಬೆಳಗಾವಿ - ರೂ. 88.09
ಬಳ್ಳಾರಿ - ರೂ. 89.58
ಬೀದರ್ - ರೂ. 88.23
ವಿಜಯಪುರ - ರೂ. 88.07
ಚಾಮರಾಜನಗರ - ರೂ. 88.04
ಚಿಕ್ಕಬಳ್ಳಾಪುರ - ರೂ. 88.29
ಚಿಕ್ಕಮಗಳೂರು - ರೂ. 88.19
ಚಿತ್ರದುರ್ಗ - ರೂ. 90.03
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 89.17
ಧಾರವಾಡ - ರೂ. 87.71
ಗದಗ - ರೂ. 88.20
ಕಲಬುರಗಿ - ರೂ. 87.71
ಹಾಸನ - ರೂ. 87.96
ಹಾವೇರಿ - ರೂ. 88.49
ಕೊಡಗು - ರೂ. 88.85
ಕೋಲಾರ - ರೂ. 87.77
ಕೊಪ್ಪಳ - ರೂ. 88.91
ಮಂಡ್ಯ - ರೂ. 87.59
ಮೈಸೂರು - ರೂ. 87.49
ರಾಯಚೂರು - ರೂ. 87.84
ರಾಮನಗರ - ರೂ. 88.31
ಶಿವಮೊಗ್ಗ - 89.04
ತುಮಕೂರು - ರೂ. 88.36
ಉಡುಪಿ - ರೂ. 87.41
ಉತ್ತರ ಕನ್ನಡ - ರೂ. 88.36
ವಿಜಯನಗರ - ರೂ. 88.77
ಯಾದಗಿರಿ - ರೂ. 88.36



ಭಾರತ ಸಹ ತನ್ನ ದೊಡ್ಡ ಜನಸಂಖ್ಯೆಗನುಗುಣವಾದ ಬೇಡಿಕೆಯನ್ನು ಪೂರೈಸಲು ಅಪಾರ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಆಮದು ಮಾಡಿಕೊಂಡು ತನ್ನಲ್ಲಿರುವ ರಿಫೈನರಿಗಳ ಮೂಲಕ ಅದನ್ನು ಸಂಸ್ಕರಿಸಿ ತನ್ನ ರಾಜ್ಯಗಳಾದ್ಯಂತ ವಿತರಿಸುತ್ತದೆ. ಆದರೆ ಕಚ್ಚಾ ತೈಲದ ಬೆಲೆ ಸಾಮಾನ್ಯವಾಗಿ ಒಂದೇ ತೆರನಾಗಿರುವುದಿಲ್ಲ. ಹಲವಾರು ಜಾಗತಿಕ ವಿದ್ಯಮಾನಗಳಿಂದಾಗಿ ಅದರ ಬೆಲೆ ಬದಲಾವಣೆ ಆಗುತ್ತಲೇ ಇರುತ್ತದೆ.

First published: