Petrol and Diesel Rate Today: ಇಂದು ಶಕ್ತಿಯ ಮೂಲಗಳಾದ ಪೆಟ್ರೋಲ್ (Petrol Price) ಹಾಗೂ ಡೀಸೆಲ್ (Diesel Price) ಇಂಧನ ಜಗತ್ತಿನ ಅತಿ ಅಗತ್ಯ ಅವಶ್ಯಕತೆಗಳಲ್ಲಿ ಒಂದಾಗಿದೆ. ನಿತ್ಯ ವಾಹನಗಳ ಓಡಾಟದಿಂದ ಹಲವು ಅವಶ್ಯಕ ಕಾರ್ಖಾನೆಗಳ ಕಾರ್ಯಾಚರಣೆಗೆ ಈ ಇಂಧನದ ಅವಶ್ಯಕತೆ ಇರುತ್ತದೆ.
ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ನಿತ್ಯ ಅಪ್ಡೇಟ್ ಮಾಡಲಾಗುತ್ತದೆ ಹಾಗೂ ಅಪ್ಡೇಟ್ ಆದ ಬೆಲೆಗಳು ಆಯಾ ದಿನ ಬೆಳಗ್ಗೆ ಆರು ಗಂಟೆಯಿಂದಲೇ ಜಾರಿಗೆ ಬರುತ್ತವೆ. ಇನ್ನು ಇಲ್ಲಿ ಕಚ್ಚಾ ತೈಲದಿಂದ ಉತ್ಪಾದಿಸಲಾಗುವ ಪೆಟ್ರೋಲ್-ಡೀಸೆಲ್ ಗಳ ಮೇಲೆ ಹಲವು ನಿರ್ದಿಷ್ಟ ತೆರಿಗೆಗಳು ಸೇರಿ ಅಂತಿಮವಾಗಿ ಪೆಟ್ರೋಲ್ ಬಂಕುಗಳ ಮೂಲಕ ಗ್ರಾಹಕರಿಗೆ ತಲುಪುತ್ತದೆ.
ಇನ್ನು ಇಂಧನ ಬೆಲೆ ಎಂಬುದು ಡೈನಮಿಕ್ ಆಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿರುವ ಕಚ್ಚಾ ತೈಲದ ಬೆಲೆಯ ಮೇಲೆ ಅವಲಂಬಿತವಾಗಿರುತ್ತದೆ. ತದನಂತರ ರಾಜ್ಯವಾರು ವಿಧಿಸಲಾಗುವ ತೆರಿಗೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿದ್ದು ಇದರಿಂದಲೂ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಒಂದೆ ತೆರನಾಗಿರುವುದಿಲ್ಲ.
ಇದನ್ನೂ ಓದಿ: Flight Mileage: ವಿಮಾನದ ಮೈಲೇಜ್ ಎಷ್ಟು ಅಂತ ಐಡಿಯಾ ಇದ್ಯಾ? ಶೇಕಡಾ 99 ರಷ್ಟು ಜನರಿಗೆ ಇದು ಗೊತ್ತಿಲ್ಲ!
ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹಾಗೂ ಮಾರುಕಟ್ಟೆ ಎರಡೂ ಇದೆ. ಇನ್ನು ಈ ಇಂಧನಗಳನ್ನು ಕಚ್ಚಾತೈಲದಿಂದ ಉತ್ಪಾದಿಸಲಾಗುತ್ತದೆ ಹಾಗೂ ಕಚ್ಚಾ ತೈಲದ ನಿಕ್ಷೇಪಗಳಿರುವ ರಾಷ್ಟ್ರಗಳು ಇದನ್ನು ಹೊರತೆಗೆದು ಮಾರಾಟ ಮಾಡುತ್ತವೆ.
ಇಂದು ರಾಜ್ಯದ ಎಲ್ಲೆಡೆ ಇಂಧನ ದರದಲ್ಲಿ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ, ಆದಾಗ್ಯೂ ಪ್ರತಿನಿತ್ಯದಂತೆ ಕೆಲ ಪೈಸೆಗಳಷ್ಟು ವ್ಯತ್ಯಾಸವಿರುವುದನ್ನು ಗಮನಿಸಬಹುದಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿದಿನದಂತೆ ಸ್ಥಿರವಾದ ಗತಿಯಲ್ಲೇ ಮುಂದುವರೆದಿದೆ.
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.74, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.33, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.68 (18 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 102.05 (4 ಪೈಸೆ ಏರಿಕೆ)
ಬೆಳಗಾವಿ - ರೂ. 101.97 (00)
ಬಳ್ಳಾರಿ - ರೂ. 103.73 (17 ಪೈಸೆ ಇಳಿಕೆ)
ಬೀದರ್ - ರೂ. 102.75 (23 ಪೈಸೆ ಏರಿಕೆ)
ವಿಜಯಪುರ - ರೂ. 102.03 (9 ಪೈಸೆ ಇಳಿಕೆ)
ಚಾಮರಾಜನಗರ - ರೂ. 101.93 (14 ಪೈಸೆ ಇಳಿಕೆ)
ಚಿಕ್ಕಬಳ್ಳಾಪುರ - ರೂ. 101.94 (00)
ಚಿಕ್ಕಮಗಳೂರು - ರೂ. 103.06 (48 ಪೈಸೆ ಇಳಿಕೆ)
ಚಿತ್ರದುರ್ಗ - ರೂ. 103.34 (9 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.81 (68 ಪೈಸೆ ಏರಿಕೆ)
ದಾವಣಗೆರೆ - ರೂ. 103.96 (13 ಪೈಸೆ ಏರಿಕೆ)
ಧಾರವಾಡ - ರೂ. 101.70 (1 ಪೈಸೆ ಇಳಿಕೆ)
ಗದಗ - ರೂ. 102.79 (54 ಪೈಸೆ ಏರಿಕೆ)
ಕಲಬುರಗಿ - ರೂ. 102.45 (45 ಪೈಸೆ ಏರಿಕೆ)
ಹಾಸನ - ರೂ. 101.90 (23 ಪೈಸೆ ಇಳಿಕೆ)
ಹಾವೇರಿ - ರೂ. 101.91 (50 ಪೈಸೆ ಇಳಿಕೆ)
ಕೊಡಗು - ರೂ. 103.44 (27 ಪೈಸೆ ಏರಿಕೆ)
ಕೋಲಾರ - ರೂ. 101.81 (35 ಪೈಸೆ ಇಳಿಕೆ)
ಕೊಪ್ಪಳ - ರೂ. 102.86 (27 ಪೈಸೆ ಇಳಿಕೆ)
ಮಂಡ್ಯ - ರೂ. 101.88 (10 ಪೈಸೆ ಏರಿಕೆ)
ಮೈಸೂರು - ರೂ. 101.73 (23 ಪೈಸೆ ಏರಿಕೆ)
ರಾಯಚೂರು - ರೂ. 102.79 (50 ಪೈಸೆ ಏರಿಕೆ)
ರಾಮನಗರ - ರೂ. 102.25 (15 ಪೈಸೆ ಇಳಿಕೆ)
ಶಿವಮೊಗ್ಗ - ರೂ. 103.27 (1 ಪೈಸೆ ಏರಿಕೆ)
ತುಮಕೂರು - ರೂ. 102.81 (75 ಪೈಸೆ ಏರಿಕೆ)
ಉಡುಪಿ - ರೂ. 101.43 (54 ಪೈಸೆ ಇಳಿಕೆ)
ಉತ್ತರ ಕನ್ನಡ - ರೂ. 102.96 (59 ಪೈಸೆ ಏರಿಕೆ)
ವಿಜಯನಗರ - ರೂ. 103.07 (22 ಪೈಸೆ ಇಳಿಕೆ)
ಯಾದಗಿರಿ - ರೂ. 102.65 (22 ಪೈಸೆ ಏರಿಕೆ)
ಇದನ್ನೂ ಓದಿ: May Bank Holidays: ಮೇನಲ್ಲಿ ಅರ್ಧ ತಿಂಗಳು ಬ್ಯಾಂಕ್ ರಜೆ, ಈ ದಿನಾಂಕಗಳ ಮೇಲೆ ಕಣ್ಣಿಟ್ಟಿರಿ!
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.59
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.99
ಬೆಳಗಾವಿ - ರೂ. 87.94
ಬಳ್ಳಾರಿ - ರೂ. 89.53
ಬೀದರ್ - ರೂ. 88.65
ವಿಜಯಪುರ - ರೂ. 87.99
ಚಾಮರಾಜನಗರ - ರೂ. 87.88
ಚಿಕ್ಕಬಳ್ಳಾಪುರ - ರೂ. 87.89
ಚಿಕ್ಕಮಗಳೂರು - ರೂ. 88.87
ಚಿತ್ರದುರ್ಗ - ರೂ. 89.06
ದಕ್ಷಿಣ ಕನ್ನಡ - ರೂ. 87.74
ದಾವಣಗೆರೆ - ರೂ. 89.62
ಧಾರವಾಡ - ರೂ. 87.70
ಗದಗ - ರೂ. 88.68
ಕಲಬುರಗಿ - ರೂ. 88.38
ಹಾಸನ - ರೂ. 87.76
ಹಾವೇರಿ - ರೂ. 87.89
ಕೊಡಗು - ರೂ. 89.12
ಕೋಲಾರ - ರೂ. 87.77
ಕೊಪ್ಪಳ - ರೂ. 88.75
ಮಂಡ್ಯ - ರೂ. 87.84
ಮೈಸೂರು - ರೂ. 87.71
ರಾಯಚೂರು - ರೂ. 88.70
ರಾಮನಗರ - ರೂ. 88.17
ಶಿವಮೊಗ್ಗ - 89.04
ತುಮಕೂರು - ರೂ. 88.68
ಉಡುಪಿ - ರೂ. 87.40
ಉತ್ತರ ಕನ್ನಡ - ರೂ. 88.77
ವಿಜಯನಗರ - ರೂ. 88.94
ಯಾದಗಿರಿ - ರೂ. 88.55
ಸರ್ಕಾರಿ ಒಡೆತನದ ಹಲವು ಇಂಧನ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳು ಭಾರತದಲ್ಲಿ ಇಂಧನವನ್ನು ಗ್ರಾಹಕರಿಗೆ ತಲುಪಿಸುತ್ತವೆ. ಈ ಎಲ್ಲ ಸಂಸ್ಥೆಗಳ ಕಮಿಷನ್ ಹಾಗೂ ತೆರಿಗೆಗಳೆಲ್ಲ ಸೇರಿದಾಗ ಇಂಧನದ ಮೂಲ ಬೆಲೆಗಿಂತ ದುಪ್ಪಟ್ಟಾಗಿ ಗ್ರಾಹಕರಿಗೆ ಲಭಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ